ಸ್ಪರ್ಶ

ಮುಸ್ಸಂಜೆಯ ತಂಗಾಳಿ
ಮುತ್ತಿಕ್ಕಿ ಹೋದಾಗ
ನಾ ಅನುಭವಿಸಿದೆ ನನ್ನವಳ
ಮುಂಗುರುಳ ಸ್ಪರ್ಶ

ಹರಿವ ಝರಿಯ ಜುಳು ಜುಳು
ನಾದದೊಳ್
ನಾ ಅನುಭವಿಸಿದೆ ನನ್ನವಳ
ಕಾಲ್ಗೆಜ್ಜೆಯ ಸ್ಪರ್ಶ

ಮುಂಗಾರ ಮಳೆಯು
ಭುವಿಗೆ ಮುತ್ತಿಕ್ಕಿ
ಹೊರಡಿಸಿದ ಕಂಪಿನೊಳ್
ನಾ ಅನುಭವಿಸಿದೆ ನನ್ನವಳು
ಮುಡಿದ ಮಲ್ಲಿಗೆಯ ಸ್ಪರ್ಶ

ಬಿಸಿ ನೀರಿನಿಂದೆದ್ದ
ಆ ಹಬೆಯಲ್ಲಿ ಕೈ ಇಟ್ಟು
ನಾ ಅನುಭವಿಸಿದೆ ನನ್ನವಳ
ಬಿಸಿಉಸಿರ ಸ್ಪರ್ಶ

ಕೊರೆವ ಚಳಿಯಲಿ
ಕರಿ ಕೋಟು ನಾ ಹೊದ್ದು
ನಾ ಅನುಭವಿಸಿದೆ ನನ್ನವಳ
ಬೆಚ್ಚಗಿನ ಅಪ್ಪುಗೆಯ ಸ್ಪರ್ಶ

ಎದುರಾದಳೊಂದು ದಿನ
ಗರಿಗೆದರಿ ನಿಂತಿತೀ ಮನ
ಆದರೆ ನಾ ಅನುಭವಿಸಲಾರದೆ ಹೋದೆ
ನನ್ನವಳ ಕೆಂದುಟಿಯ
ಮುತ್ತಿನ ಸ್ಪರ್ಶ,
ಇನಿಲ್ಲ ಅವಳ ಸ್ಪರ್ಶದ ಹರ್ಷ .

(ಸಂಪದದಲ್ಲಿ ಒಮ್ಮೆ ಪ್ರಕಟಿಸಿದ್ದೆ)

ಕಾಮೆಂಟ್‌ಗಳು

  1. ಚೆನ್ನಾಗಿದೆ, ಮುಂದುವರಿಸಿ. ನನ್ನ ಬ್ಲಾಗ್ ಮನೆಗೂ ಬರುತ್ತಿರಿ.
    www.nirpars.blogspot.com

    ಪ್ರತ್ಯುತ್ತರಅಳಿಸಿ
  2. ವಿನಯ್,

    ಸೊಗಸಾದ ಕವನವನ್ನು ಬರೆದಿದ್ದೀರಿ...ರೊಮ್ಯಾಂಟಿಕ್ ಆಗಿಒ ಚೆನ್ನಾಗಿ ಬರೆಯುತ್ತೀರಿ...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು