ಬುಧವಾರ, ಅಕ್ಟೋಬರ್ 7, 2009

೩ ಚುಟುಕು

ಓಟು - ನೋಟು

ಹಾಕಿದ್ದ ಒಂದೊಟಿಗೆ
ಕೊಟ್ಟಿದ್ದರು ಲಾಟು-ಲಾಟು
ನೋಟು
ಜಮ ಮಾಡಿ ಆದ ಮೇಲೆ
ತಿಳಿದಿದ್ದು
ಅದರಲ್ಲಿರುವುದೆಲ್ಲ
ಬರಿ ಖೋಟ ನೋಟು ಎಂದು

ಸೈಟು-ಪ್ಲಾಟು

ದಿನ ಹಾಕುತಿದ್ದೆ
ಅವಳಿಗೆ ನಾನು ಸೈಟು
ಕೊನೆಗೆ ಅವಳೇ ಕೇಳಿ ಬಿಟ್ಟಳು
ಎಷ್ಟಿವೆ ನಿಮಪ್ಪಂದು ಪ್ಲಾಟು

ಬಳಕು - ಉಳುಕು

ನಿನ್ನ ನಡೆಯಲಿ
ಕಂಡೆ ಬಳಕಾಡುವ
ಲತೆಯ ನಾ ಮೊದಮೊದಲು
ಆಮೇಲೆ ತಿಳಿದಿದ್ದು
ಅದು ಬಳಕುವ ಲತೆಯಲ್ಲ
ಉಳುಕಿದ ನಿನ್ನ ಕಾಲೆಂದು.


ಇಂತಿ
ವಿನಯ

3 ಕಾಮೆಂಟ್‌ಗಳು:

 1. ದಿನ ಹಾಕುತಿದ್ದೆ
  ಅವಳಿಗೆ ನಾನು ಸೈಟು
  ಕೊನೆಗೆ ಅವಳೇ ಕೇಳಿ ಬಿಟ್ಟಳು
  ಎಷ್ಟಿವೆ ನಿಮಪ್ಪಂದು ಪ್ಲಾಟು

  ಮೇಲಿನ ಚುಟುಕು ತುಂಬಾ ಇಷ್ಟ ಆಯಿತು

  ಪ್ರತ್ಯುತ್ತರಅಳಿಸಿ
 2. ಅದು ಉಳುಕಿದ ಕಾಲೆಂದು....ಆಹಾ ಇದು ಚೆನ್ನಾಗಿದೆ..

  ಪ್ರತ್ಯುತ್ತರಅಳಿಸಿ
 3. :):)muda needuva chutukugalu. blog jaaladuvaaga sikkida putta putta khushigalu nimma chutukugalu.

  ಪ್ರತ್ಯುತ್ತರಅಳಿಸಿ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು