ಮನಸಿನ ಮಾತು

ನಗುತ್ತಿರುವುದು
ಒಳ ಮನಸು ಇಂದು
ನೀನೇ ಕಟ್ಟಿದ
ಆಶಾಗೋಪುರ ಮುರಿದು
ಬಿದ್ದಿರುವುದೆಂದು

ನಾನಿಟ್ಟ ಪ್ರತಿ ಹೆಜ್ಜೆಯ
ಹಿಂದೆ ಬಂದು
ಗಾಳಿಯ ರಭಸಕ್ಕೆ ಅಳಿಸಿ
ಹೋಗಿರುವ ಹೆಜ್ಜೆಯ ಗುರುತ
ತೋರಿ ಕೊಗಿ ಸಾರುತಿತ್ತು
ಆ ದಾರಿ ನಿನ್ನದಲ್ಲವೆಂದು

ನೀರ ಮೇಲಿನ ಗುಳ್ಳೆಯ
ಕಂಡು ನಾ ಹಿಗ್ಗಿದಾಗ
ಅದರ ಸಂತಸ
ಕೇವಲ ಕ್ಷಣಿಕವೆಂದು
ನಾಟುವಂತೆ ಹೇಳಿತ್ತು
ನೀನಾಗಬೇಡ ನೀರಿನ
ಮೇಲಿನ ಗುಳ್ಳೆಯ ಹಾಗೆಂದು

ಕೇಳಲಿಲ್ಲ ನಾ ಮನಸಿನ ಮಾತು
ನಡೆಯುತ್ತಿರುವೇನೀಗ ಮರಳುಗಾಡಿನಲ್ಲಿ
ಹೆಜ್ಜೆ ಗುರುತಿದೆ,ಹಲವಾರು ಕವಲುಗಳ
ದಾರಿಗಳಿವೆ,ಆದರೆ ಗುರಿ ಎಂಬುದೇ
ಕಣ್ಮರೆಯಾಗಿದೆ .

ಕಾಮೆಂಟ್‌ಗಳು

 1. ತಮ್ಮಾ...
  ಕವನ ಚೆನ್ನಾಗಿದೆ ಕಣೋ... ಆದ್ರೆ ಅದ್ಯಾಕೋ ಈಗೀಗ ನಿನ್ನ ಮಾತುಗಳಲ್ಲಿ ವಿಷಾದದ ಛಾಯೆ ಸ್ವಲ್ಪ ಹೆಚ್ಚೇ ಕಾಣಿಸ್ತಿದೆ... ಕೊನೆ ಪ್ಯಾರಾ ನಿಜಕ್ಕೂ ಮತ್ತೆ ಮತ್ತೆ ಓದಿಸಿಕೊಂಡಿತು. ಆದರೆ ಗುರಿ ಕಣ್ಮರೆಯಾಗಿದೆ ಅಂತ ನೀ ಬರೆದಿದ್ಯಾಕೋ ಸ್ವಲ್ಪ ಬೇಜಾರನ್ನಿಸ್ತು... :-)

  ಅಕ್ಕ

  ಪ್ರತ್ಯುತ್ತರಅಳಿಸಿ
 2. @sagaradaacheya inchara
  Kavana mechhiddakke nanni

  @Narayana Bhat
  Dhanyavaadagalu sir

  @Guruprasad
  Nanni

  @Shivu sir
  Nanni

  @Shamalakka
  mechhiddakke nanni akka
  Hagenu illa , aa tara baredu baredu ade flow ide ashte :)
  hogta hogta sari agutte bidi :)

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು