ಚುಟುಕು-ಚುರುಮುರಿಸಂಕಟ:

ಮೊನ್ನೆ ಆಕೆ ಅತ್ತಾಗ 
ಕರಳು ಕಿವುಚಿ ಬಂದಿತು 
ಸಮಾಧಾನಕೆಂದು ಆಕೆ 
ಚಿನ್ನದ ಸರವ ಕೇಳಿದಾಗ 
ಕರುಳಿಗೆ ನನ್ನ ನೋವು ಮೊದಲೇ 
ಗೊತ್ತಾಯಿತೆಂದು ಆಗ ತಿಳಿಯಿತು 

ಸುಖ: 

ಒಬ್ಬೊಬ್ಬರಿಗೆ ಒಂದೊಂದರಲ್ಲಿ 
ಒಂದೊಂದು ಸುಖ 
ಹಂದಿಗೆ ಕಸದಲ್ಲಿ 
ನಾಯಿಗೆ ಬೂದಿಯಲ್ಲಿ 
ಎಮ್ಮೆಗೆ ಕೊಳಚೆ ನೀರಿನಲ್ಲಿ 
ಮನುಷ್ಯನಿಗೆ ಇವೆಲ್ಲವನ್ನ 
ಸಾಕುವುದರಲ್ಲಿ

ವೇದಾಂತ :

ಅಂದಿದ್ದರೂ ವೇದಾಂತಿಗಳು ಅಂದು 
ಕೂಡಿಟ್ಟ ಕಾಸು ಚಿತೆ ಏರುವ ತನಕವೆಂದು 
ಹೇಳುವೆನು ನಾನಿಂದು ಕೂಡಿಡಿ
ಸ್ವಲ್ಪ ಕಾಸು, ಇಲ್ಲದಿದ್ದರೆ 
ಚಿತೆ ಏರುವ ನಿಮ್ಮ ಕನಸು 
ಭಗ್ನವಾಗಬಹುದಿಂದು 

ಕಾಮೆಂಟ್‌ಗಳು

 1. ವಿನಯ್,
  ಕವನಗಳು ತುಂಬಾ ಸರಳವಾಗಿದ್ದರೂ ಆಸಕ್ತಿಕರವಾಗಿವೆ...

  ಪ್ರತ್ಯುತ್ತರಅಳಿಸಿ
 2. ವಿನಯ್ ಮೂರೂ ಕವಿತೆಗಳು ವಿಭಿನ್ನ , ಆದರೂ ಚೆನ್ನಾ , ಮುಂದುವರೆಯಲಿ ನಿಮ್ಮ ಕವಿತೆಗಳು ಇನ್ನೂ .
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ಪ್ರತ್ಯುತ್ತರಅಳಿಸಿ
 3. "ಸುಖ" ತುಂಬಾ ಇಷ್ಟವಾಯ್ತು...ಸರಳ,ಸುಂದರ....ಬರೆಯುತ್ತಿರಿ..
  ನಮಸ್ತೆ..

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು