ನನ್ನವಳಿಗೆ... ಜೇನ ಹನಿಗಳು.. (ಪ್ರೀತಿಯ ಅಪ್ಪಿ(ಪ್ಪು)ಗೆ )
ನೀ ಬೇಕೀಗ
ಚಿಗುರೆಲೆಯ ತುತ್ತ ತುದಿಗೆ
ಬಂದು ನಿಂತು..
ಈಗೋ ಆಗೋ
ಭುವಿಯ ಸ್ಪರ್ಶಕ್ಕೆ ಕಾದಿರುವ
ನೀರ ಹನಿಯಂತೆ
ನನ್ನೆದೆಯ ನೋವೆಲ್ಲ
ಕಣ್ಣೀರ ರೂಪ ತಾಳಿ
ಕಣ್ರೆಪ್ಪೆಯನ್ನೆಲ್ಲ ತೋಯ್ದು
ನಿನ್ನೆದೆಯ ಮೇಲೊರಗಿ
ಅದರಾಳಕ್ಕೆ ಇಳಿಯಬೇಕೆಂಬ
ಹೆಬ್ಬಯಕೆಯಲಿ
ಕಾಯುತ್ತಿರುವುದೀಗ
ನನ್ನ ಪ್ರೀತಿ
ನೀರ್ಗಡಲ ಅಲೆಯ ನೀರ್ಗುಳ್ಳೆಯಂತೆ
ಎನ್ನ ಪ್ರೀತಿ
ಪಟಪಟನೆ ಪುಟಪುಟನೇ ಪುಟಿದು,
ಪಟಪಟನೆ ಒಡೆದು
ನಿತ್ಯ ನಿರಂತರ ಚಿಮ್ಮುತ್ತಲೇ ಇರುವುದು
ನನ್ನೆದೆಯ ಚಿಪ್ಪಿನಲ್ಲಿ
ಮರಳ ಕಣವಾಗಿ ನುಸುಳಿ
ನನಗೇ ಅರಿವಾಗದಂತೆ
ಮುತ್ತಾಗಿ ಬೆಳೆದಿರುವೆ
ನೀನಿಂದು
ಸಾಗರದೊಳು ಮುಳುಗುತಿದೆ
ಎಂದೆನಿಸುವ ಸೂರ್ಯನಂತೆ
ನನ್ನ ಪ್ರೀತಿ
ಮುಳುಗಿದೆ ಎಂದೆನಿಸಿದರೂ
ಮುಳುಗದ,
ಮರೆಯಾದಂತೆನಿಸಿದರೂ
ಮರೆಯಾಗದಂತ
ಮತ್ತೆ ಮತ್ತೆ
ಉದಯಿಸುವ ಅನುರಾಗವಿದು
ಮನಸು
ನಿನ್ನ ಸನಿಹ ಬಯಸಿದೆ ಮನಸು
ಪ್ರೀತಿ ತುಂಬಿದ ಆ ಅಪ್ಪುಗೆಯಲಿ
ಮುಳುಗಬೇಕೆನಿಸಿದೆ.
ಮನದಾಳದ ತೊಳಲಾಟಗಳನ್ನೆಲ್ಲಾ
ನಿನ್ನಲ್ಲಿ ತೋಡಿಕೊಳ್ಳಬೇಕಿದೆ.
ನಿನ್ನ ಸನಿಹವಿಲ್ಲದ
ಸಮಯವ ನೆನೆದಾಗಲೆಲ್ಲಾ ಮನಸು
ಮರ ಮರ ಮರುಗತೊಡಗಿದೆ
ಕಾಡ ಬೇಡ ಗೆಳತಿ
ನಿನ್ನ ಪ್ರೀತಿಯ ಕಡಲಲ್ಲಿ
ಮಿಂದೆದ್ದಿರುವ ನನಗೆ
ಬೇರೆಲ್ಲ ಪ್ರೀತಿಯು
ರುಚಿಸದಂತಾಗಿದೆ ಇಂದು,
ನೋಡ ಹೊರಟ
ಬಿಂಬಗಳೆಲ್ಲದರೆದುರು
ನಿನ್ನದೇ ಪ್ರತಿಬಿಂಬವು
ತೋಯುತಿಹುದಿಂದು
ಕಂಡ ಪ್ರತಿ ಬೆಳಕಲ್ಲೂ
ನಿನ್ನದೇ ನಗುವಿನ ಕಾಂತಿಯು
ಕಾಣುತಿಹುದಿಂದು
ಪ್ರತಿ ಹೆಜ್ಜೆಯ ಸದ್ದಿನಲ್ಲೂ
ನಿನ್ನದೇ ಕಾಲ್ಗೆಜ್ಜೆಯ ಸದ್ದು
ಹುಡುಕುತ್ತಿಹೆನಿಂದು
ನನ್ನ ಪಾಡು
ಅವಳ ಪ್ರೀತಿಯಲಿ ತೋಯ್ದು
ಮುಂಜಾವಿನ ಮಂಜಿನಂತಾಗಿದೆ
ನನ್ನೀ ಕಣ್ಣೀರು
ಅತ್ತ ನೀರಾಗಿಯೂ ಹರಿಯದೆ
ಇತ್ತ ಆವಿಯಗಿಯೂ ಆರದೆ
ಪಸರಿಸುತ್ತಿರುವುದು ಈ ಕಂಗಳಿಗೆ
ಬಾ..
ನನ್ನಲ್ಲೇ ಒಂದಾಗು ಬಾ
ನನ್ನ ಮನಸಿನಗಲದಲ್ಲಿ
ನಿನ್ನ ಕನಸುಗಳ ಚಪ್ಪರವ ಹಾಕು ಬಾ
ನನ್ನ ಕೃಷಿ
ಬರಡಾದ ನನ್ನೀ ಮನಕೆ
ಬಿತ್ತಿದೆ ನೀ ಮಮತೆಯ ಬೀಜವ;
ಪ್ರೀತಿಯ ವರ್ಷಧಾರೆಯ ಎರೆದು
ಪೋಷಿಸಿದೆ ನಾ ಅದ;
ಇಂದೆಕೋ ಕಾಡತೊಡಗಿದೆ ಕಳವಳ
ಹೃದಯದ ಅಂತರಾಳದಲ್ಲಿ;
ನಾ ಬೆಳೆಸಿದ ಪೈರು
ಕಳವಾದಂತೆ;
ನನ್ನೆಲ್ಲ ಪ್ರೇಮವ ಬೇರು ಸಮೇತ
ಕಿತ್ತೊಯ್ದಂತೆ;
ಎಲ್ಲಿರುವೆ??
ಕೊರಗುತ್ತಿಹುದು ಎನ್ನ ಮನ
ನಿನ್ನ ಸವಿ ನುಡಿಯ
ಸವಿ ಇಲ್ಲದೆ,
ಬೇಕಾಗಿದೆ ಇಂದು ಎನಗೆ
ನಿನ್ನ ಸವಿಮುತ್ತುಗಳ ಸುರಿಮಳೆ.
ನಿನ್ನ ಸವಿಮುತ್ತಿನಲಿ ಮಿಂದು
ಪೋಣಿಸಿದಷ್ಟೂ ಮುಗಿಯದ
ಮುತ್ತಿನ ಹಾರವಾಗಿದೆ
ಎನ್ನ ಮನವಿಂದು
ಅವಳ ಪ್ರೀತಿಯಲಿ ತೋಯ್ದು
ಪ್ರತ್ಯುತ್ತರಅಳಿಸಿಮುಂಜಾವಿನ ಮಂಜಿನಂತಾಗಿದೆ
ನನ್ನೀ ಕಣ್ಣೀರು
ಅತ್ತ ನೀರಾಗಿಯೂ ಹರಿಯದೆ
ಇತ್ತ ಆವಿಯಗಿಯೂ ಆರದೆ
ಪಸರಿಸುತ್ತಿರುವುದು ಈ ಕಂಗಳಿಗೆ
ಎಂತಾ ಸಾಲುಗಳು,
ತುಂಬಾ ಹಿಡಿಸಿತು
ದೀಪಾವಳಿಯ ಶುಭಾಶಯಗಳು
ತಮ್ಮಾ.......
ಪ್ರತ್ಯುತ್ತರಅಳಿಸಿಸಿಂಪ್ಲೀ ಸೂಊಊಊಊಊಊಊಊಪರ್ ಕಣೋ.... ನಿಜವಾಗಿ ಹೃದಯಕ್ಕೆ ಮುಟ್ಟುವಂತಿದೆ.......ಒಂದೊಂದು ಸಾಲೂ ಇಷ್ಟ ಆಗೋಯ್ತು.....
ಶ್ಯಾಮಲ
ವಿನಯ್,
ಪ್ರತ್ಯುತ್ತರಅಳಿಸಿಕವನಗಳು ಒಂದಕ್ಕಿಂತ ಒಂದು ಸೂಪರ್. ಆ ಗೆಳತಿ ನಿಮ್ಮ ಹುಡುಗಿ ಯಾರಿ ಅವಳು.
ಚಿತ್ರ
@ ಸಾಗರದಾಚೆಯ ಇಂಚರ
ಪ್ರತ್ಯುತ್ತರಅಳಿಸಿಧನ್ಯವಾದಗಳು
@ ಶ್ಯಾಮಲಕ್ಕ
ಎಲ್ಲ ನನ್ನವಳ ಪ್ರಭಾವ ಅಕ್ಕ.. ;)
@ ಚಿತ್ರ
ಅವಳು "ನನ್ನ ಪ್ರೀತಿ" ಚಿತ್ರರವರೇ.. ನನ್ನ ಪ್ರೀತಿಯ ಅಪ್ಪಿ