ಮಂಗಳವಾರ, ಅಕ್ಟೋಬರ್ 27, 2009

ಅರ್ಥವಾಗದೆಯೂ ಅರಿವಾಗಿದ್ದು..

ನೀ ಅಂದು ನುಡಿದ
ಅನುರಾಗದ ಸಾಂತ್ವಾನದ ನುಡಿಗಳು
ನನ್ನೆದೆಯ ಆಳದಲ್ಲಿ
ನಿನ್ನೆಡೆಗೆ ಪ್ರೀತಿಯ ಮೊಳಕೆಯ ಒಡೆಸಿ
ಹೆಮ್ಮರವಾಗಿ ಬೆಳೆದಿರುವುದಿಂದು

ಆರಂಭವು ತಿಳಿಯದ
ಅಂತ್ಯವು ಇಲ್ಲದ
ಅರ್ಥವೂ ಆಗದ
ಅರ್ಥೈಸಲೂ ಸಾಧ್ಯವಿಲ್ಲದ
ಅರಿತು ಅರಿಯದಂತೆ ಮೂಡಿದ ಪ್ರೀತಿ ಇದು

ನಿನ್ನ ಪ್ರತಿ ನುಡಿಯ ಆಲಿಸುವ
ಮಧುರ ಬಯಕೆಯ
ನಿನ್ನ ಸ್ಪರ್ಶದ ಆ ಕ್ಷಣಕೆ
ಹಪಹಪಿಸುತ್ತಿರುವ ಪ್ರೀತಿ ಇದು

ಪದಗಳಲ್ಲಿ ಹೇಳಲಾಗದ
ಕವನದಲ್ಲಿ ಕೊನೆಗಾಣಿಸಲಾಗದ
ಪ್ರೀತಿಗೆ ಹೊಸ ಅರ್ಥ ನೀಡ ಹೊರಟಿರುವ ಪ್ರೀತಿ ಇದು

5 ಕಾಮೆಂಟ್‌ಗಳು:

  1. ನನ್ನೆದೆಯ ಆಳದಲ್ಲಿ
    ನಿನ್ನೆಡೆಗೆ ಪ್ರೀತಿಯ ಮೊಳಕೆಯ ಒಡೆಸಿ
    ಹೆಮ್ಮರವಾಗಿ ಬೆಳೆದಿರುವುದಿಂದು


    ತುಂಬಾ ಚಂದದ ಸಾಲುಗಳು

    ಪ್ರತ್ಯುತ್ತರಅಳಿಸಿ
  2. ನಿಜವಾಗಿ ನಿನ್ನ ಮನದಲ್ಲಿ ಮುಚ್ಚಿಟ್ಟುಕೊಂಡಿರುವ ಪ್ರೀತಿಯೆಲ್ಲಾ ಕವನ ರೂಪದಲ್ಲಿ ಹರಿದು ಬರುತ್ತಿದೆ ಅಲ್ವಾ ತಮ್ಮಾ? ಈಗಲೇ ಇಷ್ಟು ಚೆನ್ನಾದರೆ, ಇನ್ನು ನೀ ಮೆಚ್ಚುವವಳು ಬಂದಾಗ ಇನ್ನೆಂತಹ ಕಾವ್ಯ ಬರೀತೀಯೋ ಮಾರಾಯ ? ;-)

    ಶ್ಯಾಮಲ

    ಪ್ರತ್ಯುತ್ತರಅಳಿಸಿ
  3. @ ಸಾಗರದಾಚೆಯ ಇಂಚರ,

    ಧನ್ಯವಾದಗಳು.. :)

    @ ಶ್ಯಾಮಲಕ್ಕ,

    ನಾ ಮೆಚ್ಚಿದವಳು ಅದಾಗಲೇ ಬಂದಾಗಿದೆ.. ಅದಕ್ಕೆ ಕವನಗಳು ಇಷ್ಟು ಸರಾಗವಾಗಿ ಬರ್ತಿದೆ ಅಕ್ಕ.. ;-)

    ಪ್ರತ್ಯುತ್ತರಅಳಿಸಿ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು