ಚುಟುಕಗಳು
ನೆಲ
****
ಗಂಡು ಮಕ್ಕಳು
ಜಾರಿ ಬಿದ್ದರೆ
ಅನ್ನುವರೆಲ್ಲರೂ
ಬಡ್ಡಿ ಮಗನಿಗೆ ನೆಲ
ಕಾಣುವುದಿಲ್ಲ
ಎಂದು
ಅದೇ
ಹೆಣ್ಣುಮಗಳು
ಜಾರಿದರೆ
ಅನ್ನುವರೆಲ್ಲ
ನೆಲವೇ
ಸರಿ ಇಲ್ಲವೆಂದು
*******************
ಹೆಂಡ
******
ಹೆಂಡ ಅತಿ
ಆದಾಗ ನನಗೆ
ಮೊದಲು ಕಾಣುವ
ರೂಪ ನನ್ನವಳು
ಅದಕ್ಕೆ ಇರಬೇಕು
ಅವಳಿಗೆ ಹೆಂಡತಿ (ಹೆಂಡ+ಅತಿ)
ಅನ್ನುವರು
************
ಸೌಂದರ್ಯ
ಅಂದಳು ನನ್ನವಳು
ಬಣ್ಣಿಸುವಿರ ನನ್ನ ಸೌಂದರ್ಯ
ರಾಶಿಯನೊಮ್ಮೆ ಎಂದು
ಅಂದೇ ನಾ ಅದಕೆ
ಅದರ ಬಣ್ಣ ಮಾಗದಿರಲೆಂದು
ನೀ ಮಾಡಿದ ಖರ್ಚಿಗೆ
ನನ್ನ ತಲೆ ಬೋಳಾಗಿದೆಯೆಂದು
**********************
:-)..
ಪ್ರತ್ಯುತ್ತರಅಳಿಸಿha ha ha
ಪ್ರತ್ಯುತ್ತರಅಳಿಸಿNice
ಅಹ..ಅಹ..ಓದಿ ನಗುಬಂತು. ಚುಟುಕಗಳು ಚೆನ್ನಾಗಿವೆ.
ಪ್ರತ್ಯುತ್ತರಅಳಿಸಿsakathagide
ಪ್ರತ್ಯುತ್ತರಅಳಿಸಿ