ಬರೆಯಬೇಕೆಂದಿರುವೆ ನಾ ಕವಿತೆಯೊಂದ
ಬರೆಯಬೇಕೆಂದಿರುವೆ ನಾ
ಕವಿತೆಯೊಂದ
ವಿಷಯಗಳ
ಆಳಕ್ಕೆ ಇಳಿದು
ವಿಷಮಗಳ
ಎಲ್ಲೆಯ ಮೀರಿ
ಮನಸಿನ ಪರಿಧಿಯ
ಆವರಿಸಿ
ಮನುಕುಲದ
ನರ ನಾಡಿಯೊಳಗೆ
ಹರಿದು
ನೀನೇ ಇಲ್ಲದ
ಲೋಕದಿ
ನಿನ್ನ ಹುಡುಕುತ್ತ
ನೀ ಇದ್ದಿ ಎನ್ನುವ
ಭ್ರಮೆಯ
ಪರದೆಯ ಸರಿಸಿ
ಅವಸಾನದ
ಅಂಚಿನಿಂದ
ಅವತರಿಣಿಕೆಯ
ತುತ್ತ ತುದಿಗೆ
ಏರಿ
ಕೊನೆಯೆಂಬ
ಪ್ರಾರಂಭದ
ಅಂತ್ಯವ ಮುಟ್ಟಿ
ಬರೆಯ ಬೇಕೆಂದಿರುವೆ
ನಾ ಕವಿತೆಯೊಂದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ