ನೀವು ಕೇಳಿದಿರಿ - ೧. ೧
*ಸೋನಿಯಾ ,ಕುಮಾರಣ್ಣ ಕಳ್ಳ ಭೇಟಿ ಅಂತೆ !
-ಚಿಕ್ಕನ್ನಿದಿಂದಲೂ ಅವನಿಗೆ 'ಇಲಿ' ಜೊತೆ ಆಡೋದು ಅಂದ್ರೆ ಇಷ್ಟ ಅಂತಿದ್ರು ಗೌಡ್ರು .
+++++++++++
*ಏನ್ ಗುರು ಖೇಣಿ ಆಪರೇಷನ್ ಕೊಳೆಗೇರಿ ಶುರು ಮಾಡಿಬಿಟ್ಟಿದ್ದಾರೆ .
-ಅವರಿಗೆ ಗೊತ್ತು ಕಮಲ ಅರಳೋದು ಅಲ್ಲೇ ಅಂತ .
+++++++++++
*ಮಹಾಸಂಗ್ರಾಮದ ಅಂತಿಮ ಲೆಕ್ಕಾಚಾರ ಶುರು .
-ಲೆಕ್ಕ ಏನೋ ಇರಬಹುದು ,'ಆಚಾರದ ' ಬಗ್ಗೆ ಮಾತಾಡೋದು ಸ್ವಲ್ಪ ಕಷ್ಟವೇ .
++++++++++
*ಆಡ್ವಾಣಿಯವರನ್ನು ಪ್ರಧಾನಿಯಾಗಿ ಒಪ್ಪಲು ಸಿದ್ಧವಿರುವ ಯಾವುದೇ ಪಕ್ಷಕ್ಕೆ ಎನ್ ಡಿ ಎ ಬಾಗಿಲು ಮುಕ್ತವಾಗಿದೆ ಅನ್ನುತಿದ್ದಾರಲ್ಲ ಇಲ್ಲೊಬ್ಬರು .
-ಹುಷಾರು ಗುರು ಇದು ಕಲಿಯುಗ ಕಳ್ಳಕಾಕರು ಜಾಸ್ತಿ ಇದ್ದಾರೆ .
++++++++++
*ಇತ್ತೀಚಿಗೆ ಯಾಕೋ ಎಲ್ಲರೂ 'ಮುಕ್ತ', 'ಮುಕ್ತ' ಅಂದು ಬಡಿದುಕೊಳ್ಳುತ್ತಿದ್ದಾರೆ .
-ಎಲ್ಲಕ್ಕೂ ಚುನಾವಣಾ ಆಯೋಗದ 'ಮುಕ್ತ'ಚುನಾವಣೆಯೇ ಕಾರಣ .
++++++++++++
*ಜಯಪ್ರದ ಹೋಟೆಲ್ ಮೇಲೆ ಆಯೋಗ ದಾಳಿ !(ಕಾಂಗ್ರೆಸ್ ಪಿತೂರಿ ಎಂದ ನಟಿ )
- ಹಿ ಹಿ ಹೀ ,ಬಿಡಿ ಈ ಪತ್ರಿಕೆಯವರು ತುಂಬಾ ತಮಾಷೆಮಾಡ್ತಾರೆ.
+++++++++++
* ಚತುರ್ಥ ರಂಗದಲ್ಲಿ ಭಿನ್ನಮತವಿಲ್ಲವಂತೆ !
-ಸಧ್ಯ 'ಮತವೆ 'ಇಲ್ಲದಿದ್ದರೆ ಸಾಕು ಬಿಡಿ ಅಂದ್ರಂತೆ ಮೇಡಂ .
++++++++++++
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ