ಚುಟುಕುಗಳು :

೧.ಬಿಲ್ಲು - ಗುಂಡು:


ಕಾಮನ ಬಿಲ್ಲೆ 
ನನ್ ಎದುರುಮನೆಯ
ಚಲುವೆ 
ಬಳುಕಿದಾಗ 
ಮಾತ್ರ ಬಿಲ್ಲು 
ನೆಟ್ಟಗೆ ನಿಂತಾಗ 
ದುಂಡಾದ 
ಕಲ್ಲು ಗುಂಡು  

೨. ಅರ್ಥ :

ನಿನ್ನ ಪ್ರತಿ 
ಮಾತಲ್ಲೂ 
ನೂರೊಂದು 
ಅರ್ಥವಿದೆ 
ಅದಕೆ 
ನೀ ಅಂದು 
ನಾ ನಿನ್ನೇ
ಪ್ರೀತಿಸುವೆ 
ಅಂದಾಗ 
ನಾ ಅದ 
ಅರಿಯದೆ 
ಹೋದೆ 

೩. ದಂಡು : 


ಬದಲಾಯಿಸುತ್ತೇವೆ ನಿಮ್ಮೂರ ಎಂದು 
ಬಂತೊಂದು ನಾಯಕರ ದಂಡು 
ಸಾರಾಯಿ ಪಾಕಿಟಿನ ಬದಲಿಗೆ 
ಕ್ವಾಟರ್ ಬಾಟಲ್ ಕೈಗಿಟ್ಟು 
ಹೊಡೆಯಿರಿ ಎಲ್ಲರೂ ಅಂದರೂ 
ಈ ಗುಂಡು 

೪. ಕ್ಷಮೆ  : 

ದೇವರೇ ಕ್ಷಮೆ ಕೋರಿದ್ದನಂದು 
ನನ್ನ ಬಳಿ 
ನಾ ಬೇಡವೆಂದರೂ 
ಬಂದಿದ್ದಕ್ಕೆ ನನ್ನ ಕನಸಿನಲಿ 
ಕಾಪಾಡು ದೇವ 
ಎಂದು ಕೂಗಿದಾಗ ಇಂದು 
ಬರಲೋಲ್ಲನು 
ಕನಸಿರಬಹುದು 
ಇದು ಕೂಡವೆಂದು 

ಕಾಮೆಂಟ್‌ಗಳು

  1. ವಿನಯ್: ಚುಟುಕು ಕವನಗಳನ್ನು ಚೆನ್ನಾಗಿ ಬರೆಯುತ್ತೀರಿ..ಮುಂದುವರಿಸಿ..

    ಪ್ರತ್ಯುತ್ತರಅಳಿಸಿ
  2. ಹಾಯ್ ವಿನಯ್ ,

    ನಿಮ್ಮ ಚುಟುಕುಗಳೆಲ್ಲವೂ ಸುಂದರವಾಗಿವೆ ...ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು