ಸ್ಮಶಾನದಲ್ಲೆಲ್ಲಿದೆ ಮೌನ?

ಸ್ಮಶಾನದಲ್ಲೆಲ್ಲಿದೆ ಮೌನ?
ಇರಬರುವ ಆಸೆಯನೆಲ್ಲ
ಮಣ್ಣಲ್ಲಿ ಮುಚ್ಚಿಟ್ಟು
ಇನ್ನಾಲ್ಕು ಕಾಲ
ಬಾಳಿಸಬಾರದಿತ್ತೆ
ಎಂದು ಆ ದೇವರ ಶಪಿಸುತ್ತ
ಇದ್ದಾಗ ಎದ್ದೆದ್ದು ಒದ್ದು
ಬಿದ್ದಿರುವ ಶವದ
ಎದೆಯೆಲ್ಲ ಹಸಿ ಮಾಡಿ
ಶವವೇ ಬೆಚ್ಚಿ ಬೀಳುವಂತೆ
ಕೂಗುತ್ತಿರುವಾಗ
ಸ್ಮಶಾನದಲ್ಲೆಲ್ಲಿದೆ ಮೌನ?

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು