ನಾ-ನೀ-ಪ್ರೀತಿ

ಸಹಿಸಲಾಗದಿರುವೆ ನಾನಿಂದು
ಈ ನಿನ್ನ ಕಣ್ಣೋಟವ
ನನ್ನ ಪ್ರೀತಿಯ ಬಿಂಬಿಸುವ ಆ ನಿನ್ನ
ಕುಡಿ ನೋಟವ

ನಿನ್ನ ಪ್ರೀತಿಯ ಅಪ್ಪುಗೆಯಲಿ
ಮಿಂದು ಬಿಸಿ ನೀರ ಹಬೆಯಂತಾಗಿರುವೆ
ಚುಂಬನದ ಮತ್ತಿನಲ್ಲಿ ಕರಗಿ
ನಿನ್ನೊಳಗೊಂದಾಗಿರುವೆನಿಂದು

ಹಿತವೆನಿಸಿವೆ ಆ ಕಣ್ಣ ನೋಟಗಳು
ನೀಡಿವೆ ಇಂದು ಸ್ಪರ್ಶವು ನೀಡಲಾಗದ
ಮಧುರ ಅನುಭವವ
ಸಾಕೆನಿಸಿದ್ದ ಬದುಕು ಮತ್ತೆ ಚಿಗುರೊಡೆದಿದೆ
ನಿನ್ನ ಪ್ರೀತಿಯ ಮಳೆಯಲಿ ನೆಂದು

ಆ ನಿನ್ನ ಮಧುರ ಮಾತುಗಳು ಕೂತಲ್ಲೇ
ಬಿಸಿಯಾಗಿಸಿವೆ ನನ್ನೀ ಉಸಿರ
ನಿನ್ನೆದೆಯ ಬಡಿತವೆ ಕಿವಿಯಲಿ ರಿಂಗಣಿಸಿ
ಕಸಿದಿದೆ ನನ್ನ ಸಮಯವನ್ನೆಲ್ಲ

ಸಿಗದಿದ್ದರೇನಂತೆ ನೀ ಎನಗೆ
ಸಿಕ್ಕಾಗಿದೆ ನಿನ್ನ ಪ್ರೀತಿ
ಮಂಥನದಲ್ಲಿ ಬಂದತಹ ಹಾಲಹಲದಂತೆ

ಮನದ ಒಡೆತನ ನಿನಗೆ ಮೀಸಲು
ಬೇರಾರಿಗೂ ಇಲ್ಲಿ ಈ ಆಳದಲ್ಲಿಲ್ಲ ಪ್ರವೇಶ
ಪಡೆದರೂ ಅದಾಗಬಹುದು ಬಹಿರಂಗದೆ
ಹೊರತು ಅಂತರಂಗದಲ್ಲಲ್ಲ

ನಿಲುಕದಿರುವ ನಕ್ಷತ್ರವೇ
ಮನದಾಳದ ಚುಕ್ಕಿ ಮಿನುಗಿಹುದು ನಿನಗಿಂತ
ಕಲ್ಪನೆಯ ಕೂಸು ಮನತುಂಬಿತು
ನನ್ನ ಜೀವನ ಬರಡಾದಾಗ

ಮೋಡದಂಚಿನ ಬೆಳ್ಳಿ ರೇಖೆಯಂತೆ
ನಮ್ಮಿಬ್ಬರ ಕ್ಷಣ ಹೊತ್ತಿನ ಸಮ್ಮಿಲ್ಲನವೇ
ಬದುಕಿನ ಪ್ರೀತಿಗಾಸರೆ
ಆ ನಿನ್ನ ಪ್ರೀತಿಗೆ ನಾ ಎಂದೆಂದೂ ಸೆರೆ.....

ನೀನಿಲ್ಲದೆ ಆಗಿದೆ ಈ ಜೀವನ ಅಪೂರ್ಣ
ಅಂತ್ಯವಿಲ್ಲದ ಆರಂಭ ತಿಳಿಯದ
ಸಮುದ್ರದ ದಡದಂತೆ
ನಿನ್ನ ಪ್ರೀತಿ ಉಕ್ಕಿ ಬರಲಿ ಅಲೆಗಳಂತೆ
ನಿರಂತರವಾಗಿ
ಬದುಕೆಂಬ ಮರಳಗೂಡ
ಕಟ್ಟುತಲೇ ಇರುವೆ ..........

ಕಾಮೆಂಟ್‌ಗಳು

 1. ವಿನಯ್,

  ಜೀವನಕ್ಕೆ ಸ್ಫೂರ್ತಿ ನೀಡುವಂತ ಕವನ. ಸ್ವಲ್ಪ ರೊಮ್ಯಾಂಟಿಕ್ ಆಗಿ ಚೆನ್ನಾಗಿದೆ...

  ಪ್ರತ್ಯುತ್ತರಅಳಿಸಿ
 2. ವಿನಯ್...
  ಕವನ ಏನೋ ಚೆನ್ನಾಗಿದೆ ಆದರೆ "ಸಿಗದಿದ್ದರೇನಂತೆ ನೀನೆನಗೆ...." ????

  ಶ್ಯಾಮಲ

  ಪ್ರತ್ಯುತ್ತರಅಳಿಸಿ
 3. ಧನ್ಯವಾದಗಳು ಶಿವೂ ಸರ್ , ನನ್ನ ಪ್ರತಿ ಬರಹಕ್ಕೂ ಪ್ರತಿಕ್ರಿಯಿಸಿ ಪ್ರೋಸಹಿಸುತ್ತಿರುವುದಕ್ಕೆ

  ಇಂತಿ
  ವಿನಯ

  ಪ್ರತ್ಯುತ್ತರಅಳಿಸಿ
 4. ಧನ್ಯವಾದಗಳು ಅಕ್ಕ ನಿಮ್ಮಿ ಪ್ರತಿಕ್ರಿಯೆಗೆ ,
  ----ಆದರೆ "ಸಿಗದಿದ್ದರೇನಂತೆ ನೀನೆನಗೆ...." ????-
  ಹು ಸಿಗದೇ ಇರುವುದನ್ನ ಹಾಗೆ ತಾನೇ ಹೇಳಲು ಸಾಧ್ಯ ?

  ಇಂತಿ
  ವಿನಯ

  ಪ್ರತ್ಯುತ್ತರಅಳಿಸಿ
 5. ಕಟ್ಟುತ್ತಲೆ ಇರುವ ಮರಳಗೂಡ..........
  ಸಖತ್ ವಿನಯ್

  ಪ್ರತ್ಯುತ್ತರಅಳಿಸಿ
 6. ಸಿಗದಿದ್ದರೇನಂತೆ ನೀ ಎನಗೆ
  ಸಿಕ್ಕಾಗಿದೆ ನಿನ್ನ ಪ್ರೀತಿ
  ಮಂಥನದಲ್ಲಿ ಬಂದತಹ ಹಾಲಹಲದಂತೆ

  ಅದ ಕುಡಿದು ನೀವಾಗಿರುವಿರೇನು ವಿಷಕಂಠನಂತೆ?

  ಕವನ ಚೆನ್ನಾಗಿದೆ ವಿನಯಣ್ಣ... :)

  ಪ್ರತ್ಯುತ್ತರಅಳಿಸಿ
 7. ಧನ್ಯವಾದಗಳು ಪ್ರಸನ್ನ ಅವರೇ

  ಇಂತಿ
  ವಿನಯ

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು