ನೀವು ಕೇಳಿದಿರಿ ೧.೨
*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ .
-ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ
(ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ).
+++++++
*ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ !
-ಇದಕ್ಕೆಲ್ಲ ಅವರ 'ವೈ'ರಿಂಗಿನ ಶಾರ್ಟ್ ಸರ್ಕೀಟ್ ಕಾರಣವಂತೆ .
+++++++++
*ಕಸಬ್ ಗೆ ಓದಲು ದಿನ ಪತ್ರಿಕೆ ಬದಲು ಕಥೆ ಪುಸ್ತಕವಂತೆ !
-ಅವನ ಕಥೆಯೇ ನಮಗೆ ಸಹಿಸಲಾರದ ವ್ಯಥೆ , ಮಧ್ಯೆ ಇನ್ನೊಂದು ಕಥೆ .
+++++++++
*ಕನ್ನಡದಲ್ಲಿ ಅತಿ ಹೆಚ್ಚು ಕಥೆ ಬರೆದವರಿಗೆ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರಂತೆ ವಾಟಾಳ್ !
-ಎಲ್ಲರದ್ದು ವರುಷಕ್ಕೊಂದು ಕಥೆಯಾದರೆ ನನ್ನದು ದಿನಕ್ಕೊಂದು ಕಥೆ ಹಾಗಾಗಿ ಆ ಸನ್ಮಾನ ನನಗೆ ಮಾಡಿ ಅಂದಿದ್ದಾರಂತೆ 'ಗೌಡ್ರು '.
++++++++
*ಕಮಿಷನ್ ಜಗಳ ಇಬ್ಬರ ಕೊಲೆ .
-ವಿಚಾರಣೆಗೆ ಜಂಟಿ ಕಮಿಷನ್ ನೇಮಕ .
+++++++++
*ಈ ಬಾರಿಯದು ತ್ರಿಶಂಕು ಸರ್ಕಾರವಂತೆ ?
-ಅಯ್ಯೋ ಅಷ್ಟು ಬೇಗ ನಮ್ಮ ಹೆಸರೆಲ್ಲ ಯಾಕೆ ಹೇಳಿದಿರಿ ಅನ್ನುತ್ತಿದ್ದಾರಂತೆ ಲಾಲು ,ಕಾರಟ್ ,ಪಾಸ್ವಾನ್ ,ಮಾಯಾ ,ಜಯ ..............!
+++++++++++
*ಜಾತ್ಯಾತೀತರೆಲ್ಲ ಒಂದಾಗಿ 'ಕೈ ' ಬೀಸೋಣ ಅಂದ್ರಂತೆ ಪವಾರ್ !
-ಆವಾಗಲೇ 'ಆನೆ'ಬಲ ಬರೋದು ಅಂದ್ರಂತೆ ಮಾಯಾ .
+++++++++
*ಅಧಿಕಾರದ ಉರುಳುವ ಹೆದರಿಕೆಯಿಂದ ಹೋಮ ಹವನಕ್ಕೆ ಮೊರೆಹೋದ ಯಡ್ಡಿ .
-ಪಕ್ಕದಲ್ಲಿದ್ದ S'ಅಕ್ಕನನ್ನು ನೋಡಿ ದಂಪತಿಗಳಿಬ್ಬರು ಕುಳಿತುಕೊಳ್ಳಿ ಎಂದರಂತೆ ಪುರೋಹಿತರು .ಹಿ ಹೀ :D
+++++++++++
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ