ನಿಮಗೂ ಹೀಗೆ ಅನ್ನಿಸುತ್ತ?

" ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗಿ ಬರೋಣ ಅಂತ ಹೋದೆ.ನಾ ಎದ್ದು ಅಲ್ಲಿಗೆ ಹೋಗಿ ಮುಟ್ಟೋ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯ.ನೋಡಿ ಈ ಮೆಗಾ ಧಾರವಾಹಿಗಳಿಗೂ ಊಟಕ್ಕೂ ಎಲ್ಲಿಲ್ಲದ ನಂಟು, ಅದನ್ನ ನೋಡ್ತಾ ಊಟ ಮಾಡೋರ ಪಜೀತಿ ಏನ್ ಕೇಳ್ತಿರ.ಅವರು ಸ್ಲೋ ಮೋಶನ್ ಅಲ್ಲಿ ಕೆನ್ನೆಗೆ ಹೊಡಿಯೋ ಸನ್ನಿವೇಶ ಇದೆ ಅನ್ಕೊಳ್ಳಿ , ಅವಾಗ ಇರೋ ಮಜಾ ಅಂತು ಹೇಳೋಕಾಗಲ್ಲ.ಅವರು ಕೆನ್ನೆಗೆ ಹೊದಿಯೋವಷ್ಟರಲ್ಲಿ ಕೈಯಲಿದ್ದ ತುತ್ತು ನಾಲ್ಕಾರು ಬಾರಿ ಬಾಯಿವರೆಗೆ ಬಂದು ಹೋಗಿರುತ್ತೆ .ಅವರು ಹೊಡೆದ ಮೇಲೆ ಇವರಿಗೆ ನಿಟ್ಟುಸಿರು. ಕೆಲವರಂತೂ ಏನು ಮೈತಾ ಇದೀವಿ ಅನ್ನೋದು ಗಮಿನಿಸದೆ ಕೈ ಮತ್ತು ಬಾಯಿಗೆ ಪುರುಸೊತ್ತೇ ಕೊಟ್ಟಿರೋಲ್ಲ,ಸಿಕ್ಕಿದ್ದೆಲ್ಲ ಒಳಗೆ ಹೋಗ್ತಾ ಇರುತ್ತೆ.

ಇನ್ನು ಇವರಿಗೆ ಅಲ್ಲಿ ಒಳ್ಳೆಯ ಅನಿಸಿದ ಪಾತ್ರದ ಮೇಲೆ ನೆಗೆಟಿವ್ ಪಾತ್ರ ಮಾಡೋರು ಸ್ವಲ್ಪ ನೋವು ಕೊಟ್ರು ಇವರ ದುಃಖ ಉಕ್ಕಿ ಬರುತ್ತೆ ಹಾಗೆ ಆ ಪಾತ್ರಕ್ಕೆ ಬಾಯಿಗೆ ಬಂದ ಹಾಗೆ ಬೈಗುಳ ಕೂಡ. ಇನ್ನು ಯಾವುದೋ ರೋಚಕ ದೃಶ್ಯವನ್ನು ಅರ್ಧಕ್ಕೆ ನಿಲ್ಲಿಸಿ ಜಾಹೀರಾತು ಅಥವಾ ಮುಂದಿನ ಭಾಗದಲ್ಲಿ ವೀಕ್ಷಿಸಿ ಅಂತ ಹಾಕಿದರೂ ಅಂತ ಅನ್ಕೊಳ್ಳಿ , ಇವರ ಕಥೆ ಅಷ್ಟೇ , ಇರುವೆ ಬಿಟ್ಟ ಹಾಗಿರುತ್ತೆ ಸ್ಥಿತಿ. ಅದು ಮುಗಿದ ಮೇಲೂ ಇವರದ್ದು ಅದರದೇ ಚರ್ಚೆ, ಹೀಗಾಗುತ್ತೇನೋ , ಹಾಗಾಗದಿದ್ದರೆ ಸಾಕಿತ್ತು , ಛೇ ಹೊಸ ಎಂಟ್ರಿ ಇದ್ದಿದ್ದರೆ ಚೆನ್ನಾಗಿತ್ತು. ಇವುಗಳಿಗೆ ಇನ್ನು ರಂಗು ಕೊಡುವವರು ನಮ್ಮ ವಿದ್ಯುಕ್ತಚಕ್ತಿ ಮಂಡಳಿಯವರು.ಇವರು ಕುರ್ಚಿಯ ತುದಿಯ ಮೇಲೆ ಕೂತು ನೋಡುತ್ತಿರುವಾಗಲೇ ಅವರ ಪವರ್ ಕಟ್ ಶುರುವಾಗಿರುತ್ತೆ.

ಅಕ್ಕನ ಮನೆಯಲ್ಲಿ ಆಗಿದ್ದು ಹಾಗೆ , ಊಟಕ್ಕಿಂತ ಹೆಚ್ಚಾಗಿ ಧಾರಾವಾಹಿಯ ಮೇಲೆ ಆಸಕ್ತಿ ಹೆಚ್ಚಿತ್ತು. ಆಗ ನನಗೆ ಒಂದು ಕಲ್ಪನೆ ಹೊಳಿತು.ನಾವಂದು ಕೊಂಡಂತೆ ನಮಗೆ ಬೇಡ ಅನ್ನಿಸಿದವರಿಗೆ ಮನಸೋ ಇಚ್ಚೆ ಹೊಡೆಯುವಂತಿದ್ದರೆ , ನಿಜವಾಗಿ ಅಲ್ಲ , ಕಾಲ್ಪನಿಕವಾಗಿ , ಕೇವಲ ಸೆನ್ಸ್ ಅಷ್ಟೇ.ಎಷ್ಟು ಮಜಾ ಇರುತ್ತೆ ಅಲ್ವಾ ಆಗ. ಬಹುಶ ಈಗ ಬಂದಿರೋ ೩ಡಿ ತಂತ್ರಜ್ಞಾನ ಉಪಯೋಗಿಸಿ ಹೀಗೆ ಮಾಡಬಹುದೇನೋ,ಇದು ನನ್ನ ಕಲ್ಪನೆ ಅಷ್ಟೇ. ಆದರೂ ನಾವು ನಿಜ ಜೀವನಕ್ಕಿಂತ ಕಾಲ್ಪನಿಕ ಬದುಕಿಗೆ ಹೆಚ್ಚು ಮಹತ್ವ ಕೊಡುತಿದ್ದೇವೆ ಅನ್ನಿಸುತ್ತೆ. ಕಾಲ್ಪನಿಕ ಜಗತ್ತಿನ ಆಗು ಹೋಗುಗಳಿಗೆ ಮರುಗುವಷ್ಟು , ನಿಜ ಜೀವನದ ಘಟನೆಗಳ ಬಗ್ಗೆ ನಾವು ಮರುಗೋದು ತುಂಬಾ ಕಡಿಮೆ ಅನ್ಸುತ್ತೆ. ದಿನ ಇದ್ದಿದ್ದೆ ಅನ್ನೋ ಅಸಡ್ಡೆ ನಮ್ಮ ಮುಂದೆ ಹೆಬ್ಬಂಡೆ ಆಗಿ ಬೆಳೆದಿದೆ.
ಮನರಂಜನೆ ಬೇಕು ನಿಜ ,ಆದರೆ ಅದು ಮನರಂಜನೆಯಾಗೆ ಇದ್ದರೆ ಚೆನ್ನ , ಅಲ್ವೇ?

ಕಾಮೆಂಟ್‌ಗಳು

  1. ಹಹಹಾ. ವಿನಯ್, ನಿಮ್ಮ ಕಲ್ಪನೆ ಮುಂದೆ ಇನ್ಯಾವತ್ತಾದ್ರೂ ನಿಜ ಆಗಬಹುದು.
    ಎಲ್ಲರ ಮನೆ ದೋಸೆನಲ್ಲೂ ತೂತು ಇರತ್ತೆ. ನಮ್ಮ ಮನೆಯಲ್ಲೂ ಅದೇ ಗೋಳು. ಮಧ್ಯಾಹ್ನದ ಹೊತ್ತು ಮನೆಯಲ್ಲಿ ಇರಲೇಬಾರದು ಅನ್ನಿಸಿಬಿಡುತ್ತದೆ ;-)

    << ಸೋಮವಾರ ರಜೆ ಇತ್ತು ಅಂತ >>
    ಗಣರಾಜ್ಯೋತ್ಸವ ಮಂಗಳವಾರ ಇದ್ದದ್ದು. ಸೋಮವಾರ ಯಾಕೆ ರಜೆ?

    ಪ್ರತ್ಯುತ್ತರಅಳಿಸಿ
  2. ಧಾರವಾಹಿ ಬಂದರೆ ಮನೆಗೆ ನೆಂಟರು ಬಂದ್ರು
    ಮತಾದಿಸೋಲ್ಲ
    ಸಂಭಂಧಗಳು ಸತ್ತೆ ಹೋಗಿವೆ

    ಪ್ರತ್ಯುತ್ತರಅಳಿಸಿ
  3. @ ರಾಜೀವ್ ಸರ್
    ನೀವು ಹೇಳಿದ್ದು ನಿಜ , ಹಾಗಂತ ಮನೆ ಬಿಟ್ಟು ಮಾತ್ರ ಹೋಗಬ್ಯಾಡ್ರಿ ಮಾರೈರೆ ;)
    ಇನ್ನು ನಾ ಭಾನುವಾರ ಕೆಲಸಕ್ಕೆ ಹೋಗಿದ್ದರಿಂದ ಸೋಮವಾರ ರಜ ಇತ್ತು .

    @ ಸಾಗರದಾಚೆಯ ಇಂಚರ
    ಅವನ್ನು ಅಳಿಸಿಹೊಗದಂತೆ ತಡೆಯೋದು ನಮ್ಮ ಕೈಯಲ್ಲೇ ಇದೆ.

    ಪ್ರತ್ಯುತ್ತರಅಳಿಸಿ
  4. ತಮ್ಮಾ...
    ಎಲ್ಲರ ಮನೆಯ ದೋಸೆ ತೂತಾದರೂ, ಎಲ್ಲರ ಮನೆಯಲ್ಲೂ ಸೀರಿಯಲ್ ಗಳ ಹಾವಳಿ ಖಂಡಿತಾ ಸತ್ಯ ಅಲ್ಲ. ನಮ್ಮನೆಯಲ್ಲಿ ನಾವಿಬ್ಬರೂ ಯಾವುದೇ ಸೀರಿಯಲ್ ನೋಡುವುದಿಲ್ಲ !! ಮುಕ್ಕಾಲು ಪಾಲು ಇದೇ ಗೋಳೇ ಆದರೂ, ಕೆಲವು ಹೆಣ್ಣು ಮಕ್ಕಳಾದರೂ ಖಂಡಿತಾ ಕ್ರಿಯಾಶೀಲತೆಯಿಂದ ಏನನ್ನಾದರೂ ಮಾಡುತ್ತಿರುತ್ತಾರೆ (ಕೆಲವೊಮ್ಮೆ ಸೀರಿಯಲ್ ನೋಡುತ್ತಲೇ)..... ಬರಹ ಚಿಂತನಕ್ಕೆ ಆಹ್ವಾನ ಕೊಡುತ್ತದೆ........

    ಶ್ಯಾಮಲ

    ಪ್ರತ್ಯುತ್ತರಅಳಿಸಿ
  5. ಧಾರಾವಾಹಿಯಲ್ಲಿ ಅತ್ತೆ ಸೊಸೆಗೆ ಕೊಡುವ ಚಿತ್ರಹಿಂಸೆ ನೋಡಿ ಮರುಗುವ ನಿಜಜೀವನದ ಅತ್ತೆ, ತನ್ನ ಸ್ವಂತ ಸೊಸೆಯನ್ನೇನೂ ಚೆನ್ನಾಗಿ ಬಾಳಿಸೊಲ್ಲ (ಎಷ್ಟೋ ಕಡೆ ನೋಡಿದ್ದು ಇದು). ಯಾವುದೇ ನೋಟ, ಓದು, ಚಿಂತನೆ ನಮ್ಮ ವಿಕಸನಕ್ಕೆ, ತಿದ್ದುವಿಕೆಗೆ ಸಹಕಾರಿಯಾಗಿದ್ದರೆ ನೋಡಿದ್ದಕ್ಕೂ/ಓದಿದ್ದಕ್ಕೂ ಸಾರ್ಥಕ. ಆದರೆ ಇಲ್ಲಿ ಎಲ್ಲವೂ ಕಾಲ್ಪನಿಕವೇ ಆಗಿಹೋಗಿದೆ. ಮೈಗಳ್ಳತನಕ್ಕೆ ಹಾಸಿಕೊಡುವಂತಿವೆ ಇಂದಿನ ಕೆಲವು ಟಿ.ವಿ. ಪ್ರೋಗ್ರಾಂ‌ಗಳು.

    ಚೆನ್ನಾಗಿದೆ ಲೇಖನ.

    ಪ್ರತ್ಯುತ್ತರಅಳಿಸಿ
  6. ಧಾರಾಹಿಗಳಲ್ಲಿ ನೋಡುಗರು ಕೇವಲ ಮೂರನೆಯವರಾಗಿ ನೋಡುತ್ತಾರೆ.ಯಾವುದೇ ಪಾತ್ರ ವರ್ಗದಲ್ಲಿರುವುದಿಲ್ಲ.ಆಗ ಸರಿ ತಪ್ಪುಗಳು ಸರಿಯಾಗಿ ತಿಳಿಯುತ್ತದೆ.ಧಾರಾವಾಹಿ ಖುಶಿ ಕೊಡುತ್ತದೆ.
    ನಿಜ ಜೀವನದಲ್ಲಿ ಅವರವರ ಪಾತ್ರದ ಸಮರ್ಥನೆಗೆ ಹಲವು ಕಾರಣ ಕೊಟ್ಟುಕೊಳ್ಳುವುದರಿ೦ದ ಪ್ರತಿಯೊಬ್ಬರಿಗೂ ಅವರವರದೆ ಸರಿ ಎನ್ನಿಸುತ್ತದೆ.ಆಗ ಬೇರೆಯವರಿಗಾಗಿ ಅವರಲ್ಲಿ ಮರುಕ ಇರುವುದಿಲ್ಲ .
    ನಿಜ ಜೀವನದಲ್ಲೂ ಸನ್ನಿವೇಶಗಳನ್ನು ಮೂರನೆಯವರಾಗಿ ನೋಡುವ ಕಲೆ ಕಲಿತುಕೊ೦ಡರೆ ಎಷ್ಟು ಚೆನ್ನ ಅಲ್ಲವೇ?
    ನಿಮ್ಮ ಲೇಖನ ಹಿಡಿಸಿತು.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ರಾಜೀವ್ ಚನ್ನಾಗಿದೆ ಕಥೆ ನಿರೂಪಣೆ..ಮೊದಲಿಗೆ ಬಮ್ದೆ ನಿಮ್ಮಲ್ಲಿಗೆ...ಇನ್ನು ಆವಾ-ಜಾವಾ ಇರುತ್ತೆ ...ನನ್ನ ಗೂಡಿಗೂ ಬನ್ನಿ...http://www.jalanayana.blogspot.com

    ಪ್ರತ್ಯುತ್ತರಅಳಿಸಿ
  8. ಹ್ಣೂ...
    ನಮ್ಮನೆಯಲ್ಲಿ ನಾವ್ಯಾರೂ ಸೀರಿಯಲ್ ನೋಡೋಲ್ಲ...ಯಾರಾದ್ರೂ ನೆ೦ಟರು ಊರಿ೦ದ ಬ೦ದಾಗ ನಮ್ಮನೆಯಲ್ಲಿ ನಾವೇ ಈ ಸಮಸ್ಯೆ ಎದುರಿಸಬೇಕಾಗುತ್ತೆ....!

    ಪ್ರತ್ಯುತ್ತರಅಳಿಸಿ
  9. ಕನ್ನಡ ಧಾರಾವಾಹಿಗಳ ಗೋಳು ಹೇಳತೀರದು!ಪ್ರತಿದಿನ ಮಧ್ಯಾಹ್ನ ನನ್ನ ಹೆ೦ಡತಿ ೨.೩೦ ರಿ೦ದ ದೂರದರ್ಶನವನ್ನು ಹಾಕಿದರೆ ೫-೦೦ ರವರೆಗೂ ಅದೇ ಕಥೆ. ಪುನ: ರಾತ್ರಿ ಆರ೦ಭ -ಮಲಗುವವರೆಗೂ.ನನಗೂ ನಿಮ್ಮ ಹಾಗೇ ಅನಿಸಿದ್ದಿದೆ.
    ಒಳ್ಳೆಯ ಅನಿಸಿಕೆಯನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದೀರಿ, ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  10. ನಿಜಾ... ಧಾರಾವಾಹಿಗಳು ಎಷ್ಟು ಪರಿಣಾಮ ಭಿರಿವೆ ಅಂದರೆ... ಅದರ ಪ್ರಕಾರ್ ನಾವು ಟೈಮ್ ಟೇಬಲ್ ಹಾಕೋ ಪರಿಸ್ತಿತಿ ಬಂದಿದೆ.
    ಯಾರಾದರು ಮನೆಗೆ ಬರತಿವಿ ಅಂದರು, ಅಯ್ಯೋ ನಾನು ಆ ಟೈಮ್ ನಲ್ಲಿ ಧಾರವಾಹಿ ನೋಡಬೇಕು ಅನ್ನೋ ಜನರು ಇದ್ದಾರೆ :)
    ಯಾವದು ಅತಿ ಆಗದಿದ್ದರೆ ಒಳ್ಳೇದು :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು