ಬಾಳ ಪಯಣ

ಸುಖವಿದೆ ಶಾಶ್ವತವಲ್ಲ
ದುಃಖವಿದೆ ನಿರಂತರವಲ್ಲ
ಇವೆರಡುಗಳ ನಡುವೆ
ಬದುಕಿದೆ ಜೀವನಪರ್ಯಂತ

ಬದುಕಿದು ಬಲೆಯಂತೆ
ಮುಂದೆ ಸಾಗಲು ಹಣೆಯಬೇಕಿದೆ
ಬಲೆಯ,ಅಲ್ಲೇ ನಿಲ್ಲಲೂ
ಬಳಸಬೇಕಿದೆ ಅದನ್ನ

ನಾವು ಬಿಟ್ಟರೂ ಬಿಡದೀ
ಬಲೆಯೂ ನಮ್ಮ ನಂಟು
ಸಾಗಿದಂತೆ ಹಿಂಬಾಲಿಸುವ
ನೆರಳಿನಂತೆ ಬರುತಲೇ
ಇರುವುದು ನಮ್ ಹಿಂದೆ
ಎಂದೆಂದೂ

ಬದುಕ ಹೂಡಹೊರಟ ಎಲ್ಲರೂ
ಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.

ಕಾಮೆಂಟ್‌ಗಳು

  1. ಕವನ ಚೆನ್ನಾಗಿದೆ. ಬಲೆಯನ್ನು ಹೆಣೆಯುತ್ತಾ ಆ ಬಲೆಯೊಳಗೆ ನಾವೇ ಸಿಲುಕದಂತೆ ಬದುಕೋದನ್ನ ಅಭ್ಯಾಸ ಮಾಡಿಕೊಳ್ಳಬೇಕು ಅಲ್ವಾ....

    ಪ್ರತ್ಯುತ್ತರಅಳಿಸಿ
  2. ಬದುಕ ಹೂಡಹೊರಟ ಎಲ್ಲರೂ
    ಬೀಳಲೇಬೇಕಿದೆ ಈ ಜಾಲದಲೊಮ್ಮೆ
    ಅರಿವಿರುವವರೂ ಹೆಣೆಯುವರು
    ಸುಂದರ ಭವಿಷ್ಯದ ಬಲೆಯ
    ಬದುಕ ಈ ಆಟ ಅರಿಯದವರು
    ಉಳಿಯುವರು ಅಲ್ಲೇ ಕನಸುಗಳಾಗಿ.

    tumbaa sundara saalugalu...... sundara kalpane......

    nanna blog kade banni.....

    ಪ್ರತ್ಯುತ್ತರಅಳಿಸಿ
  3. ತಮ್ಮಾ... ವಿನಯ್.
    ಕವನ ಚೆನ್ನಾಗಿದೆ..... ಹೀಗೇ ಬರೆಯುತ್ತಿರು....

    ಅಕ್ಕ

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ., ಇದರಲ್ಲೂ ಕೊನೇ ಪ್ಯಾರ ಇಷ್ಟವಾಯಿತು.,

    ಪ್ರತ್ಯುತ್ತರಅಳಿಸಿ
  5. @Naryana Bhat
    Nanni
    @Indu
    Nanni,hu adanne jivana annodu
    @Sagaradaacheya inchara
    Nanni
    @Murty Sir
    Nanni
    @Sitarama Sir
    Nanni
    @Dinakara mogara
    Nanni,khandita nodte
    @Shamalakka
    Nanni :)
    @vasanat
    Nanni
    @guru
    Nanni

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು