ಬುಧವಾರ, ಅಕ್ಟೋಬರ್ 7, 2009

ಅವಳ ಹೆಜ್ಜೆಗಳು

ಸಂಗೀತದ ಸಪ್ತ ಸ್ವರಗಳು
ಸತ್ತಂತಾಗಿವೆ ಎನಗೆ
ನಿನ್ನ ಪಿಸು ಮಾತು ಕೇಳದೆ
ಸುಡುಬಿಸಿಲು ಹಿತವೆನಿಸಿದೆ
ನಿನ್ನ ಮಧುರ ಸ್ಪರ್ಶವ ಕಲ್ಪಿಸಿ

ಕಾರಂಜಿಯ ಸಣ್ಣ ಹನಿಗಳು
ಮೂಡಿಸಿವೆ ನಿನ್ನ ಪ್ರತಿಬಿಂಬವ
ತಂತಮ್ಮ ಪುಟ್ಟ ಪ್ರಪಂಚದಲ್ಲಿ
ನೆರಳು ಕೂಡ ಮುಂದೆ ಬದಂತಾಗಿದೆ
ಹಿಂದೆ ನಿನ್ನ ಇರುವಿದೆಯೆಂದೇನೋ

ಕದಡಿದ ಕೆಸರಿನಂತಾಗಿದೆ ಮನಸು
ಸುಖ ದುಃಖಗಳೆರಡರ ವ್ಯತ್ಯಾಸ
ಅರಿಯಲಾಗದೆ
ಮೂಡಿದೆ ಅದರೊಳಗೆ
ನೀರ್ ಗುಳ್ಳೆಗಳು ಕಣ್ಣೀರಿನಂತೆ
ಸುಖಕ್ಕೋ ದುಃಖಕ್ಕೊ ಅರಿಯಲಾಗದಂತೆ

ಇದ್ದು ಇರದಿರುವ ಸನಿಹಕಿಂತ
ಇರದೇ ಇರುವಂತೆ ಭಾಸವಾಗುತ್ತಿರುವ
ಭಾವವೇ ಮುದ ನೀಡತೊಡಗಿದೆ ಇಂದು
ಚಂಚಲ ಮನಸಿದು ಇರುವುದೆಲ್ಲವ
ಬಿಟ್ಟು ಇರದುಲ್ಲದದರ ಕಡೆಗೆ ಹೊರಳುತಿಹುದಿಂದು

ಇಂತಿ
ವಿನಯ

1 ಕಾಮೆಂಟ್‌:

  1. << ಇದ್ದು ಇರದಿರುವ ಸನಿಹಕಿಂತ ಇರದೇ ಇರುವಂತೆ ಭಾಸವಾಗುತ್ತಿರುವ ಭಾವವೇ ಮುದ ನೀಡತೊಡಗಿದೆ ಇಂದು >>
    ತುಂಬಾ ಇಷ್ಟವಾದ ಸಾಲು.

    ಯಾರ ಹೆಜ್ಜೆಗಳು ಇದು? ಸಂಪದದ್ದೋ?

    ಪ್ರತ್ಯುತ್ತರಅಳಿಸಿ

ನಿಲ್ಲದ ಪಯಣ

ನಿಲ್ಲದ ಪಯಣ
ಮರ ಮಟ್ಟು ಪೊದೆ ಒಳಗೆ ಹಸಿರ ಹಾಸಿನ ಮೇಲೆ ಮೂಡುತಿದೆ ಕಣ್ಣೀರ್ ಎಂಬ ನೀರ ಹನಿಗಳು