ಒಂದು ಸತ್ಯ-ಮತ್ತೊಂದು (ಕಟು)ಸತ್ಯ
ಕಾಗೆ ಕೂತಲೆಲ್ಲ
ಕಪ್ಪಾಗುವಂತಿದ್ದರೆ
ಮೊದಲು ಕೂರ
ಹೇಳುತಿದ್ದೆ
ನಾ ಅದಕೆ
ಬಿಳಿಯಾದ
ನನ್ನವಳ
ತಲೆಗೂದಲ ಮೇಲೆ ...
****************
ಕಾಯುತ್ತಿರುವೆ ನಾ
ಸಮಯಕ್ಕಾಗಿ
ಕಾಯುತ್ತಿರುವೆ ನಾ
ಸಮಯಕ್ಕಾಗಿ
ಸಂಯಮದ
ರೇಖೆಯ ಎಳೆದು
ಕಾಯುತ್ತಿದ್ದಳು ಆಕೆ
ಸಮಯಕ್ಕಾಗಿ
ಕಾಯುತ್ತಿದ್ದಳು ಆಕೆ
ಸಮಯಕ್ಕಾಗಿ
ಎಳೆದಲೊಂದು ದಿನ ಗೆರೆಯ
ಸಮಾನಾಂತರವಾಗಿ
ತಿಳಿ ಎಂದಳು ಕಿರು ನಗೆಯಲ್ಲೆ
ಕೂಡುವುದಿಲ್ಲ ಈ ಗೆರೆಗಳೆಂದು
ಒಂದಾಗಿ
ನೀ ನಿಲ್ಲ ನನಗೆ
ಸರಿಸಮಾನವಾಗಿ ಎಂದು .....
ಎರಡು ಕವನಗಳು ಚೆನ್ನಾಗಿವೆ.
ಪ್ರತ್ಯುತ್ತರಅಳಿಸಿ