ಗುರುವಾರ, ನವೆಂಬರ್ 26, 2009

೩ ಕವನಗಳು

ನಗುವಿನ ಮೊರೆಯ ಹೊತ್ತು
ಒಡಲಲಿ ನೋವಿನ ಉರಿಯ
ಬಚ್ಚಿಟ್ಟು
ಎಲ್ಲರಲಿ ಒಂದಾಗ ಹೊರಟು
ಎನ್ನ ತನವನ್ನೇ ಕಳೆದು
ಕೊಳ್ಳ ಹೊರಟ ದಿನಗಳ
ನೆನೆನೆನೆದು ಕೊರಗುತಿಹುದೆನ್ನ
ಮನವಿಗ.

ಬದುಕ ಕಟ್ಟಾ ಹೊರಟವರೆಲ್ಲರೂ
ಇಲ್ಲಿ ಪದಗಳ ಸೆರೆಯಾದವರೇ
ಕೆಲವರು ಅದನ್ನೇ ಹಿಡಿದು
ಪೋಣಿಸಿ ಕವಿಗಳಾದರೆ
ಮತ್ತೆ ಕೆಲವರೂ ಅದ
ಹಿಡಿಯಲು ಹೋಗಿ
ಲೇಖಕರಾಗಿದ್ದಾರೆ
ಇನ್ನುಳಿದವರು ಅದರ
ಹಿಡಿತದಲ್ಲೇ ಸಿಕ್ಕಿ
ಬರಹಗಳಾಗಿ
ಒದ್ದಾಡುತಿದ್ದಾರೆ.

ಹಾರುವ ಹಕ್ಕಿಗೆ ಈಜಬೇಕಂಬಾಸೆ
ಈಜುವ ಮೀನಿಗೆ ಜಿಗಿಯಬೇಕೆಂಬಾಸೆ
ಹರಿದಾಡುವ ಹಾವಿಗೆ ಮರ ಏರಬೇಕೆಂಬಾಸೆ
ನಡೆಯುವ ಜಿಂಕೆಗೆ ನಗೆಯಬೇಕೆಂಬಾಸೆ
ಕೂಗುವ ಕೋಗಿಲೆಗೆ ಹಾಡಬೇಕೆಂಬಾಸೆ
ಇಲ್ಲೆಲ್ಲವೂ ಎಲ್ಲಕ್ಕೂ ಒಂದೊಂದೇ ಆಸೆ
ಆದರೇಕೋ ತಿಳಿಯದು, ಈ ಮನುಜನಿಗೆ
ಇವೆಲ್ಲವೂ ತನ್ನದೇ ಅಡಿಯಲ್ಲಿರಬೇಕೆಂಬ
ಅತಿಯಾಸೆ

ಮಂಗಳವಾರ, ಅಕ್ಟೋಬರ್ 27, 2009

ಅರ್ಥವಾಗದೆಯೂ ಅರಿವಾಗಿದ್ದು..

ನೀ ಅಂದು ನುಡಿದ
ಅನುರಾಗದ ಸಾಂತ್ವಾನದ ನುಡಿಗಳು
ನನ್ನೆದೆಯ ಆಳದಲ್ಲಿ
ನಿನ್ನೆಡೆಗೆ ಪ್ರೀತಿಯ ಮೊಳಕೆಯ ಒಡೆಸಿ
ಹೆಮ್ಮರವಾಗಿ ಬೆಳೆದಿರುವುದಿಂದು

ಆರಂಭವು ತಿಳಿಯದ
ಅಂತ್ಯವು ಇಲ್ಲದ
ಅರ್ಥವೂ ಆಗದ
ಅರ್ಥೈಸಲೂ ಸಾಧ್ಯವಿಲ್ಲದ
ಅರಿತು ಅರಿಯದಂತೆ ಮೂಡಿದ ಪ್ರೀತಿ ಇದು

ನಿನ್ನ ಪ್ರತಿ ನುಡಿಯ ಆಲಿಸುವ
ಮಧುರ ಬಯಕೆಯ
ನಿನ್ನ ಸ್ಪರ್ಶದ ಆ ಕ್ಷಣಕೆ
ಹಪಹಪಿಸುತ್ತಿರುವ ಪ್ರೀತಿ ಇದು

ಪದಗಳಲ್ಲಿ ಹೇಳಲಾಗದ
ಕವನದಲ್ಲಿ ಕೊನೆಗಾಣಿಸಲಾಗದ
ಪ್ರೀತಿಗೆ ಹೊಸ ಅರ್ಥ ನೀಡ ಹೊರಟಿರುವ ಪ್ರೀತಿ ಇದು

ಶುಕ್ರವಾರ, ಅಕ್ಟೋಬರ್ 16, 2009

ನನ್ನವಳಿಗೆ... ಜೇನ ಹನಿಗಳು.. (ಪ್ರೀತಿಯ ಅಪ್ಪಿ(ಪ್ಪು)ಗೆ )ನೀ ಬೇಕೀಗ


ಚಿಗುರೆಲೆಯ ತುತ್ತ ತುದಿಗೆ
ಬಂದು ನಿಂತು..
ಈಗೋ ಆಗೋ
ಭುವಿಯ ಸ್ಪರ್ಶಕ್ಕೆ ಕಾದಿರುವ
ನೀರ ಹನಿಯಂತೆ
ನನ್ನೆದೆಯ ನೋವೆಲ್ಲ
ಕಣ್ಣೀರ ರೂಪ ತಾಳಿ
ಕಣ್ರೆಪ್ಪೆಯನ್ನೆಲ್ಲ ತೋಯ್ದು
ನಿನ್ನೆದೆಯ ಮೇಲೊರಗಿ
ಅದರಾಳಕ್ಕೆ ಇಳಿಯಬೇಕೆಂಬ
ಹೆಬ್ಬಯಕೆಯಲಿ
ಕಾಯುತ್ತಿರುವುದೀಗ


ನನ್ನ ಪ್ರೀತಿ


ನೀರ್ಗಡಲ ಅಲೆಯ ನೀರ್ಗುಳ್ಳೆಯಂತೆ
ಎನ್ನ ಪ್ರೀತಿ
ಪಟಪಟನೆ ಪುಟಪುಟನೇ ಪುಟಿದು,
ಪಟಪಟನೆ ಒಡೆದು
ನಿತ್ಯ ನಿರಂತರ ಚಿಮ್ಮುತ್ತಲೇ ಇರುವುದು

ನನ್ನೆದೆಯ ಚಿಪ್ಪಿನಲ್ಲಿ
ಮರಳ ಕಣವಾಗಿ ನುಸುಳಿ
ನನಗೇ ಅರಿವಾಗದಂತೆ
ಮುತ್ತಾಗಿ ಬೆಳೆದಿರುವೆ
ನೀನಿಂದು

ಸಾಗರದೊಳು ಮುಳುಗುತಿದೆ
ಎಂದೆನಿಸುವ ಸೂರ್ಯನಂತೆ
ನನ್ನ ಪ್ರೀತಿ
ಮುಳುಗಿದೆ ಎಂದೆನಿಸಿದರೂ
ಮುಳುಗದ,
ಮರೆಯಾದಂತೆನಿಸಿದರೂ
ಮರೆಯಾಗದಂತ
ಮತ್ತೆ ಮತ್ತೆ
ಉದಯಿಸುವ ಅನುರಾಗವಿದು

ಮನಸು

ನಿನ್ನ ಸನಿಹ ಬಯಸಿದೆ ಮನಸು
ಪ್ರೀತಿ ತುಂಬಿದ ಆ ಅಪ್ಪುಗೆಯಲಿ
ಮುಳುಗಬೇಕೆನಿಸಿದೆ.
ಮನದಾಳದ ತೊಳಲಾಟಗಳನ್ನೆಲ್ಲಾ
ನಿನ್ನಲ್ಲಿ ತೋಡಿಕೊಳ್ಳಬೇಕಿದೆ.
ನಿನ್ನ ಸನಿಹವಿಲ್ಲದ
ಸಮಯವ ನೆನೆದಾಗಲೆಲ್ಲಾ ಮನಸು
ಮರ ಮರ ಮರುಗತೊಡಗಿದೆ

ಕಾಡ ಬೇಡ ಗೆಳತಿ

ನಿನ್ನ ಪ್ರೀತಿಯ ಕಡಲಲ್ಲಿ
ಮಿಂದೆದ್ದಿರುವ ನನಗೆ
ಬೇರೆಲ್ಲ ಪ್ರೀತಿಯು
ರುಚಿಸದಂತಾಗಿದೆ ಇಂದು,

ನೋಡ ಹೊರಟ
ಬಿಂಬಗಳೆಲ್ಲದರೆದುರು
ನಿನ್ನದೇ ಪ್ರತಿಬಿಂಬವು
ತೋಯುತಿಹುದಿಂದು

ಕಂಡ ಪ್ರತಿ ಬೆಳಕಲ್ಲೂ
ನಿನ್ನದೇ ನಗುವಿನ ಕಾಂತಿಯು
ಕಾಣುತಿಹುದಿಂದು

ಪ್ರತಿ ಹೆಜ್ಜೆಯ ಸದ್ದಿನಲ್ಲೂ
ನಿನ್ನದೇ ಕಾಲ್ಗೆಜ್ಜೆಯ ಸದ್ದು
ಹುಡುಕುತ್ತಿಹೆನಿಂದು

ನನ್ನ ಪಾಡು

ಅವಳ ಪ್ರೀತಿಯಲಿ ತೋಯ್ದು
ಮುಂಜಾವಿನ ಮಂಜಿನಂತಾಗಿದೆ
ನನ್ನೀ ಕಣ್ಣೀರು
ಅತ್ತ ನೀರಾಗಿಯೂ ಹರಿಯದೆ
ಇತ್ತ ಆವಿಯಗಿಯೂ ಆರದೆ
ಪಸರಿಸುತ್ತಿರುವುದು ಈ ಕಂಗಳಿಗೆ

ಬಾ..

ನನ್ನಲ್ಲೇ ಒಂದಾಗು ಬಾ
ನನ್ನ ಮನಸಿನಗಲದಲ್ಲಿ
ನಿನ್ನ ಕನಸುಗಳ ಚಪ್ಪರವ ಹಾಕು ಬಾ


ನನ್ನ ಕೃಷಿ

ಬರಡಾದ ನನ್ನೀ ಮನಕೆ
ಬಿತ್ತಿದೆ ನೀ ಮಮತೆಯ ಬೀಜವ;
ಪ್ರೀತಿಯ ವರ್ಷಧಾರೆಯ ಎರೆದು
ಪೋಷಿಸಿದೆ ನಾ ಅದ;
ಇಂದೆಕೋ ಕಾಡತೊಡಗಿದೆ ಕಳವಳ
ಹೃದಯದ ಅಂತರಾಳದಲ್ಲಿ;
ನಾ ಬೆಳೆಸಿದ ಪೈರು
ಕಳವಾದಂತೆ;
ನನ್ನೆಲ್ಲ ಪ್ರೇಮವ ಬೇರು ಸಮೇತ
ಕಿತ್ತೊಯ್ದಂತೆ;

ಎಲ್ಲಿರುವೆ??

ಕೊರಗುತ್ತಿಹುದು ಎನ್ನ ಮನ
ನಿನ್ನ ಸವಿ ನುಡಿಯ
ಸವಿ ಇಲ್ಲದೆ,
ಬೇಕಾಗಿದೆ ಇಂದು ಎನಗೆ
ನಿನ್ನ ಸವಿಮುತ್ತುಗಳ ಸುರಿಮಳೆ.
ನಿನ್ನ ಸವಿಮುತ್ತಿನಲಿ ಮಿಂದು
ಪೋಣಿಸಿದಷ್ಟೂ ಮುಗಿಯದ
ಮುತ್ತಿನ ಹಾರವಾಗಿದೆ
ಎನ್ನ ಮನವಿಂದು

ಕಣ್-ಮಣ್-ಹನಿಒತ್ತಡದ ಕಟ್ಟೆ ಒಡೆದು
ಮೋಡಗಳಿಂದಾಚೆ ಹೊರಹೊಮ್ಮಿ
ಭೂ ತಾಯಿಯನ್ನೊಮ್ಮೆ ಚುಂಬಿಸಿ
ಅವಳ ಹೃದಯದಂತರಾಳಕ್ಕೆ ಇಳಿದು
ತನ್ನೆಲ್ಲ ದುಃಖವನ್ನು ಅಲ್ಲಿ ಬಚ್ಚಿಟ್ಟು
ತುಸು ತುಸುವಾಗಿ ಅಂತರ್ಜಲದ ರೂಪದಲ್ಲಿ
ಹೊರಬರುತ್ತಿರುವ ಮಳೆನೀರಿನ ಹಾಗೆ ಆಗಿದೆ
ನನ್ನೀ ಕಣ್ಣೀರು..
ಎಲ್ಲರೆದುರು ಅಳಲಾಗದೆ,
ಇನಿಯನೆದೆಗೊರಗಿ
ಅವನಲ್ಲಿರುವ ನನ್ನೆಡೆಗಿನ ಪ್ರೀತಿಯಲಿ ಒಂದಾಗಿ
ಮಧುರ ಆನಂದ ಬಾಷ್ಪವಾಗಿ
ಇಳಿಯಬೇಕೆಂಬ ಆಸೆ

ಮರಳಿ ಬನ್ನಿ ಸುಮಧುರ ನೆನಪುಗಳೇ..ಮರಳಿ ಬನ್ನಿ ಸುಮಧುರ ನೆನಪುಗಳೇ
ಮರೆಯಲಾಗದ ಪ್ರೀತಿಯ ಬುತ್ತಿ ಹೊತ್ತು

ಮೌನವೇ ಮಾತಾಗಿ
ಎದೆ ಬಡಿತವೇ ಮನದ ತುಡಿತವಾಗಿ
ಉಸಿರೇ ಸ್ಪರ್ಶ ಸುಖವ
ನೀಡಿದಂತ ದಿನಗಳನು ಹೊತ್ತು

ಬಲಿತ ರೆಕ್ಕೆಯ ಬಳಸಿ ಗರಿಗೆದರಿ ಹಾರಾಡಿ
ಮರಳಿ ಗೂಡಿನೆಡೆಗೆ ಹೊರಟಾಗ
ಮೂಡಿದ ವಿರಹದ ನೆನಪ ಹೊತ್ತು

ತುಂತುರು ಮಳೆಯಲಿ ಮಿಂದು
ಹಸಿರು ಹಾಸಿನ ಮೇಲೆ ಬಿದ್ದೆದ್ದು ಹೊರಳಾಡಿದ
ಮಧುರ ಸ್ಪರ್ಶದ ನೆನಪ ಹೊತ್ತು

ಮರಳಿ ಬನ್ನಿ ಸುಮಧುರ ನೆನಪುಗಳೇ
ಮರೆಯಲಾಗದ ಪ್ರೀತಿಯ ಬುತ್ತಿ ಹೊತ್ತು

ನನ್ನವಳಾ.....


ಮೂಡಿದೆ ಬೆವರ ಹನಿಗಳು
ಅವಳ ಹಣೆಯ ಮೇಲೆ
ಆಗತಾನೇ ಪೋಣಿಸಿಟ್ಟ ಮುತ್ತಿನ ಹನಿಗಳಂತೆ
ಹನಿಹನಿಯಾಗಿ

ಸೆಟೆದು ನಿಂತಿದೆ ರೋಮಗಳು ಸಾಲು ಮರದಂತೆ
ನನ್ನ ಸ್ಪರ್ಶದ ಪುಳಕಕ್ಕೆ

ಗುಡುಗ ಕೂಡ ಗುಡುಗಿಸ ಹೊರಟ ಹಾಗಿದೆ
ಅವಳ ಎದೆಯ ಬಡಿತವಿಂದು

ಬಿರುಗಾಳಿ ಕೂಡ ಬೆದರಿ ಸ್ತಬ್ಧವಾಗಿದೆ
ಅವಳ ಉಸಿರಾಟದ ವೇಗಕ್ಕೆ

ವಿರಹವಲ್ಲದೇ ಮತ್ತೇನಿದು
ವಿರಹಿಸಿದವನಿಗೇ ಗೊತ್ತು
ಇದರ ಸವಿ ಏನೆಂದು....

ಬುಧವಾರ, ಅಕ್ಟೋಬರ್ 7, 2009

೩ ಚುಟುಕು

ಓಟು - ನೋಟು

ಹಾಕಿದ್ದ ಒಂದೊಟಿಗೆ
ಕೊಟ್ಟಿದ್ದರು ಲಾಟು-ಲಾಟು
ನೋಟು
ಜಮ ಮಾಡಿ ಆದ ಮೇಲೆ
ತಿಳಿದಿದ್ದು
ಅದರಲ್ಲಿರುವುದೆಲ್ಲ
ಬರಿ ಖೋಟ ನೋಟು ಎಂದು

ಸೈಟು-ಪ್ಲಾಟು

ದಿನ ಹಾಕುತಿದ್ದೆ
ಅವಳಿಗೆ ನಾನು ಸೈಟು
ಕೊನೆಗೆ ಅವಳೇ ಕೇಳಿ ಬಿಟ್ಟಳು
ಎಷ್ಟಿವೆ ನಿಮಪ್ಪಂದು ಪ್ಲಾಟು

ಬಳಕು - ಉಳುಕು

ನಿನ್ನ ನಡೆಯಲಿ
ಕಂಡೆ ಬಳಕಾಡುವ
ಲತೆಯ ನಾ ಮೊದಮೊದಲು
ಆಮೇಲೆ ತಿಳಿದಿದ್ದು
ಅದು ಬಳಕುವ ಲತೆಯಲ್ಲ
ಉಳುಕಿದ ನಿನ್ನ ಕಾಲೆಂದು.


ಇಂತಿ
ವಿನಯ

ದಡ

ಬೇಡ ಗೆಳತಿ ಈ ಸಲ್ಲದ ಸಂದೇಹ
ಕತ್ತರಿಸದಿರಲಿ ಅದು ನಮ್ಮಿಬ್ಬರ ಈ ಬಾಂಧವ್ಯ
ಸವೆಸ ಬೇಕೆಂದಿರುವೆ ಈ ಜೀವವ ನಿನ್ನ ಪ್ರೀತಿಯಲಿ
ಸಹಿಸಲಾಗದಂತೆ ಮಾಡಬೇಡ ನಿನ್ನ ಈ ಚುಚ್ಚು ನುಡಿಗಳಿಂದ

ದಡಗಳೆರಡೂ ಕಡೆಯಿಂದ ಬೆಂಕಿ ಬಿದ್ದ
ಸೇತುವೆಯ ಮದ್ಯದಲ್ಲಿರುವ
ಪಾದಚಾರಿಯಾಗಿರುವೆ ನಾನು
ಅತ್ತ ನೀರೆಡೆಗೆ ಹಾರಿ ಈಜಲು ಬಾರದೆ
ಇತ್ತ ಬೆಂಕಿಯ ಸುಳಿಯ ದಾಟಿ
ಹೊರ ಬರಲು ಆಗದೆ ನರಳುತ್ತಿರುವೆನೀಗ

ಬೇಕಾಗಿಲ್ಲ ನನಗೆ ಆಶಾಗೋಪುರಗಳ ಮಹಲು
ಸಾಕಾಗಿದೆ ನನ್ನ ಅರಿಯುವ ಒಂದು ಪುಟ್ಟ
ಗೂಡು ನಿನ್ನೆದೆಯಾಳದಲ್ಲಿ
ಮೊಟ್ಟೆಯಿಂದ ಹೊರಬಂದ ಮರಿಯಲ್ಲ
ನಮ್ಮ ಒಲವು , ಬಲಿತಾಗಿದೆ ಅದರ ರೆಕ್ಕೆಗಳು
ಇನ್ನು ಬೇಕೇ ಹಾರಲು ಭಯ

ಬದುಕ ನಾಟ್ಯದಲ್ಲಿ ಸರಸ-ವಿರಸಗಳಿವು ಸರಿಗಮಪ
ಬೇಕಿದೆ ಈ ಬದುಕಿಗೆ ಎಲ್ಲದರ ಮಿಶ್ರಣ
ತರತರದ ಭಕ್ಷ್ಯಗಳಿರುವ ಭೋಜನದಂತೆ,
ಖಾದ್ಯವಲ್ಲದಿದ್ದರೇನಂತೆ, ನಾ ಆಗಬಯಸುವೆ
ನೀ ಉಣ್ಣುವ ಆ ಭೋಜನದ ಎಲೆಯಾಗಲು

ನಿರೀಕ್ಷೆಗಳಿವು ಸಾಗರದ ಅಲೆಗಳಂತೆ
ಕೆಲವೊಂದು ಸಿಹಿ ಚುಂಬನವಿಟ್ಟು ಮರಳಿದರೆ
ಮತ್ತೆ ಕೆಲವು ಕೋಲಾಹಲವನ್ನೇ ಸೃಷ್ಟಿಸುತ್ತವೆ,
ಆಗ ಬೇಕಿದೆ ನಾವಿಂದು ಮರಳ ಕಣಗಳಂತೆ
ಅಲೆಯೊಂದಿಗೆ ಮೇಲೆ ಬಂದು , ಅದರ
ಹಿಂದಿರುಗುವಿಕೆಯೊಂದಿಗೆ ಮತ್ತೆ ಮರಳಿ
ಹೊಸ ಅಲೆಯ ಹಾಯುವಿಕೆಗೆ ಕಾಯುತ್ತ ಕೂರುವಂತೆ

ಕಾಯಬೇಕಿದೆ ನಾವಿಂದು ಆ ಒಂದು ಅಲೆಗೆ
ಸೇರಿಸಬೇಕಿದೆ ಅದಿಂದು ಆ ಎರಡು
ಕಣಗಳ ಶಾಶ್ವತವಾಗಿ ದಡದೆಡೆಗೆ
ಮತ್ತೆ ಮರಳದಂತೆ, ಗುರಿ ಇಲ್ಲದೆ ತೇಲದಂತೆ.

ಇಂತಿ
ವಿನಯ

ಅವಳ ಹೆಜ್ಜೆಗಳು

ಸಂಗೀತದ ಸಪ್ತ ಸ್ವರಗಳು
ಸತ್ತಂತಾಗಿವೆ ಎನಗೆ
ನಿನ್ನ ಪಿಸು ಮಾತು ಕೇಳದೆ
ಸುಡುಬಿಸಿಲು ಹಿತವೆನಿಸಿದೆ
ನಿನ್ನ ಮಧುರ ಸ್ಪರ್ಶವ ಕಲ್ಪಿಸಿ

ಕಾರಂಜಿಯ ಸಣ್ಣ ಹನಿಗಳು
ಮೂಡಿಸಿವೆ ನಿನ್ನ ಪ್ರತಿಬಿಂಬವ
ತಂತಮ್ಮ ಪುಟ್ಟ ಪ್ರಪಂಚದಲ್ಲಿ
ನೆರಳು ಕೂಡ ಮುಂದೆ ಬದಂತಾಗಿದೆ
ಹಿಂದೆ ನಿನ್ನ ಇರುವಿದೆಯೆಂದೇನೋ

ಕದಡಿದ ಕೆಸರಿನಂತಾಗಿದೆ ಮನಸು
ಸುಖ ದುಃಖಗಳೆರಡರ ವ್ಯತ್ಯಾಸ
ಅರಿಯಲಾಗದೆ
ಮೂಡಿದೆ ಅದರೊಳಗೆ
ನೀರ್ ಗುಳ್ಳೆಗಳು ಕಣ್ಣೀರಿನಂತೆ
ಸುಖಕ್ಕೋ ದುಃಖಕ್ಕೊ ಅರಿಯಲಾಗದಂತೆ

ಇದ್ದು ಇರದಿರುವ ಸನಿಹಕಿಂತ
ಇರದೇ ಇರುವಂತೆ ಭಾಸವಾಗುತ್ತಿರುವ
ಭಾವವೇ ಮುದ ನೀಡತೊಡಗಿದೆ ಇಂದು
ಚಂಚಲ ಮನಸಿದು ಇರುವುದೆಲ್ಲವ
ಬಿಟ್ಟು ಇರದುಲ್ಲದದರ ಕಡೆಗೆ ಹೊರಳುತಿಹುದಿಂದು

ಇಂತಿ
ವಿನಯ

ಗುರುವಾರ, ಅಕ್ಟೋಬರ್ 1, 2009

ಸ್ಪರ್ಶ

ಮುಸ್ಸಂಜೆಯ ತಂಗಾಳಿ
ಮುತ್ತಿಕ್ಕಿ ಹೋದಾಗ
ನಾ ಅನುಭವಿಸಿದೆ ನನ್ನವಳ
ಮುಂಗುರುಳ ಸ್ಪರ್ಶ

ಹರಿವ ಝರಿಯ ಜುಳು ಜುಳು
ನಾದದೊಳ್
ನಾ ಅನುಭವಿಸಿದೆ ನನ್ನವಳ
ಕಾಲ್ಗೆಜ್ಜೆಯ ಸ್ಪರ್ಶ

ಮುಂಗಾರ ಮಳೆಯು
ಭುವಿಗೆ ಮುತ್ತಿಕ್ಕಿ
ಹೊರಡಿಸಿದ ಕಂಪಿನೊಳ್
ನಾ ಅನುಭವಿಸಿದೆ ನನ್ನವಳು
ಮುಡಿದ ಮಲ್ಲಿಗೆಯ ಸ್ಪರ್ಶ

ಬಿಸಿ ನೀರಿನಿಂದೆದ್ದ
ಆ ಹಬೆಯಲ್ಲಿ ಕೈ ಇಟ್ಟು
ನಾ ಅನುಭವಿಸಿದೆ ನನ್ನವಳ
ಬಿಸಿಉಸಿರ ಸ್ಪರ್ಶ

ಕೊರೆವ ಚಳಿಯಲಿ
ಕರಿ ಕೋಟು ನಾ ಹೊದ್ದು
ನಾ ಅನುಭವಿಸಿದೆ ನನ್ನವಳ
ಬೆಚ್ಚಗಿನ ಅಪ್ಪುಗೆಯ ಸ್ಪರ್ಶ

ಎದುರಾದಳೊಂದು ದಿನ
ಗರಿಗೆದರಿ ನಿಂತಿತೀ ಮನ
ಆದರೆ ನಾ ಅನುಭವಿಸಲಾರದೆ ಹೋದೆ
ನನ್ನವಳ ಕೆಂದುಟಿಯ
ಮುತ್ತಿನ ಸ್ಪರ್ಶ,
ಇನಿಲ್ಲ ಅವಳ ಸ್ಪರ್ಶದ ಹರ್ಷ .

(ಸಂಪದದಲ್ಲಿ ಒಮ್ಮೆ ಪ್ರಕಟಿಸಿದ್ದೆ)

ಮಂಗಳವಾರ, ಸೆಪ್ಟೆಂಬರ್ 29, 2009

ನಯನ

ಮುಂಜಾವಿನ
ಕಿರಣದಿಂದ
ಮೂಡಿದ
ಕಾಂತಿಯೇ
ಆ ನಿನ್ನ ನಯನ

ತಿಳಿ ಅಲೆಯ
ಪ್ರತಿ ಮಿಡಿತದಲ್ಲೂ
ಮೂಡಿದೆ
ನಿನ್ನದೇ ನಯನ

ಚಿಮು ಚಿಮು
ಕಾರಂಜಿಯ
ಹನಿ ಹನಿ ಚಿಲುಮೆಯಲ್ಲೂ
ಮೂಡಿದೆ ನಿನ್ನದೇ ನಯನ

ನನ್ನದೇ ಅಂತರಾಳದ
ಪ್ರತಿ ಮಿಡಿತದಲ್ಲೂ
ಮೂಡಿದೆ ನಿನ್ನದೇ ನಯನ

ಗುರುವಾರ, ಸೆಪ್ಟೆಂಬರ್ 24, 2009

ಅರ್ಧಬೆಂದಹೆಣ

ಮಳೆಯಲ್ಲಿ ತೊಯಿದ
ಕಟ್ಟಿಗೆಯಿಂದ ಸುಟ್ಟಂತಹ
ಅರ್ಧಬೆಂದ ಹೆಣದಂತಾಗಿರುವೆ
ನಾನಿಂದು
ನಿನ್ನ ಪ್ರೀತಿಯ ಮಳೆಯಲ್ಲಿ ನೆನೆದು
ವಿರಹವೆಂಬ ಬೇರ್ಪಡೆಯ ಬೆಂಕಿಯಲಿ
ಬೆಂದು ಅತ್ತ ಪೂರ್ತಿಯು ಸುಟ್ಟು
ಕರಕಲಾಗದ
ಇತ್ತ ಹಸಿಯಾಗಿಯು ಉಳಿಯದ
ಅರೆ ಬೆಂದ ಹೆಣವಾಗಿರುವೆ ನಾನಿಂದು.

ಸ್ಮಶಾನಕ್ಕೆ ಹೆದರದ ನನಗೆ
ನಿನ್ನ ಮೌನವೆ ಸ್ಮಶಾನ
ಸಮನಾಗಿ ಅರಿವಾಗದಂತಹ
ಹೆದರಿಕೆ ಶುರುವಾಗಿದೆ ಇಂದು
ಮಸಣಿಗನ ಕೋಲ್ ತಿವಿತಕ್ಕಿಂತ
ನಿನ್ನ ಮಾತಿನ ತಿವಿತವೆ
ಅತಿ ನೋವ ನೀಡುತಿಹುದಿಂದು

ಹೆಣವಾದ ಮೇಲು
ನಿರುಪಯುಕ್ತವಾಗಿರುವೆನಿಂದು
ಅತ್ತ ಪೂರ್ತಿ ಬೂದಿಯು ಆಗದೆ
ಇತ್ತ ಹಸಿ ಮಾಂಸವಾಗಿಯೂ
ಉಳಿಯದೆ ಅರೆಬೆಂದ ಹೆಣವಾಗಿರುವೇನು ನಾನಿಂದು

ಶನಿವಾರ, ಸೆಪ್ಟೆಂಬರ್ 19, 2009

ಮೂರು ಹನಿ

ಕಿರುನಗೆ

ನಕ್ಕಳು ಗೆಳತಿ
ಕಿಸಕ್ಕೆಂದು
ಜಾರಿತು ಕಾಲು
ಪಕ್ಕದ
ಮೊರಿಒಳಗೆ
ಪಸಕ್ಕೆಂದು


ವರ ದಕ್ಷಿಣೆ

ವರನಿಗೆ ಏನು
ಬೇಡವಂತೆ
ಕೊಟ್ಟರೆ ಸಾಕಂತೆ
ಬರೀ ಸೂಟು ಬೂಟು
ಕಾರಣ
ವಧುವಿನ
ಅಪ್ಪನದು
ಕರಿ ಕೋಟು


ಸೆಂಟು-ಪರ್ಸೆಂಟು


ಮದುವೆಗೆ ಮೊದಲು
ಕೇಳುತಿದ್ದಳು
ತರ ತರದ
ಸೆಂಟು
ಮದುವೆಯ ನಂತರ
ಕೇಳುತ್ತಿರುವಳು
ಸಂಬಳದಲ್ಲಿ
ಪರ್ಸೆಂಟು

ನಾ ನೀನಾದ ಮಳೆ

ಪಟ ಪಟನೆ ದೋ ದೋ ಎಂದು
ಸುರಿಯುತ್ತಿರುವ ಮಳೆ
ನೆನಪಿಸುತ್ತಿದೆ ನಲ್ಲೆಯ ಸಿಹಿ
ಅಪ್ಪುಗೆಯ ಈಗ

ಅವಳ ಬೆಚ್ಚನೆಯ
ಬಿಸಿ ಉಸಿರೇ
ಹೋಗಲಾಡಿಸಬೇಕಿದೆ
ಈ ದೇಹದ ನಡುಕವನಿಗ

ಭುವಿಯ ಚುಂಬಿಸುತ್ತಿರುವ
ವರ್ಷಧಾರೆಯ ಪ್ರತಿ ಹನಿಯು
ನನ್ನ ಕಂಡು ನಗುತಿರುಹುದು
ನಿನಗಿಲ್ಲದ ಸ್ಪರ್ಶ ಸುಖ
ತಾ ಅನುಭವಿಸುತ್ತಿರುವೆನೆಂದು

ಬಿದ್ದ ಪ್ರತಿ ಹನಿ ಹೊಮ್ಮಿಸಿದ
ಚಿಮ್ಮುಕೆಯ ಬೆಳಕು
ಕಂಡಂತಾಗಿದೆ ಎನಗೆ
ನನ್ನವಳು ನಕ್ಕಾಗ
ಅವಳ ದಂತದಿಂದ ಹೊರಹೊಮ್ಮಿದ
ಕಿರಣದಂತೆ

ಬಿರು ಮಳೆಯಲ್ಲಿ
ನೆನೆದಿಹೆನು
ನಿನ್ನ ಪ್ರೀತಿಯ
ನೆನೆನೆದು
ತುಂಬಿರುವುದು ಈ ಕಂಗಳಲಿ
ಆನಂದಭಾಷ್ವ
ಮಳೆಹನಿಯ ಮಡಿಲಲ್ಲಿ
ಸೇರುತಿರುವುದಿಗ
ಭೂತಾಯಿಯ ಒಡಲ.

ಮಂಗಳವಾರ, ಸೆಪ್ಟೆಂಬರ್ 15, 2009

ನಾ-ನೀ-ಪ್ರೀತಿ

ಸಹಿಸಲಾಗದಿರುವೆ ನಾನಿಂದು
ಈ ನಿನ್ನ ಕಣ್ಣೋಟವ
ನನ್ನ ಪ್ರೀತಿಯ ಬಿಂಬಿಸುವ ಆ ನಿನ್ನ
ಕುಡಿ ನೋಟವ

ನಿನ್ನ ಪ್ರೀತಿಯ ಅಪ್ಪುಗೆಯಲಿ
ಮಿಂದು ಬಿಸಿ ನೀರ ಹಬೆಯಂತಾಗಿರುವೆ
ಚುಂಬನದ ಮತ್ತಿನಲ್ಲಿ ಕರಗಿ
ನಿನ್ನೊಳಗೊಂದಾಗಿರುವೆನಿಂದು

ಹಿತವೆನಿಸಿವೆ ಆ ಕಣ್ಣ ನೋಟಗಳು
ನೀಡಿವೆ ಇಂದು ಸ್ಪರ್ಶವು ನೀಡಲಾಗದ
ಮಧುರ ಅನುಭವವ
ಸಾಕೆನಿಸಿದ್ದ ಬದುಕು ಮತ್ತೆ ಚಿಗುರೊಡೆದಿದೆ
ನಿನ್ನ ಪ್ರೀತಿಯ ಮಳೆಯಲಿ ನೆಂದು

ಆ ನಿನ್ನ ಮಧುರ ಮಾತುಗಳು ಕೂತಲ್ಲೇ
ಬಿಸಿಯಾಗಿಸಿವೆ ನನ್ನೀ ಉಸಿರ
ನಿನ್ನೆದೆಯ ಬಡಿತವೆ ಕಿವಿಯಲಿ ರಿಂಗಣಿಸಿ
ಕಸಿದಿದೆ ನನ್ನ ಸಮಯವನ್ನೆಲ್ಲ

ಸಿಗದಿದ್ದರೇನಂತೆ ನೀ ಎನಗೆ
ಸಿಕ್ಕಾಗಿದೆ ನಿನ್ನ ಪ್ರೀತಿ
ಮಂಥನದಲ್ಲಿ ಬಂದತಹ ಹಾಲಹಲದಂತೆ

ಮನದ ಒಡೆತನ ನಿನಗೆ ಮೀಸಲು
ಬೇರಾರಿಗೂ ಇಲ್ಲಿ ಈ ಆಳದಲ್ಲಿಲ್ಲ ಪ್ರವೇಶ
ಪಡೆದರೂ ಅದಾಗಬಹುದು ಬಹಿರಂಗದೆ
ಹೊರತು ಅಂತರಂಗದಲ್ಲಲ್ಲ

ನಿಲುಕದಿರುವ ನಕ್ಷತ್ರವೇ
ಮನದಾಳದ ಚುಕ್ಕಿ ಮಿನುಗಿಹುದು ನಿನಗಿಂತ
ಕಲ್ಪನೆಯ ಕೂಸು ಮನತುಂಬಿತು
ನನ್ನ ಜೀವನ ಬರಡಾದಾಗ

ಮೋಡದಂಚಿನ ಬೆಳ್ಳಿ ರೇಖೆಯಂತೆ
ನಮ್ಮಿಬ್ಬರ ಕ್ಷಣ ಹೊತ್ತಿನ ಸಮ್ಮಿಲ್ಲನವೇ
ಬದುಕಿನ ಪ್ರೀತಿಗಾಸರೆ
ಆ ನಿನ್ನ ಪ್ರೀತಿಗೆ ನಾ ಎಂದೆಂದೂ ಸೆರೆ.....

ನೀನಿಲ್ಲದೆ ಆಗಿದೆ ಈ ಜೀವನ ಅಪೂರ್ಣ
ಅಂತ್ಯವಿಲ್ಲದ ಆರಂಭ ತಿಳಿಯದ
ಸಮುದ್ರದ ದಡದಂತೆ
ನಿನ್ನ ಪ್ರೀತಿ ಉಕ್ಕಿ ಬರಲಿ ಅಲೆಗಳಂತೆ
ನಿರಂತರವಾಗಿ
ಬದುಕೆಂಬ ಮರಳಗೂಡ
ಕಟ್ಟುತಲೇ ಇರುವೆ ..........

ಗುರುವಾರ, ಆಗಸ್ಟ್ 20, 2009

ಕುಡುಕರ ಹಾಡುಗಳು (ಅಣಿಮುತ್ತುಗಳು) ಭಾಗ -೨

(ಕಲ್ಯಾಣ್ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕ್ಷಮೆ ಕೋರುತ್ತ )

ಎಲ್ಲಾ ಬ್ರಾಂಡ್ ಗಳಿಗು ಒಂದೊಂದು ಹಿಂದಿನ ಕಥೆಯಿದೆ
ನನ್ನ ಬ್ರಾಂಡ್ ಚೆಲುವೆ ಇದು ಮುಂದೆನ್ನ ಬದುಕಿದೆ

ಭಲೆ ಭಲೆ ಚೆಂದದ ಚೆಂದುಳ್ಳಿ ಬೀರ್ ನೀನು
ವಿಸ್ಕಿ ಕೂಡ ನಾಚುವ ಮಿಂಚಿನ ಬಾಟಲ್ ನೀನು
ನಿನ್ನ ಚೆಂದ ಹೊಗಳಲು ತುಂಡು ಬೀಡಿ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಮಂಕು ಮಂಕು
ನಾನು ಹೆಜ್ಜೆಯ ಇಟ್ಟಲೆಲ್ಲನು ನೀ ಮಳೆಯಾಗಿ ಸುರಿಬೇಕು

ತಮ್ಮಣ್ಣ ಬಾರಲ್ಲಿ ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ
ಹಳೆ ಬಾಕಿಯ ಈ ಸರಿಗಮ ಕೇಳಿತು ಸಮ ಸಮ
ಝುಳು ಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ
ರಂಗನ ತಕಥೈ ಕಂಡಿತು ತಕದಿಮಿ ಹೆಚ್ಚಿತು
ಅಲ್ಲೊಂದು ಸುಂದರ ಬಾರಿದೆ ಅಲ್ಲಿ ನೂರಾರು ಬಾಟಲ್ ರಾಶಿಯಿದೆ
ಇಲ್ಲೊಂದು ಸಿಗರೇಟು ಪ್ಯಾಕು ಇದೆ ಇಲ್ಲಿ ಹತ್ತಾರು ಮೆಚ್ಚಿನ ಟಾಯ್ಲೆಟ್ ಇದೆ
ಎಲ್ಲ ಟಾಯ್ಲೆಟ್ ಅಲ್ಲೂ ಇಣುಕೋ ಅಮ್ಲೇಟ್ ನಿಂದೇನ
ಉತ್ತರ ಇಲ್ಲದ ಸಿಹಿ ಒಗರು ಒಗರು ನಿನ್ನಂದ ನಿನ್ನಂದ ನಿನ್ನಂದವೇ

ಅತ್ತ ರಮೇಶ ಇತ್ತ ಗೋಪಾಲ ನಿನ್ನ ಹಿಂದೆ ಬಂದರು
ಅಂದವ ಹೊಗಳಲು ಸಾಧ್ಯವೆ ನಿನ್ನ ಮುಂದೆ ಮೌನವೆ
ಅತ್ತ ರಮ್ಮು ಇತ್ತ ವೋಡ್ಕಾ ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ಕುಡುಕರ ಅಡ್ಡವಿದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ದುಡ್ಡಿನ ಕೋಟೆಯಿದೆ ಇಲ್ಲಿ ಎಂತೆಂಥ ಕನಸೊ ಕಾವಲಿದೆ
ಎಲ್ಲ ಕಾವಲುಗಾತೀರ ಚೋರಿಯು ನೀನೆನ
ಹತ್ತಿರ ಇದ್ದರು ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ

ಭಲೆ ಭಲೆ ಚೆಂದದ ಚೆಂದುಳ್ಳಿ ಬೀರ್ ನೀನು
ವಿಸ್ಕಿ ಕೂಡ ನಾಚುವ ಮಿಂಚಿನ ಬಾಟಲ್ ನೀನು

ಬುಧವಾರ, ಆಗಸ್ಟ್ 19, 2009

ಕುಡುಕರ ಹಾಡುಗಳು (ಅಣಿಮುತ್ತುಗಳು) ಭಾಗ - ೧

(ಮನೋಮೂರ್ತಿ ಮತ್ತು ಶಿವ ಅವರ ಕ್ಷಮೆ ಕೋರುತ್ತ)

ಇದು ಬೀರ್ ಅಲ್ಲ
ಕುಡುಕನಂತು ನಾನು ಮೊದಲೇ ಅಲ್ಲ
ಇದು ಬಿರಲ್ಲ
ತುಂಬ ಸನಿಹ ಬಂದಿಹುದಲ್ಲ
ನೋವಿನಲ್ಲೂ ನಗುತಿಸುಹುದಲ್ಲ
ಯಾಕೆ ಈ ತರ
ಜಾಣ ಮನವೆ ಕೇಳು
ಜಾರಬೇಡ ಇದರ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ
ಇರಲಿ ಅಂತರ

ಇದು ಬೀರ್ ಅಲ್ಲ
ಕುಡುಕನಂತು ನಾನು ಮೊದಲೇ ಅಲ್ಲ
ಅ.ಅ.ಆ.ಆ.
ಅ.ಅ.ಆ.ಆ
ಅ.ಅ.ಆ.ಆ
ಅ.ಅ.ಆ.ಆ
ಆ.ಆ..ಆ.ಆ

ಬದುಕ ಹಾದಿಯಲ್ಲಿ
ಇದು ನನಗೆ ಹೂವೋ ಮುಳ್ಳೊ
ಮನದ ಕಡಲಿನಲ್ಲಿ
ಇದರ ಅಲೆಯ ಭೀಕರ ಸುಳಿಯೊ
ಅರಿಯದಂತ ಹೊಸ ಕಂಪನವೊ
ಯಾಕೋ ಕಾಣೆನು
ಅರಿತು ಮರೆತು ಜೀವ
ವಾಲದಂತೆ ಇದರ ಕಡೆಗೆ
ಸೋಲದಂತೆ ಕಾಯಿ ಮನವೇ
ಒಲಿಸು ನನ್ನನು
ಇದು ಬೀರ್ ಅಲ್ಲ
ಕುಡುಕನಂತು ನಾನು ಮೊದಲೇ ಅಲ್ಲ

ತಿಳಿದು ತಿಳಿದು ನಾನು
ತನ್ನ ತಾನೇ ಸೋಲುತಿರುವೇನಲ್ಲ
ಕುಡಿತ ಎಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲೂ ನಗುವುದ ಬಲ್ಲ
ಎನೋ ಕಳವಳ
ಕುಡಿಯುವವನ ಕೂಗು
ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೆ ಈ ಹೃದಯ
ಎನೋ ತಳಮಳ
ಇದು ಬೀರ್ ಅಲ್ಲ
ಕುಡುಕನಂತು ನಾನು ಮೊದಲೇ ಅಲ್ಲ

ಇಂತಿ
ವಿನಯ

ಬುಧವಾರ, ಆಗಸ್ಟ್ 12, 2009

ಉಜಿರೆಯ ಉರಿಯಿಂದ ಪಾರಾಗಿ ಬಂದ ಸಾತ್ವಿಕ್

ಏನಾದರು ಸರಿ ಆಧ್ಯಯನ ಮಾಡಲೇಬೇಕು ಅಂತ ಬೆಳಗ್ಗೆ ಏಳುತ್ತಲೇ ನಿರ್ಧರಿಸಿದ್ದ ಸಾತ್ವಿಕ್. ಇನ್ನು ಮೀಸೆ ಚಿಗುರದ ಹುಡುಗರೆಲ್ಲ ಆಗಲೇ ಇವನ ಮುಂದೆ ಬಲಕ್ಕೊಂದು ಎಡಕ್ಕೊಂದು ಸೇರಿಸಿಕೊಂಡು ಓಡಾಡುತ್ತಿದ್ದರೆ ಇವನಿಗೆ ತಾನು ಈ ವಿಶ್ವ ವಿದ್ಯಾಲಯದಲ್ಲಿ ಇದ್ದು ಇಲ್ಲದಂತೆ ಅನ್ನೋ ಬೇಸರ ಮೂಡಿತ್ತು. ಇಲ್ಲೇ ಅಧ್ಯಯನ ಮಾಡೋಣ ಅಂದರೆ ಇಡೀ ವಿಶ್ವ ವಿದ್ಯಾಲಯಕ್ಕೆ ಚಿರಪರಿಚಿತ ಬೇರೆ ಇವ ಕಡ್ಡಿ ಮುರಿದರೂ ಎಲ್ಲರಿಗೂ ತಿಳಿದು ಹೋಗುತಿತ್ತು. ಇನ್ನು ಆಕಾಶವಾಣಿಗೆ ಹೋದಾಗಲೆಲ್ಲ ಹಾಯ್ ಸಾತ್ವಿಕ್ ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿರ ಅಂತ ಯಾರಾದರು ನಡು ವಯಸ್ಸಿನ ಹುಡುಗಿ ಹೇಳಿದರೆ ಸಾಕು ಅಲ್ಲೇ ನಾಚಿ ನೀರಾಗಿ ಹೋಗಿ ಬಿಡುತಿದ್ದ , ನಿಮ್ಮ ಫೋನ್ ನಂಬರ್ ಕೊಡಿ ಅಂತ ಇನ್ನೇನು ಕೇಳಬೇಕು ಅನ್ನೋವಷ್ಟರಲ್ಲಿ ಆ ಕಡೆಯಿಂದ ಬಂದೆ ಇರ್ರಿ ೧ ನಿಮಿಷ ಅನ್ನೋ ಮಾತು ಕೇಳಿಬಂದು ಇವನ ಅಶಾಗೋಪುರದ ಬಲೂನು ಡುಂ ಎಂದು ಒಡೆದು ಹೋಗಿಬಿಟ್ಟಿರುತಿತ್ತು. ನೋಡಿ ಬಂದೆ ಬಿಟ್ಟಿತು ಇವತ್ತು ಒಂದು ಸುಸಮಯ , ಇವರ ಆಧ್ಯಯನದ(ಇದೆ ಬೇರೆ ಮೇಲೆ ಹೇಳಿದ ಆಧ್ಯಯನವೇ ಬೇರೆ ) ನಿಯುತ್ತ ಇವ ಉಜಿರೆಗೆ ಹೋಗಬೇಕಾಗಿ ಬಂತು , ಎದುರಿಗೆ ನಾ ಹೋಗೋಲ್ಲ ಅಂತ ಹೇಳಿದರೂ ಒಳಗೊಳಗೇ ಹಾಲು ಕುಡಿದಷ್ಟು ಸಂತೋಷ ಗೊಂಡಿದ್ದ ನಮ್ಮ ಸಾತ್ವಿಕ್.

ಬೆಳ್ಳಂ ಬೆಳಿಗ್ಗೆಯೇ ಎದ್ದು ಪಂಚಮಿ(ಎಲ್ಲಿದೆ ಅಂತ ಕೆಳಬೇಡಿ ) ನದಿಯಲ್ಲಿ ಸ್ನಾನ ಮಾಡಿ , ರಾತ್ರಿ ಪೂರ್ತಿ ಕೂತು ಇಸ್ತ್ರಿ ಮಾಡಿಟ್ಟ ಹೊಸ ಪ್ಯಾಂಟ್ ಮತ್ತು ಅಂಗಿ ಧರಿಸಿ ಬಸ್ಸು ಬರೋಕೆ ೧ ಘಂಟೆ ಮುಂಚಿತವಾಗೆ ನಿಲ್ದಾಣಕ್ಕೆ ಬಂದು ಬೆಳಗಿನ ಹವಾ (ಯಾವ ಹವಾ ಅಂತ ಕೇಳಬೇಡಿ) ತೆಗೆದುಕೊಳ್ಳುತಿದ್ದ. ಬಸ್ ಬಂದಿದ್ದೆ ವಯಸ್ಕರು ,ಚಿಕ್ಕವರು ಎಂದು ಯಾರನ್ನು ನೋಡದೆ ಒಳ ನುಗ್ಗಿ ಮಹಿಳೆಯರಿಗೆ ಮೀಸಲಾದ ನಂತರದ ಆಸನದಲ್ಲಿ ಕುಳಿತು ಮೊದಲ ಹೆಜ್ಜೆ ಸರಿಯಾಗಿಯೇ ಹಾಕಿದೆ ಅನ್ನೋ ನಗು ಬೀರಿದ.ಇವನ ದುರದೃಷ್ಟ ಎದುರಿಗೆ ಇಬ್ಬರು ೬೫-೭೦ ವಯಸ್ಸಿನ ಮುದುಕಿಯರು (ಸರಿ ಇದೆ ತಾನೇ) ಕೂರಬೇಕೆ.ಅದು ಉಜರೆವರೆಗೆ ಕೈ ಬಂದದ್ದು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ಆಗಿತ್ತು ಅವನ ಸ್ಥಿತಿ. ಅಂತು ೨ ಘಂಟೆ ಹೇಗೋ ಕಾಲ ಕಳೆದು ಉಜಿರೆ ತಲುಪಿದ. ಅಲ್ಲೇ ಪಕ್ಕದಲ್ಲಿದ್ದ ಆಟೋಗೆ ಹಾಕಿದ್ದ ದರ್ಪಣದಲ್ಲಿ ನೋಡಿಕೊಂಡು ಕೆದಲಿದ ಕೂದಲನ್ನು(ತಲೆ ಕೂದಲು ) ಸರಿಪಡಿಸಿಕೊಂಡ.ತಾನು ನಿಜವಾಗಿ ಮಾಡಬೇಕಾಗಿದ್ದ ಸಂಶೋದನೆಗಿಂತ ತನ್ನ ಸ್ವಂತ ವಿಚಾರದ ಬಗ್ಗೆಯೇ ಅವನಿಗೆ ಹೆಚ್ಚು ಆಸಕ್ತಿ ಇತ್ತು.

ಒಳ್ಳೆ ಬುದ್ದಿಜೀವಿಗಳ ಶೈಲಿಯಲ್ಲಿ ಕಾಲೇಜ್ ಪ್ರವೇಶಿಸಿದ್ದೆ ಬಂತು ಆಮೇಲೆ ಆಗಿದ್ದೆಲ್ಲ ಅಗಬಾರದುದ್ದೆ. ತಲೆ ಎತ್ತಿ ನೋಡುತ್ತಾನೆ ಒಂದಕ್ಕಿಂತ ಒಂದು ಉತ್ತಮ ಜೀನ್ಸ್ ಗಳು , ಮೇಲೆ ಬಿಗಿಯಾದ ಟೀ-ಶರ್ಟ್ ಗಳು, ಅವುಗಳ ಮೇಲೆ ಈ ಹೋಲ್ ಸೇಲ್ ಅಂಗಡಿಯಲ್ಲಿ ದರಗಳ ಸ್ಲೇಟು ನೇತು ಹಾಕಿರುತ್ತಾರೆ ನೋಡಿ ಹಾಗೆ ಸ್ಲೋಗೊನ್ ಗಳು , ಲೈಕ್ "i will be famous some day","Beaten by a girl ","got hope?","baby on board"............etc. ಸದ್ಯ ದಾರಿ ಬದಿಯಲ್ಲಿ ಕೂಗೋ ತರ ೧೦ ಕ್ಕೆ ೨ ಅಂತ ಇರಲಿಲ್ಲ ಅನ್ನೋದೇ ಸಮಾಧಾನದ ವಿಷಯ ಆಗಿತ್ತು ಅವನಿಗೆ.ಹಾಗೆ ಮುಂದೆ ನೋಡುತ್ತಾ ಹೋಗುತ್ತಾ ಎದುರಿಗೆ ಬರುತಿದ್ದ ಒಂದು ಹುಡುಗಿಗೆ ಡಿಕ್ಕಿ ಹೊಡೆದೆ ಬಿಟ್ಟ , ಅವ ಡ್ಯಾಶ್ ಮಾಡಿದ ಸ್ಪೀಡ್ ಗೆ ಅವಳ ಕೈ ಅಲ್ಲಿ ಇದ್ದ ಪುಸ್ತಕ ಎತ್ತಿ ಕೊಡೋಣ ಅಂತ ಕೆಳಗೆ ಬಗ್ಗಿದರೆ ಮತ್ತೊಂದು ಆಘಾತ ತಾನು ಎಂದೋ ಕೇಳಿದ ಬಹಳ ಕುತೂಹಲವಿದ್ದ ಪುಸ್ತಕ "The Illustrated Kamasutra" ಯಪ್ಪಾ ಅದು ಕಾಲೇಜು ಆವರಣದಲ್ಲಿ ಒಮ್ಮೆ ತಲೆ ಸುತ್ತಿತಾದರು ಅದನ್ನ ಎತ್ತಿ ಕೊಟ್ಟು ಮತ್ತೊಂದು ನೋಡುತ್ತಾನೆ ಅದು "Philosophy of ಸೆಕ್ಸ್" ಇವನಿಗೆ ಗರ ಬಡಿದ ಹಾಗೆ ಆಯಿತು , ಇದೊಳ್ಳೆ ನಮ್ಮ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಇರೋ ಪುಸ್ತಕಗಳ ತರ ಅವಳ ಕೈ ಅಲ್ಲಿ ಇವು ಅನ್ನೋ ಹಾಗೆ ಅನಿಸಿತು.ಧೈರ್ಯ ಮಾಡಿ ಕೇಳೆ ಬಿಟ್ಟ ಅಕ್ಕ ತಾವು ಇದನೆಲ್ಲ ಹವ್ಯಾಸ ಅಂತ ಓದುತ್ತಿರೋ ಅಥವಾ ಹಾಗೆ ಸುಮ್ಮನೆ, "Be practical man " ಅಂತ ಅವಳು ಹಾಗೆ ಇವನ ಕೆನ್ನೆ ಸವರಿ ಹೋದಳು. ಇವನಿಗೆ ಥಿಯರಿ ಯನ್ನೇ ಪೂರ್ತಿ ಓದಿ ಗೊತ್ತಿಲ್ಲ , ಇನ್ನು ಅದು ಎಲ್ಲಿಂದ ಬರಬೇಕು.ಅದೇ ಸಿಟ್ಟಿನಲ್ಲಿ ಮಾಡಬೇಕಾಗಿದ್ದನ್ನ ತರಾತುರಿಯಲ್ಲಿ ಮಾಡಿ , ವಾಪಸ ಮಂಗಳೂರಗೆ ಬಾರೋ ಬಸ್ ಹತ್ತಿ ಕುಳಿತ.

ಬರುವಾಗ ಯಾವ ಹುಮ್ಮಸ್ಸಿನಲ್ಲಿ ಇದ್ದನೋ ಅದು ಈಗ ಇರಲಿಲ್ಲ , ಹಾಗೆ ಮಾರಿಗೊಮ್ಮೆ ಇವ ಕೂತ ಅಲ್ಲಿಂದ ಛಾವಣಿ ಬೇರೆ ನೋಡಿ ಬರುತಿದ್ದ , ಅಷ್ಟು ಹಾರಡುತಿತ್ತು ಬಸ್. ಜೊತೆ ಸರಕ , ಪರಕ ಅನ್ನೋ ಶಬ್ದ ಬೇರೆ .ಕಿವಿ ಬಳಿ ಯಾರೋ ಕಾಪಾಡಿ ಕಾಪಾಡಿ ಅನ್ನೋ ಕೂಗು ಬೇರೆ ಕೇಳ್ತಾ ಇತ್ತು , ಏನ್ ಅಂತ ನೋಡುತ್ತಾನೆ ಇದುವರೆಗೂ ತಾನು ಗುರುಬಾಳಿಗರ ಮೊಳಕೆ ಅನುಕೊಂಡಿದ್ದ ಅವು ಅದಾಗಿರದೆ , ಫಸಲಿನ ನಡುವೆ ಬೆಳೆಯುವ ಕಳೆಯಂತೆ ಕೂದಲಿನ ನಡುವೆ ಬೆಳೆದ ಹೇನುಗಳಾಗಿದ್ದವು.ಚಿತ್ರ ದುರ್ಗದ ಕೋಟೆಯ ನೆತ್ತಿಯಲ್ಲಿ ಕುಳಿತಂತೆ ಇವು ಇವನ ನೆತ್ತಿಯ ಮೇಲೆ ವಿರಾಜಮಾನವಾಗಿದ್ದವು.ಯಾವಾಗ ಬಸ್ ನ ಹೊಯಿದಾಟ ಜಾಸ್ತಿ ಆಗಿ ಇವನ ತಲೆ ಮೇಲಿನ ಛಾವಣಿಗೆ ಅಪ್ಪಲಿಸ ತೊಡಗಿತೋ ತಮ್ಮ ಸಾಮ್ರಾಜ್ಯವೇ ಅಲುಗಾಡಿದ ಹಾಗೆ ಆಗೇ ಆಗಿ , ಅವು ಇವನ ಕಿವಿ ಬಳಿ ಬಂದು ಕೂತಿದ್ದವು.

ಅಂತು ಮಂಗಳೂರ ಬಂದಿತ್ತು , ಇನ್ನು ಅಧ್ಯಯನ ಮಾಡೋಕೆ ಹೋಗೋಲ್ಲ ಅಂತ ಅವ ನಿರ್ಧರಿಸಿ ಆಗಿತ್ತು.
ನನಗೆ ಅವ ಈ ಪೂರ್ತಿ ಕಥೆ ಹೇಳಿದ ಮೇಲೆ ನಾ ಹೇಳಿದೆ , ಇವೆಲ್ಲಕ್ಕೆ ನೀ ತಲೆ ಕೆಡಿಸಿಕೊಳ್ಳಬೇಡ ಇದೆಲ್ಲ ಸ್ವಘಟ್ಟಿಯ ಮಹಿಮೆ , ಅವನ ಅನತಿ ಇಲ್ಲದೆ ಇರುವೆಯ ಉಚ್ಚೆಯು ಅಲುಗಾಡುವುದಿಲ್ಲವೆಂದ ಮೇಲೆ ಇದೇನು ದೊಡ್ಡ ವಿಷಯ ಅಲ್ಲ ಅಂತ.

ಇಂತಿ
ವಿನಯ

ಭಾನುವಾರ, ಆಗಸ್ಟ್ 9, 2009

ಅವರು ಕೊಟ್ಟಿದ್ದೋ , ನಾವ್ ಇಸ್ಕೊಂಡಿದ್ದೋ

ಬಸ್ಸಿನಲ್ಲಿ ನಡೆಯೋ ಚರ್ಚೆಗಳೆಲ್ಲ ಅರ್ಥವಿಲ್ಲದ್ದು ಅಂತ ನಿರ್ಧರಿಸಿದ್ದ ನನಗೆ ಮೊನ್ನೆ ನಡೆದ ಘಟನೆ ನನ್ನ ಯೋಚನೆಯನ್ನು ಮತ್ತೊಮ್ಮೆ ವಿವರ್ಶಿಸುವಂತೆ ಮಾಡಿತು.
ನಡೆದಿದ್ದು ಇಷ್ಟೇ, ಬಸ್ಸಿನಲ್ಲಿ ಕೂತ ಹಿರಿಯರೊಬ್ಬರು ತುಂಬಾ ಹೊತ್ತಿನಿಂದ ಕಿರಿ ಕಿರಿ ಮಾಡುತ್ತಾ ಇದ್ದರು.ಇದನ್ನ ನೋಡಿದ ಉಳಿದ ಕೆಲವರಿಗೆ ಅವರ ಮೇಲೆ ತುಂಬಾ ಕೋಪಾನೆ ಬಂತು ಅನ್ಸುತ್ತೆ. ತೆಪ್ಪಗೆ ಕುಳಿತುಕೊಳ್ರಿ ನಾನು ಅವಾಗಿಂದ ನೋಡ್ತಾ ಇದ್ದೀನಿ ಏನೇನೋ ಬಡಬಡಿಸುತ್ತ ಇದ್ದೀರಾ ಅಂತ ಇದ್ದಿದ್ದರಲ್ಲೇ ಸ್ವಲ್ಪ ಹಿರಿಯರು ಅವರ ಮೇಲೆ ಕೂಗಾಡಿದರು.ಅವರು ಸುಮ್ಮನೆ ಇದ್ದರೂ ಇವರೇ ಮಾತನ್ನು ಮುಂದುವರೆಸುತ್ತ (ಸ್ವಲ್ಪ ಬಿ ಪಿ ಇದೆ ಅನಸ್ತಿತ್ತು) ಸಾರ್ವಜನಿಕ ವಾಹನ ಇದು ಸ್ವಲ್ಪ ಹೊಂದಿಕೊಂಡು ಹೋಗಬೇಕು ಅದು ಇದು ಅಂತ ಹೇಳೋಕೆ ಶುರು ಮಾಡಿದ್ರು ಪಕ್ಕದಲ್ಲೇ ಇದ್ದ ನಾನು ಹೋಗ್ಲಿ ಬಿಡಿ ಸರ್ ಅಷ್ಟೇ.ಅದಕ್ಕೆ ಅಲ್ಲರಿ ನಾವು ಮನುಷ್ಯರಲ್ವಾ , ನೀವೇನು ಮೃಗವೇ ಅಥವಾ ನಾನೇನು ಮೃಗವೇ(ನನಗೆ ಬೇಕಿತ್ತಾ) ಇವರಿಗೆ ಅಷ್ಟು ತಿಳಿಯಲ್ವೆ ಅಂತ ಹೇಳಿದರು.ನಾನು ಇವರಿಗೆ ಹೇಳಿ ಪ್ರಯೋಜನವಿಲ್ಲ ಅಂತ ಸುಮ್ಮನಾದೆ.

ಮೊದಲು ನಕಾರ ಮಾಡಿದ ಹಿರಿಯರು ಇಳಿದು ಹೋದ್ರು ಇವರದ್ದು ಮಾತ್ರ ಮುಂದುವರೆಯುತ್ತಲೇ ಇತ್ತು , ಜನ ಸರಿ ಇಲ್ಲ ಹಾಗೆ ಹೀಗೆ ಅಂತ ಕೊನೆಗೆ ಇದು ನಮಗೆ ಬ್ರಿಟಿಷರು ಸ್ವತಂತ್ರ ಕೊಟ್ಟಗಿಲಾಗಿಂದ ಇದ್ದಿದ್ದೇ ಅನ್ನೋ ತೀರ್ಮಾನಕ್ಕೆ ಬಂದರು.ಅಷ್ಟರಲ್ಲಿ ಸ್ವಲ್ಪ ಮಧ್ಯ ವಯಸ್ಸಿನ ವ್ಯಕ್ತಿ ಅಲ್ಲರಿ ಬ್ರಿಟಿಷರು ನಮಗೆ ಸ್ವತಂತ್ರ ಕೊಟ್ಟಿಲ್ಲ ನಾವು ಪಡೆದುಕೊಂಡಿದ್ದು ಅಂತ ಶುರು ಮಾಡಿದರು.ಅವರು ಅವರೇ ಕೊಟ್ಟಿದ್ದು ಅಂತ , ಇವರು ನಾವೇ ಹಿಸ್ಕೊಂಡಿದ್ದು ಅಂತ ಕೊನೆಗೂ ಅವರ ಸ್ಟಾಪ್ ಬರೋವರೆಗೂ ಅವರಿಬ್ಬರ ವಾದ ನಡೀತಾನೆ ಇತ್ತು. ಇಳಿದ ಮೇಲೆ ಯಾರಿಗೆ ಯಾರು ಕೊಟ್ರೋ , ಯಾರು ಇಸ್ಕೊಂಡ್ರೋ ನನಗೆ ಗೊತ್ತಿಲ್ಲ ಆದರೆ ಅವರ ಪ್ರಶ್ನೆ ಮಾತ್ರ ಹಾಗೆ ಉಳಿತು.

"ಬ್ರಿಟಿಷರು ನಮಗೆ ಸ್ವತಂತ್ರ ಕೊಟ್ಟಿದ್ದೋ ಅಥವಾ ನಾವೇ ಇಸ್ಕೊಂಡಿದ್ದೋ?"

ಉತ್ತರ ಗೊತ್ತಿದ್ದವರು ತಿಳಿಸಿ.

ಇಂತಿ
ವಿನಯ

ಸಂಡಾಸ್ ಪುರಾಣ


ಮೊದಲೇ ಹೇಳಿಬಿಡುತ್ತೇನೆ ಲೇಖನ ಓದಿ ಆದ ಮೇಲೆ ನೀವು ನನ್ನನ್ನ ಇವನೆಂತ ಗಲೀಜು , ಹೊಲಸು , ಭಂಡ , ನಾಚಿಕೆ ಇಲ್ಲದವ ಅಂತ ಏನಾದ್ರೂ ಬೈಕೊಳ್ಳಿ ಪರವಾಗಿಲ್ಲ ಯಾಕಂದ್ರೆ ಹೆತಿದ್ದನ್ನು ಇಲ್ಲ ಅನ್ನೋದು ಕಷ್ಟ.ಹಾಗೆ ಏನಾದರು ತಿನ್ನುತ್ತಾ ಇದ್ದರೆ ದಯಮಾಡಿ ಅದನ್ನ ಬದಿಗಿಟ್ಟು ಇದನ್ನ ಓದಿ.ಆಮೇಲೆ ನಾನು ಮುನ್ನೆಚ್ಚರಿಕೆಗಳನ್ನ ಹೇಳಿಲ್ಲ ಅಂತ ನೀವು ನನ್ನನ್ನ ದೂರುವ ಹಾಗೆ ಇಲ್ಲ.

ನೋಡಿ ಜಗತ್ತಿನಲ್ಲಿ ಸಾವು ಕೂಡ ಹೇಳಿಕೇಳಿ ಬರಬಹುದು ಆದರೆ ನಾನು ಹೇಳ ಹೊರಟಿರುವ ಆ ಹೇಲು ಮಾತ್ರ ಹಾಗಲ್ಲ , ಯಾವಾಗ ಬರುತ್ತೆ ಅಂತ ಹೇಳೋದು ಕಷ್ಟ.ಹೇಗೆ ದೇವರೊಬ್ಬ ನಾಮ ಹಲವು ಅಂತ ಹೇಳ್ತಾರೋ ಹೇಲಿನ ವಿಷಯದಲ್ಲೂ ಅದೇ ಮಾತು ಅನ್ವಯವಾಗುತ್ತೆ. ನಾಚಿಕೆ ಇಲ್ಲದ ನನ್ನೊಂತೋರು ಹೇಲು ಅಂತ ಕರೆದರೆ , ಕೆಲವರು ಕಕ್ಕಸ್ಸು ಅಂತಾಲು,ಉತ್ತರ ಕನ್ನಡ ಕಡೆಯವರು ಸಂಡಾಸ್ ಅಂತಲೂ , ಸ್ವಲ್ಪ ನಾಚಿಕೆ ಸ್ವಭಾವದವರು ನಂಬರ್ ೨ ಅಂತಾಲು ಮತ್ತು ಆಧುನಿಕ ಜಗತ್ತಿನ ಜನ ಅನ್ನಿಸಿಕೊಂಡೋರು ರೆಸ್ಟ್ ರೂಂ ಗೆ ಹೋಗೋದು ಅಂತಾಲು ಕರೆಯುತ್ತಾರೆ ( ಇಲ್ಲಿ ಯಾರಿಗೆ ರೆಸ್ಟ್ ಅಂತ ಮಾತ್ರ ಕೇಳಬೇಡಿ).ಇನ್ನು ನಮ್ಮ ಸರ್ಕಾರದವರು ಇದನ್ನ ಮಲ ಅಂತಾಲು ಕರೆಯುತ್ತಾರೆ.

ಈ ಹೇಲಿನ ಜೊತೆಗೆ ಹೊಂದಿಕೊಂಡಿರೋದು ಹುನ್ಸ್ , ಇವೆರಡದ್ದು ಸಕತ್ ಕಾಮ್ಬಿನಶನ್.ಅದರ ವಿಚಾರಕ್ಕೆ ಆಮೇಲೆ ಬರೋಣ ಮೊದಲು ಈ ಹೇಲಿನ ಪುರಾಣ ಮುಗಿಸೋಣ. ನಾ ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ಶೌಚಾಲಯ ಇರಲಿಲ್ಲ , ಈಗಲೂ ಊರಿನ ಕೆಲವರ ಮನೆಯಲ್ಲಿ ಶೌಚಾಲಯ ಇಲ್ಲ.ಅವಾಗ ಹೇಲು ಬಂದ್ರೆ ಸಾಕು ಹಳ್ಳದ ಕಡೆಗೋ ಅಥವಾ ದರ್ಕಸ್ಕೋ ಅಥವಾ ಗುಡ್ಡದ ಕಡೆಗೋ ನಮ್ಮ ಓಟ ಶುರುವಾಗುತ್ತಿತ್ತು. ನನ್ನ ಅಚ್ಚು ಮೆಚ್ಚಿನ ಜಾಗ ಗುಡ್ಡದ ಪಕ್ಕದಲ್ಲಿರುವ ಒಂದು ಸಣ್ಣ ಕಾಲುವೆಯಾಗಿತ್ತು.ಸಂಡಾಸ್ ಮಾಡಲಿಕ್ಕೆ ಪ್ರಸಕ್ತವಾದ ಸ್ಥಳ ಅಂತಾನೆ ಹೇಳಬಹುದು. ಪಕ್ಕದ ಕಾಲುವೆಯಲ್ಲಿ ಸಂಡಾಸ್ ಮಾಡಿ ಕಾಲುವೆಯಲ್ಲಿ ಸ್ವಚ್ಛ ಮಾಡಿಕೊಳ್ಳೋದು ಸಕತ್ ಮಜಾ ಕೊಡೊ ವಿಚಾರ.ಕೆಲವೊಮ್ಮೆ ಸೋಂಬೇರಿತನ ಬಂದು ಕುನ್ದೆಯನ್ನೆ ಕಾಲುವೆಗೆ ಆದ್ದಿದ್ದು ಉಂಟು.ಮಳೆಗಾಲ ಶುರುವಾಯಿತೆಂದರೆ ಇನ್ನು ಒಂದು ಮಜಾ ಕಾಲುವೆಯ ನಡುವೆ ಸೇತುವೆಯಂತೆ ಹರಡಿರುವ ಬಳ್ಳಿಗಳ ಮೇಲೆ ಕೂತು ನೇರವಾಗಿ ಕಾಲುವೆಗೆ ಪ್ರಸಾದ ಹಾಕ್ತ ಇದ್ದೆವು.ಅಷ್ಟೇ ಅಲ್ಲ ನಾನು ಅಣ್ಣ ಒಟ್ಟಿಗೆ ಸಂಡಾಸ್ ಗೆ ಹೋಗ್ತಾ ಇದ್ದಿದ್ದರಿಂದ ಯಾರದು ಮುಂದೆ ಹೋಗುತ್ತೆ ಅನ್ನೋ ಬೆಟ್ ಬೇರೆ , ಏನೇ ಹೇಳಿ ಅದರ ಮಜವೇ ಬೇರೆ.

ನಮ್ಮ ಮನೆಯಲ್ಲಿ ಪಾಯಿಖಾನೆ (ಹೇಲ್ಗುಂಡಿ) ಕಟ್ಟಿಸಿದ್ದು ನನಗೆ ೯ ವರ್ಷವಿದ್ದಾಗ ಅನ್ಸುತ್ತೆ. ಅದರ ಓಪನ್ ದಿನ ನಾನು ಅಕ್ಕ ಗುದ್ದಾಡಿ ಕೊನೆಗೆ ಅವಳೇ ಹೋಗಿ ಮೊದಲು ಉಚ್ಚೆ ಹೊಯ್ದು ಬಂದಿದ್ದಳು. ಆದರೇನಂತೆ ಮೊದಲು ಹೇತವನು ನಾನೇ.ಪಾಯಿಖಾನೆಗೆ ಹೋಗುವುದೇ ನಮಗೊಂದು ಆಟ , ಅವ ಹೋದ ಅಂತ ಇವ , ಇವ ಹೋದ ಅಂತ ಅವಳು ಹೀಗೆ. ಮೊದಮೊದಲು ಅಲ್ಲಿ ಒಳ್ಳೆ ಮಜವೇ ಸಿಗುತ್ತಿತ್ತು , ಆದರೆ ಬರುಬರುತ್ತಾ ನಮ್ಮ ಕಾಲುವೆಯ ತರ ಇಲ್ಲಿ ತೆಲಿಹೊಗೋದು ಇಲ್ಲವಾದ್ದರಿಂದ ನಿಂತಿದ್ದನ್ನೇ ನೋಡಿ ನೋಡಿ ವಾಕರಿಕೆ ಬರುತಿತ್ತು.ಇಷ್ಟೆಲ್ಲಾ ಸಾಲದು ಅಂತ ಅಣ್ಣ ಅದಕ್ಕೆ ಒಂದು ಪೈಪ್ ಇಟ್ಟಿರ್ತಾರೆ ನೋಡಿ ಅದಕ್ಕೂ ಮೂಗು ಕೊಟ್ಟಿದ್ದ.ಪಾಪ ಏನು ಕಂಡನೋ ಗೊತ್ತಿಲ್ಲ ೧ ವಾರ ಅವನ ಪರಿಸ್ಥಿತಿ ಸಕತ್ ಆಗಿತ್ತು.

ಸರ್ಕಾರದವರು ನಿರ್ಮಲ ಶೌಚಾಲಯ ಅನ್ನೋ ಯೋಜನೆಯಲ್ಲಿ ಶೌಚಾಲಯ ಕಟ್ಟಿಸಲು ಬಡವರಿಗೆ ಹಣ ಕೊಡುತಿದ್ದರು,ಅಂದ್ರೆ ಒಂದೇ ಒಂದು ಸಮಸ್ಯೆ ಅಂದ್ರೆ ಅವರು ಹಣ ಮಂಜೂರಾತಿ ಮಾಡ್ತಾ ಇದ್ದಿದ್ದು ಕಂತುಗಳಲ್ಲಿ (ನೀವೇ ಹೇಳಿ ಕಂತುಗಳಲ್ಲಿ ಹೆಲೋಕೆ ಆಗುತ್ತಾ).ಗುಂಡಿ ತೋಡಿ ಎಷ್ಟೋ ದಿನ ಆದ ಮೇಲೆ ರೂಂ ಕಟ್ಟಿಸಲು ಹಣ ಬರುತ್ತಿತ್ತು.ಒಮ್ಮೆ ಹೀಗೆ ಆದಾಗ ನಮ್ಮೂರಿನ ನಾಗ ತಲೆ ಓಡಿಸಿ ಹೇಗಿದ್ರು ಒಳಗೆ ಕೂತ ಹೆತ್ರು ಗುಂಡಿಗೆ ಬಿಳೋದು ಅಂತ ಯೋಚಿಸಿ ಬೆಳಿಗ್ಗೆ ಬೇಗ ಮನೆಯವರೆಲ್ಲ ಎದ್ದು ಗುಂಡಿಯ ಸುತ್ತಲು ಕೂತು ಪಚಕ್ , ಪಿಚಕ್ ಅಂತ ಸದ್ದು ಮಾಡಿ ಕೆಲಸ ಮುಗಿಸಿಬಿಡುತಿದ್ದರು.

ಜನ ಸೆಕ್ಸ್ ಗಿಂತ ಹೆಚ್ಚಾಗಿ ಇದರ ಬಗ್ಗೆ ಮಾತಾಡಲು ಹೆದರಿಕೊಳ್ತಾರೆ ಅಥವಾ ಅಸಹ್ಯ ಪಟ್ಕೊಲ್ತಾರೆ ಅನ್ಸುತ್ತೆ.ನೋಡಿ ಈ ಮಲವನ್ನು ಆಯುಧವಾಗಿಯು ಬಳಸಬಹುದು ಅಂತ ನಿಮಗೆ ಗೊತ್ತ , ಗೊತ್ತಿಲ್ಲದಿದ್ದರೆ ನಿಮಗೆ ಒಂದು ನೈಜ ಘಟನೆ ಹೇಳ್ತೆ ಕೇಳಿ "ನಮ್ಮನೆಯಿಂದ ಒಂದು ಸ್ವಲ್ಪ ದೂರದಲ್ಲಿ ಪಕ್ಕದ ಊರಿನ ಗೌಡರ ಅಡಿಕೆ ತೋಟ ಇದೆ , ನಾವೇ ಅವರ ತೋಟದ ಹೊಂಬಾಳೆ,ಗರಿಕೆ ಎಲ್ಲ ಉಪಯೋಗಿಸೋದು.ಅವರ ತೋಟಕ್ಕೆ ನೀರಿನ ಮೂಲ ಮೇಲ್ಗಡೆ ಇರೋ ಒಂದು ಸರಕ್ಲು.ಒಮ್ಮೆ ಏನಾಯಿತು ಅಂದ್ರೆ ಪಕ್ಕದ ತೋಟದ ಕಾಂತಯ್ಯ ಇವರ ತೋಟಕ್ಕೆ ಬರೋ ನಿರನ್ನ ಮದ್ಯರಾತ್ರಿ ಬಂದು ತನ್ನ ತೋಟಕ್ಕೆ ತಿರುಗಿಸಿಕೊಂಡು ಹೋಗ್ತಿದ್ದ.ಅಪ್ಪನೂ ಒಂದೆರಡು ಬಾರಿ ಸುಮ್ಮನಿದ್ದು ಅವ ತಿರುಗಿಸಿ ಹೋದ ಮೇಲೆ ಇವರು ಹೋಗಿ ಸರಿ ಮಾಡಿ ಬರ್ತಿದ್ದರು.ಸುಮ್ಮನೆ ಯಾಕೆ ಜಗಳ ಅಂತ ಎದಿರಕೇಳಿರಲಿಲ್ಲ.ಹೀಗೆ ಒಮ್ಮೆ ಹೋದಾಗ ನೋಡ್ತಾರೆ ಪಾಪಿ ಸೂಳೆಮಗ ಅಲ್ಲೇ ಹೇತು ಹೊಗಿರಬೇಕೆ,ಸಿಟ್ಟು ಬಂತಾದರೂ ಸುಮ್ಮನಿದ್ದು ಹಾರೆ ತೆಗೆದುಕೊಂಡು ಹೋಗಿ ಸ್ವಲ್ಪ ಆ ಕಡೆಗೆ ಇನ್ನೊಂದು ದಾರಿ ಮಾಡಿ ನೀರು ಕಟ್ಟಿ ಬಂದಿದ್ದರು.ಅದರ ಮಾರನೆಯ ದಿನ ನಾ ಎದ್ದಾಗ ಅಪ್ಪ ಫುಲ್ ಖುಷ್ ಅಲ್ಲಿ ಇದ್ದರು ,ನನ್ನ ನೋಡಿದ್ದೇ ತಡ ಮಾಣಿ ನಿನ್ನೆ ರಾತ್ರಿ ನಾನು ೪ ಕಡೆ ಹೇತು ಬಂದಿದ್ದೇನೆ ಈಗ ಏನು ಮಾಡ್ತಾನೆ ನೋಡೋಣ ಅಂದರು.ನನಗೆ ನಗು ಜೋರಾಗಿ ಬರುತಿದ್ದರು ಅಪ್ಪನ ಹೊಸ ವಿಧ್ಯೆಯಿಂದ ಜ್ಞಾನ ಹೆಚ್ಚಯಿತಲ್ಲ ಅನ್ನೋ ಖುಷಿ ಬೇರೆ ಆಯಿತು. ಸ್ವಲ್ಪ ದಿನ ಇವರ ಹೇಲು ಜಗಳ ಹಾಗೆ ನಡೆದು ಕೊನೆಗೆ ಆಮೇಲೆ ಯಾರಿಗೆ ಹೇಲು ಕಡಿಮೆ ಆಯಿತೋ ಗೊತ್ತಿಲ್ಲ ಹೆಲೋದಂತು ನಿಂತು ಹೋಯಿತು".

ಇನ್ನು ಊರ ಜನರಿಗೆ ಇದರ ಬಗ್ಗೆ ಅರಿವೇ ಇರೋದಿಲ್ಲ , ಒಂದು ಉದಾಹರಣೆ ನೋಡಿ ಮಂಗ ಓಡಿಸುವ ಸುಧಾಕರ ಮನೆಕಡೆ ಬಂದಗಾಲೆಲ್ಲ ಹೇಳ್ತಾ ಇರ್ತಾನೆ ಮೊನ್ನೆ ಅಲ್ಲಿ ಮಲ ಹಿಡಿದೆ ಸ್ವಾಮಿ , ನಿನ್ನೆ ಅದರ ಕಿವಿ ಹಿಡಿದು ಸರಿಯಾಗಿ ಆಟಡಿಸಿದ್ದೆ(ಮಲಕ್ಕ ಕಣ್ಣು ,ಕಿವಿ , ಮೂಗು ಇರುತ್ತೆ ಅಂತ ಅವನಿನ್ದಾನೆ ನನಗೆ ಗೊತ್ತಾಗಿದ್ದು) ಇವತ್ತು ಅದರದ್ದೇ ಸಾರು , ನಾನು ಚಿ ಚಿ ಇವನೇನು ಮಲವನ್ನು ಬಿಡೋಲೊಲ್ಲ ಅಂತ ಅಮ್ಮನ ಬಳಿ ವಿಚಾರಿಸಿದರೆ ಅದು ಮಲ ಅಲ್ಲ ಮೊಲ ಅಂತ ಆಮೇಲೆ ತಿಳಿದಿದ್ದು.
ಇಷ್ಟಕ್ಕೆ ನಿಲ್ಲದೆ 'ಮಂಗ ನನ್ನ ಮಗನೆ ಒಳ್ಳೆ ಹೇತ್ ಹಾಕಿದಹಾಗೆ ಕೆಲಸ ಮಾಡಿದ್ಯಲ್ಲೋ' ಅಂತ ಬಯ್ಯೋವಾಗ ಕೂಡ ಈ ಹೇಲನ್ನು ಬಿಡೋಲ್ಲ.ಮಗನೆ ಹೊಡೆದರೆ ಅಲ್ಲೇ ಹೇತ್ ಕೊಳ್ಳಬೇಕು ಅಂತ ಕೂಡ ಬಳಸ್ತಾರೆ. ನಾವು ಚಿಕ್ಕವರಿದ್ದಾಗ ಚಡ್ಡಿ ಅಲ್ಲಿ ಹೇತ್ ಕೊಳ್ತಾ ಇದ್ದ ರವಿಯನ್ನು ಹೇಲಪ್ಪ ಅನ್ತಾಲೆ ಕರೆಯುತಿದ್ದಿದ್ದು.

ಹಾಗಂತ ಹೆಲೋದು ಸುಲಭ ಕೆಲಸ ಅನ್ಕೊಂದಿದ್ರೆ ಅದರಂತ ತಪ್ಪು ಕಲ್ಪನೆ ಇನ್ನೊಂದಿಲ್ಲ.ಮೊನ್ನೆ ಅಕ್ಕನ ಮನೆಗೆ ಹೋಗಿದ್ದೆ , ಅಕ್ಕ ತನ್ನ ೧ ವರ್ಷದ ಪಾಪುವನ್ನು ಮುಕಳಿ ಮೇಲೆ ಮಾಡಿ ಮಲಗಿಸಿ ಕೊಂಡು ಅದರ ಸುತ್ತ ತುಪ್ಪ ಹಚ್ಚುತ್ತ ಇದ್ದಳು.ನನಗೆ ಆಶ್ಚರ್ಯ ಕೊನೆಗೆ ವಿಷಯ ಏನು ಅಂತ ಕೇಳಿದರೆ ಅದು ೨ ದಿನದಿಂದ ಹೇತಿಲಂತೆ. ಆಮೇಲೆ ನಡೆದಿದ್ದೆ ಮಜಾ ಅಂತು ಇವಳಿಗೆ ಸೋತು ಅದು ಪಿಚಿಕ್ ಅಂತ ಕಿರುಬೆರಳಷ್ಟು ಅಷ್ಟು ದೊಡ್ಡ ಗಾತ್ರದ ಮಲ ಮಾಡಿತು.ಅಷ್ಟೇ ತಡ ಅಕ್ಕ ಮನೆಯವರಿಗೆಲ್ಲ ಕೇಳುವಂತೆ ಪುಟ್ಟ ಹೆತ , ಪುಟ್ಟ ಹೆತ ಅಂತ ಕೂಗಿಕೊಂಡಳು.ಎಲ್ಲರಿಗೂ ಖುಷಿಯೋ ಖುಷಿ,ಅದನ್ನೆಲ್ಲಾ ನೋಡುತ್ತಾ ಇದ್ದ ನಾನು ಹೇಳಿದೆ ಮುಂಚೆನೇ ಹೇಳಿದ್ರೆ ನಾನೇ ಮನೆತುಂಬ ಹೇತ್ ಹಾಕ್ತ ಇದ್ನಲ್ಲೇ ಅಂತ, ಮಗನೆ ಅದನ್ನ ನಿನಗೆ ತಿನ್ಸತಿದ್ದೆ ಅನ್ನೋತರ ದೃಷ್ಟಿ ಬೀರಿ ಅಕ್ಕ ಒಳಗೆ ಹೋದಳು.

ನೀವ್ ಏನೇ ಹೇಳಿ ಬಯಲಿನಲ್ಲಿ ಕೂತು ಹೆತಷ್ಟು ಮಜಾ ೪ ಗೋಡೆಗಳ ನಡುವೆ ಕೂತು ಹೆತರೆ ಬರೋದಿಲ್ಲ.ಅದರಲ್ಲೂ ಈ ವೆಸ್ಟನ್ ಬಾರಿ ಬೋರು.ಅಂದಹಾಗೆ ಮಲದ ಬಗ್ಗೆ ಮನುಷ್ಯರಿಗಷ್ಟೇ ಹೇಸಿಗೆ ಅಲ್ಲ ಪ್ರಾಣಿಗಳಿಗೂ ಇದೆ ಅನ್ನೋದಕ್ಕೆ ಕೆಳಗಿನ ನಗೆಹನಿ ಓದಿ.
"ಒಮ್ಮೆ ಒಂದು ತಾಯಿ ಮತ್ತು ಮಗು ಹಂದಿ ಮನುಷ್ಯರ ಮಲ ತಿನ್ನುತ್ತಾ ಇದ್ದವು , ಇದ್ದಕಿದ್ದಂತೆ ಮರಿ ಹಂದಿಗೆ ಒಂದು ಸಂದೇಹ ಬಂತು , ಅದು ಅಮ್ಮನಲ್ಲಿ ಕೇಳಿತು ಅಮ್ಮ ,ಅಮ್ಮ ನಾವು ಮನುಷ್ಯರ ಮಲ ತಿಂತೆವಲ್ಲ ಹಾಗಾದ್ರೆ ನಮ್ಮ ಮಲ ಯಾರು ತಿಂತಾರೆ.
ಅಷ್ಟರವರೆಗೂ ಸುಮ್ಮನೆ ತನ್ನ ಪಾಡಿಗೆ ಊಟ ಮಾಡುತ್ತಾ ಇದ್ದ ತಾಯಿ ಹಂದಿ ಹೇಳಿತು "ಚಿ ಚಿ , ಊಟ ಮಾಡ್ತಾ ಅಂತ ಹೊಲಸಿನ ಬಗ್ಗೆ ಮಾತನಾಡಬಾರದು ಪುಟ್ಟ ಅಂತ"". ಹೇಗೆ ?

ಹಾಗೆ ನ್ಯೂಟನ್ ೪ನೇ ಲಾ ಬೇರೆ ಇದೆ ಈದರ ಬಗ್ಗೆ " loose motion cannot be done in slow motion".

ಇಷ್ಟು ಹೊತ್ತು ನೆಮ್ಮದಿಯಾಗಿ ...........ಪುರಾಣ ಕೇಳಿದ ನಿಮ್ಮೆಲ್ಲರಿಗೂ ನನ್ನ ವಂದನೆಗಳು.

ಇಂತಿ
ವಿನಯ

ಮಂಗಳವಾರ, ಜುಲೈ 28, 2009

"ಆಪರೇಷನ್ ಬೆಡ್ ಬಕ್ಸ್"

ನನಗೂ ನೋಡಿ ನೋಡಿ ರೋಸಿ ಹೋಗಿತ್ತು.ಹೀಗೆ ಮುಂದುವರೆದರೆ ಸತ್ತಮೇಲೆ ನನ್ನ ಜೀವವನ್ನು ಪೋಸ್ಟ್ಮಾಟಂ ಮಾಡೋದು ಕಷ್ಟ ಅಂತ ಅನ್ಕೊಂಡು ಇವಕ್ಕೊಂದು ಗತಿ ಕಾಣಿಸಲೇ ಬೇಕು ಅಂತ ಮನಸಿನಲ್ಲೇ ನಿಶ್ಚಯಿಸದೆ.ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ.ನೇರ ಯುದ್ದಕ್ಕೆ ಬರುವವರನ್ನಾದರೆ ಹೇಗೋ ಎದುರಿಸಬಹುದು,ಆದರಿವು ಗೆರಿಲ್ಲಾ ಮಾದರಿಯ ದಾಳಿ ಮಾಡುತಿದ್ದವು.ಯಾವಾಗ? ಎಲ್ಲಿಂದ? ಹೇಗೆ? ಬಂದು ಕಡಿಯುತಿದ್ದವೋ ಹೇಳೋದು ಕಷ್ಟ ಆಗಿತ್ತು.ಈಗ ನಾನು ಮೊದಲು ಈ ಗೆರಿಲ್ಲಾ ಯುದ್ದ ತಂತ್ರಗಳನೆಲ್ಲ ಅರಿಯಬೇಕಿತ್ತು.ಅದಕ್ಕೂ ಮೊದಲು ಈ ಕಾರ್ಯಚರೆಣೆಗೆ ಒಂದು ಹೆಸರನ್ನು ಬೇರೆ ಸುಚಿಸಬೇಕಿತ್ತು.ಅಂದರೆ ಆಪರೇಷನ್ ತ್ರಿಶುಲ್ , ಆಪರೇಷನ್ ಅದು ಇದು ಅಥವಾ ಆ ಬಿರುಗಾಳಿ ಈದು ಅಂತ ಎಲ್ಲ ಹೆಸರಿಡುತ್ತಾರಲ್ಲ ಹಾಗೆ.ಹೆಸರಿಲ್ಲದೆ ನಾನು ಯುದ್ದ ಮಾಡಿ ಗೆದ್ದು ನಾಳೆ ಏನು ಮಾಡಿದೆ ಅಂತ ಯಾರಾದ್ರೂ ಕೇಳಿ ಅದಕ್ಕೆ ನಾನು ಮಧ್ಯರಾತ್ರಿ ಹಾಸಿಗೆ ಅಲ್ಲಿ ತಿಗಣೆ ಕೊಂದೆ ಅಂದ್ರೆ ಅಪಾರ್ಥ ಮಾಡಿಕೊಂಡುಬಿಡುತ್ತಾರೆ.ಅಂತು ೨ ದಿನದ ಸತತ ಯೋಚನೆ ನಂತರ ಒಂದು ಹೆಸರು ಹೊಳೆಯಿತು, ಅದುವೇ "ಆಪರೇಷನ್ ಬೆಡ್ ಬಕ್ಸ್" (ಹೇಗಿದೆ?).

ಒಂದು ಈಗಲೇ ಸ್ಪಷ್ಟ ಪಡಿಸುತ್ತೇನೆ ನಾನು ಏಕಾಏಕಿ ಯುದ್ಧ ಘೋಷಣೆ ಮಾಡಿರಲಿಲ್ಲ.ಮತ್ತೆ ನೀವು ಹಾಗೆ ಎಂದುಕೊಂಡು ವಿಶ್ವಸಂಸ್ಥೆ ಮುಖಾಂತರ ನಮ್ಮ ಮೇಲೆ ಒತ್ತಡ ಹೇರಬಾರದು.ನಾನು ಈ ಹೊಸ ರೂಂಗೆ ಬಂದು ಸೇರಿದ ದಿನದಿಂದಲೇ ಇವು ತಮ್ಮ ಕಾರ್ಯಾಚರಣೆ ಆರಂಭಿಸಿದ್ದವು.ಹೊಸ ರೂಂ ಆದ್ಧರಿಂದ ನನಗೂ ಅದರ ಅಷ್ಟು ಅನುಭವವಾಗಿರಲಿಲ್ಲ.ಬರುಬರುತ್ತಾ ನನಗೆ ಈ ಬೆಡ್ ಬಾಕ್ಸ್ (ತಿಗಣೆ)ಗಳ ಬಗ್ಗೆ ಅರಿವುನ್ಟಾಗಿದ್ದು. ಹಾಗಂತ ನಾನು ಅವುಗಳ ಮೇಲೆ ಏಕಾಏಕಿ ದಾಳಿ ಮಾಡಲಿಲ್ಲ,ನನ್ನಲ್ಲೂ ಕರುಣೆ ಇದೆ. so ದಿನಕ್ಕೆ ೨-೩ ಬಂದು ಅವಕ್ಕೆ ಬೇಕಾದಷ್ಟು ರಕ್ತ ಕುಡಿದುಕೊಂಡು ಹೋಗಲಿ ಎಂದು ಸುಮ್ಮನಿದ್ದೆ.ಪಾಪ ಅವು ಬದುಕಬೇಕಲ್ಲ.ಆದರೆ ಇವು ಒಂದಗಳು ಕಂಡಾಕ್ಷಣ ತನ್ನ ಪೂರ್ತಿ ಪರಿವಾರವನ್ನೆಲ್ಲ ಕರೆಯುವ ಕಾಗೆಯ ತರ ತನ್ನ ಪೂರ್ತಿ ಪರಿವಾರವೆನೆಲ್ಲ ಕರೆದುಕೊಂಡು ಬರುವುದೇ.ನೀವೇ ಹೇಳಿ ನನ್ನದೇನು Blood bank ಏ ಇವು ಬಂದಾಕ್ಷಣ ಎತ್ತಿ ಕೊಡೋಕೆ.ಆದರೂ ನಾನು ತಾಳ್ಮೆ ಕಳೆದುಕೊಳ್ಳದೆ ಅವುಗಳನ್ನು ನಿಯಂತ್ರಿಸುವ ಉಪಾಯ ಮಾಡುತಿದ್ದಾಗಲೇ ನನ್ನ ಮಿತ್ರರೊಬ್ಬರು ಹೇಳಿದರು ಅವನ್ನು ಹಿಡಿದು ನೀರಿಗೆ ಹಾಕು ನಿಧಾನವಾಗಿ ಕಡಿಮೆ ಆಗುತ್ತವೆ ಎಂದು.ಅವರು ಹೇಳಿದಂತೆ ಮಾಡಿದೆ ಒಂದೆರಡು ದಿನ ಚೆನ್ನಾಗೆ ಇತ್ತು.ಹತ್ತಿರದಲ್ಲೇ ಬಸವನಗುಡಿ ಈಜುಕೊಳ ಇರುವುದರಿಂದಲೋ ಏನೋ ೪ನೇ ದಿನದ ಹೊತ್ತಿಗೆ ಎಲ್ಲ ತಿಗಣೆಗಳು ಈಜಲು ಶುರು ಮಾಡಿಬಿಡುವುದೇ.ನನಗನ್ನಿಸುತ್ತೆ ಅವುಗಳ ಇರಾಕ್ ಇಂದಲೇ ಬಂದು ಇಲ್ಲಿ ನೆಲೆಸಿರಬೇಕು ಇಲ್ಲದಿದ್ದರೆ ಅಷ್ಟು ಕಡಿಮೆ ಅವಧಿಯಲ್ಲಿ ದಾಳಿಗೆ ಪ್ರತಿ ದಾಲೆ ಹೂಡಲು ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ. ಇದನ್ನು ಪುಷ್ಟಿಕರಿಸುವಂತೆ ಅವು ಶುರು ಮಾಡಿದ್ದೆ ಗೆರಿಲ್ಲಾ ಮಾದರಿಯ ಯುದ್ದ. ಮಲಗುವ ಮುಂಚೆ ಇಡಿ ತಡಿ ಹುಡುಕಿದರೂ ಒಂದು ಸಿಗುತ್ತಿರಲಿಲ್ಲ ಆದರೆ ಮಧ್ಯರಾತ್ರಿ ಹೊತ್ತಿಗೆ ಅದೆಲ್ಲಿಂದ ಬಂದು ಬಿಡುವುತಿದ್ದವೋ ತಿಳಿಯದು.ತಕ್ಷಣ ಎದ್ದು ಲೈಟ್ ಹಾಕಿದರೆ ಮತ್ತೆ ಮಂಗಮಾಯ.ಇಷ್ಟೆಲ್ಲಾ ಅದ ಮೇಲೆ ನಾನು ಯುದ್ಧ ಘೋಷಿಸಿದ್ದು.

ಇದೆಂತ ಕಠಿಣ ಶಿಕ್ಷೆ ದೊರೆತರು ಪರವಾಗಿಲ್ಲ ಅವುಗಳ ಸಜೀವ ದಹನ ಮಾಡೇ ತೀರುತ್ತೇನೆ ಎಂದು.ಹಾಗೆ ಮಾಡಬೇಕೆಂದರೆ ಮೊದಲು ನಾನು ಅವುಗಳ ಮೇಲೆ ಒಂದು ಕಣ್ಣು ಇಡಬೇಕಾಗಿತ್ತು.ಅಂತು ಸರಿಯಾಗಿ ೧ -೧.೩೦ ರ ಸುಮಾರಿಗೆ ಅವು ನನ್ನ ಹಾಸಿಗೆಯ ಬಳಿ ಬರುತ್ತವೆ ಅನ್ನೋದನ್ನ ತಿಳಿದುಕೊಂಡೆ. ಅಂದರೆ ಅಂದಾಜು ೧೨.೪೫ ಕ್ಕೆ ಸರಿಯಾಗಿ ನಾನು ಎದ್ದು ಕಾರ್ಯೋನ್ಮುಖವಾಗ ಬೇಕು.ಹಾಗಂತ ಅಲಾರಂ ಇಡುವಹಾಗಿರಲಿಲ್ಲ.ಅಂತು ೫ ದಿನದ ಪ್ರಯತ್ನದ ನಂತರ ಕೆಟ್ಟ ಕನಸು ಬಿದ್ದಾಕ್ಷಣ ಸಡನ್ ಆಗಿ ಏಳೋ ಹೀರೋಯಿನ್ ತರ ಸರಿಯಾದ ಸಮಯಕ್ಕೆ ಏಳೋ ನನ್ನ ಪ್ರಯತ್ನ ಸಫಲವಾಯಿತು.ಆಯುಧ ಅಂತ ಅಂಗಡಿಗೆ ಹೋಗಿ ೧೨ ರುಪಾಯಿಯ ದೊಡ್ಡ ಮೊಂಬತ್ತಿ ಮತ್ತು ೧ ಬೆಂಕಿ ಪೊಟ್ಟಣ ತಂದಿರಿಸಿದೆ.

ಪಕ್ಕದಲ್ಲೇ ಇರುವ ಜೋತಿಷ್ಯಾಲಯಕ್ಕೆ ಹೋಗಿ ಸದ್ಯಕ್ಕೆ ಯಾವುದೇ ಕಂಟಕವಿಲ್ಲವೆಂದು ಖಾತ್ರಿ ಪಡಿಸಿಕೊಂಡು,ಹಾಗೆ ಒಂದು ಒಳ್ಳೆ ದಿನವನ್ನು ಗೊತ್ತು ಮಾಡಿಕೊಂಡು ಬಂದೆ. ಅವಮಾಸ್ಯೆ ರಾತ್ರಿ ಬೇರೆ ಸಂಪೂರ್ಣ ಕತ್ತಲು ನಾನಂದು ಕೊಡಿದ್ದಕಿಂತ ೧೦ ನಿಮಿಷ ಮೊದಲೇ ಎಚ್ಚರವಾಯಿತು. ಪಕ್ಕದ ಬಿದಿಯಲ್ಲೆಲ್ಲೋ ಗೀಳು ಇಡುತಿದ್ದ ನಾಯಿ ನಮ್ಮ ಈ ಸಮರಕ್ಕೆ ಕಹಳೆ ಉದಿ start ಅನ್ನೋ ಸಿಗ್ನಲ್ ಬೇರೆ ಕೊಡ್ತು.ಉಳಿದಿರುವ ಸಮಯ ಅವುಗಳ ಚಲನಾ ವೇಗ ಎಲ್ಲವನ್ನು ಲೆಕ್ಕ ಹಾಕಿ ಅವಿನ್ನು ಗೋಡೆಯಿಂದ ಕೆಳಗೆ ಇಳಿಯುತ್ತಿರಬೇಕೆಂದು ನಿರ್ಧರಿಸಿ ಪಕ್ಕದಲ್ಲೇ ಇಟ್ಟಿದ್ದ ಮೊಂಬತ್ತಿ ಮತ್ತು ಕಡ್ಡಿ ಪಟ್ಟಣ ಅಲ್ಲೇ ಇದ್ಯ ಅಂತ ಖಚಿತಪಡಿಸಿಕೊಂಡೆ. ಸರಿಯಾದ ಸಮಯಕ್ಕೆ ಟ್ಯೂಬ್ ಲೈಟ್ ಹಾಕಿ , ಮೊಂಬತ್ತಿ ಹಚ್ಚಿಕೊಂಡು ಸಿಕ್ಕ ಸಿಕ್ಕ ತಿಗಣೆಗಳೆಲ್ಲವನ್ನು ಹಾಗೆ ಸಜೀವ ದಹನ ಮಾಡಿ ನಂತರ ಬೆಡ್ನ ಬಕ್ಸಿ ಅದರ ಹಿಂದೆ ಅಡಗಿದ್ದ ಎಲ್ಲವನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿದೆ. ರೂಂ ತುಂಬಾ ಸ್ಮಶಾನ ಮೌನ.ಆ ಸ್ಮಶಾನದಲ್ಲೇ ಮಲಗಿ ಬೆಳಿಗ್ಗೆ ಎದ್ದಾಗಲೇ ಗೊತ್ತಾಗಿದ್ದು ತಿಗಣೆ ಸಂಹರಿಸುವ ಬರದಲ್ಲೇ ಬೆಡ್ ನ ಒಂದು ಭಾಗವನ್ನು ಸುಟ್ಟುಹಾಕಿದ್ದೆ ಅಂದು.ಅದಾದಮೇಲೆ ಸಧ್ಯಕ್ಕೆ ಅವುಗಳ ಕಾಟವಿಲ್ಲ.ಆದರೆ ಹೇಳೋದು ಕಷ್ಟ ಈಗಾಗಲೇ ಸದ್ಧಾಂ ನೊಣವಾಗಿ ಬಂದು ಹೋಗಿದ್ದಾನೆ ಅನ್ನೋ ಸುದ್ದಿ ಇದೆ , ಇನ್ನೆಂದು ತಿಗಣೆಯಾಗಿ ಬರುತ್ತಾನೋ ತಿಳಿಯದು.

ಇಂತಿ

ವಿನಯ

ಸೋಮವಾರ, ಜುಲೈ 27, 2009

ಜೇನುಗಳು ಇವು ಸಿಹಿಯ ನೀಡುವ ಜೇನುಗಳು

ನಿನ್ನೆ ತೇಜಸ್ವಿಯವರ ಕರ್ವಾಲೋ ಓದುತ್ತ ಕುಳಿತಿದ್ದೆ.ಅವರ ಮುಖ್ಯ ಉದ್ದೇಶ ಹಾರುವ ಓತಿಯ ಬಗ್ಗೆ ತಿಳಿಸಿಕೊಡುವುದಾಗಿದ್ದರು ಅದರ ಮಧ್ಯೆ ಎಲ್ಲೂ ಅದು ತಪ್ಪದಂತೆ ಜೇನಿನ ಬಗ್ಗೆ ಅವರು ಮಾಹಿತಿ ನೀಡಿರುವ ರೀತಿ ನಿಜಕ್ಕೂ ಅದ್ಬುತವಾಗಿದೆ.ಏನೇನು ಹೇಳಬೇಕೋ ಅದನ್ನ ಅವರು ಉತ್ತಮವಾಗೆ ವಿವರಿಸಿದ್ದರು ಕೂಡ ಅದೊಂಚುರು ಬಿಟ್ಟರೆನೋ , ಇದೊಂದಿಷ್ಟು ಹೇಳಬಹುದಿತ್ತೇನೋ ಅನ್ನೋ ತುಡಿತ ನನಗಾಗುತಿತ್ತು.ಅವರು ಹೇಳಿರುವ ಪರಿಸರದಲ್ಲೇ ನಾನು ಹುಟ್ಟಿ ಬೆಳೆದಿರುವುದರಿಂದ ಬಹುಶಃ ಇದು ಸಹಜ ಅನ್ನಿಸುತ್ತೆ. ಈ ಜೇನುಗಳ ಬಗ್ಗೆ ಮಾತಡೋದಾದರೆ ನಾನು ಆ ವಿಷಯದಲ್ಲಿ ಸ್ವಲ್ಪ ತಿಳಿವಳಿಕೆಯುಳ್ಳವನು ಅಂದುಕೊಳ್ಳುತ್ತೇನೆ.

ಚಿಕ್ಕವನಾಗಿದ್ದಾಗ ಶೌಚಾಲಯಕ್ಕೆ ಹೊರ ಹೋಗುತ್ತಿದ್ದಾಗ, ಶಾಲೆಯಲ್ಲಿ ಮೂತ್ರ ವಿಸರ್ಜನೆಗೆಂದು ಅಲ್ಲೇ ಪಕ್ಕದಲ್ಲಿದ್ದ ಅಕೆಶಿಯ ಪ್ಲಾಂಟ್ ಗೆ ಹೋಗುತ್ತಿದ್ದಾಗ ಅಥವಾ ಅಮ್ಮನೊಂದಿಗೆ ಕಟ್ಟಿಗೆಗೆ ಅಂತ ಕಾಡಿನ ಒಳಗೆ ಹೋದಾಗ ಎಲ್ಲೇ ಆದರೂ ಈ ಕೀಟಗಳ , ಪಕ್ಷಿಗಳ ಬಗ್ಗೆ ನನ್ನ ಒಳಗೊಂಡು ವಿಚಿತ್ರ ಆಸಕ್ತಿ ಬರುತಿತ್ತು.ಈಗಿನವರ ಹೇಳಿಕೊಳ್ಳೋ ತರ ವೈಜ್ಞಾನಿಕ ವೀಕ್ಷಣೆ ಅಲ್ಲದಿದ್ದರೂ ಸಹಜವಾದ ಕುತೂಹಲ ಇದ್ದೆ ಇರುತಿತ್ತು.ಅದಕ್ಕೆಂದೇ ಏನೋ ನಮ್ಮನೆ ಎದುರುಗಡೆಯ ಮರದಲ್ಲಿ ಇದ್ದ ಕಾಗೆ ಮರಿಗಳು ಕೆಳಗೆ ಬಿದ್ದಾಗ ಅದನ್ನ ಸಾಕೋಣ ಅಂತ ಹಿಡಿಯಹೋಗಿ ತಾಯಿ ಕಾಗೆ ಹೊಡೆಯಲು ಬಂದು ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಆಮೇಲೆ ಅಪ್ಪನ ಹತ್ತಿರ ಪೆಟ್ಟು ತಿಂದಿದ್ದೆ. ನನ್ನ ಮತ್ತು ನನ್ ಅಮ್ಮನ ಮುದ್ದಿನ ಸಂಗಾತಿ ಎಂದರೆ ಬೆಕ್ಕು.ಅದೊಂದು ದಿನ ಹೀಗೆ ಬೇಟೆಯಾಡುತ್ತ ಗಿಳಿಯನ್ನೇ ಹಿಡಿದು ಬಿಟ್ಟಿತ್ತು.ಅರೆ ಪ್ರಜ್ಞಾವಸ್ತೆಯಲ್ಲಿ ಇದ್ದ ಅದನ್ನು ತಂದು ಏನೇ ಮಾಡಿದರು ಅದನ್ನ ನಮ್ಮಿಂದ ಉಳಿಸಿಕೊಳ್ಳಲಾಗಿರಲಿಲ್ಲ. ನಮ್ಮನೆ ಪಕ್ಕದಲ್ಲಿರುವ ದೈತ್ಯಾಕಾರದ 'ಬೆಳಲೆ' ಮರ ಈಗಲೂ ಅದೆಷ್ಟೋ ಗಿಳಿ, ಮರಕುಟುಕ....ಇತ್ಯಾದಿ ಪಕ್ಷಿಗಳ ಆಶ್ರಯ ತಾಣವಾಗಿದ್ದರೆ , ನನಗೆ ನನ್ನ ಕುತೂಹಲ ಅಡಗಿಸುವ ಪ್ರಯೋಗಶಾಲೆ.

ಇನ್ನು ಜೇನಿನ ಬಗ್ಗೆಯ ನನ್ನ ವಿಶೇಷ ಆಸಕ್ತಿಗೆ ನನ್ನ ಅಪ್ಪನೇ ಕಾರಣ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಮಲೆನಾಡ ಮನೆಗಳಲ್ಲಿ ಜೇನು ಸಾಕಣೆ ಒಂದು ಹವ್ಯಾಸ.ನಾನು ಚಿಕ್ಕವನಿದ್ದಾಗಿಂದ ನಮ್ಮ ಮನೆಯಲ್ಲಿ ಜೇನು ಪೆಟ್ಟಿಗೆ ಇದೆ.ಕಳೆದ ಒಂದೆರಡು ವರ್ಷದಿಂದ ಅಪ್ಪ ಅವುಗಳನ್ನು ಸಾಕುವ ಆಸಕ್ತಿ ತೊರೆದಿದ್ದಾರೆ.ಹಾಗಾಗಿ ಖಾಲಿ ಪೆಟ್ಟಿಗೆ ಇನ್ನು ಕಾಯುತ್ತ ಇದೆ.ಆದರೂ ನಮ್ಮ ಪಕ್ಕದ ಮನೇಲಿ ಇನ್ನು ಇದೆ.ನಾ ಹೋದಾಗೆಲ್ಲಾ ಒಂದು ಸಿಹಿ ಮುತ್ತು ಕೂಡ ಕೊಡುತ್ತಿರುತ್ತವೆ.
ಕರ್ವಾಲೋದಲ್ಲಿ ಬರೋ ಮಂದಣ್ಣನ ತರಾನೆ ನನ್ನ ಅಪ್ಪನ ಸ್ನೇಹಿತರೊಬ್ಬರಿದ್ದಾರೆ.ಅವರು ಅದರಲ್ಲಿ ಎಷ್ಟು ಪಳಗಿದ್ದಾರೆಂದರೆ ಕೇವಲ ಒಂದು ಹುಳುವಿನ ಜಾಡು ಹಿಡಿದು ಅದರ ನೆಲೆಯನ್ನೇ ಕಂಡುಹಿಡಿಯಬಲ್ಲರು.ಅವರು ಯಾವುದೇ ರೀತಿಯ ಆಧುನಿಕ ಉಪಕರಣಗಳನ್ನಾಗಲಿ ಅಥವಾ ಸಂಶೋಧನಾ ಗ್ರಂಥಗಳನ್ನೂ ಬಳಸಿದವರಲ್ಲ.

ನನಗೆ ನೆನಪಿರುವಂತೆ ನಾನು ಮೊತ್ತ ಮೊದಲ ಬಾರಿಗೆ ಜೇನು ಕಚ್ಚಿಸಿಕೊಂಡಿದ್ದು ೪ ಅಥವೋ ೫ ನೆ ವರುಷದವನಿದ್ದಾಗ.ಖಾಲಿ ಆಗಿದ್ದ ಪೆಟ್ಟಿಗೆಗೆ ಅಪ್ಪ ಮತ್ತು ಅವರ ಸ್ನೇಹಿತರು ಹೋಗಿ ಜೇನು ಕೂರಿಸಿಕೊಂಡು ಬಂದಿದ್ದರು.ಹಾಗೆ ಕೇವಲ ಮರಿ ಇರುವ ಹಲ್ಲೆ(ಜೇನುಗಳು ಕಟ್ಟುವ ಮೇಣದಿಂದ ತಯಾರಿಸಿದ ಆಕಾರಗಳು) ಮಾತ್ರ ಪೆಟ್ಟಿಗೆ ಒಳಗಿಟ್ಟು, ಉಳಿದ ತುಪ್ಪವಿರುವ ಒಂದು ಹಾಳೆಯಲ್ಲಿ (ಅಡಿಕೆ ಹಾಳೆ) ಹಾಕಿ ಅಂಗಳಕ್ಕೆ ತಂದಿಟ್ಟಿದ್ದರು.ನಾನು ಅದನ್ನ ತಿನ್ನುವ ಉತ್ಸಾಹದಲ್ಲಿ ಒಂದು ಸಣ್ಣ ಹಲ್ಲೆ ಎತ್ತಿಕೊಂಡು ಹಾಗೆ ಬಾಯಿಒಳಗೆ ಹಾಕಿಕೊಂಡು ಬಿಟ್ಟೆ.ಮೊದಲೇ ತಮ್ಮ ಸ್ವಸ್ಥಾನ ಹಾಳಾಗಿ ಹೋಗಿದ್ದ ಕೋಪ ಬೇರೆ , ಈಗ ಯಾರೋ ಬಂದು ತಾವು ಮಾಡಿದ ತುಪ್ಪ ಬೇರೆ ತಿನ್ನುತಿದ್ದಾರೆ ಅನ್ನಿಸಿತೋ ಏನೋ ಆ ಹಳೆ ಒಳಗೆ ಗುಯ್ ಗುಡುತ್ತ ಇದ್ದ ೨ ಜೇನ್ನೊಣಗಳು ನನ್ನ ಮೇಲೆ ಹಠಾತ್ ದಾಳಿ ಮಾಡಿ ಎರೆಡು ಕೆನ್ನೆಗಳನ್ನು ಒಂದಿಂಚು ಉದಿಸಿದ್ದವು.ಇನ್ನು ಈ ಜೇನಿನ ಸಹವಾಸವೇ ಬೇಡ ಅನ್ನಿಸಿದ್ದರೂ ಅದರ ತುಪ್ಪ ತಿಂದ ಮೇಲೆ ಅವು ಕಚ್ಚಿದ್ದೆಲ್ಲವು ಮರೆತು ಹೋಗಿತ್ತು.

ಹಾಗೆ ಶುರುವಾದ ಜೇನಿನೊಡಗಿನ ನನ್ನ ಸಂಬಂಧ ಕೆಲಸ ಅಂತ ಇಲ್ಲಿಗೆ ಬಂದು ಸೇರಿದ ಮೇಲೆ ನಿಂತೇ ಹೋಗಿದೆ ಅಂತಾನೆ ಹೇಳಬಹುದು.ಹಾಗಂತ ನಾನೇನು ಜೇನಿನ ಬಗ್ಗೆ ಪೂರ್ತಿ ಅರಿತ ಪಂಡಿತನಲ್ಲ. ಅವು ನನ್ನ ಮಟ್ಟಿಗೆ ನನ್ನ ಉತ್ತಮ ಗೆಳೆಯರು ಎಂದಷ್ಟೇ ಹೇಳಬಲ್ಲೆ. ಆಟಕ್ಕೆ ಆಟಿಕೆ ಇಲ್ಲದಿದ್ದಾಗ ಆ ಪೆಟ್ಟಿಗೆಯ ಬಳಿ ಕುಳಿತು ಗಂಡು ಜೇನುಗಳ ಜೊತೆ ಆಟವಾಡಿ ಕೊನೆಗೆ ಅವನ್ನು ಕೊಂದುಬಿಡುತಿದ್ದೆ. ಬೆಳಿಗ್ಗೆ ಬೇಗ ಎದ್ದು ಅವುಗಳ ಪೆಟ್ಟಿಗೆ ಬಳಿ ಕುಳಿತು ಅವು ತರುವ ಮಕರಂಧದ ಸುವಾಸನೆ ಸವಿಯುತಿದ್ದೆ.ಚಿಕ್ಕಪ್ಪನ ಜೊತೆ ಸೇರಿ ಜೇನು ಕೀಳಲು ಹೋಗಿ ಕಚ್ಚಿಸಿಕೊಳ್ಳಬಾರದ ಜಾಗದಲ್ಲಿ ಇಂಬಳದಿಂದ ಕಚ್ಚಿಸಿಕೊಂಡು ೨ ದಿನ ಮಲಗಿದ್ದೆ.ಅಪ್ಪನ ಸ್ನೇಹಿತರೊಡನೆ ರಾತ್ರಿ ಗಾಢ ಕಾಡಿನೊಳಗೆ ಹೋಗಿ ಅವರು ಪೆಟ್ಟಿಗೆಗೆ ಜೇನು ತುಂಬುವುದನ್ನು ಮೊದಲ ದಿನ ಶಾಲೆಗೆ ಬಂದ ವಿಧ್ಯಾರ್ಥಿಯಂತೆ ಕೂತು ನೋಡಿದ್ದೇನೆ. ನನಗೆ ಅವುಗಳ ಬಗೆಗಿನ ಭಯ ಹೋಗಲು ಅವರು ಒಂಥರಾ ಕಾರಣ ಅನ್ನಬಹುದು. ಕೆಲವೊಮ್ಮೆ ಪೂರ್ತಿ ಜೇನು ತುಂಬಿರುವ ಬಟ್ಟೆ ನನ್ನ ಕೈಯಲ್ಲಿ ಕೊಟ್ಟು ಅವರ ಪಾಡಿಗೆ ಅವರು ಪೆಟ್ಟಿಗೆಯಲ್ಲಿನ ಆಯತಾಕಾರದ ಫ್ರೇಮ್ ಗಳಿಗೆ ಮರಿಗಳಿರುವ ಹಲ್ಲೆ ಕಟ್ಟುತ್ತ ಕೂತು ಬಿಡುತಿದ್ದರು.

ಜೇನು ಪ್ರಪಂಚ ನಿಜಕ್ಕೂ ಅಚ್ಚರಿಗಳ ಸರಮಾಲೆಯನ್ನೇ ನಿಮ್ಮ ಮುಂದೆ ತೆರೆದಿಡುತ್ತದೆ. ಮುಖ್ಯವಾಗಿ ಸಾಕುವ ಜೇನುಗಳಲ್ಲಿ ನಾವು ಕಾಣುವುದು ಎರೆಡು ರೀತಿ (ನಾನು ನನ್ನ ಅನುಭವದ್ದನ್ನು ಹೇಳುತಿದ್ದೇನೆ). ೧ ) ಬಿಳಿ ತುಡಿ ೨)ಕಪ್ಪು ತುಡಿ. ಹೆಜ್ಜೆನನ್ನು ಕೇವಲ ತುಪ್ಪಕ್ಕಾಗಿ ಕಿಳುತ್ತಾರೆಯೇ ಹೊರತು ಪೆಟ್ಟಿಗೆ ಒಳಗೆ ಅವನ್ನು ಕುರಿಸೋಲ್ಲ. ಬಿಳಿ ತುಡಿ ಒಳ್ಳೆ ತುಪ್ಪ ಮಾಡುತ್ತವೆ ಅಂತ ನಾನು ಕೇಳಿದ ನೆನಪು ಆದರೆ ಕರ್ವಾಲೋ ದಲ್ಲಿ ಅದಕ್ಕೆ ತದ್ವಿರುದ್ಧ ಹೇಳಿಕೆ ಇದೆ.ಹಾಗಾಗಿ ಈ ವಿಷಯದಲ್ಲಿ ನಾನು ಈ ಬಾರಿ ಊರಿಗೆ ಹೋದಾಗ ಖಾತ್ರಿ ಮಾಡಿಕೊಳ್ಳಬೇಕಿದೆ. ಹಾಗೆ ಅಲ್ಲಿರುವ ಒಂದು ವಾಕ್ಯದಂತೆ ಜೇನುಗಳು ರಾತ್ರಿ ಸಂಚರಿಸುತ್ತವೆ ಅಂತ ಇದೆ.ನನಗೆ ತಿಳಿದ ಮಟ್ಟಿಗೆ ಅವು ನಿಶಾಚಾರಿಗಳಲ್ಲ, ಹಾಗಾಗಿ ಅದು ಕೇವಲ ಕಲ್ಪನೆ ಅನ್ನಿಸುತ್ತೆ. ರಾಶಿ ರಾಶಿ ಯಾಗಿರುವ ಜೇನುಗಳು ಅವಲ್ಲೇ ಒಂದಾದ "ರಾಣಿ ಜೇನು" ಹೇಳಿದಂತೆ ಕೇಳಿಕೊಂಡು ಹೇಗಿರುತ್ತವೆ ಅನ್ನೋದು ಒಂದು ವಿಸ್ಮಯ.

ಸಾಮಾನ್ಯವಾಗಿ ಇವು ಮರದ ಪೊಟರೆಯಲ್ಲೋ ಅಥವಾ ಯಾವುದಾದರು ಗೆದ್ದಲಿನ ಹುತ್ತದಲ್ಲೋ ಸೇರಿಕೊಂಡು ಬಿಡುತ್ತವೆ. ಇನ್ನೊಂದು ಗಮನಿಸಬೇಕಾದ ಅಂಶ ಅಂದ್ರೆ ಅವು ಸೇರಿಕೊಂಡಿರುವ ಪೊಟರೆ ಅಥವಾ ಹುತ್ತದ ಹೊರ ತೆರಳುವ ಬಾಗಿಲು ನೇರವಾಗಿ ಅವುಗಳನ್ನು ಹೂವು ಗಳಿರುವ ಕಡೆ ಕೊಂಡೈಯುವಂತೆ ಇರುತ್ತೆ. ಇರುತ್ತೆ ಅನ್ನೋಕಿಂತ ಆ ತರದ ಸ್ಥಳ ನೋಡಿ ಅಲ್ಲಿ ಅವು ವಾಸವಾಗಿರುತ್ತವೆ. ಗೆದ್ದಲಿನ ಗೂಡಿನಲ್ಲಿ ಇರುವ ಜೇನನ್ನು ಕೂಡಿಸುವುದು ಸುಲಭ. ಮರದ ಪೊಟರೆಯಲ್ಲಿದ್ದರೆ ಸಮಸ್ಯೆಗಳ ಸರಮಾಲೆ ಬರುವುದು.ಸಾಮಾನ್ಯವಾಗಿ ಜೇನು ಕೂಡಿಸುವಾಗ ಸುತ್ತ ಮುತ್ತ ಶಾಖ ಉಂಟುವಾಗುವಂತೆ ಮಾಡಿ , ಮೊದಲು ಅವುಗಳ ಹಲ್ಲೆಗಳನ್ನೂ ಕಿತ್ತು ತುಪ್ಪ ಇರುವುದು ಮತ್ತು ಮರಿಗಳು ಇರುವುದು ಎರೆಡನ್ನು ಬೇರ್ಪಡಿಸುತ್ತಾರೆ. ನಂತರ ಮರಿಗಳಿರುವ ಹಲ್ಲೆಗಳನ್ನು ಪೆಟ್ಟಿಗೆಯೊಳಗಿನ ಫ್ರೇಮ್ ನ ಗಾತ್ರಕ್ಕೆ ಕತ್ತರಿಸಿ ಬಾಳೆಪಟೇ ಹಗ್ಗದಿಂದ ಆ ಫ್ರೇಮ್ ನೊಂದಿಗೆ ಕಟ್ಟಿ ಇಡುತ್ತಾರೆ. ಪೆಟ್ಟಿಗೆಯ ಸಿದ್ಧತೆ ನಡೆದ ಮೇಲೆ ಹುಳುಗಳನ್ನು ಅದರ ಒಳಗೆ ಬಿಡೋದು, ಅಪ್ಪನ ಸ್ನೇಹಿತರು ಕೈಗೆ ಒಂದು ಬಟ್ಟೆ ಕಟ್ಟಿಕೊಂಡು ಒಳ್ಳೆ ರೇಷ್ಮೆ ಹುಳು ತುಂಬೋ ತರ ಅದನ್ನ ತುಮ್ಬುತಿದ್ದರು. ಅವು ಕಚ್ಚಿ ಕಚ್ಚಿ ಅವರಲ್ಲಿ ಅದೆಂತ ಪ್ರತಿರೋಧಕ ಶಕ್ತಿ ಬೆಳೆದಿದೆ ಎಂದರೆ ಇರುವೆ ಕಚ್ಚಿದರೆ ತುರಿಸಿಕೊಳ್ಳುತ್ತಾರೆ ಜೇನು ಕಚ್ಚಿದರೆ ಏನು ಆಗೇ ಇಲ್ಲ ಅನ್ನೋ ತರ ಇರುತ್ತಾರೆ.ನಂಗು ಕಚ್ಚಿಸಿಕೊಂಡು ಅಭ್ಯಾಸವಾಗಿತ್ತಾದ್ದರಿಂದ ಉದಿಕೊಳ್ಳುತ್ತಿರಲಿಲ್ಲ ಅನ್ನೋದು ಬಿಟ್ರೆ ತುರಿಕೆ ಅಂತು ಆಗ್ತಿತ್ತು.

ಜೇನು ಕಚ್ಚೋದು ನಮಗೆ ಕೇವಲ ಪ್ರತಿರೋಧ ಅಂತ ಕಂಡರೂ , ಅದು ಅವುಗಳ ಜೀವನ್ಮರಣದ ವಿಷಯ.ನಿಮಗೆ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ ಒಮ್ಮೆ ಕಚ್ಚಿದ ಜೇನು ಮತ್ತೆ ಬದುಕಿ ಉಳಿಯಲ್ಲ. ಕಾರಣ ಅವು ಕಚ್ಚುವ ಭಾಗ ಅದರ ದೇಹಕ್ಕೆ ಅಂಟಿಕೊಂಡಿರುತ್ತದೆ. ಒಮ್ಮೆ ಅದು ಕಚ್ಚಿ ಅದನ್ನ ಹೊರ ತೆಗೆಯೋಕೆ ಪ್ರಯತ್ನಿಸುವಾಗ ಆ ಭಾಗ ನಮ್ಮ ದೇಹದಲ್ಲೇ ಉಳಿದು ಅದರ ಸಾವು ಸಂಭವಿಸುತ್ತದೆ(ಇದರ ಬಗ್ಗೆ ಇನ್ನು ಹೆಚ್ಚು ತಿಳಿದವರು ವಿವರಿಸಬಹುದು). ಅದು ಕಚ್ಚಿದಾಗ ನಮಗೆ ಹೆಚ್ಚು ನೋವು ಉಂಟಾಗುವುದಿಲ್ಲ , ಅದು ಆ ಮುಳ್ಳನ್ನು ಹೊರ ಎಳೆಯಲು ಪ್ರಯತ್ನ ಪಡುತ್ತಲ್ಲ ಅವಾಗಲೇ ನಮಗೆ ನೋವಿನ ಅನುಭವವಾಗೋದು. ಈಗ ಹೇಳಿ ಜೇನು ಕಡಿದರೆ ನಿಜವಾದ ನೋವಾಗೋದು ಯಾರಿಗೆ. ಇನ್ನೊಂದು ಜೇನು ತಾವೇ ತಾವಾಗಿ ಬಂದು ಯಾರನ್ನು ಕಡಿಯೋಲ್ಲ.ಅದಕ್ಕೆ ಕೋಪಗೊಳ್ಳಲು ಪ್ರಚೋದನೆ ದೊರಕಿರಬೇಕು ಅಷ್ಟೇ.ಕೆಲವೊಮ್ಮೆ ಅವುಗಳ ಗೂಡಿನ ಮೇಲೆ ಹಲ್ಲೆ ಮಾಡುವ ಇರುವೆ , ಹಾವು ಗಳಿಗೆ ಪ್ರತಿರೋದಿಸಹೋಗಿ ಎದುರುಗಡೆ ಬಂದವರನೆಲ್ಲ ಕಡಿದು ಬಿಡುತ್ತವೆ.

ಒಮ್ಮೆ ಪೆಟ್ಟಿಗೆ ಒಳಗೆ ಕೂಡಿಸಿದ ಹಾಗೆ ಕೆಲಸ ಮಾಡಲು ಶುರುಮಾಡುವುದಿಲ್ಲ. ಕೆಲ ಕಾಲ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ ಏನು ಅಪಾಯ ಇಲ್ಲ ಅಂತ ಅರಿತುಕೊಂಡ ಮೇಲೆ ಅವು ಕೆಲಸ ಶುರು ಮಾಡಿಕೊಳ್ಳೋದು.ಮೊದಲ ಕೆಲಸ ಅಂದರೆ ಒಳಗಿರುವ ಹಲ್ಲೆಗಳನ್ನು ಫ್ರೇಮ್ ನೊಂದಿಗೆ ಜೋಡಿಸೋದು. ನೀವು ಯೋಚಿಸಬಹುದು ಅದಾಗಲೇ ನಾವೇ ಅವಕ್ಕೆ ಬಾಳೆ ಹಗ್ಗ ಕಟ್ಟಿದ್ದೆವೆಲ್ಲ ಎಂದು , ಅಲ್ಲೋ ಇರೋದು ನೋಡಿ ಜೇನು ಗಳು ಬಹಳ ಸ್ವಾವಲಂಬಿಗಳು. ನೀವು ಏನೇ ಮಾಡಿಟ್ಟರು ಅವು ಅದನ್ನ ಉಪಯೋಗಿಸದೆ ಕಟ್ಟಿರುವ ಬಾಳೆ ಪಟೇ ಹಗ್ಗಗಳನ್ನು ಕತ್ತರಿಸಿ ಪೆಟ್ಟಿಗೆ ಇಂದ ಹೊರಗೆ ತಂದು ಹಾಕಿ ಬಿಡುತ್ತವೆ. ಆಮೇಲೆ ಶುರುವಾಗೋದೇ ಮಕರಂಧ ಬೇಟೆ.

ಪೆಟ್ಟಿಗೆಯಲ್ಲಿರುವ ರಾಣಿ ಜೇನಿಗೆ ಕೇವಲ ಆಡಳಿತದ ಕೆಲಸ ಮಾತ್ರ.ಅದು ಹಾರಿ ಹೋಗದಂತೆ ಪೆಟ್ಟಿಗೆಯ ಒಂದು ಕಡೆ ಗೇಟ್ ಹಾಕಿರುತ್ತೇವೆ.ರಾಣಿ ಜೇನು ಎಲ್ಲವಕ್ಕಿಂತ ಸ್ವಲ್ಪ ದೊಡ್ಡ ಇರೋದ್ರಿಂದ ಆ ಗೇಟ್ ಇಂದ ಅದಕ್ಕೆ ಹೊರೋಗೆ ಬರೋಕ್ಕೆ ಆಗೋಲ್ಲ. ಇನ್ನು ಪೆಟ್ಟಿಗೆಯಲ್ಲೇ ಇರುವ ಗಂಡು ಹುಳುಗಳು ಕೇವಲ ಸಂತಾನೋತ್ಪತ್ತಿಗಾಗಿ ಮಾತ್ರ ಬಳಕೆ ಆಗುತ್ತವೆ. ಕೆಲವೊಮ್ಮೆ ಅವುಗಳ ಸಂಖ್ಯೆ ಜಾಸ್ತಿ ಆದಾಗ ಹೆಣ್ಣು ಹುಳುಗಳೇ ಅವನ್ನು ಕೊಂದು ಹೊರ ತಂದು ಹಾಕುತ್ತವೆ. ಗಂಡು ಹುಳುಗಳ ಹಿಂಬಾಗ ಕಪ್ಪಾಗಿರುತ್ತದೆ ಮತ್ತು ಅವು ಕಚ್ಚುವುದಿಲ್ಲ. ಕೆಲವೊಮ್ಮೆ ಒಳಗಿರುವ ಹುಳು ಗಳ ಸಂಖ್ಯೆ ಜಾಸ್ತಿ ಆದಾಗ ಅವಲ್ಲೇ ಇನ್ನೊಂದು ಹೊಸ 'ರಾಣಿ ' ಯನ್ನು ಆರಿಸಿಕೊಂಡು, ಸ್ವಲ್ಪ ಪ್ರಮಾಣದ ಹುಳುಗಳು ಬೇರೆ ಹೋಗುವುದು ಉಂಟು.ಇದು ಒಳಗೆ ಇರುವ ಒಟ್ಟು ಸ್ಥಳವಾಕಾಶ ಮತ್ತು ಅವುಗಳ ಒಟ್ಟು ಸಂಖ್ಯೆಯಾ ಮೇಲೆ ಅವಲಂಬಿತವಾಗಿರುತ್ತದೆ.

ಹಾಗಂತ ಪೆಟ್ಟಿಗೆಯೊಳಗಿನ ಜೇನುಗಳ ಜೀವನವೇಣು ಸುಖ ಜೀವನವಲ್ಲ. ತರ ತರಹದ ಇರುವೆಗಳು ಇವುಗಳ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತವೆ. ಹಾವಿನ ವಿಷ ಗಾಳಿ ಇಂದ ಕೂಡ ಕೆಲವೊಮ್ಮೆ ಇಡೀ ಪೆಟ್ಟಿಗೆಯೇ ಸ್ಮಶಾನವಾಗುವುದು ಉಂಟು.ಒಮ್ಮೆ ಯಂತು ಯಾವುದೇ ಕಾರಣವಿಲ್ಲದೆ ಜೇನುಗಳು ಪೆಟ್ಟಿಗೆಯಲ್ಲಿ ಸಾಯ ತೊಡಗಿದವು.ಇದನ್ನ ನೋಡಿ ಅವನ್ನು ಮತ್ತೆ ಉಳಿಸಿಕೊಳ್ಳುವ ಮನಸ್ಸಾಗದೆ ಅಪ್ಪ ಪೆಟ್ಟಿಗೆಯ ಮುಚ್ಚಳವನ್ನೇ ತೆಗೆದರೂ ಅವುಗಳಿಂದ ಹಾರಲಾಗುತ್ತಿರಲಿಲ್ಲ. ಕೊನೆಗೆ ಅವು ಅಲ್ಲೇ ಸತ್ತು ಹೋಗಿದ್ದು.ನನಗಂತೂ ಅದನ್ನು ನೋಡಲಾಗಿರಲಿಲ್ಲ.ಆಮೇಲೆ ಪೆಟ್ಟಿಗೆ ಸ್ವಚ್ಛ ಮಾಡುವಾಗಲೇ ಗೊತ್ತಾಗಿದ್ದು ಅದರೊಳಗೆ ಕಟ್ಟೆ ಇರುವೆ ಜಾತಿಯ ಇರುವೆ ಸೇರಿಕೊಂಡು ಇವನ್ನು ದ್ವಂಸ ಗೊಳಿಸಿದ್ದವು ಅಂತ.ಹೀಗೆ ಸಿಹಿ ನೀಡುವ ಪ್ರಾಣಿಗೂ ಕಷ್ಟಗಳ ಸರಮಾಲೆ ಇರುತ್ತೆ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು.

ಇಂತಿ

ವಿನಯ

ಶನಿವಾರ, ಜುಲೈ 25, 2009

ಇನ್ನು ಸ್ವಲ್ಪ ಬಾಕಿ ಇದೆ

ಮತ್ತೆ ಹೊಡೆದಾಡಿ ಕೊಂಡಿದ್ದಾರೆ ಅಂದ್ರೆ matter ಸಕತ್ ಸೀರಿಯಸ್ ಆಗೇ ಇರಬೇಕು ಅಂದುಕೊಂಡು ಅದೇನು ತಿಳಿದುಕೊಳ್ಳೋಣ ಅಂತ ಅಮ್ಮನಿಗೆ ಫೋನಾಯಿಸಿದೆ. ಆದರೆ without ಆಕ್ಷನ್ ಅದನ್ನ explain ಮಾಡೋದು ಕಷ್ಟ ಅಂತ ಮತ್ತೊಮ್ಮೆ ಊರಿಗೆ ಬಂದಾಗ ಹೇಳ್ತೇನೆ ಅಂದ್ರು ಅಮ್ಮ ,ನನಗೆ ಯಾಕೋ ಸಮಾಧಾನವೇ ಆಗಲಿಲ್ಲ highlights ತರ ಸ್ವಲ್ಪನಾದ್ರೂ ಹೇಳು ಅಂತ ಹೇಳಿದೆ. ಬಡ್ಡಿಮಗನೆ ಇದೆ ಇಂಟರೆಸ್ಟ್ ಓದೋದರಲ್ಲಿ ಇದ್ದಿದ್ದರೆ ಪೇಪರ್ ಅಲ್ಲಿ ಫೋಟೋನಾದ್ರೂ ಬರ್ತಿತ್ತು ಅಂತ ಗೊಣಗಿಕೊಂಡರು (ಪೇಪರ್ ಅಲ್ಲಿ ಫೋಟೋ ಬರದೋ ಒಂದು ಸಕತ್ matter ಅದರ ಬಗ್ಗೆ ಮುಂದೆ ಬರಿತೆ). ನಮ್ಮ ಅಮ್ಮನ ಒಂದೇ ಒಂದು ಪ್ರಾಬ್ಲಮ್ ಅಂದ್ರೆ e-story ಹೇಳ್ತಾ ಕೂತರೆ ಅವರ ಸ್ವರ ಭೀಮಸೇನ ಜೋಷಿ ಅವರ ಹಾಡಿನಂತೆ ನಿಧಾನವಾಗಿ ತಾರಕಕ್ಕೆ ಏರಿ ಬಿಡುತ್ತೆ. ಒಮ್ಮೆ ಪಕ್ಕದ ಕೇರಿಯ ಕರಿಯ ಅವನ ಹೆಂಡತಿಗೆ ನಮ್ಮ ಮನೆ ಪಕ್ಕದ ತೋಟದಲ್ಲೇ ದನಕ್ಕೆ ಬಡಿಯೋ style ಅಲ್ಲಿ ಸರಿಯಾಗಿ ಬಡಿದು ಬಿಟ್ಟನಂತೆ. ಅಲ್ಲೇ ಹೊಂಬಾಳೆ ಹೆಕ್ತ ಇದ್ದ ಅಮ್ಮ ಅದನ್ನ ನೋಡಿ ಬಿಟ್ಟಿದ್ದಾರೆ,ಅದೇ ನೋಡಿ ಎಡವಟ್ಟಾಗಿದ್ದು.ಮನೆಗೆ ಬಂದೋರೆ ತಮ್ಮ ತಂಗಿಗೆ ಮಿಸ್ ಕಾಲ್ ಮಾಡಿ ಅವಳು ಕಾಲ್ ಮಾಡಿದ ಕೂಡಲೇ ಹಳೆ ಹಿಂದಿ ಫಿಲಂ ಅಲ್ಲಿ over acting ಮಾಡ್ತಾರಲ್ಲ ಆ ಸ್ಟೈಲ್ ಅಲ್ಲಿ with music ( like ಅಯ್ಯೋ , ಬೇಡ್ರಿ , ಹ್ಮಂ ಬೆನ್ನು .....etc) ಅವಳಿಗೆ ಫುಲ್ explain ಮಾಡುತ್ತಿರಬೇಕಾದರೆ ಪಕ್ಕದ ಮನೆ ಚಂದ್ರಯ್ಯ ಅಪ್ಪನೇ ಅಮ್ಮನಿಗೆ ಹೊಡೀತಾ ಇದಾರೆ ಅಂತ ತಿಳ್ಕೊಂಡು , ಹೊಡೆದಾಟ ತಪ್ಪಿಸೋಕೆ ಬಂದಿದ್ರಂತೆ.ಆಮೇಲೆ ಅವರಿಗೆ ಗೊತ್ತಾಗಿದ್ದು ಇದು ಅಮ್ಮನ ಏಕಪಾತ್ರಾಭಿನಯ ಅಂತ.

ಈಗ ಮುಖ್ಯ ವಿಷಯಕ್ಕೆ ಬರೋಣ , ನಮ್ಮೂರಿನ ಕೆಲ ಹೆಂಗಸರು ಹೇಗೆ ಅಂದ್ರೆ ತೇಜಸ್ವಿಯವರ 'ಕಿರಗೂರಿನ ಗಯ್ಯಾಳಿಗಳು' ಕಥೆಗಳಲ್ಲಿ ಬರುವ ದಾನಮ್ಮನನ್ನು ಕೂಡ ಇವರ ಮುಂದೆ ಹಾಗೆ ನಿವಾಳಿಸಿ ಬಿಸಾಡಿಬಿಡಬೇಕು ಅಷ್ಟು powerful.ಮಾತಿನಲ್ಲೂ ,ಹಾಗೆ ಕೆಲಸದಲ್ಲೂ.ಇನ್ನು ಈ ಸ್ಟೋರಿಯಾ ಮುಖ್ಯ ಪಾತ್ರ ಯಶೋಧ ಸಾಕ್ಷಾತ್ ದುರ್ಗಿ. ಜಗಳಕ್ಕೆ ಇಳಿದಲೆಂದಳೆ ಸಂಸ್ಕೃತ ಹಾಗೆ ಲೀಲಾಜಾಲವಾಗಿ ಅವಳ ಬಾಯಿಂದ ಬಂದು ಬಿಡುತ್ತದೆ.ಹಾಗಂತ ಕೆಲಸದಲ್ಲಿ ಏನು ಕಮ್ಮಿ ಇರಲಿಲ್ಲ.ಕೆಲ ಗಂಡಸರು ಎರಲಾಗದಂತ ಮರ ಏರಿ ಸೊಪ್ಪು ಕಡಿದುಕೊಂಡು ಬರುತ್ತಿದ್ದಳು. ಒಮ್ಮೆ ಹೀಗೆ ಅವಳು ಹೊನ್ನೇ ಮರ ಹತ್ತಿ ಸೊಪ್ಪು ಕಡಿತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಹೋಗುತಿದ್ದ ಗೆಂಡೆ ರಾಮ ಸುಮ್ಮನೆ ಇರಲಾಗದೆ ಮರದ ಕೆಳಗೆ ಬಂದು ಹಲ್ಲು ಕಿರಿಯುತ್ತಾ ಏನ್ರಿ ಸೊಪ್ಪು ಕಡಿತಾ ಇದ್ದೀರಾ ಅಂತ ಕೇಳೋದೇ.ಇವಳಿಗೋ ಮೊದಲೇ ಚಿಗುಳಿ ಬೇರೆ ಕಡಿತಿತ್ತು ಅದು ಅಲ್ದೆ ಮರದ ಮೇಲೆ ಇದ್ದಳು ಎಲ್ಲಿತ್ತೋ ಕೋಪ 'ಬೆವೆರ್ಸಿ ನನ್ ಮಗನೆ ಏನ್ ಮರದ ಅಡಿ ನಿಂತು ಹಲ್ಲು ಕಿರಿತಿದ್ದಿ , ನಿನ್ ಹೆಂಡ್ರಿಗೆನ್ ಬತ್ತಿ ಹೊಗ್ಯದ' ಅನ್ನಬೇಕೆ. ಬೋರ್ ವೆಲ್ ಕಟ್ಟೆ ಇಂದ ಹಿಡಿದು ಕಾಡಿಗೆ ಸೊಪ್ಪು ತರೋಕೆ ಹೋದಾಗಲೂ ಯಾರು ಅವಳ ಬಗ್ಗೆ ಮಾತಾಡಬಾರದು ಅಂತ ಹವಾ maintain ಮಾಡಿದ್ಲು ಅವಳು.

ಒಂದರ್ಥದಲ್ಲಿ ಊರಿನ ಎಲ್ಲರಿಗೂ ವಿಲನ್ ಆಗಿದ್ದಳು ನನ್ನ ಕಥೆಯ ಹೀರೋಯಿನ್ ಈ ಯಶೋಧ.ಇನ್ನು ಅವಳ ಗಂಡ ಮಂಜ ಇಟ್ಟಿಗೆ ಗುಡಿನಿಂದ ಬರೋ ಹೋಗೆ ತರ ಅವ ಎಚ್ಚರವಿದ್ದಾಗಲೆಲ್ಲ ಕೈ ಅಲ್ಲಿ ಇರುತ್ತಿದ್ದ ನಂ.೩ ಮುಂಡು ಬಿಡಿ ಇಂದ ಪುಸ್ ಪುಸ್ ಅಂತ ಹೋಗೆ ಬಿಡುತ್ತಲೇ ಇರುತಿದ್ದ. ಮಧ್ಯೆ ಮಧ್ಯೆ ಪೌರಾಣಿಕ ಸಿನಿಮಾದಲ್ಲಿ ಕ್ಯಾಬರೆ ಡಾನ್ಸ್ ಹಾಕಿದ ಹಾಗೆ ಉಸ್ ಉಸ್ಸ್ ಅಂತ ಕೆಮ್ಮು ಬೇರೆ.ಇನ್ನು ಇದ್ದ ೨ ಹೆಣ್ಣು ಮಕ್ಕಳು.ಅಮ್ಮನ ಪಡಿಯಚ್ಚು.ಥು ಅಂದರೆ ಥು ಥು ಅಂದರೆ ಥು ಥು ಅನ್ನೋ ಹಾಗೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಹಾಗೆ ಅಮ್ಮ ಹೇಳುತ್ತಿದ್ದ ಒಂದು ಪದ ಬಿಡದೆ ಅಷ್ಟನ್ನು ಕಂಠಪಾಠ ಮಾಡಿದ್ದವು. ತಾವು ಏನು ಕಡಿಮೆ ಇಲ್ಲ ಅಂತ ತೋರಿಸೋಕೆ ಏನೋ ಪಟ್ಟಣಕ್ಕೆ ಹೋಗಿ ಅಮ್ಮನ dictionary ಅಲ್ಲಿ ಇಲ್ಲದ ಒಂದಿಷ್ಟು ಹೊಸ ಪದ ಬೇರೆ ಕಲಿತಿದ್ದವು.

ಹೀಗೆ ಇದ್ದರೇ ಆಗೋಲ್ಲ ಅಂದುಕೊಂಡ ಊರಿನ ಹೆಂಗಸರೆಲ್ಲ ಸೇರಿ ಅವಳಿಗೆ ತಕ್ಕ ಶಾಸ್ತಿ ಮಾಡಬೇಕು ಅಂತ ಯೋಚಿಸುತ್ತಿರುವಾಗಲೇ ಸಿಕ್ಕಿತು ನೋಡಿ ಕಾರಣ.ಏನಪ್ಪಾ ಅಂದರೆ, ಅವಳ ಮನೆಯ ಪಕ್ಕದಲ್ಲಿರುವ ಮನೆಯ ಸವಿತಾ ಅನ್ನೋ ಹುಡುಗಿಗೆ ಮದುವೆ ನಿಶ್ಚಯವಾಗಿತ್ತು.ಆದರೆ ಯಶೋಧೆಯ ದೊಡ್ಡ ಮಗಳಿಗೆ ಅವಳನ್ನ ಕಂಡರೆ ಆಗೋಲ್ಲ.ಹಾಗಾದರೂ ಮಾಡಿ ಮದುವೆ ನಿಲ್ಲಿಸಬೇಕೆಂದು ಬೇಕೆಂದು ಯೋಚಿಸುತ್ತಿರ ಬೇಕಾದರೆ ಅವಳ ಕಣ್ಣಿಗೆ ಹೊಳೆದದ್ದು ಅವರ ಮನೆ ಎದುರಿಗಿದ್ದ ನಮ್ಮೂರಿನ ಪ್ರಾಥ'ಮಿಕ' ಶಾಲೆ.ತಮ್ಮೆಲ್ಲ criminal ತಲೆ ಉಪಯೋಗಿಸಿ ಅಂತು ಫೈನಲ್ decision ಮಾಡಿ ಶಾಲೆಯ ಗೋಡೆಯ ಮೇಲೆ ಅವಳ ಬಗ್ಗೆ ಇಲ್ಲ ಸಲ್ಲದ್ದನ್ನು ಬರೆಯೋದು ಅಂತ ಯೋಚಿಸಿ ಹಾಗೆ ಮಾಡಿದ್ದಾರೆ.

ಮರುದಿನ ಬೆಳಿಗ್ಗೆ ಇದನ್ನ ನೋಡಿದ ಸವಿತಾ ಗಾಳಿ ಮಾತು ಚಿತ್ರದ ಲಕ್ಷ್ಮಿ ಸ್ಟೈಲ್ ಅಲ್ಲಿ ಅಲ್ಲೇ ಹತ್ತಿರವಿರುವ ಕೆರೆ ಹಾರೋದಕ್ಕೆ ಹೋಗಿದ್ದಾಳೆ. ಇದನ್ನ ನೋಡಿದ ನಮ್ಮೂರ ಈರ ಅನಂತ್ ನಾಗ್ ಸ್ಟೈಲ್ ಅಲ್ಲಿ ಕೆರೆಗೆ ಹಾರಿ,ರಾಜ್ ಕುಮಾರ್ ಕೆಸರಿಗೆ ಬಿದ್ದ ಸರಿತಾಳನ್ನು ಎತ್ತಿಕೊಂಡು ಬರೋ ರೀತಿ ದಡಕ್ಕೆ ಎತ್ತಿಕೊಂಡು ಬಂದು ಹಾಕಿ ರವಿಚಂದ್ರನ್ ಸ್ಟೈಲ್ ಅಲ್ಲಿ look ಕೊಟ್ಟು , ಅಂಬರೀಶ್ ಸ್ಟೈಲ್ ಅಲ್ಲಿ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಬಂದಿದಾನೆ. ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು? ಅನ್ನೋ ಹಾಗೆ ಅದನ್ನ ಬರೆದವರು ಯಾರು ಅಂತ ಊರಿನವರಿಗೆ ಅದರದ್ದೇ ಚಿಂತೆ. ನಮ್ಮ ಹೀರೋಯಿನ್ ಮೇಲೆ ಅನುಮಾನ ಇತ್ತಾದರೂ ಪ್ರೂಫ್ ಇಲ್ಲದ ಕಾರಣ ಏನು ಮಾಡುವ ಹಾಗೆ ಇರಲಿಲ್ಲ. ಅದು ಅಲ್ಲಿಗೆ ನಿಂತಿದ್ದರೆ ಎಲ್ಲರು ಸುಮ್ಮನಾಗುತಿದ್ದರೋ ಏನೋ , ಇಸ್ಕುಲ ಗೋಡೆ ಮೇಲೆ ಬರೆಯೋದು ೩-೪ ದಿನ ಸತತವಾಗಿ ನಡೆಯಿತು. ಈಗ ನೋಡಿ ಸರಾಬು ಕುಡಿದು ಊರಿನ ಮೊರಿಯನೆಲ್ಲ ಲೆಕ್ಕ ಹಾಕುತಿದ್ದ ನಮ್ಮೂರಿನ detectives ಎಲ್ಲ ಎಚ್ಚರಗೊಂಡಿದ್ದು. ಅಂತು ಇಂತೂ ೨ ರಾತ್ರಿ ಕಾವಲು ಕಾಯಿದ್ರು ಮುಂಡೆ ಮಕ್ಳು ಕಡಿದು ಗುಡ್ಡೆ ಹಾಕಿದ್ದು ಏನು ಇಲ್ಲ.ಇನ್ನು ಸುಮ್ಮನೆ ಈ ಗಂಡ್ ಸೂಳೆ ಮಕ್ಳನ್ನ ನಂಬಿಕೊಂಡರೆ ನಾಯಿ ಉಚ್ಚೇನೆ ಗತಿ ಅಂತ ಹೆಂಗಸರೇ ಎಲ್ಲ ಸೇರಿ ತಮ್ಮ ಕಡೆಯಿಂದಾನೆ ಯುದ್ಧ ಘೋಷಿಸಿಯೇ ಬಿಟ್ಟರು. e - detective ನನ್ ಮಕ್ಕಳು ಮತ್ತೆ ರತ್ನಕ್ಕನ ಹೆಂಡದಂಗಡಿ ಸೇರಿದವು.

ಅಂದು ಅಮಾವಾಸೆಯಾ ಬೆಳಿಗ್ಗೆ ಊರ ಜನ ಎಲ್ಲ ಇರುವ ಒಂದೇ ಬೋರ್ ವೆಲ್ ಇಂದ ಬರುವ ಕಂದು ಮಿಶ್ರಿತ ನೀರನ್ನೇ ಹಿಡಿದುಕೊಂಡು ಹೋಗಿ ಪವಿತ್ರ ಗಂಗೆಯಲ್ಲೇ ಸ್ನಾನ ಮಾಡುವಂತೆ ಜಳಕ ಮುಗಿಸಿ,ಯುದ್ದಕ್ಕೆ ಹೊರಟು ನಿಂತಿರುವುದರಿಂದ ಅಲ್ಲೇ ಆಗಬಹುದಾದ ಕೊಳೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲೇ ಕಟ್ಟಿಗೆ ರಾಶಿಗೆ ನೇತು ಹಾಕಿದ್ದ ವಾರದ ಹಿಂದೆ ಒಗೆದ ಮಣ್ಣು ಬಟ್ಟೆಯನ್ನು ಮುತ್ತು ರತ್ನಗಳಂತೆ ಹೇರಿಕೊಂಡು ಉಬ್ಬಣಿ ಗುಡ್ಡದ ಬಳಿ ಎಲ್ಲ ಒಟ್ಟು ಗೂಡಿದರು.ಈಗ ಮೊದಲು ಯಾರು attack ಮಾಡಬೇಕು ಹೇಗೆ ಅನ್ನೋದರ ದೀರ್ಘ ಚರ್ಚೆ ಮಾಡಿ ಗುಂಪಿನಲ್ಲೇ ಸ್ವಲ್ಪ ಮಜುಬುತಾಗಿದ್ದ ಸುಜಾತಳನ್ನು ಗುಂಪಿನ ನಾಯಕಿಯನ್ನಾಗಿ ಮಾಡಿ ಶತ್ರು ಪಾಳಿಯತ್ತ ಹೆಜ್ಜೆ ಹಾಕತೊಡಗಿದರು.ತಾವು ಸುಮ್ಮನಿದ್ದರೆ ಇಲ್ಲೂ ಆಗೋಲ್ಲ ಅಂದು ಕೊಂಡ ಕೆಲ ಗಂಡಸರು ಸುಜಾತಳ ಗಂಡ ಭಾಸ್ಕರನ ಮುಂದಾಳತ್ವದಲ್ಲಿ ಇವರೊಡನೆ ಹೆಜ್ಜೆ ಹಾಕಿದರು. ಇದು ಒಂಥರಾ ಮದಕರಿಯ ಸೈನ್ಯದ ಮೇಲೆ ದಾಳಿ ಮಾಡಲು ಹೊರಟ ಹೈದರಾಲಿಯ ಸೈನ್ಯದಂತೆ ಕಾಣುತಿತ್ತು ಇದು.

ಇದಾವುದರ ಅರಿವು ಇಲ್ಲದಂತೆ ಹೊರ ಬಂದ ಯೋಶಧೆಗೆ ಒಮ್ಮೆ shock ಆದರೂ ಗಂಡು ಮೆಟ್ಟಿದ ನಾಡು sorry sorry ಹೆಣ್ಣು ಹುಟ್ಟಿದ ನಾಡು ಅಂತ ತೋರಿಸಬೇಕು ಅಂದು ಕೊಂಡು ಪುಟ್ಟಿ ಅಂತ ಒಂದು ದೀರ್ಘ ಕೂಗು ಹಾಕಿದಳು.ಕ್ಷಣ ಮಾತ್ರದಲ್ಲಿ ಅವಳ ಸಕಲ ಸೈನ್ಯವು ಮನೆಮುಂದೆ ಬಂದಾಗಿತ್ತು.ಇರುವ ಕ್ಷಣ ಮಾತ್ರ ಸಮಯದಲ್ಲೇ ಹೇಗೆ ಅವರನ್ನ ಎದುರಿಸಬೇಕು ಅಂತ ತನ್ನ ಮಕ್ಕಳಿಗೆ ವಿವರಿಸಿದಳು. ಜೈ ಸುಜಾತ ಅನ್ನೋ ಉದ್ಗೋಷದೊಂದಿಗೆ ಶತ್ರು ಪಾಳೆಯವರು ಇವರ ಮನೆ ಎದುರಿಗೆ ಬಂದು ಜಮಾಸಿಯೇ ಬಿಟ್ಟರು. ಅಲ್ಲಿ ಮಾತಿಗೆ ಬೆಲೆ ಇಲ್ಲ ತಿಳಿದಿದ್ದರೂ ಪ್ರಾಸ್ತಾವಿಕವಾಗಿ ಏನಾದರು ಹೇಳಲೇಬೇಕು ಅನ್ನೋ ಕಾರಣದಿಂದ ಭಭ್ರುವಾಹನ film ಸ್ಟೈಲ್ ಅಲ್ಲಿ ಎರೆಡು ಕಡೆಯವರು ಅವರ ವ್ಯಕ್ತಿತ್ವವನ್ನೇ ಪದಗಳಿಂದ ಬೈದಾಡಿಕೊಂಡರು.

ಬೈದಾಟ ಎಲ್ಲ ಆದ ಮೇಲೆ ಮಹಾಭಾರತದಲ್ಲಿ ಶತ್ರು ಪಾಳೆಯದ ಮೇಲೆ ನುಗ್ಗಿ ಎಲ್ಲರನ್ನು ಕಕ್ಕಾಬಿಕ್ಕಿ ಗೊಳಿಸೋ ಅಭಿಮನ್ಯುವಿನ ಹಾಗೆ ಯಶೋಧೆಯ ಸಣ್ಣ ಮಗಳು ಊರಿನವರ ಮೇಲೆ ಹಠಾತ್ ದಾಳಿ ಮಾಡಿ ಎಲ್ಲರನ್ನು ಒಮ್ಮೆ ವಿಚಲಿತ ಗೊಳಿಸಿ ಅವಳದೇ ಚೂಡಿದಾರ್ನ ವೇಲ್ ಕಾಲಿಗೆ ಸಿಕ್ಕಿ ಜಲ್ಲಿ ಕಲ್ಲಿನ ರಸ್ತೆಯ ಮೇಲೆ ಬಿದ್ದು ಅಮ್ಮ ಎಂಬ ಚಿತ್ಕಾರ ಮಾಡಿದಾಗ ಅವಳ ಬಾಯಿಂದ ಬಂದ ರಕ್ತದ ಹನಿಗಳು ನೆಲಕ್ಕೆ ಬೀಳಲು ಯುದ್ದಕ್ಕೆ ಅಧಿಕೃತ ಮುದ್ರೆ ಒತ್ತಿದ ಹಾಗೆ ಆಯಿತು.ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಯಶೋಧೆ ಮತ್ತು ಅವಳ ಇನ್ನೊಬ್ಬ ಮಗಳು ಕೈ ಅಲ್ಲಿ ಹಿಡಿದಿದ್ದ ಹಿಡಿ ಇಂದ ಸಾಕಷ್ಟು ಜನರಿಗೆ ಗಾಯ ಮಾಡಿ ಕೊನೆಗು ಗುಂಪಿನ ನಾಯಕಿ ಸುಜಾತ ಯಶೋಧಳನ್ನು WWF ಸ್ಟೈಲ್ ಅಲ್ಲಿ ಮೇಲೆ ಎತ್ತಿ ನೆಲಕ್ಕೆ ಬಿಸಾಕಿದ ಹೊಡೆತಕ್ಕೆ ಅವಳು 'ಹಾದರಗಿತ್ತಿ ತೆಗೆದ್ಯೆಯಲ್ಲೇ ನನ್ನ ಸೊಂಟ'(ನೋವಿನಲ್ಲೂ ಶೌರತ್ವ ಅಂದ್ರೆ ಇದ್ ಅಲ್ಲದೆ ಮತ್ತಿನ್ನೇನು ಅಲ್ವಾ?) ಅನ್ನೋ ಮಾತ್ನೊಂದಿಗೆ ಈ ಗಲಾಟೆ ಒಂದು ಹಂತಕ್ಕೆ ಮುಗಿದ ಹಾಗೆ ಆಯಿತು(ನೆನಪಿರಲಿ ಪೂರ್ತಿ ಮುಗಿದಿಲ್ಲ). ಮೊನ್ನೆಯ ಗಲಾಟೆಗೆ ಇದು ಕೇವಲ ಪಿಠಿಕೆ ಅಷ್ಟೇ , ಮುಂದಿನ ಲೇಕನದಲ್ಲಿ ಅದನ್ನ ವಿವರಿಸುತ್ತೇನೆ.

ಇಂತಿ

ವಿನಯ

ಶುಕ್ರವಾರ, ಜುಲೈ 24, 2009

ಬಿಸಿ ಬಿಸಿ ಮೀನು ತಿನ್ನಬೇಕೆ

ಇನ್ನು ಬಾಕಿ ಇದೆ

ನಾನು ಮನೆಗೆ ಫೋನಾಯಿಸಿದಾಗಲೆಲ್ಲ ಊರಿನ ವರದಿ ಎಲ್ಲ ಒಪ್ಪಿಸದಿಲ್ಲದಿದ್ದರೆ ಉಪ್ಪಿನಕಾಯಿ ಇಲ್ಲದ ಊಟ ಮಾಡಿದ ಆಗುತ್ತೆ ನನಮ್ಮನಿಗೆ.ಅವಳು ಎಲ್ಲ ಹೇಳಿ ಮುಗಿಸಿದ ಮೇಲೆ ನಾನು ನನ್ನ ಭಯಂಕರ ತಲೆ ಉಪಯೋಗಿಸಿ ಕೆಲವು ಬಿಟ್ಟಿ ಸಲಹೆ ಬೇರೆ ಕೊಡುತ್ತೀನಿ.ನನಗೂ ಅಷ್ಟೇ ಫೋನ್ ಮಾಡಿದಾಗಲೆಲ್ಲ ಅವಳು ಏನು ಹೊಸ ವಿಷಯ ಹೇಳಿಲ್ಲ ಅಂದ್ರೆ ತಿಗಣೆ ಕಡಿಯದ ರಾತ್ರಿಯ ಹಾಗೆ ಅನ್ಸುತ್ತೆ.ಮೊನ್ನೆ ಹೀಗೆ ಹೇಗಿದ್ದರೂ ಊರಿಗೆ ಹೋಗೋನಿದ್ದೆ ,ಹಾಗೆ ಒಮ್ಮೆ ಫೋನ್ ಮಾಡಿ ಬರುವ ದಿನ ಯಾವತ್ತು ಅಂತ ಹೇಳೋಣ ಅಂತ ಫೋನ್ ಮಾಡಿದೆ.ಆ ಕಡೆ ಇಂದ ಅಮ್ಮನೇ ಇನ್ನೇನು ಕೊನೆ ರಿಂಗ್ ಆಗುತ್ತೆ ಅನ್ನೋವಷ್ಟರಲ್ಲಿ ಪಿ ಟಿ ಉಷಾ ವೇಗದಲ್ಲಿ ಓಡಿಬಂದು ರೀಸಿವ್ ಮಾಡಿ ಹಲೋ ಅಂದ್ರು.ನಾನು ಕಣೆ ಅಂದೇ ಅಷ್ಟೇ , ಮಾತಿಗಾದರೂ ಹೇಗಿದ್ದಿ ಅನ್ನೋ ಬೇಕೋ ಬೇಡೋ ಎ ಆ ಪವಿತ್ರ ಮೊನ್ನೆ ಯಶೋಧನ ಕತ್ತಿ ಹಿಡ್ಕೊಂಡು ಕಡಿಯಲಿಕ್ಕೆ ಹೋಗಿದ್ಲಂತೆ ಅಂದ್ರು.ಮನಸಿನಲ್ಲಿ ನೀನು ಹೋಗಿ ಕೊಡಲಿ ಕೊಡಬೇಕಿತ್ತು ಅಂದುಕೊಂಡ್ರು ಸುಮ್ಮನಾಗಿ ಹೌದ ನಾಡಿದ್ದು ಬರ್ತಿನಲ್ಲ ಅವಾಗ ಮಾತಾಡೋಣ ಅಂದುಬಿಟ್ಟೆ.ಬರುತ್ತಿದ್ದೇನೆ ಅಂತ ಕೇಳಿದ ತಕ್ಷಣ ಆ ವಿಷಯ ಅಲ್ಲಿಗೆ ಕೈ ಬಿಟ್ಟರು ಅಮ್ಮ.ಬಂದ ಮೇಲೆ ನಟನೆ ಮೂಲಕ ವಿವರಿಸೋಣ ಅಂದೋ ಅಥವಾ ಮಗ ಬರುತಿದ್ದಾನಲ್ಲ ಅನ್ನೋ ಖುಷಿ ಇನ್ದಲೋ ಆ ಕ್ಷಣಕ್ಕೆ ಹೊಳೆಯಲಿಲ್ಲ.

ಮನೆಗೆ ಹೋದ ಮೇಲೆ ಅದು ಇದು ಮಾತು , ತಿನ್ನೋದು ಅಂತ ಈ ವಿಷಯ ಮರೆತೇ ಹೋಗಿತ್ತು ನನಗೆ.ಅಮ್ಮನಿಗೂ ಅಷ್ಟೇ ಬೇರೆಯಲ್ಲ ನೆನಪಿದ್ದರು ಇದು ಅದು ಹೇಗೆ ಮರೆತು ಹೋಗಿತ್ತೋ ನಾ ಕಾಣೆ.ಮಧ್ಯಾನ ೧೧.೦೦ ರ ಸಮಯ ಜಡಿ ಮಳೆ ,ಅಪ್ಪ ಪೇಟೆಗೆ ಹೋಗಿದ್ರು.ನಾನು ಇರೋಬರೋ ಗೇರು ಬೀಜ,ಹಲಸಿನ ಬೀಜ ಒಟ್ಟಾಕಿಕೊಂಡು ಸುಡುತ ಕುಳಿತಿದ್ದೆ. ಆ ಕಡೆ ಒಂದು ಧ್ವನಿ ಗೀತಮ್ಮ ಅಂತ ಕೇಳಿಬಂತು ,ನೋಡಿದ್ರೆ ಪಕ್ಕದ ಮನೆ ಕೆಲಸ ಮಾಡುವ ನಾಗರತ್ನ.ಅವರ ಮನೆಯಲ್ಲಿ ಎಲ್ಲ ಎಲ್ಲೋ ಊಟದ ಮನೆಗೆ ಹೋಗಿದಾರೆ ಅಂತ ನೀರು ಕುಡಿಯೋಕೆ ಇಲ್ಲಿಗೆ ಬಂದಿದ್ದಳು.ಅವಳನ್ನ ನೋಡಿದ್ದೇ ತಡ ಅದೇನೋ ನೆನಪಾಯಿತೋ ಅಮ್ಮನಿಗೆ ದೊಡ್ಡ ಧ್ವನಿಯಲ್ಲಿ ಎ ನಿನಗೆ ಹೇಳಲೇ ಇಲ್ಲ ನೋಡು ಅಂತ ಒಮ್ಮೆ ಮನೆಯೇ ಮುಳುಗಿ ಹೋಯಿತು ಅನ್ನೋ ಧ್ವನಿ ಅಲ್ಲಿ ಹೇಳಿದರು.ಅವರ ಆ ಕೂಗು ನನ್ನನ್ನು ಒಮ್ಮೆ ಕುಮ್ಹುಟಿ ಬಿಳುವಂತೆ ಮಾಡಿದ್ರೆ , ಓಲೆ ಒಳಗಿದ್ದ ಗೇರು ಬೀಜ ದೀಪಾವಳಿಯ ಗರ್ನಲ್ ತರ ಡಬ್ ಅನ್ನೋ ಶಬ್ದ ಮಾಡಿ ಹಾರ್ಟ್ ಅಟ್ಯಾಕ್ ಅದೋನ ಮುಂದೆ ಬಾಂಬ್ ಸಿಡಿಸಿದ ಹಾಗಾಯಿತು.
ಅಂತು ಈ ಹಠಾತ್ ದಾಳಿಯಿಂದ ಸುಧಾರಿಸಿಕೊಂಡು ಒಂದು ಗುಟುಕು ಕಾಫಿ ಹಿರಿ ಕೂತೆ. ನೋಡಿ ಶುರುವಾಯಿತು 'her'story. ಅಮ್ಮ ಒಬ್ಬಳೇ ಆಗಿದ್ರೆ ಆಮೇಲೆ ಹೇಳೇ ಅಂತ ಸುಮ್ಮನಾಗ ಬಹುದಿತ್ತು , ಈಗ ಹಾಗಲ್ಲ ಪ್ರತ್ಯಕ್ಷದರ್ಶಿ ನಾಗರತ್ನ ಬೇರೆ ಇದಾಳೆ. ದುಶ್ಯಾಸನ ರಕ್ತ ತರದ ಹೊರತು ಜಡೆ ಕಟ್ಟಲ್ಲ ಅನ್ನೋ ದ್ರೌಪತಿ ಶಪಥದ ಹಾಗೆ ಕೈ ಅಲ್ಲಿ ಇದ್ದ ಪಾತ್ರೆ ಅಲ್ಲೇ ಬದಿಗೆ ಇಟ್ಟು ಪೂರ್ತಿ ಕತೆ ಮುಗಿಯದ ಹೊರತು ತಾನು ಎಳೋಲ್ಲ ಅಂತ ಅಮ್ಮ ನಿಶ್ಚಿಸಿದ ಹಾಗಿತ್ತು.ಸಭೆ ಸಮಾರಂಭಗಳಲ್ಲಿ ಮಾಡೋ ಸ್ವಾಗತ ಭಾಷಣದಂತೆ ಮೊದಲು ಅಮ್ಮನೇ ಶುರು ಹಚ್ಚಿಕೊಂಡ್ರು. ಅದೇ ಮಂಜನ ಹೆಂಡ್ತಿ ಯಶೋಧ ಗೊತ್ತಲ್ಲ ನಿನಗೆ ಅವಳಿಗೂ ಕಿಟ್ಟನ ಹೆಂಡ್ತಿ ಪವಿತ್ರಗೂ ಮೊನ್ನೆ ಭಟ್ರ ದರ್ಕಸ್ಸಿನಲ್ಲಿ ಮಾರಮಾರಿಯಂತೆ ಕಣೋ.ಪವಿತ್ರ ಅಂತು ಯಶೋಧನ ಕಡಿಯಲಿಕ್ಕೆ ಹೊಗ್ಲಿದಂತೆ ಅಂತ ಹೇಳಿ over to ನಾಗರತ್ನ ಅನ್ನೋ ತರ ತಮ್ಮ ಪ್ರಾಸ್ತಾವಿಕ ಭಾಷಣ ಮುಗಿಸಿ ಅವಳ ಕಡೆ ನೋಡಿದ್ರು.

ದೇಶಕ್ಕೆ ಸ್ವಂತಂತ್ರ ತಂದುಕೊಡೋಕೆ ಹೊರತು ನಿಂತ ಯೋಧರಂತೆ ಶುರುವಾಯಿತು ಅವಳ ಮಾತು. ಈ ಹಡಬೆ ಮುಂಡೆಯೋಕೆ ಬೇರೆ ಕೆಲಸ ಇಲ್ಲ ಕಣ್ರೀ ಮಾಣಿ,ದಿನ ಇವರದ್ದು ಇದ್ದಿದ್ದೇ. ಯಪ್ಪಾ ಏನು start ಇದು , ಪಟ್ಟಣಕ್ಕೆ ಬಂದ ಮೇಲೆ ಸ್ವಲ್ಪ ತಿಳಿದವರು ಅಂದ್ರೆ ಅದೇ ನಾಗರೀಕರು ಅನ್ನೋವವರ ಜೊತೆ ಸೇರಿ ಇಂತ ಪದವೆಲ್ಲ ಹಾಗೆ ಬಳಸಬಾರದು ಅಂತ ತಿಳಿದಿದ್ದೆ.ಈಗ ಇವಳು ಅದೇ ಪದವನ್ನು ಹೇಳಿದ್ದರಿಂದ ಅದರ ಬಗ್ಗೆ ಒಂದು lecture ಕೊಡೋಣ ಅಂತ ಮನಸಾದರು ಅದರಿಂದ ಪ್ರಯೋಜನವಿಲ್ಲ ಅಂತ ತಿಳಿದು ಸುಮ್ಮನಾದೆ.ಅದು ಅಲ್ದೆ ಇದಕ್ಕಿಂತ ಉತ್ತಮ ಶ್ರೇಣಿಯ ಪದಗಳು ನನ್ನ ಬಾಯಲ್ಲಿ ನೀರು ಕುಡಿದದಷ್ಟು ಸಲೀಸಾಗಿ ಬರುತ್ತಿದಿದ್ದು ಈಗ ಕಡಿಮೆ ಆಗಿದ್ದು ನೋಡಿ ಎಲ್ಲಿ ಅಜ್ಞಾನಿ ಆಗ್ತಾ ಇದ್ದಿನೋ ಅಂತ ಭಯ ಬೇರೆ ಆಯಿತು. ನನ್ನೀ ಕ್ಷಣದ ಯೋಚನೆಯನ್ನ ಬೇಧಿಸಿ ಅವಳೇ ಮುಂದುವರೆಸಿ ಹೇಳಿದಳು ಅಲ್ಲ ಮಾಣಿ ನೀವೇ ಹೇಳಿ ಇವರಿಗೆ ಭಟ್ರು ಮನೆ ಕೆಲಸಕ್ಕೆ ಬಂದಾಗ ಮುಚ್ಕೊಂಡು ಅವರು ಹೇಳಿದ್ದು ಮಾಡೋದು ಬಿಟ್ಟು ಬೇರೆ ಉಸಾಬರಿ ಯಾಕೆ. ನಾನೇನು ಹೇಳಲಿ ಮುಚ್ಕೊಂಡು ಇರಿ ಅಂತಾನ ? ಹು ಹು ಅಂತ ತಲೆಯಾಡಿಸಿದೆ,ಇಲ್ಲದಿದ್ದರೆ ಅವಳಿಗೆ ಮಾತು ಮುಂದುವರೆಸೋಕೆ mood ಇರೋಲ್ಲ.

ದರ್ಕಸ್ ಅಲ್ಲಿ ಕಾಫಿ ಚಿಗುರು ಚಿವುಟಕ್ಕೆ ಹೇಳಿ ಪೇಟೆ ಕಡೆ ಹೋದ್ರು. ಇವೆಡಕ್ಕೆ ಬೆಳಗಿಂದ ಅದೆಲ್ಲಿ ಕಡಿತಾ ಇತ್ತೋ ಗೊತ್ತಿಲ್ಲ ಸುಮ್ಮನೆ ಚಿಗುರು ಚಿವುಟುತ ಇದ್ದೋರು ನಿಂದ ಏನೇ,ನಿಂದ ಏನೇ ಶುರು ಹಚ್ಚಿಕೊಳ್ಳಬೇಕೆ. ನಾವದ್ರು ಏನ್ ಮಾಡೋಕೆ ಆಗುತ್ತೆ.ಮಧ್ಯೆ ಬಾಯಿ ಹಾಕಿದ್ರೆ ದಾರಿಯಲ್ಲಿ ಹೋಗ್ತಾ ಇರೋ ಹಾವನ್ನು ಮೈ ಮೇಲೆ ಹಾಕಿಕೊಂಡ ಹಾಗೆ ಆಗುತ್ತೆ ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡಳು. ನಾನು ಇಲ್ಲೇ ಇದೀನಿ ಅಂತ ತೋರಿಸೋಕೆ ಮಧ್ಯ ಅಮ್ಮ ಬಾಯಿ ಹಾಕಿ ಅವತ್ತು ಅಪ್ಪ ಮನೇಲೆ ಇದ್ರೂ ಕಣ ಅಂದ್ರು. ಅವಳೇ ಮುಂದುವರೆಯುತ್ತಾ ಅವರ dictionary ಪದಗಳನ್ನು ಬಿಚ್ಚಿಡ ತೊಡಗಿದಳು.ಶುರುವಾಯಿತು ನೋಡಿ ಬೈಗುಳ ,ಹಡ್ ಬಿಟಿ ರಂಡೆ ನಿನ್ನ ತರ ನಿನ್ ತರ ಕಂಡೋರ್ ಹತ್ರ ಎಲ್ಲ ನಾನು ಹಲ್ ಕಿರಿತ ಇರೋಲ್ಲ , ನಾ ಕಂಡಿಲ್ವಾ (ಏನು ?) ನಿನ್ನ ಮಗಳನ್ನ ಬೆಳಿಗ್ಗೆ ಪ್ಯಾಟಿಗೆ ಹೋಗಿ ರಾತ್ರಿ ಬರ್ತಾಳ ಅದೇನು ಕಸರತ್ ನಡ್ಸ್ತಾಲೋ ಆ ಶುರ್ಪಣಕಿ , ಚಿನಾಲಿ , ಯಾರಿಗೆ ಹುಟ್ಟಿದ್ದೋ ಏನೋ' (ಅಬ್ಬ), ಇಷ್ಟು ಹೇಳಿದ ಮೇಲೆ ಅವಳು ಸುಮ್ಮನೆ ಇರ್ತಾಳ 'ಸಾಕು ಸುಮ್ಮ ನೀರೆ ಏನು ಎಲ್ಲ ಕಂಡೋರ್ ತರ ಹೇಳಬೇಡ (ಎಲ್ಲ ಅಂದ್ರೆ ?) ನನಗೇನು ಗೊತ್ತಿಲ್ಲ ಅಂತ ಅನ್ಕೊಂಡಿದ್ದಿಯ,ರಾತ್ರಿ ಅದ್ಯಾರ್ ಜೊತೆ ಬಿದ್ಕೊತ್ಯೋ , ಗಂಡ ಅನ್ಸ್ಕೊಂಡ ಬೇರೆ ಬೇರೆ ನಾಮರ್ದ ..........' (ಯಪ್ಪಾ) ಈ ಕಡೆಯವಳಿಗೆ ಇನ್ನು ಸುಮ್ಮನಿರಲಾಗದೆ ಕೈ ಅಲ್ಲಿ ಇದ್ದ ಕತ್ತಿನೆ ಹಿಡ್ಕೊಂಡು ಏನೇ ಅಂದಿ ಯಾರು ಸೂಳೆ ಅಂತ ಕಡಿಯಲು ಮುನ್ನುಗ್ಗಿಯೇ ಬಿಟ್ಟಳು. ಅಷ್ಟರಲ್ಲಿ ವಜ್ರಮನಿಯನ್ನು ಕೊಲ್ಲಲು ಹೊರಟ ವಿಷ್ಣುವರ್ಧನ್ಗೆ slow motion ಅಲ್ಲಿ ಓಡಿ ಬಂದು ಬೇಡ ಅನ್ನೋ ಲೀಲಾವತಿ ತರ ಇವರೆಲ್ಲ entry ಆಗಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಇಷ್ಟು ಹೇಳಿ ಮುಗಿಸೋದ್ರೋಳಗಾಗಿ ಎದುರಿಗಿದ್ದ ಒಂದು ಚೊಂಬು ನೀರು , ಒಂದು ದೊಡ್ಡ ಬೆಲ್ಲದ ಉಂಡೆ ಅವಳ ಹೊಟ್ಟೆ ಸೇರಾಗಿತ್ತು. ಪುಸ್ತಕ ಬರೆದ ಮೇಲೆ ಅದರ ಬಗ್ಗೆ ವಿಮರ್ಶೆ ಮಾಡಲು ವಿಮರ್ಶಕರಿಗೆ ಕೊಡುವಂತೆ ಅವಳದೆಲ್ಲ ಒದರಿ ಆದ ಮೇಲೆ ನಿಮ್ಮ ಅಭಿಪ್ರಾಯವೇನು ಅನ್ನೋ style ಅಲ್ಲಿ ಅಮ್ಮನ ಕಡೆ ನೋಡಿದಳು.

ತನ್ನೆಲ್ಲ ಬುದ್ಧಿ ಬಳಸಿ ಒಳ್ಳೆ ವಿಚಾರವಾದಿಗಳ ತರ ದೀರ್ಘ ಉಸಿರು ಎಳೆದುಕೊಂಡು ಎದ್ರುರಿಗೆ ಕುತೊಳೆ ಅಪರಾಧಿ ಅನ್ನೋ ಸ್ಟೈಲ್ ಅಲ್ಲಿ ನಾಲ್ಕು ಬುದ್ಧಿ ಮಾತು ಹೇಳಿ , ನಿಮ್ಮ ತೀರ್ಮಾನವೇನು ಅಂತ ನ್ಯಾಯಧಿಷರನ್ನು ನೋಡೋ ತರ ನನ್ನ ಕಡೆ ನೋಡಿದಳು ಅಮ್ಮ.ನಾನು ಬಾರಿ ತಿಳಿದವನಂತೆ ನಾಲ್ಕು ಅವರಿಗೆ ಅರ್ಥ ಆಗದ ದೊಡ್ಡ ದೊಡ್ಡ ನಾಲ್ಕು ಪದ ಉದುರಿಸಿದೆ.ಪದ ದೊಡ್ಡದಿದ್ದ ಏನೋ ಮಾಣಿ ಏನೋ ಭಾರಿ ಒಳ್ಳೆ ಮತ್ತೆ ಹೇಳಿದ್ರು ಅಂತ ಅವರು ಹು ಗುಟ್ಟಿದರು. ವಾಪಸ್ ಬಂದ ಮೇಲೆ ಮತ್ತೆ ಊರಿಗೆ ಫೋನ್ ಮಾಡಿದ್ದಾಗ ಅಮ್ಮ ಹೇಳ್ತಾ ಇದ್ದರೂ , ಆ ಜಗಳ ಅಲ್ಲಿಗೆ ನಿಲ್ಲದೆ ನೀರು ತಗೊಂಡು ಹೋಗಲು ಬಂದ ಯಶೋಧ್ಲ ಮಗಳಿಗೆ ಪವಿತ್ರ ಬಾಂಡ್ ಸ್ಟೈಲ್ ಅಲ್ಲಿ ಹಿಗ್ಗ ಮುಗ್ಗ ಹೇರಿದ್ದಾಳೆ ಅಂತ. ಹಾಗೆ ಮುಂದಿನ ಬಾರಿ ಊರಿಗೆ ಬಂದಾಗ ವಿವರಿಸುವುದಾಗಿಯು

ನೀವು ಆಫೀಸ್ ಅಲ್ಲಿ ಏನು ಮಾಡ್ತಿರ ?

ಬುಧವಾರ, ಜುಲೈ 22, 2009

@# ಎಡುವಿದ ತಿರುವಿನ ಎಡವು ಭಾಗ - ೧ $#

ಪಟ್ ,ಪಟ್ ,ಪಳ್, ಆಗತಾನೆ ನಿಂತ ಮಳೆಯಿಂದಾಗಿ ಮರದೆಲೆಯ ತುದಿಯಿಂದ ಒಂದೊಂದೇ ಹನಿಯಾಗಿ ಕೆಳಗೆ ನಿಂತ ನೀರಿನ ಮೇಲೆ ಬೀಳುತಿದ್ದ ಆ ಹನಿಗಳು ಈ ಶಬ್ದವನ್ನು ಉಂಟುಮಾಡಿದ್ದವು.ರಾತ್ರಿ ಇಡೀ ಸುರಿದ ಮಳೆ ಊರ ಜನರಲ್ಲಿ ಚಳಿಯ ಬಿತ್ತಿ ಘಂಟೆ ೬.೦೦ ಆದರೂ ಯಾರು ಹೊರ ಬರದ ಹಾಗೆ ಮಾಡಿತ್ತು.ನಿಮಗೆ ಇಲ್ಲದ ಅವಸರ ನಮಗೇಕೆ ಅಂತಲೋ ಏನೋ ಕೋಳಿಗಳು ಕೂಡ ತುಟಿಕ್ ,ಪಿಟಿಕ್ ಅನ್ನದೆ ಸುಮ್ಮನೆ ಗುರು ಗುರು ಗುಟ್ಟುತ್ತ ತಮ್ಮ ಪಾಡಿಗೆ ತಾವು ಇದ್ದವು.ಮೋಡರಾಜನ ಮುನಿಸಿಗೆ ಸಿಲುಕಿದ್ದ ಸೂರ್ಯದೇವ ಕೂಡ ಮನೆಯಿಂದ ಹೊರಡಲಾಗದೆ ಮಂದ ಬೆಳಕನ್ನು ಮಾತ್ರ ಹರಡಲು ತಯಾರಿ ನಡೆಸುತಿದ್ದ. ಇವೆಲ್ಲದರ ನಡುವೆ ಒಂದು ಜೀವ ಮಾತ್ರ ತನಗೂ ಇಲ್ಲಿ ನಡೆಯುತ್ತಿರುವುದಕ್ಕು ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಿತ್ತು.ಮೈ ಮೇಲೆ ಹೊದಿದ್ದ ಕಂಬಳಿ ಹೊರಗಿನ ಚಳಿಯನ್ನು ಕಡಿಮೆ ಮಾಡಿತ್ತಾದರೂ , ಒಳಗಡೆಯ ಕುದಿತದ ಕಾವು ಇದು ಬೇಕಿತ್ತೆ ಅನ್ನೋ ಹಾಗೆ ಹಂಗಿಸುವಂತ್ತಿತ್ತು.ನಿಂತ ನೀರಾಗಬಾರದು ಅನ್ನೋ ತಿಳಿದವರ ಮಾತಿಂದ ಪ್ರೇರೆಪಿತವಾಗಿಯೋ ಅಥವಾ ತಾನೇ ಹೇಳುವಂತ ಬದುಕು ಒಂದು ಓಟ ಅನ್ನೋ ಮಾತಿನಿಂದಾಗಿಯೋ ಆ ನಡಿಗೆ ಅನ್ನೋದು ಸಧ್ಯಕ್ಕೆ ನಿಲ್ಲುವಹಾಗೆ ಇರಲಿಲ್ಲ.ಇಷ್ಟೊತ್ತು ಸಾಕು ಈ ಜೀವ ಎಂದು ತುಂಗೆಯ ಮಡಿಲು ಸೇರ ಹೊರಟಿದ್ದ ಜೀವಕ್ಕೆ ,ಕಾಲಿಗೆ ಸಿಕ್ಕಿ ತನ್ನನ್ನು ಮುಕ್ಕರಿಸಿ ಬೀಳುವಂತೆ ಮಾಡಿದ ಗೋಳಿಮರದ ಬೇರು ನೋಡಿದ ಮೇಲೆಯೇ ವಾಸ್ತವದ ಅರಿವಾದದ್ದು.ಹಾಗೆ ನೋಡುತ್ತಾ ತಾನು ಬದುಕು ಎಂಬ ನಡಿಗೆಯಲ್ಲಿ ಎಡವುತ್ತಿರುವುದು ಇದು ಮೊದಲಲ್ಲ ಅಂತ ಅನ್ನಿಸಿತು.ಅದೇನು ಹೊಳೆಯಿತೋ , ಮನಸಿನಲ್ಲಿ ಅದೇನು ನಿರ್ಧರಿಸಿದರೋ ತಿಳಿಯದು ಅಲ್ಲಿಂದ ತಿರುಗಿ ಹಾಗೆ ಮನೆ ಕಡೆ ಬಂದುಬಿಟ್ಟರು ನಾರಾಯಣರಾಯರು.
ಬೆಳಗಾಗೆದ್ದು ಎಲ್ಲಿ ಹೋದರು ಅಂತ ಕಮಲಮ್ಮ ರಾಯರ ಬರುವಿಕೆಗೆ ಕಾಯುತ್ತ ಇದ್ದರು.ಬೆಳಗಿನ ಆ ಮಂಜು ತುಂಬಿದ ದಾರಿಯಿಂದ ಬರುತಿದ್ದ ರಾಯರನ್ನು ನೋಡಿ ಸಾಕ್ಷಾತ್ ಇಂದ್ರನೇ ಬರುವಹಾಗೆ ಕಾಣಿಸಿತು ಅವರಿಗೆ. ಮದುವೆ ಅಂತ ಆದಮೇಲೆ ಗಂಡನೇ ಅಲ್ಲವೇ ಇಂದ್ರ ಚಂದ್ರ ಎಲ್ಲ. ಎದುರಿಗೆ ಬಂದ ರಾಯರ ಕಂಬಳಿ ಇಸ್ದುಕೊಂಡು ಜಗಳಲಿಯ ಮೇಲಿಟ್ಟರು ಕಮಲಮ್ಮ.ಕಾಲು ತೊಳೆಯಲು ನೀರು ಕೊಡಲು ಬಾಗಿದ ಕಮಲಮ್ಮನಿಗೆ ಕಂಡಿದ್ದು ರಾಯರ ಮಂಡಿಯಿಂದ ಬಳ ಬಳ ಅಂತ ಇಳಿಯುತಿದ್ದ ರಕ್ತದ ಹನಿಗಳು.ಇನ್ರಿ ಇದು ಎಲ್ಲಿ ಬಿದ್ರಿ ಅಂದರು ಕಮಲಮ್ಮ.ಅಲ್ಲಿಯವರೆಗೂ ಊರ ಜಾತ್ರೆಯಲಿ ಬರೋ ಅಮ್ಮನವರ ಹಾಗೆ ಮಾಡಿದ್ದಲೆನ್ನವನ್ನು ನೋಡಿಯು ನೋಡದಂತೆ ತನ್ನದೇ ಲೋಕದಲ್ಲಿದ್ದ ರಾಯರ ಕಮಲಮ್ಮನ ಮಾತು ಕೇಳಿ ಒಂದು ಕ್ಷಣ ಏನು ಹೇಳಲಾಗದೆ ಸ್ವಲ್ಪ ಸುಧಾರಿಸಿ ಕೊಂಡು ಏನಿಲ್ಲ ಕಣೆ ತೋಟದ ಬದಿಗೆ ಹೋಗಿದ್ದೆ ಕಪ್ ( ಸಾಲುಗಳನ್ನು ಬೇರ್ಪಡಿಸಲು ಮಾಡಿರುವ ಸ್ವಲ್ಪ ಆಳದ ಚಾನೆಲ್) ದಾಟೋವಾಗ ಜಾರಿ ಬಿದ್ದೆ ಅಂದ್ರು.ಕಾಲು ತೊಳೆದು ಕೊಂಡು ಬನ್ನಿ ಅರಿಸಿನ ಹಚ್ಚುತ್ತಿನಿ ಅಂತ ಇವರ ಉತ್ತರಕ್ಕೂ ಕಾಯದೆ ಒಳಗೆ ಹೋದರು ಕಮಲಮ್ಮ. ನನಗೇನಾಗಿದೆ ಅಂತ ಯೋಚಿಸುತ್ತಾ ಅಲ್ಲೇ ಜಗಲಿಯ ಮೇಲೆ ಕೂರ ಹೊರಟವರನ್ನು ಏನ್ರಿ ಬಂದ್ರ ಅನ್ನೋ ಕಮಲಮ್ಮನ ಮಾತು ಒಳಹೊಗುವಂತೆ ಮಾಡಿತು.
ರಾಯರದ್ದು ಮಲೆನಾಡ ಮಡಿಲಿನ ತೀರ್ಥಹಳ್ಳಿ ತಾಲೂಕಿನ ಬೆಣ್ಣೆಬೈಲು ಅನ್ನೋ ಹಳ್ಳಿ.ಮಳೆಗಾಲದಲ್ಲಿ ಉಂಟಾಗುವ ಮಂಜು ಅಲ್ಲಿನ ಮರಗಿಡಗಳನೆಲ್ಲ ಆವರಿಸಿ ಅವು ಬೆಣ್ಣೆಯ ಮುದ್ದೆಗಳಂತೆ ಗೋಚರಿಸುವುದರಿಂದ ಆ ಊರಿಗೆ ಬೆಣ್ಣೆಬೈಲು ಅಂತ ಹೆಸರು ಬಂದಿತ್ತು.ಇನ್ನು ಪೌರಾಣಿಕವಾಗಿ ಹೋದರೆ ಅದಕ್ಕೆ ಬೇರೆ ಕಥೆ ಇತ್ತು.ಬೆಣ್ಣೆ ಕಳ್ಳ ಕೃಷ್ಣನಿಂದ ತಪ್ಪಿಸಿಕೊಳ್ಳಲು ಆಗಿನ ಜನರು ತಾವು ಸಂಗ್ರಹಿಸಿದ ಬೆಣ್ಣೆಗಳನ್ನೂ ಇಲ್ಲಿ ತಂದು ಬಚ್ಚಿಡುತ್ತಿದ್ದರೆಂದು ಕಾಲಕ್ರಮೇಣ ಆ ಬೆಣ್ಣೆ ರಾಶಿಗಳೇ ಈಗಿರುವ ಬೆಟ್ಟಗಳೆಂದು ಜನರ ನಂಬಿಕೆಯಾಗಿತ್ತು. ತಂದೆ ಶ್ರೀನಿವಾಸರಾಯರು , ಬಹಳ ಶಿಸ್ತಿನ ಮನುಷ್ಯ.ಅದೇ ಕಾರಣಕ್ಕೆ ಊರಿನಲ್ಲಿ ಏನೇ ತ್ಯಾಕೆ ತಕರಾರು ಆದರೂ ಇವರೇ ಹೋಗಿ ನ್ಯಾಯ ತೀರ್ಮಾನ ಮಾಡುತಿದ್ದಿದ್ದು.ಅವ್ರಿಗೆ ೩ ಜನ ಮಕ್ಕಳು ಮೊದನೆಯವ ಹರಿರಾಯ,ಎರಡನೆಯವಳು ಹರಿಣಾಕ್ಷಿ ಮತ್ತು ಕೊನೆಯವನು ನಾರಾಯಣರಾಯ. ಮೊದನೆಯವನಿಗೆ ೯ ವರ್ಷವಿರುವಾಗಲೇ ಬಂದ ಭಾರೀ ಪ್ರವಾಹಕ್ಕೆ ಸಿಕ್ಕಿ ತುಂಗೆಯ ಓಡಲು ಸೇರಿಬಿಟ್ಟಿದ್ದ.ಆಗಿನ್ನೂ ನಾರಾಯಣರಾಯರಿಗೆ ೩ ವರ್ಷ ಅಷ್ಟೇ.ಜಮೀನಿಗೇನು ಕೊರತೆ ಇರಲಿಲ್ಲ. ೧ ಎಕರೆ ಕಂಪದ ಗದ್ದೆ , ೨ ಎಕರೆ ಮಕ್ಕಿ , ೫ ಎಕರೆ ಹಳೆ ಮರದ ತೋಟ , ದರ್ಕಸ್ ಅಲ್ಲಿ ಹೊಸದಾಗಿ ಹಾಕಿದ್ದ ೨ ಎಕರೆ ಸಸಿತೋಟ ಇತ್ತು. ಇನ್ನು ಮನೆ ಸುತ್ತ ಮುತ್ತ ಒಂದು ೨೦ ಗುಂಟೆ ಜಾಗ ತರಕಾರಿ , ಹೂವು-ಹಣ್ಣು ಬೆಳೆಯೋಕೆ ಮೀಸಲಾಗಿತ್ತು.
ನಾರಾಯಣರಾಯರಿಗೆ ೨೦ ಆಗೋವಷ್ಟರಲ್ಲೇ ಶ್ರೀನಿವಾಸರಾಯರು ಅವರನ್ನ ಅಗಲಿ ಆಗಿತ್ತು.ಇವರ ಅದೃಷ್ಟಕ್ಕೆ ತೀರಿಕೊಳ್ಳೋ ೬ ತಿಂಗಳ ಹಿಂದೆ ಅಷ್ಟೇ ನಗರದ ಸುಬ್ಬಾರಾಯರ ಮಗನೊಂದಿಗೆ ಹರಿಣಾಕ್ಷಿಯಾ ವಿವಾಹ ನಡೆಸಿದ್ದರು.ಈಗ ಮನೆ ಜವಾಬ್ದಾರಿಯಲ್ಲ ಇವರ ಮೇಲೆ ಬಿತ್ತು. ಅದು ಇದು ಅಂತ ಎಲ್ಲವನ್ನು ತಿಳಿದುಕೊಳ್ಳೋವಷ್ಟರಲ್ಲಿ ೧ ವರುಷ ಕಳದೆ ಹೋಗಿತ್ತು.ಇನ್ನೆಷ್ಟು ದಿನ ಒಬ್ಬನೇ ಇರೋದು ಅಂತ ಹೇಳಿ ಅಕ್ಕನೆ ಮುಂದೆ ನಿಂತು ಚಿಕ್ಕಮಗಳೂರಿನ ಬಾಳೆಹೊಳೆಯ ಗೋವಿಂದಭಟ್ಟರ ಹಿರಿಯ ಮಗಳಾದ ಕಮಲೇಯೊಂದಿಗೆ ಇವರ ವಿವಾಹ ನಡೆಸಿಯೇ ಬಿಟ್ಟಳು. ವಯಸ್ಸು ಹದಿನೇಳು ಇನ್ನೇನು ಅರಳಲೋ ಬೇಡವೋ ಅಂತ ಹಾತೊರೆಯುತ್ತಿರುವ ಮೊಗ್ಗಿನತ್ತಿದ್ದಳು ಕಮಲೇ. ನೋಡಿದರೆ ಹಾಗೆ ನೋಡುತ್ತಾ ಇರಬೇಕು ಅನ್ನೋವಂತ ಅಂದ ಅವಳದು. ಅವಳ ಮೇಲಿನ ವ್ಯಾಮೋಹ ಎಷ್ಟು ಬೆಳದಿತ್ತೆಂದರೆ ಮದುವೆಯಾದ ದಿನ ಪ್ರಸ್ತ ಇಂದು ಬೇಡ ನಾಳೆ ಇಟ್ಟುಕೊಳ್ಳಿ ಅಂದ ಪುರೋಹಿತನಿಗೆ 'ಮುಂಡೆ ಮಗ, ನನ್ನ ಹೆಂಡತಿಯ ಜೊತೆ ನಾ ಮಲಗಲು ಈ ಬೇರ್ವೆಸಿನೇನು ಕೇಳೋದು' ಅಂತ ಎಲ್ಲರ ಎದುರಿಗಲ್ಲದಿದ್ದರು ಅಕ್ಕನೊಂದಿಗೆ ಹೇಳಿದ್ದರು.ಆಮೇಲೆ ಮದುವೆಯಾದ ಹೊಸತು ಬೇರೆ ಹೆಂಡತಿಯೊಂದಿಗೆ ಊರೆಲ್ಲ ಸುತ್ತಿ ,ಆ ನೆಂಟರು , ಅವಳ ಕಡೆಯವರು ಅಂತ ತಿರುಗಾಟ ಮುಗಿಸೋ ಹೊತ್ತಿಗೆ ೬ ತಿಂಗಳುಗಳೇ ಕಳೆದು ಹೋಗಿತ್ತು.ಈ ಆರುತಿಂಗಳ ಅಂತರದಲ್ಲಿ ಅವರ ವಂಶದ ಕುಡಿಯು ಕೂಡ ಕಮಲಮ್ಮನವರ ಹೊಟ್ಟೆಯಲ್ಲಿ ಚಿಗುರಿಯಾಗಿತ್ತು. ಸುಖಗಳ ಮೇಲೆ ಸುಖ ಬರುತ್ತಿದೆಯಂದರೆ ಮುಂದೆ ದೊಡ್ಡ ಆಪತ್ತೆ ಬರಲಿದೆ ಅನ್ನೋ ಮಾತು ರಾಯರ ಸ್ಪ್ರುತಿಪಟಲದಿಂದ ಮರೆಯಾದಂತಿತ್ತು.ಅದನ್ನ ನೆನಪಿಸಲೋ ಏನೋ ಎಂಬಂತೆ ಬಂದಿತ್ತು ಪಟ್ಟಣದಿಂದ ಬಂದ ಆ ಕಾಗದ.

ಮುಂದುವರೆಯುವುದು .........

ಇಂತಿ
ವಿನಯ

ಸೋಮವಾರ, ಜುಲೈ 20, 2009

ನನ್ನ ಭಾವನೆಗಳ ಸುತ್ತ: ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

ನನ್ನ ಭಾವನೆಗಳ ಸುತ್ತ: ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

%$ ಮಳೆ $#

ಮಲೆನಾಡ ಮಡಿಲಲ್ಲಿ
ಮಲ್ಲಿಗೆಯ ಕಂಪಿನಲಿ
ಮನ ಬಿಚ್ಚಿ ನಿಂತಿರುವ
ಮರಗಿಡಗಳ ನಡುವೆ
ಹನಿ ಹನಿಯಾಗಿ
ಹಾಲ ಹೊಳೆಯಂತೆ
ಸುರಿಯುತಿಹುದು ಮಳೆ

ಬಿಸಿಲ ಬೇಗೆಯಲಿ
ಬೆಂದಿರುವ ಭೂತಾಯಿಗೆ
ಸಿಹಿ ನೀರ ಸಿಂಚನವಿಟ್ಟು
ಅವಳ ಉದರವ ಹೊಕ್ಕು
ಭುವಿಯ ಪದರವ
ಹಸಿರಾಗಿಸಿದೆ ಮಳೆ

ಪ್ರಾಣಿ ಪಕ್ಷಿಗಳ
ನರ ನಾಡಿಯೊಳಗೆ ಬೆರೆತು
ಜೀವ ಸಂಕುಲದ
ಜೀವವ ಚಿಗುರಾಗಿಸಿದೆ
ಈ ಮಳೆ

ಕಿರುಬೆರಳ ತುದಿಗೊಂದು
ಮುತ್ತಿಟ್ಟು
ಬರಲಿರುವ ನನ್ನ ನಲ್ಲೆಯ
ಸ್ಪರ್ಶವ ನೆನೆಯುವಂತೆ
ಮಾಡಿದೆ ಈ ಮಳೆ

ಇಂತಿ
ವಿನಯ

ಬದುಕಿದು ಬೆಚ್ಚಗಿನ ಹಾಸಿಗೆಯಲ್ಲ

ಮೂರಂತಸ್ತಿನ ಆ ಕಟ್ಟಡದ ಕೊನೆಯ ಮೂಲೆಯಲ್ಲಿ ಕುಳಿತು ಮುಳುಗುತಿದ್ದ ಆ ಸೂರ್ಯನನ್ನೇ ನೋಡುತ್ತಾ ತನ್ನ ಬದುಕು ಹೀಗೆ ಎಂದು ಮುಳುಗುವುದೋ ಎಂದು ಮನಸಿನಲ್ಲೇ ಗುನುಗಿಕೊಂಡ. ಮನೆಯಿಂದ ಹೊರಡುವಾಗ ಅಪ್ಪ ಹೇಳಿದ ಆ ಮಾತುಗಳು ಹಾಗೆ ಮನಸನ್ನು ಚುಚ್ಚಿ, ಎದೆಯಾಳದಲೆಲ್ಲೋ ಒಂದು ಭೀಕರ ಗಾಯ ಮಾಡಿದ ಹಾಗೆ ಆಗಿತ್ತು ಅವನಿಗೆ.ಎಷ್ಟು ಬೇಡ ಬೇಡ ಅಂದುಕೊಂಡರು ಅಂದೇ ವಾಕ್ಯ ಮತ್ತೆ ಮತ್ತೆ ಕಿವಿಯಲ್ಲಿ ಗುಯ್ ಗುಟ್ಟುತ್ತಿತ್ತು , "ಇನ್ನು ನನ್ನಿಂದ ಆಗುವುದಿಲ್ಲ,ಇದು ಮುಗಿದ ಮೇಲೆ ವಾಪಸ್ ಬಂದು ಬಿಡು" ಎಂದು ಹೇಳಿ ತಂದೆಯವರು ಕೈಗಿಟ್ತಿದ್ದ ೧೫೦೦ ರೂಪಾಯಿಗಳು.ಏನೆಂದು ಕೊಂಡಿದ್ದಾರೆ ಇವರು ನನ್ನನ್ನು ಮಜಾ ಮಾಡಲು ಹೋಗುತಿದ್ದಾನೆ ಎಂದೇ? ಅಥವಾ ಇವನ ಕೈ ಅಲ್ಲಿ ಏನು ಆಗುವುದಿಲ್ಲವೆಂದು? ಅಥವಾ ನೀನು ನನಗೆ ತಕ್ಕ ಮಗನಾಗಲಿಲ್ಲವೆಂದೆ?.ಕೇಳಿಬಿಟ್ಟರೆ? ಕ್ಷಣಕ್ಕೆ ಬಂದಿದ್ದ ಆ ಯೋಚನೆ ಅಮ್ಮನ ಸೇರಗಿನಂಚಿನಲ್ಲಿ ಅಡಗಿದ್ದ ಬಿಳಲೋ ಬೇಡವೋ ಅಂದು ಕಾಯುವನ್ತಿದ್ದ ಕಣ್ಣೀರು ಕಣ್ಣೆದರಿಗೆ ಬಂದು , ಬಂದಷ್ಟೇ ವೇಗದಲ್ಲಿ ಆ ಆಲೋಚನೆ ಮನಸಿನಿಂದ ಮಾಯವಾಯಿತು.

ಹೆಸರು ಆರ್ಯ, ಸಣಕಲು ದೇಹ.ಚಿಕ್ಕಂದಿನಿಂದಲೂ ಅಮ್ಮನ ಮುದ್ದಿನಿಂದ ಬೆಳೆದ ಹುಡುಗ.ಅಪ್ಪನದು ಸ್ವಲ್ಪ ಗಂಭೀರ ಸ್ವಭಾವ ,ಅಮ್ಮನೂ ಕೂಡ ಅಪ್ಪನೊಂದಿಗೆ ಮಾತಾಡಲು ಹೆದರುತಿದ್ದರು.ಸ್ವಲ್ಪ ತಪ್ಪಾದರೂ ಹೊಡೆದ ಬಿಡುವಂತ ಅಪ್ಪನ ಸ್ವಭಾವ ಸಹಜವಾಗಿ ಭಯ ಅನ್ನೋದನ್ನ ಅವನಲ್ಲಿ ಸ್ವಲ್ಪ ಜಾಸ್ತಿಯೇ ಬೆರಸಿತ್ತು.ಅಪ್ಪನ ಆಜ್ಞೆ ಇಲ್ಲದೆ ಒಂದು ಕಡ್ಡಿಯೂ ಅಲ್ಲಾಡುತ್ತಿರಲಿಲ್ಲ.ಕೋಪಕ್ಕೆ ಸಮಾನಾರ್ಥಕ ಪದ ಅಪ್ಪ ಎಂದು ಬರೆದರು ಆಶ್ಚರ್ಯ ಪಡಬೇಕಾಗಿರಲಿಲ್ಲ. ಇನ್ನು ಅಣ್ಣ,ಅಮ್ಮನಿಗೆ ಇಬ್ಬರು ಒಂದೇ.ಕದ್ದು ಮುಚ್ಚಿ ಏನೇ ತಂದರೂ ಇಬ್ಬರಿಗೂ ಸಮಪಾಲು.ಅಪ್ಪನಿಗೆ ಇವನನ್ನು ಕಂಡರೆ ಸ್ವಲ್ಪ ಇಷ್ಟ ಅಂತ ಮುಂದೆ ನೆಂಟರಿಷ್ಟರು ಇವನ ಮುಂದೆ ಆಡಿಕೊಂಡಿದ್ದು ಕೇಳಿದ್ದ.ಪೂರ ಬಡವರು ಅಲ್ಲ ಇತ್ತ ಶ್ರೀಮಂತರು ಅಲ್ಲ ಅನ್ನೋ ಪರಿಸ್ಥಿತಿ ಮನೆಯಲ್ಲಿ , ಪೈಸೆ ಪೈಸೆಗು ಬೆಲೆ ಇತ್ತು ಅಲ್ಲಿ. ಸ್ವಂತ ಜಮೀನು ಅಂತ ಏನು ಇರಲಿಲ್ಲ. ಅಪ್ಪನ ಎರೆಡು ರಟ್ಟೆಗಳೇ ಉಳಿದ ೫ ಹೊಟ್ಟೆಯನ್ನು ತುಂಬಿಸಬೇಕಿತ್ತು(ಅಜ್ಜ , ಅಜ್ಜಿ ಸೇರಿಸಿ).ಕುಟುಂಬದಲ್ಲಿ ಹಿರಿಕನಲ್ಲದಿದ್ದರೂ ಕೂಡ ತನ್ನ ೧೪ನೇ ವಯಸ್ಸಿಗೆ ಇಡೀ ಮನೆಯ ಜವಾಬ್ದಾರಿ ಹೊತ್ತು ಒಬ್ಬಳು ಅಕ್ಕ ,ಒಬ್ಬಳು ತಂಗಿ,ಅಣ್ಣ ಎಲ್ಲರ ಮದುವೆ ಮಾಡಿಸಿ ಉಳಿದ ತಮ್ಮಂದಿರ ವಿಧ್ಯಾಭ್ಯಾಸಮಾಡಿಸಿ ತಾನು ಮದುವೆ ಆಗಿ ಸಂಸಾರ ಅನ್ನೋದು ಶುರು ಮಾಡೋವಷ್ಟರಲ್ಲಿ ಸಾಕು ಸಾಕಾಗಿದ್ದರು ಅಪ್ಪ.ಅಣ್ಣ ಬೇರೆ ಮನೆ ಮಾಡಿಕೊಂಡು ಪರ ಊರು ಸೇರಿದ್ದ , ಇನ್ನು ಉಳಿದ ಇಬ್ಬರು ತಮ್ಮಂದಿರಲ್ಲಿ ಒಬ್ಬ ಯಕ್ಷಗಾನವನ್ನೇ ತನ್ನ ಬದುಕಾಗಿಸಿಕೊಂಡಿದ್ದ ,ಇನ್ನೊಬ್ಬ ಏನೋ ಮದುವೆ ಏನು ಹೇಳಿ ಪಟ್ಟಣ ಸೇರಿಕೊಂಡಿದ್ದ(ವರುಷಕ್ಕೊಮ್ಮೆ ಊರಿಗೆ ಬಂದು ಹೋಗುತಿದ್ದ).ಈಗ ಅಪ್ಪನಿಗೆ ಉಳಿದಿದ್ದು ಅವರ ಸಂಸಾರ ಮತ್ತು ಅಜ್ಜ , ಅಜ್ಜಿ. ಇನ್ನೇನು ತನ್ನ ಬದುಕು ನೋಡಿಕೊಂಡರಾಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಕೊನೆ ತಮ್ಮನ ಆತ್ಮಹತ್ಯೆ.ಇನ್ನೇನು ಎಲ್ಲ ಸರಿಯಾಯಿತು ಅನ್ನೋವಷ್ಟರಲ್ಲಿ ಬಂದಿತ್ತು ನೋಡಿ ಮತ್ತೊಂದು ಆಘಾತ ಅದೇ ಮತ್ತೊಬ್ಬ ತಮ್ಮ ಪಟ್ಟಣದಿಂದ ಯಾರೋ ಪರ ಜಾತಿಯವಳನ್ನು ಕರೆದ್ಕೊಂಡು ಬಂದಿದ್ದು , ಅವರನ್ನು ಮನೆಗೆ ಸೇರಿಸೋಲ್ಲ ಅಂತ ಅಪ್ಪನ ಹಠಕ್ಕೆ ಅಷ್ಟು ದಿನ ಒಟ್ಟಿಗಿದ್ದ ಅಜ್ಜ , ಅಜ್ಜಿ ಇವರ ಮನಸನ್ನೇ ಅರಿಯದೆ ಅವನೊಂದಿಗೆ ಬೇರೆ ಹೊರಟಿದ್ದು. ಹೆಜ್ಜೋಗೊಂದರಂತೆ ಏಟು ತಿನ್ನುವ ಎತ್ತಾದರು ಬೇಕು , ಅದಕ್ಕಿಂತ ಕಡೆಯಾಯಿತು ಅನ್ನೋವಷ್ಟು ಹೊಡೆತಗಳು ಅವರನ್ನು ಒಂಥರಾ ಕಲ್ಲಾಗಿಸಿದ್ದವು.

ಇವೆಲ್ಲವನ್ನು ನೋಡಿಯು ,ನೋಡದಂತೆ ,ಕೆಲವೊಂದು ತಿಳಿಯದಂತೆ ಬೆಳೆದ ಹುಡುಗ ಈತ.ಅಣ್ಣನೊಡನೆ ಜಗಳವಾಡುತ್ತಾ ,ದುಡಿದು ಬಂದ ಅಪ್ಪ ಅಜ್ಜಿಯ ಬಳಿ ಇವನ ಚೇಷ್ಟೆ ಕೇಳಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸಿ ಆಮೇಲೆ ಅವರೇ ಉಪಚರಿಸುವ ಹಲವಾರು ಸಂದರ್ಭ ನೋಡುತ್ತಾ ,೧೦ ನೇ ತರಗತಿಯವರೆಗೂ ನೆಡೆದು ಕೊಂಡೆಹೋಗಿ ಶಿಕ್ಷಣ ಕಲಿಯುತ್ತ , ಅಪ್ಪ ಬೇರೆ ಕಡೆ ಹೋದಾಗ ಪಕ್ಕದ ಮನೆಗೆ ಹೋಗಿ ಟಿವಿ ನೋಡುತ್ತಾ ಇದ್ದಾಗ ಅವತ್ತೇ ಇವನ ಗ್ರಹಚಾರಕ್ಕೆ ಅವರು ಬೇಗ ಬಂದು ಓದುವುದು ಬಿಟ್ಟು ಅವರಿವರ ಮನೆಗೆ ಹೋಗುತ್ತಿಯ ಅಂತ ಮತ್ತೆ ಹೊಡೆದಾಗ,ಅಮ್ಮ ತನ್ನ ಬಳಿ ಇದ್ದ ಪುಡಿಗಾಸಿನಲ್ಲಿ ಊರಿನಲ್ಲಿದ್ದ ಒಂದೇ ಒಂದು ಅಂಗಡಿಯಿಂದ ಅಪ್ಪನಿಗೆ ತಿಳಿಯದ ಹಾಗೆ ತಿಂಡಿ ತಂದು ಕೊಟ್ಟಾಗ ಮತ್ತದೇ ಗ್ರಹಚಾರ ಇವನನ್ನು ವಕ್ಕರಿಸಿ ಅಪ್ಪನಿಗೆ ಅದು ತಿಳಿದು ಅಮ್ಮನನ್ನು ಸೇರಿಸಿ ಮತ್ತೆ ಹೊಡೆದಾಗ, ಹೀಗೆ ಹೊಡೆತ ಅನ್ನೋದು ಅವನ ಬದುಕಿನ ಒಂದು ಭಾಗವಾಗಿಬಿಟ್ಟಿತ್ತು.ಅಲ್ಲಿ ಅವನಿಗೆ ಸ್ವಂತ ನಿಲುವು ಅನ್ನೋ ಪದದ ಅರ್ಥವೇ ಗೊತ್ತಿರಲಿಲ್ಲ.ಆಟಕ್ಕೆ ಹೋಗಬೇಕಾದರೂ ಅಪ್ಪನ ಅಪ್ಪಣೆ ಆಗಬೇಕು, ಅದು ಇಷ್ಟು ಹೊತ್ತಿಂದ ಇಷ್ಟು ಹೊತ್ತಿನ ತನಕ ಅಂತ ಮಾತ್ರ.ಹೆಚ್ಚಾದಲ್ಲಿ ಕಾರಣ ಕೇಳದೆ ಮತ್ತದೇ ಬದುಕಿನ ಹೊಡೆತ.ಎಲ್ಲ ಒಂದು ರೀತಿಯ ಟೈಮ್ ಟೇಬಲ್ ಇದ್ದ ಹಾಗೆ , ಬೆಳಿಗ್ಗೆ ೬ ಕ್ಕೆ ಏಳಬೇಕು ನಂತರ ಹಲ್ಲುಜ್ಜಿ ಕಾಫಿ ಆಮೇಲೆ ಒಳಗೆಲ್ಲ ಒರೆಸು ನಂತರ ಬೇಸಿಗೆಯಾಗಿದ್ದರೆ ಗಿಡಗಳಿಗೆಲ್ಲ ನೀರು ಹಾಕಬೇಕು ಆಮೇಲೆ ಸ್ನಾನ ಪೂಜೆ ತಿಂಡಿ ಮಾಡಿ ೫ ಕಿ ಮಿ ದೂರದ ಶಾಲೆಗೆ ಓಡು , ಇದಿಷ್ಟು ಬೆಳಗಿನದ್ದಾದರೆ ಸಂಜೆ ಬಂದ ತಕ್ಷಣ ಕೈ ಕಾಲು ತೊಳೆದು ಬಾಯಿ ಪಾಠ ಮಾಡಿ ಆಮೇಲೆ ಸ್ವಲ್ಪ ಓದು , ಊಟ, ಮಲಗು ಇಷ್ಟೇ. ರಾತ್ರಿ ಇರುವ ಕಪ್ಪು -ಬಿಳುಪಿನ ಟಿವಿಯಲ್ಲಿ ವಾರ್ತೆ , ಆಮೇಲೆ ಬರುವ ಎರೆಡು ಧಾರವಾಹಿ ಅಷ್ಟೇ , ೮ ಕ್ಕೆ ಅದು ಸ್ತಬ್ಧ.ಆಟ ಅನ್ನೋದು ಕೇವಲ ಭಾನುವಾರಕ್ಕೆ ಮಾತ್ರ ಸೀಮಿತ ಅಂದು ಸಂಜೆ ೫ ರಿಂದ ೬.೩೦ ರವರೆಗೆ. ಭಾನುವಾರ ೪ ಕ್ಕೆ ಬರುವ ೧೦ -೧೫ ವರ್ಷ ಹಳೆಯದ ಸಿನಿಮಾವೇ ಇವನಿಗೆ ಅತಿ ದೊಡ್ಡ ಮನೋರಂಜನೆ.ಇನ್ನು ಚಿತ್ರಮಂದಿರ ಹಾಗಿರುತ್ತದೆ , ಹೀಗಿರುತ್ತದೆ ಅಂತ ಕೇಳಿದ್ದು ಬಿಟ್ಟರೆ ನೋಡುವ ಭಾಗ್ಯ ಬಂದಿರಲಿಲ್ಲ.

ಒಂಥರಾ ಬಡತನ ಅನ್ನೋದು ಇತ್ತಾದರೂ ಯಾವತ್ತು ಇವನಿಗೆ ಮಾತ್ರ ಹಾಗೆ ಅನಿಸಿದ್ದಿಲ್ಲ.ಆ ಬಡತನವನ್ನೇ ಬಣ್ಣದ ಲೋಕ ಅಂತ ತಿಳಿದು ಬೆಳಿದಿದ್ದ ಹುಡುಗ ಈತ.ಬೇರೆಲ್ಲರಿಗಿಂತ ಸ್ವಲ್ಪ ಭಿನ್ನ ಆಲೋಚನೆ ಇವನದ್ದು.ಕೆಲವೊಮ್ಮೆ ಅಪ್ಪನ ಮೇಲೆ ಕೋಪ ಬಂದರೂ ಹೇಳಿಕೊಳ್ಳಕ್ಕೆ ಯಾರು ಇಲ್ಲ.ಅಣ್ಣನದ್ದು ಅದೇ ಪರಿಸ್ಥಿತಿ,ಇನ್ನು ಅಮ್ಮನ ಹತ್ತಿರ ಅಪ್ಪನ ಬಗ್ಗೆ ದೂರಿದರೆ ಅವಳ ದೃಷ್ಟಿಯಲ್ಲಿ ಅದಕ್ಕಿಂತ ದೊಡ್ಡ ಅಪರಾಧವಿಲ್ಲ ಅನ್ನೋ ಹಾಗಾಗಿಬಿಡುತ್ತೆ.ಹಾಗೆಂದು ಅಪ್ಪ ಕೆಟ್ಟವರಲ್ಲ , ಆ ಬಡತನ ಅನ್ನೋದು ಮಕ್ಕಳ ಮೇಲೆ ಬೀಳದಿರಲಿ, ಬೇಕು ಅನ್ನುವ ಆಕರ್ಷಣೆ ಹಠವಾಗದಿರಲಿ ಅನ್ನೋ ಅನಿಸಿಕೆ ಇರಬಹುದು ಅವರದ್ದು.ಕೆಲವೊಮ್ಮೆ ಸರಿ ಎನಿಸಿದರೂ ಆ ವಯಸ್ಸಿಗೆ ಅದು ತಪ್ಪಾಗೆ ಕಾಣುತಿತ್ತು.ಅಪ್ಪನೆದುರಿಗೆ ಇವ ಮಾತಾಡುವುದೇ ಅಪರೂಪ.ಮಾತಾಡುತಿದ್ದರು ಅವರೇ ಏನಾದರು ಹೇಳಬೇಕು ,ಇವನಿಂದ ಹು , ಹುಹು ಅನ್ನೋ ಎರಡೇ ಪದಗಳು ಹೊರಬರುತಿದ್ದವು ಅಷ್ಟೇ.ಇನ್ನು ಮೆಟ್ರಿಕ್ ಮುಗಿಸಿ ಕಾಲೇಜು ಅಂತ ಸೇರಿದ ಮೇಲೆ ಇವನಿಗೆ ಹೊರ ಜಗತ್ತಿನ ಪರಿಚಯ ಸ್ವಲ್ಪ ಮಟ್ಟಿಗೆ ಆಗಿದ್ದು.ಆಂಗ್ಲ ಭಾಷೆ ಬೇರೆ , ಅದು ಇವನಿಗೆ ವಿಷವನ್ನು ಬಂಗಾರದ ಲೋಟದಲ್ಲಿ ಕೊಟ್ಟ ಹಾಗಾಗಿತ್ತು. ಕಲಿಯಲೇಬೇಕು,ಅಪ್ಪ ಸೇರಿಸುವ ಮೊದಲೇ ಹೇಳಿದ್ದರು ನೋಡು ನನ್ನ ಹತ್ತಿರ ಜಾಸ್ತಿ ಓದಿಸೋಕೆ ಆಗೋಲ್ಲ ಹೇಗೆ ಸಾಲನೋ ಸೋಲನೋ ಮಾಡಿ ಈ ತಾಂತ್ರಿಕ ಶಿಕ್ಷಣಕ್ಕೆ ಸೇರಿಸುತಿದ್ದೇನೆ,ನಿನ್ನ ಕಾಲ ಮೇಲೆ ನೀನು ನಿಂತ ಮೇಲೆ ಮುಂದೆ ಓದುವುದಾದರೆ ಓದು.ಅಲ್ಲಿಗೆ ಇವನಿಗೆ ಗೊತ್ತಾಗಿ ಹೋಗಿತ್ತು ಇವು ನನ್ನ ವಿದ್ಯಾರ್ಥಿ ಜೀವನದ ಕೊನೆ ೩ ವರ್ಷಗಳೆಂದು.ಹಾಗಂತ ಶೋಕಿಗೆ ಅಲ್ಲಿ ಅವಕಾಶವಿರಲಿಲ್ಲ.ಅಪ್ಪ ಸರಿಯಾಗಿ ಅಂದಿನ ಬಸ್ ಚಾರ್ಜ್ ಮಾಡ್ತಾ ಕೊಡುತಿದ್ದರು.ಇಸ್ತ್ರಿ ಇಲ್ಲದ ಕಳೆದ ಗೌರಿ ಹಬ್ಬಕ್ಕೆ ಹೊಲಿಸಿದ್ದ ೨ ಅಂಗಿ,ಸ್ವಲ್ಪ ಗಿಡ್ಡ ಇರುವ ೨ ಪ್ಯಾಂಟ್. ಕಾಲೇಜು ಅಂದ ಮೇಲೆ ಕೇಳಬೇಕೆ.ಇವ ಬೈಕ್ ಅಲ್ಲಿ ಬರುವವರ ಮೊದಲು ಕಂಡದ್ದು ಅಲ್ಲೇ, ಅವರನ್ನು ನೋಡಿದ ತಕ್ಷಣ ಏನೋ ಒಂಥರಾ ತಡಬಡಿಕೆ ಮನಕೆ.ಅದೆಷ್ಟು ಜನ ನಕ್ಕರೋ ಇವನ ವೇಷ ನೋಡಿ ,ಇವನಿಗೆ ಅದರ ಪರಿವಿಲ್ಲ ,ಇದ್ದರೂ ಪ್ರಯೋಜನವಿಲ್ಲ.

ಇನ್ನೇನು ಮೊದಲ ವರ್ಷ ಮುಗಿಯಿತು ಅನ್ನೋವಷ್ಟರಲ್ಲಿ ಬಂದೆರಗಿತ್ತು ಅಣ್ಣನ ಹಠಾತ್ ಸಾವು. ಈಗಂತೂ ಅಪ್ಪ ಅತ್ತ ದ್ರವವು ಅಲ್ಲದ ಇತ್ತ ಘನವು ಅಲ್ಲದ ಕಾಸಿದ ಕಬ್ಬಿಣದ ಹಾಗೆ ಆಗಿ ಹೋಗಿದ್ದರು.ಅಮ್ಮ ನನ್ನಂತೂ ಕೇಳೋದೇ ಬೇಡ.ಎಲ್ಲ ಮುಗಿದು ಒಂದು ಹಂತಕ್ಕೆ ಬಂತು ಅನ್ನೋವಷ್ಟರಲ್ಲಿ ಇವನ ಕಾಲೇಜ್ ಮತ್ತೆ ಶುರುವಾಗಿತ್ತು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿತ್ತು.ಅಪ್ಪ ಮೊದಲಿನ ಸಿಟ್ಟು ತೋರುತ್ತಿರಲಿಲ್ಲ,ಹಾಗೆ ಆ ಶಿಸ್ತು ಕೂಡ.ಎಲ್ಲಿ ಇವ ಕೂಡ ನಮ್ಮಿಂದ ದುರವಾಗುತ್ತಾನೋ ಅನ್ನೋ ಭಯದಿಂದಲೋ ಅಥವಾ ನನ್ನ ಈ ಶಿಸ್ತೆ ಅವನ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಇನ್ದಲೋ. ಅದೇನೇ ಇರಲಿ ಇವನಿಗೆ ಮಾತ್ರ ಅವರ ಮನಸಿನ ಸಂಪೂರ್ಣ ಚಿತ್ರಣ ದೊರಕಿತ್ತು ಹಾಗೆಯೇ ಅವರ ಈ ಸ್ವಲ್ಪ ತುಸು ಜಾಸ್ತಿ ಕಾಳಜಿಯನ್ನು ನಾನೆಲ್ಲಿ ದುರುಪಯೋಗ ಮಾಡಿಕೊಳ್ಳುತ್ತೇನೆ ಅನ್ನೋ ಭಯ ಕೂಡ.

ಕಾಲ ಚಕ್ರ ಗತಿಸಿದ ಹಾಗೆ ಇವನ ತಾಂತ್ರಿಕ ಶಿಕ್ಷಣ ಕೂಡ ಮುಗಿಯಿತು.ಮತ್ತೊಂದು ಸಮಸ್ಯೆ ಶುರುವಾಗಿದ್ದೆ ಈಗ,ಅದೇ ಕೆಲಸ.ಎಲ್ಲೇ ಏನಾದರು ಸಣ್ಣ ಕೆಲಸ ಹುಡುಕಿಕೋ ಅಂತ ಅಪ್ಪ ಹೇಳಿದರೆ , ಆಗೋದೇ ಇಲ್ಲ ನಾನು ಪಟ್ಟಣಕ್ಕೆ ಹೋಗಿಯೇ ಸಿದ್ದ ಅಂತ ಇವನು.ಅಲ್ಲಿ ಇರುವುದೆಲ್ಲಿ ,ಹೊಸ ಜಾಗ , ಹೊಸ ಜನ ಅನ್ನೋ ಭಯ ಅವ್ರಿಗೆ.ಅಕ್ಕ ಇದ್ದಳಲ್ಲ ಅವಳ ಮನೇಲಿ ಇರುತ್ತೇನೆ ಅನ್ನೋ ಉತ್ತರ (ಅತ್ತೆ ಮಗಳು ಅಕ್ಕ ಅಂತ ಕರೆದು ಆಭ್ಯಾಸ ಇವನಿಗೆ).ಎಷ್ಟಾದ್ರೂ ಸಂಬಂಧಿಕರ ಮನೆ ಬೇಡ ಅಂತಿದ್ದ ಅಪ್ಪ ಕೊನೆಗೆ ಇವನ ಒತ್ತಾಯಕ್ಕೆ ಮಣಿದು ಅವಳಿಗೆ ಫೋನ್ ಹಾಯಿಸಿ ಹೀಗೆ ಹೀಗೆ ಕೆಲಸ ಸಿಕ್ಕಿ ಒಂದು ೩-೪ ತಿಂಗಳಿಗೆ ಬೇರೆ ಹೋಗುತ್ತಾನೆ ಅಂತ ಹೇಳಿದ್ದು ಆಯಿತು ಆ ಕಡೆ ಇಂದ ಓಕೆ ಅಂದಿದ್ದು ಆಯಿತು.ಬಾವಿಯ ಕಪ್ಪೆ ಸಮುದ್ರಕ್ಕೆ ಹೋದ ಹಾಗೆ ಆಗಿತ್ತು ಇವನ ಕತೆ.ಅದೃಷ್ಟಕ್ಕೆ ಹೋದ ೨ ನೇ ದಿನವೇ ಇವನಿಗೆ ಕೆಲಸ ದೊರೆಯಿತು ,೯೦೦೦ ಸಂಬಳ.ಕೇಳಬೇಕೆ ಮತ್ತೆ , ಜೀವಮಾನದಲ್ಲಿ ನೋಡಿರದ ಮೊತ್ತ (ಒಟ್ಟಿಗೆ).ಆದರೆ ಕೆಲಸಕ್ಕೆ ಸೇರಿ ೨ ತಿಂಗಳಿಗೆ ಇವನಿಗೆ ಕೆಲಸ ಹಳಸಿತು.ತಾನು ಅದನ್ನು ಬಿಟ್ಟು ಬೇರೆ ಕೋರ್ಸ್ ಮಾಡುವುದಾಗಿ ಮನೆಯಲ್ಲಿ ತಿಳಿಸಿದ.ಬೇಡ ಅಥವಾ ಮಾಡು ಅವರು ಏನೇ ಹೇಳಿದರೂ ಅವನು ಅದನ್ನು ಮಾಡುವವನೇ ಇದ್ದ.ಅದಾದ ಮೇಲೆ ತನಗೆ ಒಳ್ಳೆಯ ಕೆಲಸ ದೊರೆಯುವುದು ಅಂತ ಬೇರೆ ಹೇಳಿದ.ವಿಧಿ ಇಲ್ಲದೆ ಹು ಎಂದರು ಅಪ್ಪ.ಒಂದೆರಡು ಬಾರಿ ಆ ಹಬ್ಬ ಈ ಹಬ್ಬ ಅಂತ ಮನೆಗೆ ಬಂದ , ಬಂದಾಗಲೆಲ್ಲಾ ಅಷ್ಟು ಇಷ್ಟು ಹಣ ಕೊಟ್ಟು ಕಳಿಸುತಿದ್ದರು ಅಪ್ಪ.

ಆದರೆ ಇವ ಎಣಿಸಿದ್ದು ಒಂದಾದರೆ ಆ ವಿಧಿಯೇ ಬೇರೆ ರೀತಿ ಎಣೆಸಿತ್ತು.ಕೋರ್ಸ್ ಮುಗಿದು ೨ ತಿಂಗಳಾದರೂ ಕೆಲಸವಿಲ್ಲ.ಎಷ್ಟು ದಿನ ಅಂತ ಬೇರೆಯವರ ಮನೆಯಲ್ಲಿ ಇರೋದು ಸಾಧ್ಯ , ಆದರೆ ಬೇರೆ ಹೋಗೋದಾದ್ರೂ ಹೇಗೆ. ಏನೋ ಇದೆ ಎಂದು ಒಮ್ಮೆ ಬಂದು ಹೋಗು ಅಂತ ಮನೆಯಿಂದ ಬುಲಾವ್ ಬೇರೆ ಬಂತು.ಅದು ಏನು ಅಂತ ಇವನಿಗೆ ಚೆನ್ನಾಗಿ ಗೊತ್ತಿತ್ತು. ಅವಾಗಲೇ ಏನು ಹೇಳದಿದ್ದರೂ ಅಪ್ಪನ ಮೌನವೇ ಇವನಿಗೆ ಮುಂಚಿನ ಹುಣಸೆ ಬರಲಿನ ಏಟಿಗಿಂತ ಬಿರುಸಾಗಿತ್ತು. ಇನ್ನು ಅಮ್ಮ ಅವರೇನು ಹೇಳಿಯಾರು ,ಹೊರಗೆ ನಕ್ಕು ಒಳಗೆ ಅಳುತಿದ್ದ ಜೀವ ಅದು.ಹೊರಡುವವರೆಗೂ ಸುಮ್ಮನಿದ್ದು ಹೊರಟು ನಿಂತಾಗ ಕೈ ಅಲ್ಲಿ ದುಡ್ಡಿಟ್ಟು ಅಪ್ಪ ಹೇಳಿದ ಮೇಲಿನ ಮಾತುಗಳು ಅವನ ಕಿವಿಯಲ್ಲಿ ಇನ್ನು ಹಾಗೆ ಪ್ರತಿದ್ವನಿಸುತಿತ್ತು. ಹಾಗೆ ಸೂರ್ಯ ತನ್ನ ಕೊನೆ ಕಿರಣವನ್ನು ಮಾತ್ರ ತುರುತ್ತಾ ಇವನಿಗೆ ದಾರಿ ತೋರಿಸಿದ ಹಾಗೆ ಇತ್ತು.ಮನಸಿನಲ್ಲೇ ಒಂದು ಸಂಕಲ್ಪ ಮಾಡಿ ತಾನು ಬದಲಾಗಬೇಕು ಅನ್ನೋದರ ಸ್ಪಷ್ಟ ಚಿತ್ರಣ ಮೂಡಿಸಿಕೊಂಡ. ಅಲ್ಲಿಂದ ಎದ್ದು ಕೆಳಗಡೆಗೆ ಹೆಜ್ಜೆ ಹಾಕತೊಡಗಿದ, ಹಾಗೆಯೇ ಆ ಕೊನೆ ಕಿರಣವು ಕೂಡ ನಿಧಾನವಾಗಿ ಮಾಯವಾಗುತ್ತಾ ಹೋಯಿತು.

ಇಂತಿ

ವಿನಯ

ಭಾನುವಾರ, ಜುಲೈ 19, 2009

ಕನ್ನಡ ನಾಡಿನ ಹಕ್ಕಿಗಳಿಗೆ ಪ್ರಮಾಣೀಕೃತ ಕನ್ನಡ ಹೆಸರುಗಳು

ವಿಶ್ವದಲ್ಲಿ ವೈಜ್ಞಾನಿಕ ಬೆಳವಣಿಗೆ ಮುನ್ನಡೆದಂತೆ ಆಯಾ ಕ್ಷೇತ್ರದಲ್ಲಿ ಎಲ್ಲರಿಗೂ ಅರ್ಥವಾಗಬಲ್ಲ ಪಾರಿಭಾಷಿಕ ಶಬ್ದಗಳ ಉಪಯುಕ್ತತೆ, ಅವಶ್ಯಕತೆ ಮತ್ತು ಅನಿವಾರ್ಯತೆಯನ್ನು ನಾವೆಲ್ಲಾ ಇಂದು ಕಾಣುತಿದ್ದೇವೆ. ಅದು ಕೇವಲ ಒಂದು ವೈಜ್ಞಾನಿಕ ಪದವೇ ಇರಬಹುದು ಅಥವಾ ಪ್ರಪಂಚದಾದ್ಯಂತ ಇರುವ ಕೋಟಿಗಟ್ಟಲೆ ಪ್ರಾಣಿ - ಪಕ್ಷಿ - ಗಿಡ - ಮರ - ಬಳ್ಳಿಗಳ ಹೆಸರೇ ಇರಬಹುದು.
ಪಕ್ಷಿ ಪ್ರಪಂಚದ ಬಗ್ಗೆ ಬಂದಾಗ ವಿವಿಧ ಪ್ರಾಂತ್ಯಗಳಲ್ಲಿ, ವಿವಿಧ ಆಡು ಭಾಷೆಗಳಲ್ಲಿ ಒಂದು ಹಕ್ಕಿಯನ್ನು ಬೇರೆ ಬೇರೆ ಹೆಸರುಗಳಿಂದ ಅಥವಾ ಬೇರೆ ಬೇರೆ ಹಕ್ಕಿಗಳನ್ನು ಒಂದೇ ಹೆಸರಿನಿಂದ ಕರೆಯುವುದನ್ನು ನಾವು ಕಂಡಿದ್ದೇವೆ.

ಹೀಗೆ ಆದಾಗ ಅವಗಳ ನಿಜವಾದ ಹೆಸರು ನಶಿಸಿ ಹೋಗುವ ಸಾಧ್ಯತೆಗಳೇ ಹೆಚ್ಚು. ಪ್ರಪಂಚದಾದ್ಯಂತ ನೋಡಿದಾಗ ಆಂಗ್ಲ ಭಾಷೆಯಲ್ಲಿ ಒಂದೇ ಜಾತಿಯ ಹಕ್ಕಿಗಳ ಹೆಸರನ್ನು ಏಕರೂಪವಾಗಿ ಕರೆಯುವುದನ್ನು ನೋಡಬಹುದಾಗಿದೆ.
ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ಇದು ಇನ್ನು ಆಗಿಲ್ಲ . ಒಂದೋ ಎಲ್ಲರಿಗೂ ಅದರ ನಿಜವಾದ ಪ್ರಬೇಧ ಗೊತ್ತಿಲ್ಲ , ಅಥವಾ ಕೆಲವನ್ದರದ್ದು ತಿಳಿದಿದ್ದು ಉಳಿದವದ್ದು ತಿಳಿದಿರಲಿಕ್ಕಿಲ್ಲ . ಎಲ್ಲರೂ ಒಂದೇ ಹೆಸರಿನಿಂದ ಕರೆಯಲು ಅದಕ್ಕೊಂದು ಮಾಹಿತಿ ಒದಗಿಸುವ ಪಟ್ಟಿಬೇಕು.

ಅದಕ್ಕೆ ಡಾ. ಎಸ್.ವಿ. ನರಸಿಂಹನ್ ಮತ್ತು ಹರೀಶ್. ಅರ್. ಭಟ್ ಈ ವಿಷಯವಾಗಿ ಅಭ್ಯಾಸ ಮಾಡಿ ಕರ್ನಾಟಕದಲ್ಲಿರುವ ಒಟ್ಟು ೫೧೨ ವಿವಿಧ ಪ್ರಬೇಧದ ಪಕ್ಷಿಗಳ ಪಟ್ಟಿ ತಯಾರಿಸಿ ಅವುಗಳ ವೈಜ್ಞಾನಿಕ , ಆಂಗ್ಲ ಮತ್ತು ಕನ್ನಡದ ಹೆಸರನ್ನು ಅಲ್ಲಿ ಸೂಚಿಸಿದ್ದಾರೆ. ಈ ಪಟ್ಟಿ ತಯಾರಿಸಲು ಅವರು ಕರ್ನಾಟಕ ಸುಪ್ರಸಿದ್ಧ ಪಕ್ಷಿ ತಜ್ಞರು ಮತ್ತು ಭಾಷಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ , ಅಲ್ಲದೆ ಡಾ. ಶಿವರಾಮ ಕಾರಂತ್ , ಕುವೆಂಪು , ತೇಜೆಸ್ವಿ , ಡಾ .ಹೆಚ್.ಆರ್. ಕೃಷ್ಣಮೂರ್ತಿ , ಡಾ. ಪ್ರಭಾಕರ್ ಆಚಾರ್ ಮತ್ತು ಗೀತಾ ನಾಯಕ್, ಡಾ . ಎನ್.ಎಸ್ .ಮಧ್ಯಸ್ಥ, ಪ್ರೊ. ಎಸ್.ಬಿ. ಸದಾನಂದ , ಪ್ರಮೋದ್ ಸುಬ್ಬರಾವ್ ಮುಂತಾದವರ ಕೃತಿಗಳಲ್ಲಿ ಉಲ್ಲೇಖಿಸಿರುವ ಪಕ್ಷಿಗಳ ಹೆಸರನ್ನು ಕೂಡ ಗಣನೆಗೆ ತೆಗೆದುಕೊಂಡಿದ್ದಾರೆ.
ಅದು ಅಲ್ಲದೆ ಆಂಗ್ಲದಲ್ಲಿ ಈ ಪಕ್ಷಿಗಳ ಪ್ರಬೇಧದ ವಿಂಗಡಣೆಗೆ ಕೆಲವು ಕ್ರಮಗಳಿವೆ. ಅವನ್ನು ಕೂಡ ಇವರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಹಾಗು ಅವು ಇಂತಿವೆ :

೧) ಒಂದು ಹಕ್ಕಿಯ ಕುಟುಂಬವನ್ನು ತೆಗೆದುಕೊಂಡಲ್ಲಿ ಇಡೀ ಕುಟುಂಬದ ಹಕ್ಕಿಗಳನ್ನು ಒಂದೇ ಸಾಮನ್ಯ ಹೆಸರಿನಿಂದ ಗುರುತಿಸಿ, ನಂತರ ಆ ಕುಟುಂಬದಲ್ಲಿರುವ ವಿವಿಧ ಸದಸ್ಯರನ್ನು ಅವುಗಳ ವರ್ಣವ್ಯತ್ಯಾಸ, ದೇಹರಚನಾ ವ್ಯತ್ಯಾಸ ಹಾಗು ಸ್ವಭಾವದ ವ್ಯತ್ಯಾಸಗಳಿಗನುಗುಣವಾಗಿ ಹೆಸರಿಸಗಾಗುವುದು. ಉದಾ : ಪಿಕಳಾರಗಳ ಕುಟುಂಬದಲ್ಲಿ ಕೆಮ್ಮೀಸೆ ಪಿಕಳಾರ , ಕೆಂಪುಕಿಬ್ಬೊಟ್ಟೆಯ ಪಿಕಳಾರ, ಬಿಳಿ ಮತ್ತು ಹಳದಿ ಹುಬ್ಬಿನ ಪಿಕಳಾರ , ಬೂದು ತಲೆಯ ಪಿಕಳಾರ .. ಹೀಗೆ .

೨) ಒಂದೇ ಕುಟುಂಬದಲ್ಲಿಯೇ ಸ್ಥೂಲವ್ಯತ್ಯಾಸಗಳಿರುವ ವಿವಿಧ ಗುಂಪುಗಳನ್ನು ನಾವು ಕಾಣುತ್ತೇವೆ. ಆ ಸಂದರ್ಭದಲ್ಲಿ ಒಂದೊಂದು ಗುಂಪಿಗೆ ಒಂದು ಹೆಸರನ್ನಿರಿಸಿ ಅಲ್ಲಿಂದ ಮುಂದೆ ೧ ರಂತೆ ಮುಂದುವರೆಯುವುದು.
ಉದಾ : Ardidae ಕುಟುಂಬದಲ್ಲಿ Herons, Egrets and Bitterns ಏನು ಬೇರೆ ಬೇರೆ ಹೆಸರಿನ ಗುಂಪುಗಳಿವೆ. ಇಲ್ಲಿ Herons ಬೇರೆ, Egrets ಬೇರೆ ಮತ್ತು Bitters ಬೇರೆ.

ಕನ್ನಡದಲ್ಲಿ ಈ ಗುಂಪುಗಳನ್ನು ನಾವು ಅನುಕ್ರಮವಾಗಿ ಬಕ , ಬೆಳ್ಳಕ್ಕಿ ಮತ್ತು ಗುಪ್ಪಿಗಳೆಂದು ಕರೆಯಬಹುದು. ಬಕಗಳಲ್ಲಿ ಬೂದು ಬಕ ,ಕೆನ್ನೀಲಿ ಬಕ :ಬೆಳ್ಳಕ್ಕಿಗಳಲ್ಲಿ ,ಮಧ್ಯಮ ಬೆಳ್ಳಕ್ಕಿ , ದೊಡ್ಡ ಬೆಳ್ಳಕ್ಕಿ ;ಗುಪ್ಪಿಗಳಲ್ಲಿ ಕರಿ ಗುಪ್ಪಿ , ಕೆಸರು ಗುಪ್ಪಿ- ಹೀಗೆ .

೩) ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಒಂದು ನಿರ್ದಿಷ್ಟವಾದ ಹಾಗು ಅದಕ್ಕೆ ತಕ್ಕದಾದ ಒಂದು ಹೆಸರಿದ್ದರೆ ಮತ್ತು ಆ ಹೆಸರು ಮತ್ಯಾವುದೇ ಹಕ್ಕಿಗೂ ಇಲ್ಲದಿದ್ದಲ್ಲಿ, ಅದನ್ನು ಮುಂದುವರೆಸಿಕೊಂಡು ಹೋಗುವುದು . ಉದಾ: ಮೇಲಿನ ಸಂದರ್ಭಗಳಲ್ಲಿ Little Egret = ಬೆಳ್ಳಕ್ಕಿ , Cattle Egret = ಗೋವಕ್ಕಿ- ಹೀಗೆ.

೪) ಒಂದೇ ಕುಟುಂಬದಲ್ಲಿ ಹತ್ತಾರು ಗುಂಪುಗಳಿದ್ದಲ್ಲಿ ಪರಿಸ್ಥಿತಿ ಬಹಳ ಸಂಕಿರ್ಣ, ಕ್ಲಿಷ್ಟ ಆಗುತ್ತದೆ. ಉದಾ : Accipitridae ಕುಟುಂಬದಲ್ಲಿ Kites, Eagles, Hawks, Buzzards, Harriers, Vultures ಅಲ್ಲದೆ Shikra, Baza, Fish-Eagle, Snake-Eagle, Serpent-Eagle, Hawk- Eagle ಮುಂತಾದ ಹೆಸರುಗಳು ನಮ್ಮನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಈ ಹಕ್ಕಿಗಳಿಗೆ ನಮಗೆ ಕನ್ನಡದಲ್ಲಿ ಹದ್ದು , ಗಿಡುಗ , ಗರುಡ , ಬಿಜ್ಜು ,ಡೇಗೆ , ಸೆಳೆವ, ರಣ ಹದ್ದು ಮುಂತಾದ ಹೆಸರುಗಳು ದೊರಕುತ್ತವೆ.

೫) ಕೆಲವು ಕುಟುಂಬದ ಹಕ್ಕಿಗಳಿಗೆ ಕನ್ನಡದಲ್ಲಿ ಯಾವ ಹೆಸರು ಯಾವು ಇಲ್ಲ . ಉದಾ : Family: Sulidae – Boobies. ಇಂಥಹ ಸಂದರ್ಭಗಳಲ್ಲಿ ಹೊಸ ಹೆಸರನ್ನು ಸೂಚಿಸಬೇಕಾಗುತ್ತದೆ.

ಮುಖ್ಯ ಪ್ರಬೇಧಗಳು ;
೧)ಗುಳುಮುಳುಕ
೨)ಸಾಗರದಕ್ಕಿಗಳು : ಉಪಜಾತಿ - ೨
೩)ಕಡಲಪೋತ
೪)ಕಡಲ ಕಾಗೆಗಳು :ಉಪಜಾತಿ -೨
೫)ಹೆಜ್ಜಾರ್ಲೆಗಳು :ಉಪಜಾತಿ -೨
೬)ಕಡಲ ಬಾತುಗಳು :ಉಪಜಾತಿ -೨
೭)ನೀರುಕಾಗೆಗಳು :ಉಪಜಾತಿ -೩
೮)ಹಾವಕ್ಕಿ
೯)ಕಡಲ ಹದ್ದುಗಳು : ಉಪಜಾತಿ -೨
೧೦)ಬಕ , ಬೆಳ್ಳಕ್ಕಿ , ಗುಪ್ಪಿಗಳು : ಉಪಜಾತಿ -೧೬
೧೧)ಕೊಕ್ಕರೆಗಳು : ಉಪಜಾತಿ -೮
೧೨)ಕೆಂಬರಲುಗಳು :ಉಪಜಾತಿ - ೪
೧೩)ರಾಜಹಂಸ
೧೪)ಬಾತುಕೋಳಿಗಳು :ಉಪಜಾತಿ -೧೮
೧೫)ಹದ್ದು , ಗಿಡುಗ,ಸೆಳೆವ, ರಣ ಹದ್ದು : ಉಪಜಾತಿ -೩೯
೧೬)ಡೇಗೆಗಳು
೧೭)ಚಾಣಗಳು:ಉಪಜಾತಿಗಳು -೧೦
೧೮)ಕವುಜುಗ ,ಬುರ್ಲಿ,ಕೋಳಿ , ನವಿಲುಗಳು : ಉಪಜಾತಿ -೧೩
೧೯)ಗುಡುಗಾಡು ಹಕ್ಕಿಗಳು : ಉಪಜಾತಿ - ೩
೨೦)ಕ್ರೌಂಚಗಳು
೨೧) ಜೌಗು ಕೋಳಿಗಳು , ಹುಂಡು ಕೋಳಿಗಳು , ಜಂಬು ಕೋಳಿಗಳು :ಉಪಜಾತಿ -೧೨
೨೨)ಎರ್ಲಡ್ಡು ಹಕ್ಕಿಗಳು
೨೩)ದೇವನಕ್ಕಿಗಳು :ಉಪಜಾತಿ -೨
೨೪)ಸಿಂಪಿಬಾಕಗಳು
೨೫)ಟಿಟ್ಟಿಭ , ಮರಳುಗೊರವಗಳು : ಉಪಜಾತಿ -೧೦
೨೬)ಗದ್ದೆ ಗೊರವ ,ಕಡಲುಗೊರವ ,ಉಲ್ಲಂಕಿಗಳು: ಉಪಜಾತಿ -೨೮
೨೭)ಕಡಲ ಕೊಕ್ಕರೆಗಳು
೨೮)ರಂಗು ಉಲ್ಲಂಕಿಗಳು
೨೯)ಮೆಟ್ಟು ಗಾಲು ಹಕ್ಕಿಗಳು :ಉಪಜಾತಿ - ೨
೩೦)ಏಡಿಗೊರವಗಳು
೩೧)ಬಂಡೆಗೊರವಗಳು : ಉಪಜಾತಿ - ೨
೩೨)ಚಿಟವಗಳು : ಉಪಜಾತಿ - ೨
೩೩)ಕಡಲ ಗಿಡುಗಗಳು : ಉಪಜಾತಿ - ೨
೩೪)ಕಡಲಕ್ಕಿ , ರೀವಗಳು : ಉಪಜಾತಿ - ೨೧
೩೫)ಜಾಲರಿ -ರೀವಗಳು
೩೬)ಗೌಜಲಕ್ಕಿಗಳು : ಉಪಜಾತಿ - ೩
೩೭)ಪಾರಿವಾಳ , ಕಪೋತಗಳು : ಉಪಜಾತಿ - ೧೩
೩೮)ಗಿಳಿಗಳು : ಉಪಜಾತಿ -೬
೩೯)ಕೋಗಿಲೆಗಳು , ಕೆಂಬುತಗಳು : ಉಪಜಾತಿ - ೧೫
೪೦)ಕಣಜ ಗೂಬೆಗಳು : ಉಪಜಾತಿ -೩
೪೧)ಗೂಬೆಗಳು : ಉಪಜಾತಿ -೧೨
೪೨)ಕಪ್ಪೆ ಬಾಯಿಗಳು
೪೩) ನತ್ತಿಂಗಗಳು : ಉಪಜಾತಿ -೬
೪೪)ಬಾನಾಡಿ ಹಕ್ಕಿಗಳು : ಉಪಜಾತಿ - ೭
೪೫)ಮರ ಬಾನಾಡಿಗಳು
೪೬)ಕಾಕರಣೆ ಹಕ್ಕಿಗಳು
೪೭) ಮಿಂಚುಳ್ಳಿಗಳು : ಉಪಜಾತಿ - ೮
೪೮)ಪತ್ರಂಗಗಳು :ಉಪಜಾತಿ - ೫
೪೯)ನೀಲಕಂಠಗಳು : ಉಪಜಾತಿ -೩
೫೦)ಚಂದ್ರ ಮುಕುಟಗಳು
೫೧)ಮಂಗಟ್ಟೆ ಹಕ್ಕಿಗಳು : ಉಪಜಾತಿ -೪
೫೨)ಕುಟ್ರಹಕ್ಕಿಗಳು : ಉಪಜಾತಿ -೪
೫೩)ಮರಕುಟಿಗಗಳು : ಉಪಜಾತಿ - ೧೩
೫೪)ನವರಂಗಗಳು
೫೫) ನೆಲಗುಬ್ಬಿಗಳು: ಉಪಜಾತಿ -೯
೫೬)ಕವಲುತೊಕೆಗಳು : ಉಪಜಾತಿ - ೧೦
೫೭)ಕಳಿಂಗಗಳು : ಉಪಜಾತಿ -೫
೫೮)ಹೊನ್ನಕ್ಕಿಗಳು:ಉಪಜಾತಿ -೩
೫೯)ಕಾಜಾಣಗಳು: ಉಪಜಾತಿ - ೬
೬೦)ಅಂಬರ ಕಿಚುಕಗಳು:ಉಪಜಾತಿ -೧
೬೧)ಕಬ್ಬಕ್ಕಿ , ಗೊರವಂಕಗಳು :ಉಪಜಾತಿ -೯
೬೨)ಮಟ ಪಕ್ಷಿಗಳು : ಉಪಜಾತಿ -೪
೬೩)ಕೀಚುಗ , ಚಿತ್ರ ಪಕ್ಷಿಗಳು :ಉಪಜಾತಿ -೧೦
೬೪)ಎಲೆ ಹಕ್ಕಿಗಳು :ಉಪಜಾತಿ -೫
೬೫)ಪಿಕಳಾರಗಳು :ಉಪಜಾತಿ -೧೧
೬೬)ಹರಟೆ ಮಲ್ಲಗಳು , ನಗೆ ಮಲ್ಲಗಳು : ಉಪಜಾತಿ -೧೬
೬೭)ನೊಣ ಹಿಡುಕಗಳು : ಉಪಜಾತಿ -೧೩
೬೮)ಬೀಸಣಿಗೆ ನೊಣ ಹಿಡುಕಗಳು : ಉಪಜಾತಿ - ೩
೬೯)ರಾಜ ಹಕ್ಕಿಗಳು :ಉಪಜಾತಿ -೨
೭೦)ಉಲಿಯಕ್ಕಿಗಳು :ಉಪಜಾತಿ -೨೭
೭೧)ಚಟಕ , ಸಿಳ್ಳರ ಹಕ್ಕಿಗಳು : ಉಪಜಾತಿ -೨೧
೭೨)ಚೇಕಡಿ ಹಕ್ಕಿಗಳು :ಉಪಜಾತಿ - ೩
೭೩)ಮರ ಗುಬ್ಬಿಗಳು : ಉಪಜಾತಿ -೨
೭೪) ಪಿಪಿಳಿಕ , ಸಿಪಿಲೆಗಳು : ಉಪಜಾತಿ -೧೫
೭೫)ಬದನಿಕೆಗಳು : ಉಪಜಾತಿ - ೩
೭೬) ಸೂರಕ್ಕಿಗಳು : ಉಪಜಾತಿ - ೬
೭೭) ಬೆಳ್ಗಣ್ಣಗಳು
೭೮) ಗುಬ್ಬಚ್ಚಿಗಳು.

ಕೊನೆಯದಾಗಿ ಲೇಖಕರ (ಡಾ ಎಸ್.ವಿ. ನರಸಿಂಹನ್ ಮತ್ತು ಹರೀಶ್ ಆರ್. ಭಟ್) ಮಾತು : "ರಾಜ್ಯದ ಪಕ್ಷಿ ಪ್ರೇಮಿಗಳು , ಪಕ್ಷಿ ವೀಕ್ಷಕರು ಹಾಗು ವಿಜ್ಞಾನದ ವಿದ್ಯಾರ್ಥಿಗಳು ತೆರೆದ ಹೃದಯದಿಂದ ಈ ಹೆಸರುಗಳನ್ನು ಸ್ವೀಕರಿಸಿ. ಇವೇ ಹೆಸರುಗಳಿಂದ ಹಕ್ಕಿಗಳನ್ನು ಗುರುತಿಸಿ. ತಮ್ಮ ದಿನಬಳಕೆಯಲ್ಲಿ ಮತ್ತು ಲೇಖನಗಳಲ್ಲಿ ಬಳಸಿ ನಾಡಿನಾದ್ಯಂತ ಪ್ರಚುರಪಡಿಸಬೇಕೆಂದು ಕಳಕಳಯಿಂದ ಕೇಳಿಕೊಳ್ಳುತ್ತೇವೆ. ಉತ್ತಮ ಸೂಚನೆ ಸಲಹೆಗಳಿಗೆ ಅವಕಾಶವಿದೆ.

ಇಂತಿ

vinaya

ಶುಕ್ರವಾರ, ಜುಲೈ 17, 2009

"ಇನ್ನು ಮಂಗನ ಕೈ ಗೆ ಮಾಣಿಕ್ಯ ಕೊಡಬಹುದು

ಹು ಇದೇನಿದು ತಲೆಬರಹ ಅಂದುಕೊಂಡಿರ , ತಮಾಷೆಯಾಗಿದ್ದರು ಯೋಚಿಸಬೇಕಾದ ವಿಷಯ . ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ ಆಯಿತು ಅನ್ನೋದು ಸಾಮಾನ್ಯವಾಗಿ ಹೇಳಿದ್ದನ್ನು ಮಾಡದೆ ಇನ್ನೇನೋ ಮಾಡುವವನನ್ನು ಕಂಡು ಆಡುವ ಮಾತು . ಆ ಮಾತಿನಲ್ಲೇ ಇರುವಂತೆ ಮಾಣಿಕ್ಯ ಅಥವಾ ತಾಳಿ ಅನ್ನೋದು ಹೆಣ್ಣಿನ ಬಹುಮೂಲ್ಯವಾದ ಆಸ್ತಿ ಅನ್ನೋದು ಒಂದು ನಂಬಿಕೆ. ಚರ್ಚೆಗೆ ನೀವಿರುವಾಗ ನೇರವಾಗಿ ವಿಷಯಕ್ಕೆ ಬರುತ್ತೇನೆ. ನಿನ್ನೆ ಈ ತಳಿಯ ವಿಷಯಕ್ಕೆ ಸಂಬಂಧ ಪಟ್ಟಂತೆ ಮದ್ರಾಸ್ ಹೈ ಕೋರ್ಟ್ನ ಮಧುರೈ ಪೀಠ ನೀಡಿದ ತೀರ್ಪು ಹೀಗಿದೆ,
"ಹಿಂದೂ ಸಂಪ್ರದಾಯದದಲ್ಲಿ ಮದುವೆ ಆಗಿದೆ ಎಂಬುದನ್ನು ಧೃಡಪಡಿಸಲು ವರ ವಧುವಿನ ಕೊರಳಿಗೆ ಮಂಗಳ ಸೂತ್ರ ಕಟ್ಟಲೇಬೇಕು ಎಂಬುದು ಕಡ್ಡಾಯವಲ್ಲ.ಹಿಂದೂ ಕಾಯಿದೆಯ ಪರಿಚ್ಚೇಧ ೭ ರ ಅನ್ವಯ , ಮದುವೆ ಶಾಸ್ತ್ರೋಕ್ತವಾಗಿ ಆಗಿದೆ ಎಂಬುದನ್ನು ಸಾಬೀತಿಗೆ ಯಾವುದೇ ಅಂಗೀಕೃತ ಆಚರಣೆ ಸಾಕು ".
ಪೀಠ ಈ ರೀತಿಯ ತೀರ್ಪು ಕೊಡಲು ಮುಖ್ಯ ಕಾರಣ ಗೃಹಣಿಯೊಬ್ಬಳು ಹೂಡಿದ್ದ ಅರ್ಜಿ , ಅದು ೨೧ ವರ್ಷಗಳ ಕೆಳಗೆ.
ವಿಷಯ ಒಂದು ಹಾಗು ಮುಖ್ಯವಾದದ್ದು ೨೧ ವರ್ಷಗಳ ಬಳಿಕ ಕೋರ್ಟ್ ನೀಡಿದ ಈ ತೀರ್ಪಿನಿಂದ ಅವಳಿಗೆ ಯಾವ ರೀತಿಯ ನ್ಯಾಯ ದೊರಕಬಹುದು . ಅವಳ ಅರ್ಜಿ ಹೂಡಿದ ಕಾರಣ ಅವಳ ಗಂಡ ವರದಕ್ಷಿಣೆಗಾಗಿ ತನ್ನನ್ನು ಪಿಡಿಸುತ್ತಿದ್ದಾನೆಂದು , ಹಾಗೆಯೇ ಮನೆಯಿಂದ ಹೊರಗೆ ಹಾಕಿದ್ದಾನೆಂದು. ಹಾಗೆ ಅವರ ಮದುವೆ ಒಂದು ದೇವಸ್ಥಾನದಲ್ಲಿ ನೆರವೇರಿದ್ದು ಹಾರ ಮಾತ್ರ ಬದಲಾಯಿಸಿಕೊಂಡಿದ್ದರು. ವಿಷಯ ೨ ಈಗ ಈ ರೀತಿಯ ತೀರ್ಪು ಕೊಟ್ಟು ಅನ್ಯ ಧರ್ಮಿಯರ ಕಣ್ಣಲ್ಲಿ ಹಿಂದೂ ಧರ್ಮದ ಆಚಾರಗಳನ್ನ ಅವಹೇಳನಗೊಳಿಸಿದಹಾಗೆ ಆಗುವುದಿಲ್ಲವೇ ? ಅಷ್ಟಕ್ಕೂ ಮದುವೆ ಎಂಬ ಬಂಧಕ್ಕೆ ಕೋರ್ಟ್ನ ಈ ರೀತಿಯ ಮಧ್ಯಸ್ತಿಕೆ ಬೇಕಿತ್ತೆ ? ಗಂಡ ಹೆಂಡಿರ ಸಂಬಂಧ ತೀರಾ ಸಮಾಜಿಕವಾಯಿತು ಅನಿಸೋಲ್ವೇ ? ೨೧ ವರ್ಷಗಳ ಜೀವನ ಸಾಗಿಸಿದ ಆ ಗೃಹಿಣಿ ಒಂಟಿಯಾಗೆ ಇದ್ದಳು ಇನ್ನು ಈ ತೀರ್ಪಿನಿಂದ ಅವಳಿಗೆ ಅದೆಂಥ ನ್ಯಾಯ ಸಿಗಬಹುದು. ಕೋರ್ಟ್ ತನ್ನ ಇರುವಿಕೆಯನ್ನು ತೋರಿಸುವುದಕ್ಕಾಗಿ ಈ ರೀತಿಯ ತೀರ್ಪುಗಳನ್ನು ನಿಡುತ್ತಿದೆಯೇ ಅಂತ ಅನ್ನಿಸುವುದಿಲ್ಲವೇ ?
ತಾಳಿ ಎಂಬುದು ಕೇವಲ ತಾಳಿಯಾಗದೆ ಹೆಣ್ಣಿನ ರಕ್ಷಣೆಯ ಒಂದು ಆಯುಧವಾಗಿ ಇರುವಂತದ್ದು ಅಂತ ಕೋರ್ಟ್ ಗೆ ಅನ್ನಿಸಲಿಲ್ಲವೇ ? ತಾಳಿಯೇ ಬೇಡ ಅನ್ನುವಂಥ ನಿಲುವಿನ ಬದಲು ಬೇರೊಂದು ಪರಿಹಾರವನ್ನು ಸೂಚಿಸಬಹುದಿತ್ತಲ್ಲವೇ?
ಈ ವಿಷಯದಲ್ಲಿ ಕೋರ್ಟ್ ಕೂಡ ತಡವಾದ ಮತ್ತು ಅರ್ಥಹೀನ ನಿರ್ಣಯ ಕೈಗೊಂಡಿತು ಅನ್ನಿಸೋಲ್ವೆ ?

ಗುರುವಾರ, ಮೇ 14, 2009

ನೀವು ಕೇಳಿದಿರಿ ೧.೨

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ .

-ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ
(ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). Laughing out loud
+++++++

*ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ !

-ಇದಕ್ಕೆಲ್ಲ ಅವರ 'ವೈ'ರಿಂಗಿನ ಶಾರ್ಟ್ ಸರ್ಕೀಟ್ ಕಾರಣವಂತೆ .
+++++++++

*ಕಸಬ್ ಗೆ ಓದಲು ದಿನ ಪತ್ರಿಕೆ ಬದಲು ಕಥೆ ಪುಸ್ತಕವಂತೆ !

-ಅವನ ಕಥೆಯೇ ನಮಗೆ ಸಹಿಸಲಾರದ ವ್ಯಥೆ , ಮಧ್ಯೆ ಇನ್ನೊಂದು ಕಥೆ .
+++++++++

*ಕನ್ನಡದಲ್ಲಿ ಅತಿ ಹೆಚ್ಚು ಕಥೆ ಬರೆದವರಿಗೆ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರಂತೆ ವಾಟಾಳ್ !

-ಎಲ್ಲರದ್ದು ವರುಷಕ್ಕೊಂದು ಕಥೆಯಾದರೆ ನನ್ನದು ದಿನಕ್ಕೊಂದು ಕಥೆ ಹಾಗಾಗಿ ಆ ಸನ್ಮಾನ ನನಗೆ ಮಾಡಿ ಅಂದಿದ್ದಾರಂತೆ 'ಗೌಡ್ರು '.
++++++++

*ಕಮಿಷನ್ ಜಗಳ ಇಬ್ಬರ ಕೊಲೆ .

-ವಿಚಾರಣೆಗೆ ಜಂಟಿ ಕಮಿಷನ್ ನೇಮಕ .
+++++++++

*ಈ ಬಾರಿಯದು ತ್ರಿಶಂಕು ಸರ್ಕಾರವಂತೆ ?

-ಅಯ್ಯೋ ಅಷ್ಟು ಬೇಗ ನಮ್ಮ ಹೆಸರೆಲ್ಲ ಯಾಕೆ ಹೇಳಿದಿರಿ ಅನ್ನುತ್ತಿದ್ದಾರಂತೆ ಲಾಲು ,ಕಾರಟ್ ,ಪಾಸ್ವಾನ್ ,ಮಾಯಾ ,ಜಯ ..............! Laughing out loud
+++++++++++

*ಜಾತ್ಯಾತೀತರೆಲ್ಲ ಒಂದಾಗಿ 'ಕೈ ' ಬೀಸೋಣ ಅಂದ್ರಂತೆ ಪವಾರ್ !

-ಆವಾಗಲೇ 'ಆನೆ'ಬಲ ಬರೋದು ಅಂದ್ರಂತೆ ಮಾಯಾ .
+++++++++

*ಅಧಿಕಾರದ ಉರುಳುವ ಹೆದರಿಕೆಯಿಂದ ಹೋಮ ಹವನಕ್ಕೆ ಮೊರೆಹೋದ ಯಡ್ಡಿ .

-ಪಕ್ಕದಲ್ಲಿದ್ದ S'ಅಕ್ಕನನ್ನು ನೋಡಿ ದಂಪತಿಗಳಿಬ್ಬರು ಕುಳಿತುಕೊಳ್ಳಿ ಎಂದರಂತೆ ಪುರೋಹಿತರು .ಹಿ ಹೀ Laughing out loud :D
+++++++++++

ನೀವು ಕೇಳಿದಿರಿ - ೧. ೧

*ಸೋನಿಯಾ ,ಕುಮಾರಣ್ಣ ಕಳ್ಳ ಭೇಟಿ ಅಂತೆ !

-ಚಿಕ್ಕನ್ನಿದಿಂದಲೂ ಅವನಿಗೆ 'ಇಲಿ' ಜೊತೆ ಆಡೋದು ಅಂದ್ರೆ ಇಷ್ಟ ಅಂತಿದ್ರು ಗೌಡ್ರು . Laughing out loud
+++++++++++

*ಏನ್ ಗುರು ಖೇಣಿ ಆಪರೇಷನ್ ಕೊಳೆಗೇರಿ ಶುರು ಮಾಡಿಬಿಟ್ಟಿದ್ದಾರೆ .

-ಅವರಿಗೆ ಗೊತ್ತು ಕಮಲ ಅರಳೋದು ಅಲ್ಲೇ ಅಂತ .
+++++++++++

*ಮಹಾಸಂಗ್ರಾಮದ ಅಂತಿಮ ಲೆಕ್ಕಾಚಾರ ಶುರು .

-ಲೆಕ್ಕ ಏನೋ ಇರಬಹುದು ,'ಆಚಾರದ ' ಬಗ್ಗೆ ಮಾತಾಡೋದು ಸ್ವಲ್ಪ ಕಷ್ಟವೇ .
++++++++++

*ಆಡ್ವಾಣಿಯವರನ್ನು ಪ್ರಧಾನಿಯಾಗಿ ಒಪ್ಪಲು ಸಿದ್ಧವಿರುವ ಯಾವುದೇ ಪಕ್ಷಕ್ಕೆ ಎನ್ ಡಿ ಎ ಬಾಗಿಲು ಮುಕ್ತವಾಗಿದೆ ಅನ್ನುತಿದ್ದಾರಲ್ಲ ಇಲ್ಲೊಬ್ಬರು .

-ಹುಷಾರು ಗುರು ಇದು ಕಲಿಯುಗ ಕಳ್ಳಕಾಕರು ಜಾಸ್ತಿ ಇದ್ದಾರೆ . Laughing out loud
++++++++++

*ಇತ್ತೀಚಿಗೆ ಯಾಕೋ ಎಲ್ಲರೂ 'ಮುಕ್ತ', 'ಮುಕ್ತ' ಅಂದು ಬಡಿದುಕೊಳ್ಳುತ್ತಿದ್ದಾರೆ .

-ಎಲ್ಲಕ್ಕೂ ಚುನಾವಣಾ ಆಯೋಗದ 'ಮುಕ್ತ'ಚುನಾವಣೆಯೇ ಕಾರಣ . Laughing out loud
++++++++++++

*ಜಯಪ್ರದ ಹೋಟೆಲ್ ಮೇಲೆ ಆಯೋಗ ದಾಳಿ !(ಕಾಂಗ್ರೆಸ್ ಪಿತೂರಿ ಎಂದ ನಟಿ )

- ಹಿ ಹಿ ಹೀ ,ಬಿಡಿ ಈ ಪತ್ರಿಕೆಯವರು ತುಂಬಾ ತಮಾಷೆಮಾಡ್ತಾರೆ. Laughing out loud Laughing out loud
+++++++++++

* ಚತುರ್ಥ ರಂಗದಲ್ಲಿ ಭಿನ್ನಮತವಿಲ್ಲವಂತೆ !

-ಸಧ್ಯ 'ಮತವೆ 'ಇಲ್ಲದಿದ್ದರೆ ಸಾಕು ಬಿಡಿ ಅಂದ್ರಂತೆ ಮೇಡಂ . Laughing out loud
++++++++++++

ಮಂಗಳವಾರ, ಮೇ 12, 2009

ನೀವು ಕೇಳಿದಿರಿ

*ನನ್ನ ಕಿಡ್ನಿ ಹಾಳಾಗಿವೆ ಇನ್ನು ಮುಕ್ತ ಜೀವನ ನಡೆಸುವೆ ಅಂದಿದ್ದಾರೆ ಅಮರಸಿಂಗ್ !

-ಮುಕ್ತ ಅಂದ್ರೆ Full open ಅಂತನ ಗುರುವೇ ? Laughing out loud

+++++++++++++++
*ಶ್ರುತಿ ವಿರುದ್ದ ಚಕ್ರವರ್ತಿ ಹೆಂಡ್ತಿ ಸಿಡಿಮಿಡಿ ಅಂತೆ ?

-ಮಹೇಂದರ್ ಎಲ್ಲೋ ತಡಿ ತಡಿ ಅಂದಿರಬೇಕು .

++++++++
*ಮೋದಿ ಕೈ ಕುಲುಕಿದ್ದು ತಪ್ಪಾ! ಅನ್ನುತ್ತಿದ್ದಾರಂತೆ ನಿತೀಶ್ .

-ಕುಲುಕಿದ್ದು ಓಕೆ ,'ಕೈ ' ಯಾಕೆ ಅಂತ ಅನ್ನುತ್ತಿರಬಹುದೇ ಎಡರಂಗ .

+++++
*ವರುಣ್ ವಿರುದ್ದ ಮತ್ತೆ ಕೋರ್ಟಿಗೆ ಹೋಗ್ತಾರಂತೆ ಮಾಯಾ!

-ಇದೊಳ್ಳೆ ,"ದೇವರು ವರ ಕೊಟ್ರು ಪೂಜಾರಿ ಕೊಡಲೋಲ್ಲ " ಅನ್ನೋ ಹಾಗೈತಲ್ಲ ಗುರುವೇ .

+++++++++
*ನೈಟ್ ರೈಡರ್ಸ್ ತಂಡದಲ್ಲಿ ಮತ್ತೆ ಬಂಡಾಯವಂತೆ ?

-ಇರುವವರೆಲ್ಲರೂ 'ಬಂಡ'ರೇ ಅಂದ ಮೇಲೆ ಬಂಡಾಯವಲ್ಲದೆ ಆದಾಯವೆಲ್ಲಿಂದ ಬರುತ್ತೆ !

+++++++++++++

ಸೋಮವಾರ, ಮೇ 11, 2009

ಬದುಕು ಭಾವ ಮತ್ತು ನಾನು - ೬ ( ನಾ ಕಂಡ ಮೊದಲ ಸಾವು , ದುರ್ದೈವ್ಯ ನನ್ ಅಣ್ಣನದ್ದೇ )

ಅತ್ತಿಂದಿತ್ತ ಓಡಾಡುತಿದ್ದ ನೆಂಟರಿಸ್ಟರು , ಮಾತಿಗೊಮ್ಮೆ ಪಾಪು ಎನ್ನುತಿದ್ದ ಅಪ್ಪ , ಅಡಿಗೆಮನೆಕಡೆ ಹೋದಾಗಲೆಲ್ಲ ಏನು ಬೇಕು ಅಪ್ಪು ಎನ್ನುತಿದ್ದ ಅಮ್ಮ ,ಹೀಗೆ ಅಲ್ಲಿ ಬರಿ ಸಡಗರವೆ . ಹೋದ ತಿಂಗಳು ನಡೆದ ನಮ್ಮ ಮನೆಯ ಗೃಹ ಪ್ರವೇಶದ ಒಂದು ನೋಟ ಇದು ( ನವೀಕರಣಗೊಳಿಸಿದ್ದೆವು). ವಾರದ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಅಕ್ಕ , ಭಾವನ ಆಗಮನ ಎಲ್ಲರ ಮೊಗದಲ್ಲಿನ ಸಂತೋಷವನ್ನು ತುಸು ಹೆಚ್ಚುಗೊಳಿಸಿತ್ತು.ಆದರೆ ಈ ಸಂತಸದ ನಡುವೆ ಆ ಹೆತ್ತಕರಳುಗಳ ಯಾರಿಗೂ ಹೇಳಿಕೊಳ್ಳದ ತೊಳಲಾಟವನ್ನ ಯಾರು ಗಮನಿಸಿರಲಿಲ್ಲ ,ಆದರೆ ನಾನು ಗಮನಿಸಿದ್ದೆ .(ಎಷ್ಟಾದರೂ ನನ್ ಅಪ್ಪ ಅಮ್ಮ ಅಲ್ಲವೇ ).ಅದುವೇ ೪ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ನನ್ ಅಣ್ಣನ ನೆನಪು .

                     ಎಲ್ಲವೂ ಸರಿಯಾಗೇ ನಡೆಯುತ್ತಿತ್ತು , ನಾನಾಗಲೆ ನನ್ನ ಮೊದಲ ವರ್ಷದ ತಾಂತ್ರಿಕ ಶಿಕ್ಷಣದ ಪರೀಕ್ಷೆ ಮುಗಿಸಿದ್ದೆ (ಡಿಪ್ಲೋಮಾ ),ಶೃಂಗೇರಿಯಲ್ಲಿ ಸಾಮವೇದ ಪಾಠ ಕಲಿಯುತಿದ್ದ ಅಣ್ಣನ ೩ ನೇ ವರ್ಷದ ಅಂತಿಮ ಹಂತದಲ್ಲಿತ್ತು .ಇನ್ನೊಂದು ವಾರದಲ್ಲಿ ಅಣ್ಣನ ಪರೀಕ್ಷೆಯು ಇತ್ತು . ಅವನಿಗೆ ಪರೀಕ್ಷೆ ಮುಗಿದರೆ ನನಗೆ ಖುಷಿ . ಒಂದು ಅವ ಮನೆಗೆ ಬರುತ್ತಾನೆ ಎಂದು , ಇನ್ನೊಂದು ತುಂಬಾ ಲಗ್ಗೇಜ್ ಇರುತ್ತದ್ದರಿಂದ ಅವನನ್ನು ಕರೆದುಕೊಂಡು ಬರಲು ನಾನು ಅಲ್ಲಿಗೆ ಹೋಗಬೇಕಾಗುತ್ತಿತ್ತು . ನಾನೋ ಒಂದು ೪ ದಿನ ಮೊದಲೇ ಹೋಗಿ ಅಲ್ಲಿ ಜಾಂಡ ಉರುತಿದ್ದೆ.ಆರಾಮಾಗಿ ಇಡಿ ಮಠವೆ ನನ್ನದೇನೂ ಅನ್ನೋ ಭಾವದಲ್ಲಿ ಓಡಾಟ ನಂದು (ಪಾಠಶಾಲೆ ವಿದ್ಯಾರ್ಥಿ ಗಳಿಗೆ ಎಲ್ಲಿಯೂ no entry ಇರಲಿಲ್ಲ ).

                              ಚಿಕ್ಕದಿನಿಂದಲೂ ನಾನು, ಅಣ್ಣ ಹೊಡೆದಾಡಿ ಕೊಂಡೆ ಬೆಳೆದೋರು . ಅದ್ರು ನನಗೆ ಅಣ್ಣನ ಹಿಂದೆ ಇರ್ಬೇಕು , ಅವ ಎಲ್ಲಿ ಇದಾನೋ ನನ್ ಅಲ್ಲೇ , ಕೆಲವೊಂದು ಸಲ ಅದೇ ನನ್ನ ಮತ್ತು ಅವನ ಹೊಡೆದಾಟಕ್ಕೆ ಕಾರಣವಾಗುತ್ತಿತ್ತು .ಕೆಲವೊಂದು ನನ್ನ ಹಠಮಾರಿತನದಿಂದ ಅವನಿಗೆ ಅಪ್ಪನಿಂದ ಹೊಡೆತ ಬೀಳುತ್ತಿತ್ತು . ಚಿಕ್ಕವನದ್ದರಿಂದ ನಾನೇ ತಪ್ಪು ಮಾಡಿದ್ರು ಕೆಲವೊಮ್ಮೆ ಅವನಿಗೆ ಹೊಡ್ತ ಬಿಲ್ತಿತ್ತು . S S L C ಅದ ನಂತರ ಓದಿನಲ್ಲಿ ಅಷ್ಟೇನೂ ಜೋರರಾಗಿರದಿದ್ದ ಅಣ್ಣನನ್ನು ಮಂತ್ರ ಕಲಿಸೋಕ್ಕೆ ಕಲಿಸೋದು ಅಂತ ಅಪ್ಪ ನಿಶ್ಚಯಿಸಿದ್ದರು (ಮುಂದೆ ಓದಿಸುವ ಮನಸಿದ್ದರು ಆರ್ಥಿಕ ಸಂಕಷ್ಟವಿದ್ದ ಕಾರಣ ಅದನ್ನು ಕೈ ಬಿಟ್ಟಿದ್ದರು ). ಹೇಗಾದ್ರು ಆಗಲಿ ನನ್ ತರ ಮಕ್ಕಳು ಕಷ್ಟ ಬಿಲ್ಬಾರ್ದು ಅನ್ನೋದು ಅಪ್ಪನ ಅಭಿಲಾಷೆ ಆಗಿತ್ತು . ಆ ದೃಷ್ಟಿಅಲ್ಲಿ ಹೇಳುವದಾದರೆ ಅವರ ನಿರ್ಧಾರ ಸರಿಯಾಗೇ ಇತ್ತು .ನಾನಿನ್ನು ೮ ಮುಗಿಸಿ ೯ ಕ್ಕೆ ಕಾಲಿಟ್ಟಿದ್ದೆ .

                                                                           ನಮ್ಮ ಗೋತ್ರದ ಪ್ರಕಾರ ನಮ್ಮದು ಋಗ್ವೇದವಾದರೂ ಅಲ್ಲಿನ ಅಧ್ಯಕ್ಷರ ಅಭಿಲಾಷೆ ಅಂತೆ ಅಣ್ಣನನ್ನು ಸಾಮವೇದಕ್ಕೆ ಸೇರಿಸಿ ಬಂದ್ರು ಅಪ್ಪ . ನಾನು ೨ ವಾರಕ್ಕೊಮ್ಮೆ ಅಪ್ಪ , ಅಮ್ಮ ಮಾಡಿದ ತಿಂಡಿಗಳನೆಲ್ಲ ಹೇರಿಕೊಂಡು ಹೋಗಿ ಅಣ್ಣನಿಗೆ ಕೊಟ್ಟು ಬರುತಿದ್ದೆ . ಹೋದಾಗಲೆಲ್ಲ ಅಣ್ಣ ಕೊಡುತಿದ್ದ ಹತ್ತೋ ಇಪ್ಪತ್ತು ರೂಪಾಯಿಯೇ ನನಗೆ ೧೦೦೦ ಕ್ಕೆ ಸಮನಾಗಿತ್ತು ನನಗೆ .೨ ನೆ ವರ್ಷಕ್ಕೆ ಕಾಲಿಡುತ್ತಲೇ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದ ಅಣ್ಣನ ಕೈ ಅಲ್ಲಿ ಅಲ್ಪ ಸ್ವಲ್ಪ ಕಾಸು ಓಡಾಡುತಿತ್ತು.ನಾನು ಕೂಡ S S L C ಅಲ್ಲಿ ಅಷ್ಟೇನೂ ಹೇಳಿಕೊಳ್ಳುವುದಲ್ಲದಿದ್ದರು ಶೇಕಡಾ ೭೫ ರಸ್ಟು ಅಂಕ ಪಡೆದು ಪಾಸಾದೆ .ಮೊದಲೇ ಅಂದುಕೊಂಡಂತೆ ನಾನು ಡಿಪ್ಲೋಮಾ ಸೇರುವುದು ಅಂದು ನಿರ್ಧರಿಸಿದ್ದರು ಅಪ್ಪ .ಸರ್ಕಾರಿ ಸೀಟು ಭದ್ರಾವತಿ ಅಲ್ಲಿ ಸಿಕ್ಕಿತಾದ್ರು ಮನೆಯಲ್ಲಿ ಯಾರು ಇಲ್ಲ ಅಗುಂತೆ ಅಂತ ತೀರ್ಥಹಳ್ಳಿಯ ಖಾಸಗಿ ಕಾಲೇಜಿಗೆ ಸೇರಿಸಿದರು ಅಪ್ಪ .ಅಂದುಕೊಂಡಂತೆ ಪ್ರಥಮ ಸೆಮಿಸ್ಟರ್ ಅಲ್ಲಿ ಪ್ರಥಮ ದರ್ಜೆ ಅಲ್ಲೇ ಪಾಸಾದೆ ( S S L C ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಅದೊಂದು ಸಾಧನೆಯೇ ಆಗಿತ್ತು ).

                                   ೨ ನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಯಲ್ಲಿ ಕುಳಿತಿದ್ದ ನನಗೆ , ಪಕ್ಕದ ಮನೆಯವರ ಕೂಗು ಕೇಳಿತು .ಅಣ್ಣನ ಫೋನ್ ಬಂದಿದೆ ಅಂತ ಅಂದ್ರು ಅವರು ,ಅಲ್ಲಿಯೇ ಕುಳಿತಿದ್ದ ಅಪ್ಪ ಎದ್ದು ಮಾತಾಡಲು ಹೋದರು (ನಮ್ಮ ಮನೆಯಲ್ಲಿ ಆಗಿನ್ನೂ ಫೋನ್ ಇರ್ಲಿಲ್ಲ ).ಮನೆಗೆ ಬಂದ ಅಪ್ಪ ೩ ನೇ ವರ್ಷದ ಪರೀಕ್ಷೆಯಲ್ಲಿ ಅಣ್ಣ ಫೇಲ್ ಅದನೆಂದು , ಅಲ್ಲಿಂದ ಮೈಸೂರುಗೆ ಹೋಗಿ ವಾರ ಬಿಟ್ಟು ಮನೆಗೆ ಬರುವುದಾಗಿ ಹೇಳಿದನೆಂದು ಅಂದ್ರು .ಯಾವಾಗಲು ಮೂಗಿನಮೇಲೆ ಸಿಟ್ಟು ಇರುತಿದ್ದ ಅಪ್ಪ ಅಂದೇಕೋ ಶಾಂತಚಿತ್ತರಾಗಿದ್ದರು. ವಾರ ಬಿಟ್ಟು ಅಣ್ಣ ಮನೆಗೆ ಬಂದ , ಅಪ್ಪನೆನು ಅನ್ನಲಿಲ್ಲ .

                                                        ಒಂದು ರಾತ್ರಿ ಆಗಿದ್ದೆಲ್ಲ ಆಯಿತು ಮತ್ತೆ ಹೊಸದಾಗಿ ಋಗ್ವೇದವನ್ನು ಹರಿಹರಪುರ ಮಠದಲ್ಲಿ ಕಲಿ ಎಂದು , ನಾಳೆ ಬೆಳಿಗ್ಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಅಂದ್ರು ಅಣ್ಣನು ಹು ಎಂದ.ಮಾರನೆದಿನ ಅಂದೇ ಜೂನ್ ೩ , ೨೦೦೫ ಅಪ್ಪ ಬೇಗನೆ ಹರಿಹರಪುರಕ್ಕೆ ಹೋದ್ರು . ಅವರು ಅತ್ತ ಹೋದ ಮೇಲೆ ಸರಿಯಾಗಿ ಹೇಳದಿದ್ರು ತಾನು ಅಲ್ಲಿನ ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ ಅಂತ ಸೂಕ್ಷ್ಮ ಮಾತುಗಳಲ್ಲಿ ಅಣ್ಣ ಅಂದಿದ್ದ . ೧೨.೧೫ ಕ್ಕೆ ಸರಿಯಾಗಿ ಅಪ್ಪ ಬಂದ್ರು , ಹಾಗೆ ಅಲ್ಲಿಂದ Application form ಕೂಡ ತಂದಿದ್ರು . ಮುಂದಿನ ಸೋಮವಾರ ಒಂದು ಸಣ್ಣ ಪರೀಕ್ಷೆ ಇರುವುದೆಂದು , ಫಾರಂ ಬರ್ತಿ ಮಾಡಲು ಅಣ್ಣನ ಕೈಗಿತ್ತರು. ಎಲ್ಲವನ್ನು ಬರ್ತಿಮಾಡಿ ಅಪ್ಪನ ಕೈಗೆ ವಾಪಸಿಟ್ಟ ಅಣ್ಣ .ನನ್ನದಿನ್ನು ಸ್ನಾನವಾಗಿರಲಿಲ್ಲ , ನಾನು ಎದ್ದು ಅತ್ತ ಹೊರಟೆ . ಏನಾಯಿತೋ ಗೊತ್ತಿಲ್ಲ ಜಗುಲಿಯಲ್ಲಿ ಕೂತಿದ್ದ ಅಪ್ಪ ಜೋರಾಗಿ ಅಣ್ಣನಿಗೆ ಬೈಯುವುದು ಕೇಳುತಿತ್ತು.ಅಣ್ಣ ಅಂಗಳದಲ್ಲಿದ್ದ .ಸ್ವಲ್ಪ ಹೊತ್ತಿನ ನಂತರ ನಾನು ಸ್ನಾನ ಮುಗಿಸಿ ಹೊರಬಂದೆ. ಅಣ್ಣನ ಕಣ್ಣನ್ಚಿನಲ್ಲಿ ನೀರು ಮೂಡಿತ್ತು .ಸ್ವಲ್ಪ ಮೌನವೇ ಇತ್ತು ಅಲ್ಲಿ , ಯಾರು ಮಾತಾಡುತ್ತಿರಲಿಲ್ಲ . ಘಂಟೆ ೧.೧೦ ಕ್ಕೆ ಅಮ್ಮ ಊಟ ಹಾಕಿದ್ರು ,ಎಲ್ಲರು ಒಟ್ಟಿಗೆ ಕೂತು ಊಟ ಮುಗಿಸಿದೆವು .

             ಊಟವಾದ ನಂತರ ಮಲಗುವುದು ಅಪ್ಪನ ಅಭ್ಯಾಸ .ನಾನೋ ಅಣ್ಣನ ಬಿಟ್ಟು ಇರುವವನೇ ಅಲ್ಲ .ಅಷ್ಟರಲ್ಲಿ ಎದುರುಗಡೆ ಇಂದ ಅಯ್ಯ ಎಂಬ ಕೂಗು ಕೇಳಿತು . ಮಲಗಿದ್ದ ಅಪ್ಪ ಎದ್ದು ಹೊರನೆಡೆದರು, ನಾನು ಕೂಡ ಯಾರು ಎಂಬ ಕುತೂಹಲದಿಂದ ಹಿಂದಗಡೆ ಅಣ್ಣನ ಒಟ್ಟಿಗೆ ಏನೋ ಮಾತಾಡುತ್ತ ಕುಳಿತವನು ಎದ್ದು ಹೋದೆ .ಅದೇ ನಾನು ಮಾಡಿದ ಬಹುಶಃ ನನ್ನ ಜೀವನದ ದೊಡ್ಡ ತಪ್ಪು .ಅಲ್ಲಿ ನೋಡಿದರೆ ಹುಲ್ಲು ಹಾಕುವವನು , ಅತ್ತ ಕಡೆ ಎಲ್ಲೋ ಹೊರಟಿದ್ದವನು ಹಾಗೆಯೇ ಅಪ್ಪನನ್ನು ಮಾತಾಡಿಸಿಕೊಂಡು ಹೋಗೋಣವೆಂದು ಕೂಗಿದ್ದ. ಹೀಗೆ ಅದು ಇದು ಮಾತಾಡಿ ಆತ ಹೊರಟ, ಅಪ್ಪ ಮತ್ತೆ ಮಲಗಿಕೊಂಡರು . ನಾನು ಅಣ್ಣನನ್ನು ಹುಡುಕಿಕೊಂಡು ಹಿಂದಗಡೆ ಬಂದೆ .

                                       ಅಲ್ಲಿರಲಿಲ್ಲ ಆತ.ಅಮ್ಮನನ್ನು ಕೇಳಿದೆ ಅಲ್ಲೇ ಟಾಯ್ಲೆಟ್ ಗೆ ಹೋಗಿರಬೇಕೆಂದು ಅಂದರು ಅಮ್ಮ (ನಮ್ಮನೆ ಟಾಯ್ಲೆಟ್ ರೂಂ ನ ಬಾಗಿಲು ಹಾಕಿದ ತಕ್ಷಣ ಬಡ್ ಎಂದು ಸದ್ದು ಮಾಡುತ್ತೆ ).ಆ ಸದ್ದು ಕೇಳಿಸಿಕೊಂಡು ಅಮ್ಮ ಹಾಗೆನ್ದಿದ್ದರು . ಅದು ಅಲ್ಲದೆ ಒಳಗಡೆ ನಲ್ಲಿ ಬಿಟ್ಟಿದ್ದು ,ನೀರು ಬೀಳುವ ಶಬ್ದ ಬೇರೆ ಕೇಳುತಿತ್ತು . ಆದರೆ ವಾಸ್ತವವೇ ಬೇರೆ ಆಗಿತ್ತು , ನಲ್ಲಿಯ ನೀರು ಬಿಟ್ಟು ಹೊರಗಡೆ ಇಂದ ಬಾಗಿಲು ಹಾಕಿ ಅದಕ್ಕೊಂದು ಮರದ ಪೀಸ್ ಅಡ್ಡ ಇಟ್ಟಿದ್ದ ಅಣ್ಣ . ಅವ ಒಳಗೆ ಇರಲಿಲ್ಲ .ನಾನು ಸ್ವಲ್ಪ ಹೊತ್ತು ನೋಡಿ ಆಮೇಲೆ ಅತ್ತ ಕಡೆ ಹೋಗಿ ನೋಡಿದಾಗ ಅವ ಅಲ್ಲಿರಲಿಲ್ಲ .ಎಲ್ಲಿಹೋದ ಎಂದು ಪಕ್ಕದ ಮನೆಗೆನಾದರು ಟಿವಿ ನೋಡಲು ಹೋದನೇನೋ ಎಂದು ಅಲ್ಲಿ ಹೋಗಿ ನೋಡಿದೆ ಅಲ್ಲೂ ಇಲ್ಲ .ಈಗ ನಿಜವಾಗಿ ನನಗೆ ಸ್ವಲ್ಪ ಗಾಬರಿಆಗಿತ್ತು .

                         ಅಮ್ಮನ ಬಳಿ ಬಂದು ಹೇಳಿದೆ , ಮಾಮೂಲಿನಂತೆ ಅಮ್ಮ ಒಂದೆರಡು ಬಾರಿ "ಉದಯ ,ಉದಯ "(ಇದು ಅವನ ಹೆಸರು ) ಎಂದು ಕರೆದರು . ಹೂ ಹೂ ಪ್ರತಿಕ್ರಿಯೆಯೇ ಇಲ್ಲ . ನನ್ನ ಮನೆ ಸುತ್ತ ತೋಟ ಇರುವುದರಿಂದ ಸಹಜವಾಗಿ ಪ್ಯಾರಲೇ ಹಣ್ಣು ಜಾಸ್ತಿ .ಅಣ್ಣನಿಗೆ ಅದೆಂದರೆ ತುಂಬಾ ಇಷ್ಟ .ಅದನೆಲ್ಲೋ ತಿನ್ನಲು ಹೋಗಿರಬೇಕು ಅಂದರು ಅಮ್ಮ . ಹಾಗಾದ್ರೆ ನಾನು ನೋಡಿಕೊಂಡು ಬರುತ್ತೇನೆ ಇರು ಎಂದು ಹೊರಟೆ , ಅದೇನು ಅನ್ನಿಸಿತೋ ನಾನು ಬರುತ್ತೇನೆ ಅಂದ್ರು ಅಮ್ಮ .ಇಬ್ಬರು ಮಾತಾಡುತ್ತ ಜಾಸ್ತಿ ಪ್ಯಾರಲೇ ಗಿಡವಿರುವತ್ತ ಹೊರೆಟೆವು .ಅಲ್ಲೇ ಒಂದು ಕಾಲುವೆ ಕೂಡ ಇದ್ದು ದೊಡ್ಡದಾದ ಗೋಳಿಮರ, ಒಂದು ಚಿಕ್ಕ ಕೆರೆ ಕೂಡ ಇದೆ .ನೋಡಲು ಸ್ವಲ್ಪ ಭಯಾನಕವಾಗೆ ಕಾಣುತ್ತೆ ಜಾಗ ಅದು .

                                  ನನ್ನ ಮನಸ್ಸು ಏನು ಯೋಚಿಸುತಿತ್ತೋ ಅದೇ ಆಗಿತ್ತು , ತಿಳಿದಾದ ಸೊಪ್ಪಿನ ಹಗ್ಗದಲ್ಲಿ ಅಣ್ಣನ ಕತ್ತು ನೇತಾಡುತ್ತಿತ್ತು.ಆ ಕ್ಷಣ ನಾನು ಕಿರುಚಿದ ಜೋರಿಗೆ ೧ ಕಿ ಮಿ ಸುತ್ತಲಿನಲ್ಲಿದ್ದ ಎಲ್ಲರು ಬಂದಿರಬಹುದು . ನಾನೆ ನಿಯಂತ್ರಣದಲ್ಲಿಲ್ಲ ಇನ್ನು ಅಮ್ಮನನ್ನು ಹೇಗೆ ಸುಧಾರಿಸಲಿ . ತಕ್ಷಣ ಓಡಿ ಹೋಗಿ ಅಣ್ಣನನ್ನು ಎತ್ತಿ ಹಿಡಿದುಕೊಂಡೆ.ಅಮ್ಮ ಕೂಡ ಓಡಿ ಬಂದರು , ಅಮ್ಮನಹತ್ತ್ರಿರ ಹಿಡಿದುಕೊಳ್ಳಲು ಹೇಳಿ ಕತ್ತಿನಿಂದ ಹಗ್ಗ ಬಿಚ್ಚಲು ಪ್ರಯತ್ನಿಸಿದೆ , ಹೂ ಹೂ ಆಗಲಿಲ್ಲ .ಅಷ್ಟರಲ್ಲಾಗಲೇ ನಾನು ಕೂಗಿದ ಜೋರಿಗೆ ಅಕ್ಕ ಪಕ್ಕದ ತೋಟದಲ್ಲಿ ಕೆಲಸ ಮಾಡುತಿದ್ದವರು, ಅಪ್ಪ ಎಲ್ಲರು ಬಂದಾಗಿತ್ತು .ಹಗ್ಗ ಬಿಚ್ಚಿ ಮನೆಗೆ ಎತ್ತಿಕೊಂಡು ಹೋದೆವು.

                     ಅದೇನೋ ಹೇಳಲು ಹಾತೊರೆಯುವನ್ತಿತ್ತು ಕಣ್ಣು .ಬಹುಶ ನಾನು ದುಡುಕಿದೆನೆಂದೋ ? ಅಥವಾ ಅಪ್ಪನನ್ನು ಆವಾಗ ಬೈದಿರಲ್ಲ ಈಗ ಹೇಗೆ ಎಂದೋ ? ಅಥವಾ ಅಪ್ಪ ಅಮ್ಮ ನನ್ನು ಚೆನ್ನಾಗಿ ನೋಡಿಕೋ ಎಂದೋ ? ಇಂದಿಗೂ ಅರಿಯಲಾಗಿಲ್ಲ ನನಗೆ .ಮತ್ತೊಂದೆರಡು ಕ್ಷಣ ಅಷ್ಟೇ ಇರುವುದೆಲ್ಲವ ಬಿಟ್ಟು , ಮುಕ್ತಿಯಡೆಗೆ ಹೊರಟಾಗಿತ್ತು ಆತ್ಮ . ಮೊದಲ ಬಾರಿಗೆ ಅಣ್ಣ ಎಂದು ಕರೆದಿದ್ದೆ , ಕೇಳಿಸಿಕೊಳ್ಳಲು ಅವನೇ ಇರಲಿಲ್ಲ ( ಅದುವರೆಗೂ ಹೆಸರು ಹಿಡಿದೆ ಕರೆಯುತಿದ್ದೆ ).

                  ಕೇವಲ ಒಂದು ೫ ಇಂಚು ಮಾತ್ರ ಮೇಲಿದ್ದ ನೆಲದಿಂದ ಅಷ್ಟೇ , ಅದಲ್ಲದೆ ೨ ನಿಮಿಷವೂ ಆಗಿರಲಿಲ್ಲ ಅಷ್ಟರೊಳಗೆ ನಾವಲ್ಲಿಗೆ ಹೋಗಿದ್ದೆವು .ವಿಧಿ ಮುಂದೆ ನಾವ್ಯಾರು ಅಲ್ಲವೇ ? ಬಯಸಿದ್ದನ್ನು ಪಡೆದುಕೊಳ್ಳುವ ಶಕ್ತಿ ಇರುವುದು ಅದ್ಕ್ಕೊಂದೆ .ಅದನ್ನ ಅದು ಪಡೆದುಕೊಂಡಿತ್ತು .ಹೊರಗೆ ಕಲ್ಲಂತೆ ಕಾಣುವ ಅಪ್ಪನ ನಿಜ ಮನಸಿನ ಅರಿವು ನನಗಾಗಿತ್ತು ಅಂದು , ಅದನ್ನೇ ಅರಿಯದೆ ಹೋದ ಆತ .

                          ನಿನ್ನೆ ಅಮ್ಮಂದಿರ ದಿನ , ಅದರ ಬಗ್ಗೆ ಗೊತ್ತೋ ಇಲ್ಲವೊ ನನ್ ಅಮ್ಮನಿಗೆ ,ಗೊತ್ತಿಲ್ಲದಿದ್ದುದ್ದೆ ಒಳಿತು ಬಿಡಿ.ಬರುವ ಜೂನ್ ೩ ಕ್ಕೆ ಆತ ನಮ್ಮಿಂದ ದೂರ ಸರಿದು ೫ ವರ್ಷವಾಗುತ್ತೆ, ಇನ್ನು ಮರೆಯಲಾಗುತ್ತಿಲ್ಲ . ಉಳಿದಿದೆ ಒಂದು ಪ್ರಶ್ನೆ ಕೇಳಲು ಅವನನ್ನು ಯಾಕೆ ಹೀಗೆ ಮಾಡಿದೆ ನೀನು ಎಂದು ?

"ನಂಬಿಕೆಯೇ ನಂಬಲೇ ನಾ ನಿನ್ನ "

ಬಸ್ ಬರೋ ಟೈಮ್ ಆಯಿತು ಏಳೋ ..ಅತ್ತ ಅಮ್ಮನ ಕೂಗು ಕೇಳಿದಾಕ್ಷಣ ...ಅಬ್ಬಾ ಎಷ್ಟು ಹೊತ್ತು ಮಲಗಿ ಬಿಟ್ಟೆ ಎಂದು ಬಿರ ಬಿರನೆ ಎದ್ದು ಟೈಮ್ ನೋಡಿದೆ ...ಆಗಲೇ ೪.೧೫ ಆಗಿತ್ತು .೫ ಕ್ಕೆ ಕೊನೆ ಬಸ್ ನಮ್ಮೂರಿಂದ ತೀರ್ಥಹಳ್ಳಿಗೆ (ಶಿವಮೊಗ್ಗದಿಂದ ರಾತ್ರಿ ೧೦ ಕ್ಕೆ ಹೊರಡುವುದಾದರು,ಬಸ್ ವ್ಯವಸ್ತೆ ಇಲ್ಲದ ಕಾರಣ ಮನೆಇಂದ ಬೇಗನೆ ಹೊರಡಬೇಕಾದ ಪರಿಸ್ಥಿತಿ ).ಇನ್ನು ಏನು ಪ್ಯಾಕ್ ಮಾಡ್ಕೊಂಡೆ ಇಲ್ವಲ್ಲೋ ಸೋಮಾರಿ ಎಂದು ಹುಸಿ ಕೋಪ ತೋರಿಸುತ್ತಲೇ ಅಮ್ಮನೇ ಎಲ್ಲ ನನ್ನ ಬ್ಯಾಗ್ಗೆ ತುಂಬುತ್ತಿದ್ದರು ....ನಾಡಿದ್ದು ಹೇಗೂ ಬರ್ತಾನಲ್ಲ ೧ ವಾರಕ್ಕೆ ಎಸ್ಟ್ ಬೇಕೋ ಅಸ್ಟು ಬಟ್ಟೆ ತುಂಬು ಸಾಕು , ಎದುರುಗಡೆ ಮನೆ ಕೆಲಸ ಮಾಡಿಸುತಿದ್ದ ಅಪ್ಪನ ಅಪ್ಪಣೆ ಅಮ್ಮನಿಗೆ(ಹಿಂದಿನ ದಿನವಸ್ಟೇ ಅಕ್ಕನ ಮದುವೆಮುಗಿಸಿಕೊಂಡು ಬಂದಿದ್ದರಿಂದ ಸ್ವಲ್ಪ ತಿಂಡಿಯೂ ಇತ್ತು ,ಅದನ್ನು ಅಮ್ಮ ತುಂಬುತ್ತಿದ್ದರು ) .
ಹಾಸಿಗೆ ಬಿಡಲು ಮನಸಿಲ್ಲದಿದ್ದರು ಸಮಯದ ಅರಿವಾಗಿ ಬೇಗನೆ ತಯಾರಿಯಾದೆ.ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿ ,ನನ್ನ ಯಮ ಗಾತ್ರದ ಬ್ಯಾಗ್ ಹೆಗಲ ಮೇಲೇರಿಸಿ ಹೊರಟೆ .ಪ್ರತಿ ಸಲಿ ಮನೆಗೆ ಬಂದಾಗಲು ಸ್ವಲ್ಪ ದೂರ ನನ್ನೊಟ್ಟಿಗೆ ಬರುವುದು ಅಮ್ಮನ ಅಬ್ಯಾಸ (ಮನೆಇಂದ ಬಸ್ ಸ್ಟಾಪ್ ಗೆ ೧ ಕಿ ಮಿ ಕಾಲ್ನಡಿಗೆ ).
ಹಳ್ಳಿ ಎಂದ ಮೇಲೆ ಕೇಳಬೇಕೆ ದಾರಿ ಯಲ್ಲಿ ಸಿಗುವ ಪ್ರತಿಯೋಬ್ಬರಿಂದಲೂ ಒಂದೇ ಪ್ರಶ್ನೆ ಹೊರಟಿರ ಅಪ್ಪು? (ಸಾಮಾನ್ಯವಾಗಿ ನಮ್ಮ ಕಡೆ ಎಲ್ಲ ಬ್ರಾಹ್ಮಣ ಹುಡುಗರಿಗೂ ಅಪ್ಪು ಎಂದೇ ಸಂಬೋದಿಸುತ್ತಾರೆ ) ಹ ಹ .ಎಂದು ಉತ್ತರಿಸುತ್ತಲೇ ಕೊನೆಗೂ ನನ್ನ ಎಂದಿನ ಚಾಳಿಅಂತೆ ಓಡಿಬಂದೆ ಬಸ್ ಹತ್ತಿದ್ದುಆಯಿತು .
ಕೊನೆ ಬಸ್ ಅದ್ದರಿಂದ ಸ್ವಲ್ಪ ರಶ್ ಇತ್ತು .ಅದ್ರು ಒಂದು ಸೀಟು ಗಿಟ್ಟಿಸುವಲ್ಲಿ ಸಪಲನಾದೆ.ಅಂತು ದಡ ಬಡ ದಡ ಬಡ ಸದ್ದು ಮಾಡುತ್ತ ಬಸ್ಸುತೀರ್ಥಹಳ್ಳಿ ತಲುಪಿತು .ಅಲ್ಲಿಂದ ಶಿವಮೊಗ್ಗ ಬಸ್ಸು ಹತ್ತಿ ಕುಳಿತೆ .
ತೀರ್ಥಹಳ್ಳಿ ,ಶಿವಮೊಗ್ಗ ದಾರಿ ಎಂದ ಮೇಲೆ ಕೇಳಬೇಕೆ .ದಾರಿ ಯುದ್ದಕ್ಕು ಹಳ್ಳ ,ಕಾಡು.ಆಲ್ ಅಲ್ಲಿ ರಸ್ತೆಯ ಜೊತೆ ಮಾತು ಆಡುತ್ತಾ ಹರಿವ ತುಂಗೆ ,ಗಜರಾಜನ ಬಿಡು ಸಕ್ರೆಬೈಲು ,ಪಕ್ಷಿಗಳ ತವರು ಮಂಡಗದ್ದೆ ,ಆಲ್ ಅಲ್ಲಿ ಸಿಗುವ ಅಡಿಕೆ ತೋಟ ,ಮನುಷ್ಯನ ಶಕ್ತಿ ಪ್ರದರ್ಶನದ ಪ್ರತೀಕ ಗಾಜನೂರು ಅಣೆಕಟ್ಟು ,ಹೊಸಹಳ್ಳಿ (ಸಂಸ್ಕ್ರತದ ತವರೂರಾದ ಮತ್ತುರಿನ ಅವಳಿ ಗ್ರಾಮ ).ಹೀಗೆ ಕಣ್ಣಿಗೆ ಹಬ್ಬ .
ಹಾಗೆಯೆ ದಿಗಂತ ದಲ್ಲಿ ಸೂರ್ಯ ತನ್ನ ಕೆಲಸ ಮುಗೀತು ಎಂಬ ಸಂತೋಷ ದೊಂದಿಗೆ ಮನೆಗೆ ಹೊರಡುವ ಅವಸರದಲ್ಲಿದ್ದ .
ಒಮ್ ಒಮ್ಮೆ ಅನ್ನಿಸಿದ್ದುಂಟು ಸೂರ್ಯನಿಗೂ ರಾತ್ರಿ ಪಾಳಿ ಇದ್ದಿದ್ದರೆ (ಎಂಥ ತರ್ಲೆ ಪ್ರಶ್ನೆ ಎಂದು ಸುಮ್ಮನಾಗುತ್ತಿದ್ದೆ ).
ದಡಕ್ ಎಂಬ ಬ್ರೇಕ್ನ ಸದ್ದು ಆಲೋಚನಾ ಲಹರಿಯಲ್ಲಿದ್ದ ನನ್ನನ್ನು ವಾಸ್ತವಕ್ಕೆ ತಂದು ನಿಲ್ಲಿಸಿತು ,ನಾನು ಶಿವಮೊಗ್ಗ ತಲುಪಿಆಗಿತ್ತು ,ಸಮಯ ಸರಿಯಾಗಿ ೮.೩೦ ...
೧೦.೩೦ ಕ್ಕೆ ಬಸ್ ಅಲ್ಲಿಯವರೆಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ,ಹೊಟ್ಟೆಯ ನೆನಪಾಗಿ ಅಲ್ಲಿಯೇ ಎದುರುಗಿದ್ದ ಉಡುಪಿ ಬ್ರಾಹ್ಮಣರ ಹೋಟೆಲ್ ಒಳ ಹೊಕ್ಕೆ .........
ಊಟ ಮುಗಿಸಿ ಬಸ್ ಸ್ಟ್ಯಾಂಡ್ ಒಳಗಡೆ ಬಂದೆ ಹಾಗೆಯೇ ಒಂದು ಸುತ್ತು ಹಾಕಿ ಅಲ್ಲೇ ಹಾಕಿದ್ದ ಬೆಂಚ್ ಮೇಲೆ ಕುಳಿತೆ .ಸ್ವಲ್ಪ ಸಮಯ ಕಳೆದಿರಬೇಕು ಯಾರೋ ಒಬ್ಬ ವ್ಯಕ್ತಿ ನನ್ನ ಪಕ್ಕ ಬಂದು ಕುಳಿತ (ವಯಸ್ಸು ಸುಮಾರು ೨೧ ರಿಂದ ೨೪ ಇರಬೇಕು ಅಸ್ಟೆ).ನಾನೋ ಈ ಲೋಕದ ಅರಿವೇ ಇಲ್ಲದಂತೆ ಯಾವೊದೋ ಸಿನಿಮಾ ಹಾಡು ಗುನುಗುತ್ತಿದ್ದೆ , ಆತನೇ ಬೆಂಗಳುರಿಗ ಎಂದ .ಹೌದು ಎಂದೇ .....ಮುಂದುವರೆಸಿ ಚಿಕ್ಕಮಗಳುರಿಗೆ ಇಲ್ಲಿಂದ ಎಷ್ಟು ದೂರ ಇರಬಹುದು ಎಂದ ,೧೦೦ ಕಿ ಮಿ ಇದೆ ಅನ್ಸುತ್ತೆ ಅಂದೇ .ಈಗ ನಾನೆ ನೀವು ಯಾವ ಕಡೆ ಅಂದೇ ,ಬೆಂಗಳೂರಿಗೆ ಹೋಗಬೇಕಿತ್ತು ಆದರೆ ಇರುವ ದುಡ್ಡೆಲ್ಲ ಕಳೆದುಕೊಂಡೆ ಅಂದ ,ಚಿಕ್ಕಮಗಳುರಿಗೆ ಹೋಗೋಣವೆಂದರು ದುಡ್ಡಿಲ್ಲ ಅಂದ .ಹೌದ ಎಂದು ಹಳೆ ಹಿಂದಿ ಹಾಡು (ज़िन्दगी के सफ़र में मिल जाते है ..............)ಗುನುಗುತ್ತ ಆತ ಹೇಳಿದಕ್ಕು ನನಗೂ ಸಂಭದವೇ ಇಲ್ಲವೇನೋ ಅನ್ನೋತರ ಕುಳಿತೆ .
ಎದುರಿಗೆ ಹಾಡು ಗುನುಗುತ್ತಿದ್ದರು ಮನಸಲ್ಲಿ ಯೋಚಿಸುತ್ತಿದ್ದೆ ,ನನ್ನ ಬಳಿ ಏನಾದ್ರು ಕೇಳಿದ್ರೆ ........ಕ್ಷಣ ಕಳೆದಿರಲಿಲ್ಲ ಆತ ಕೇಳಿಯೇ ಬಿಟ್ಟ ನಿಮ್ಮಿಂದ ಏನಾದ್ರು ಸಹಾಯ ಆಗುತ್ತ ?ಅಬ್ಬ ........ಒಮ್ಮೆ ನಕ್ಕು ಸುಮ್ಮನಾದೆ .ಮಧ್ಯಾನ್ದಿಂದ ಕೇಳ್ತಾ ಇದೀನಿ ಯಾರು "ನಮ್ಬ್ತಾನೆ " ಇಲ್ಲ .ಅವನ ದ್ವನಿ ಸಣ್ಣದಾಗಿತ್ತು ,ಕಣ್ಣಲ್ಲಿ ಗಂಗೆಯೇ ಹೊರಟಿದ್ದಳು .
ಕಾಸಿಗಿಂತ ನನಗೆ ಹೆಚ್ಚು ಕಾಡಿದ ಪದ "ನಂಬಿಕೆ ".......ಅ ಕ್ಷಣದಲ್ಲಿ ನನ್ ಅವನನ್ನ ನಂಬಿದ್ದೆ ! (ನಮ್ ಅಮ್ಮ ಬೈತಿರುತ್ತಾರೆ ನಿಂದು ಹೆಂಗರುಳು ಯಾರದ್ರು ಅಯ್ಯೋ ಅಂದ್ರೆ ಕೊಟ್ಬಿತೀಯ ,ಯಲ್ಲರೂ ನಿನ್ ತರ ಇರೋಲ್ಲ ನಾಳೆ ಯಾರು ಬೋರೋಲ್ಲ ತಿಳ್ಕೋ ).
ಕಿಸೆಗೆ ಕೈ ಹಾಕಿ ಅದರಲಿದ್ದ ೬೦ ರೂಪಾಯಿಗಳನ್ನೂ ಅವನಿಗೆ ನೀಡಿದೆ (೫೦ ರ ಒಂದು ನೋಟು + ೧೦ ರದ್ದು ಒಂದು ) ಆತ ಮರುದಿನ ಬೆಳಿಗ್ಗೆಯೇ ಅದನ್ನು ಹಿಂತಿರುಗಿಸುವುದಾಗಿ ಹೇಳಿ ನನ್ನ ಫೋನ್ ನಂಬರ್ ತೆಗೆದುಕೊಂಡದ್ದು ಅಲ್ಲದೆ ,ಆತನದ್ದು ನೀಡಿದ (ಅತನದ್ದೆ ಎನ್ನುವುದಕ್ಕೆ ಕಾತರಿ ನನ್ನೆದುರಲ್ಲೇ ಮಿಸ್ ಕಾಲ್ ಮಾಡಿದ್ದ ).ಅಸ್ಟರಲ್ಲಿ ಯಾವೋದು ಒಂದು ಬಸ್ ಬಂತು ತುಂಬಾ ದನ್ಯವಾದಗಳನ್ನು ತಿಳಿಸಿ ಅದನ್ನು ಹತ್ತಿದ .ಇತ್ತ ನಾನು ಬರಬೇಕಿದ್ದ ಬಸ್ ಕೂಡ ಹೊರಡುವ ಸೂಚನೆ ತೋರ್ಸ್ಥಇತ್ತು ..
ಬಸ್ ನಲ್ಲಿ ಕೂತನಂತರ ಯೋಚಿಸತೊಡಗಿದೆ ,"ನಂಬಿಕೆ" ಎಂಬುದು ಎಲ್ಲ ಸಂಭಂದಗಳ ತಳಹದಿಯಲ್ಲವೇ ?
ಅದು ಪ್ರೀತಿಯೇ ಆಗಿರಲಿ ,ಸ್ನೇಹವೇ ಆಗಿರಲಿ ಅಥವಾ ನೆಂಟಸ್ತನ .

ದಿನ ಕಳೆಯಿತು ,ವಾರವೂ ಆಯಿತು .ಅ ಕಡೆ ಇಂದ ಯಾವುದೇ ಕರೆ ಇಲ್ಲ .ದುಡ್ಡು ದೊಡ್ಡ ವಿಷೆಯವಲ್ಲ ನಾನಿಟ್ಟನಂಬಿಕೆ ಹುಸಿಯಯಿತಲ್ಲ ಅನ್ನೋ ಬೇಸರ .ಕೆಲವೊಮ್ಮೆ ಅನ್ನಿಸಿದ್ದುಂಟು ನಾನೆ ಕರೆ ಮಾಡಿ ಹಿಗ್ಗಾ ಮುಗ್ಗ ಬಾಯಿಗೆ ಬಂದಂತೆ ಬೈಯೋಣ ಅಂತ ,ಅದರೂಯಾಕೋ ಮನಸ್ಸು ಒಪ್ಪುತ್ತಿಲ್ಲ .
ಇದೆಲ್ಲ ನಡೆದ ಮೇಲೆ ಅನ್ನಿಸಿದೆ :
ವ್ಯಕ್ತಿಯನ್ನು ನಂಬಲು ಆತನ ಪರಿಚಯ ಅಗತ್ಯವೇ ?
ನಂಬಿಕೆಯೇ ಇಲ್ಲದ ಪ್ರೀತಿ ಪ್ರೀತಿಯೇ ?

ಅದರೂ ಕೆಲವೊಮ್ಮೆ ಈ ಹಾಡು ನೆನಪಾಗುತ್ತೆ "ನಂಬಿ ಕೆಟ್ಟವರಿಲ್ಲವೋ ,ನಂಬಿ ಕೆಟ್ಟವರಿಲ್ಲವೋ.

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು