ಕೋಟಿ ಮಾತಾಡುವ "Quote"ಗಳು ಮತ್ತು ಅವು ತಂದೊಡ್ಡುವ ಆಭಾಸಗಳು
ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನ ತುಂಬಲು ಹಾಗೂ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಇಟ್ಟುಕೊಳ್ಳಲು ಸಮಾಜದಲ್ಲಿ ನಮಗಿಂತ ಮೊದಲು ಇಂತದೇ ಸನ್ನಿವೇಶ ಎದುರಿಸಿ ಅದನ್ನ ಯಶಸ್ವಿಗಾಗಿ ನಿಭಾಯಿಸಿದವರ ಮಾತುಗಳನ್ನು ಸ್ಪೂರ್ತಿಗಾಗಿ ಅಲ್ಲಲ್ಲಿ ಬಳಸುವುದುಂಟು ಅದನ್ನೇ ಆಂಗ್ಲದ Quote ಅಥವಾ ಉಲ್ಲೇಖಗಳು ಅನ್ನುತ್ತೇವೆ. ಇದು ಅನುಭವದ ಮಾತಾಗಿರಬೇಕೇ ಹೊರತು ನಾಲ್ಕು ಗೋಡೆಗಳ ನಡುವೆ ಕೂತು ಕುಟ್ಟಿ ಬಿಸಾಕಿರುವುದು ಆಗಿರಬಾರದು. ನಮ್ಮಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಮತ್ತು ಚಾಲ್ತಿಯಲ್ಲಿರುವ ಉಲ್ಲೇಖಗಳಲ್ಲಿ ಮುಂಚೂಣಿಯಲ್ಲಿರುವುದು ಚಾಣಕ್ಯನ ನೀತಿಗಳು. ಈ ನೀತಿಗಳು ಬದುಕಿನ ಸಾರವನ್ನು ಕೆಲವು ಉಪಮೇಗಳ ಮೂಲಕ ಸ್ಥೂಲವಾಗಿ ಜನರಿಗೆ ಅರ್ಥಮಾಡಿಸಲು ಬಳಸಿದ್ದಾಗಿದೆ. ಉದಾಹರಣೆಗೆ "ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ದೊಡ್ಡ ಪರ್ವತವನ್ನು ಉರುಳಿಸಲು ಒಂದು ಸಿಡಿಲ ಬಡಿತ ಸಾಕು. ನಿಮ್ಮ ದೇಹ, ಆಕಾರ,ಗಾತ್ರ, ಸೌಂದರ್ಯ ಮುಖ್ಯವಲ್ಲ, ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮುಖ್ಯ ". ಬದುಕಿನಲ್ಲಿ ಹತಾಶರಾಗಿರುವ ಮತ್ತು ತಾನು ಕೀಳು ಎನ್ನುವ ಭಾವನೆ ಹೊಂದಿರುವ ವ್ಯಕ್ತಿಗಳ ಮನೋಸ್ಥೈರ್ಯ ಹೆಚ್ಚಿಸಲು ಕೆಲವು ಪ್ರಾಕೃತಿಕ ಘಟನೆಗಳ ಉದಾಹರಣೆಯೊಂದಿಗೆ ಬದುಕು ನಮ್ಮ ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಾಗಲೇ ಗಟ್ಟಿಗೊಳ್ಳುತ್ತದೆ ಅನ್ನುವುದನ್ನು ವಿವರಿಸಲಾಗಿದೆ. ಅದೇ ರೀತಿ " ಯೌವನ ಮತ್ತು ಸ್ತ್ರೀಯ ಸೌಂದರ್ಯ