ಅಂದು-ಇಂದು
ಅಂದು
ಪ್ರತಿ ಬಾರಿ ನಾ ಏನಾದರೂ
ಬರೆಯ ಹೊರಟಾಗಲೆಲ್ಲ
ಬರುತಿದ್ದಳು ಅವಳು
ಲೇಖನಿಯ ತುದಿಯ
ಗುಂಡಿನಂತೆ
ತುಟಿಗಳ ನಡುವೆ
ತುಟಿಯ ಸೇರಿಸಿ
ಸಾಕು ಈ ಗೀಚಾಟ
ಆಡೋಣ ಬನ್ನಿ
ಪ್ರಣಯದ
ಆಟವನೆಂದು
ಇಂದು
ದಡ-ಬಡ
ಎನ್ನುವ
ಪಾತ್ರೆಗಳ
ಶಬ್ದದ
ನಡುವೆ
ಕತ್ತಿಯ
ನೆತ್ತಿಯ
ಹರಿತದಂತಿರುವ
ಹಸ್ತಿಯ
ದಂತವ
ಕಡಿಯುತ್ತ
ಕೂಗುತ್ತಿರುವವಳಲ್ಲಿ
ಎಲ್ಲಿ ಹಾಕಿದಿರಿ
ನಿಮ್ಮ ಆ ಕಾಗದದ
ರಾಶಿಯ
ಕಾದಿಲ್ಲ ಇಲ್ಲಿ
ಹಂಡೆಯ ನೀರೆಂದು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ