ಕಾರಣಗಳು

ಹುಟ್ಟಿಗೆ, ಸಾವಿಗೆ
ಬದುಕಿಗೆ ,ಬಡತನಕ್ಕೆ
ಅಹಂಗೆ, ಗೊಂದಲಕ್ಕೆ
ಗಲಭೆಗೆ,ಘರ್ಷಣೆಗೆ
ಪ್ರೀತಿಗೆ, ವ್ಯಾಮೋಹಕ್ಕೆ
ನಿರಂತರ ಹೋರಾಟಕ್ಕೆ
ಎಲ್ಲಕ್ಕೂ ಕಾರಣಗಳಿವೆ ಇಲ್ಲಿ

ಕಳೆದು ಹೋಗಿದ್ದಕ್ಕೂ
ಸಿಕ್ಕಿದ್ದಕ್ಕೂ, ತಪ್ಪಿಸಿಕೊಂಡಿದ್ದಕ್ಕೂ
ತಪ್ಪಿಸಿದ್ದಕ್ಕೂ , ಪರಿತವಿಸುವಿಕೆಗೂ
ಎಲ್ಲೆಲ್ಲೂ ಕಾರಣಗಳೇ
ರಾಶಿ ರಾಶಿ ಆಗಿ ಬಿದ್ದಿವೆ

ಪವಿತ್ರ- ಅಪವಿತ್ರಗಳೆಂಬ
ಪಂಗಡಗಳಿವೆ
ಅವುಗಳ ವಿಭಜನೆಗೂ
ಕಾರಣಗಳಿವೆ
ಮೇಲು-ಕೀಳುಗಳಿವೆ
ಜಾತಿ-ಪಂಥಗಳಿವೆ
ಎಲ್ಲದರ ಹಿಂದೂ
ಹಲವಾರು ಕಾರಣಗಳು
ಅವುಗಳ ಸಮರ್ಥನೆಗೆ
ಮೊಗದೊಂದಿಷ್ಟು ಕಾರಣಗಳು

ಪೃಥ್ವಿಯ ಹುಟ್ಟಿಗೂ
ದೇವರ ಸೃಷ್ಟಿಗೂ
ಸಕಲ ಚರಾಚರಗಳ
ಬದುಕಿಗೂ ಈ
ಕಾರಣಗಳೇ
ಜೀವ ಬಿಂದುವಾಗಿವೆ.

ಕಾಮೆಂಟ್‌ಗಳು

 1. ಕಾರಣಗಳು ಮೂಗಿನ ನೇರಕ್ಕೆ ಸೃಷ್ಟಿಸಿಕೊಂಡ ಮಾನವ ಸಹಜ ವಿಕಲ್ಪಗಳು.
  ಕಾರಣಗಳು ಮತ್ತು ನಿಯಮಗಳು ದೇಶ ಪಂಗಡ ಉದ್ಧೇಶ ಮತ್ತು ಸ್ಥಿತಿ ಗತಿಗಳ ಅನ್ವಯ ಬದಲಾಗುತ್ತವೆ.

  ಅಪರೂಪಕ್ಕೆ ಬ್ಲಾಗಿಗೆ ಬಂದಿದ್ದೀರ ವಿನ್ನೀ.. ಮುಂದುವರೆಸಿರಿ...

  ಪ್ರತ್ಯುತ್ತರಅಳಿಸಿ
 2. Nice ...!!!

  If you get time could you please once go through

  ammanahaadugalu.blogspot.com

  and share your opinion/Guide me

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು