ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು

ಹೊರ ತೋರುವ ಬಟ್ಟೆಯಲಿ
ಅಡಗಿರುವ ಬಡತನವ ನಿವಾರಿಸಲು
ಮಣ್ಣಿನ ಮಡಿಕೆಯಲಿ ಅಂಬಲಿಯ ಹೀರಿ
ಮುಸ್ಸಂಜೆ ಹೊತ್ತಿಗೆ  ಮೂಲೆ ಬೀದಿಯ
ಸರಾಯಿ ಅಂಗಡಿಯಲ್ಲಿ ಮಲಗಿರುವವನ
ಕಂಠ ದೋಷವ ಹೋಗಲಾಡಿಸಲು

ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು

ಎಲ್ಲೆಲ್ಲೂ ಜನ ಜಾತ್ರೆ
ಕಂಡವರೆಲ್ಲ ಮರುಳರೂ
ನಿನ್ನೆಳೆದರೆಂಬ ಸಂತೋಷದಿ ಮರಳುತಿಹರೂ
ಮತ್ತದೇ ಮರುಳಲಿ
ನೀ ಇದ್ದರೂ , ಇರದಿರದಿದ್ದರೂ
ಭಕ್ತಿ ಒಂದಿದೆ ಎಂಬ ಕರಾಡ ನರ್ತನದಿ

ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು
ಸರ್ವರಲಿ ಒಂದಾಗೂ ಎನುವರೂ
ಎಲ್ಲರಿಂದ ದೂರ ಇರಿಸಿ
ಉಣ ಬಡಿಸುವರೂ
ಕೆಲವೊಮ್ಮೆ ತಾವೇ ದೈವ ಅನ್ನುವರೂ
ಮಗದೊಮ್ಮೆ ದೈವ ಸಂಜಾತವೆನ್ನುವರೂ
ಮುರ್ಖರಿವರೂ ,  ಮುಟ್ಟಾಳರಿವರೂ
ಎಲ್ಲ ಬೈದ ಮೇಲೆ ನೀ ಇಲ್ಲೇ ಬರಬೇಕೆನ್ನುವರೂ
ದೇವನೆಂದ ಮೇಲೆ ಕಟ್ಟಳೆಯ ಮೀರಿ
ನಡೆಯಲಾಗದೆನ್ನುವರೂ

 ಮತ್ತೆ ಉದಯಿಸಿ ಬರಬೇಕಿದೆ ನೀನಿಂದು
ಅಂದು ಕಂಡ ಕನಸ ನನಸಾಗಿಸಲು
ನಾ ಭ್ರಮಿಸುವ ನಾಡ ಕಟ್ಟಲೂ
ಇವೆಲ್ಲಕ್ಕೂ ಕೊನೆ ಎಂಬ
ಪರದೆಯೇಳೆಯಲು

ಕಾಮೆಂಟ್‌ಗಳು

  1. ಸದಾಶಯದ ಸುಂದರ ಕವನ!!!ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ
  2. ಕವಿತೆಯ ಆಶಯದ ಹಿಂದೆ ಕವಿಯ ನೋವು ಎಳೆ ಎಳೆಯಾಗಿ ಬಿಡಿಸಿಕೊಂಡಿದೆ. ಮತ್ತೆ ಉದಯಿಸು ಎನ್ನುವಷ್ಟು ಜಗವೂ ಹಾಳು ಬಿದ್ದು ಹೋಗಿದೆ. ಇದರ ಪುನರಾಜ್ಜೀವನಕ್ಕೆ ಮತ್ತೆ ಉದಯಿಸಬೇಕಿದೆ ಅವರೂ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು