ಮೂರು ಹನಿ

ಕಿರುನಗೆ

ನಕ್ಕಳು ಗೆಳತಿ
ಕಿಸಕ್ಕೆಂದು
ಜಾರಿತು ಕಾಲು
ಪಕ್ಕದ
ಮೊರಿಒಳಗೆ
ಪಸಕ್ಕೆಂದು


ವರ ದಕ್ಷಿಣೆ

ವರನಿಗೆ ಏನು
ಬೇಡವಂತೆ
ಕೊಟ್ಟರೆ ಸಾಕಂತೆ
ಬರೀ ಸೂಟು ಬೂಟು
ಕಾರಣ
ವಧುವಿನ
ಅಪ್ಪನದು
ಕರಿ ಕೋಟು


ಸೆಂಟು-ಪರ್ಸೆಂಟು


ಮದುವೆಗೆ ಮೊದಲು
ಕೇಳುತಿದ್ದಳು
ತರ ತರದ
ಸೆಂಟು
ಮದುವೆಯ ನಂತರ
ಕೇಳುತ್ತಿರುವಳು
ಸಂಬಳದಲ್ಲಿ
ಪರ್ಸೆಂಟು

ಕಾಮೆಂಟ್‌ಗಳು

 1. ವಿನಯ್,

  ಕೊನೆಯ ಪದ್ಯದ ಅನುಭವ ನನಗೂ ಆಗುತ್ತಿದೆ ಕಣ್ರೀ....

  ಎಲ್ಲಾ ಕವನಗಳು ಚೆನ್ನಾಗಿವೆ...

  ಪ್ರತ್ಯುತ್ತರಅಳಿಸಿ
 2. ವಿನಯ್....
  ಶಿವು ಅವರಿಗೆ ಅನುಭವ ಆಗ್ತಿದ್ಯಂತೆ !! ನೀನು ಅನುಭವವೇ ಇಲ್ಲದೆ ಇಷ್ಟು ಚೆಂದಾಗಿ ಹ್ಯಾಗ್ ಬರೆದ್ಯೋ ತಮ್ಮಾ.......???? :-)

  ಪ್ರತ್ಯುತ್ತರಅಳಿಸಿ
 3. ಪ್ರತಿಕ್ರಯಿಸಿದ ಶಿವೂ ರವರಿಗೆ ಮತ್ತು ಶಾಮಲಕ್ಕಗೆ ಧನ್ಯವಾದಗಳು
  ಇಂತಿ
  ವಿನಯ

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು