ಕೋತಿಗಳು ಸರ್ ಕೋತಿಗಳು



                  ವಸುಧೇಂದ್ರ ಅವರ "ಕೋತಿಗಳು ಸರ್ ಕೋತಿಗಳು " ಓದಿದ ಮೇಲೆ ನಿಮಗೆಲ್ಲ ನಮ್ಮೂರ ಕೋತಿಗಳ ಚೇಷ್ಟೆಗಳ ಬಗ್ಗೆ ಹೇಳಬೇಕು ಅಂದುಕೊಂಡಿದ್ದೆ.ಇವತ್ತು ಬರೆಯಲು ಕೂತಿದ್ದೇನೆ.ಕೋತಿಗಳು ಮಾಡುವ ಚೇಷ್ಟೆಗಳನ್ನ ಕೇವಲ ನಾವು ಅನ್ನುವ ಪರಧಿ ಒಳಗೆ ನಿಂತು ನೋಡಿದರೆ, ಅವು ನಮಗೆ ಉಂಟು ಮಾಡುವ ನಷ್ಟವೇ ಜಾಸ್ತಿ ಅನ್ನಿಸಬಹುದು.ಮನುಷ್ಯನ ದೊಂಬರಾಟಕ್ಕೆ ಕಡಿವಾಣ ಹಾಕಲು,ಪ್ರಕೃತಿಯೇ ತನ್ನ ಸಮತೋಲನ ಕಾಪಾಡಿಕೊಳ್ಳಲು ಜೀವ ಸರಪಣಿ ಒಳಗೆ ಸೇರಿಸಿರುವ ಒಂದು ಕೊಂಡಿ ಇವು ಎಂಬ ದೊಡ್ಡ ವ್ಯಾಕ್ಯಾನವನ್ನ ನಾವೇ ಕೊಟ್ಟು ಕೊಂಡು,ಅವುಗಳಿಂದಾಗುವ ನಷ್ಟಗಳನೆಲ್ಲ ಮರೆತು,ಮನುಷ್ಯ ಮತ್ತು ಕೋತಿಗಳ ನಡುವೆ ನಡೆಯುವ ಕೋತಿ ಆಟದ ಮೇಲೆ ಒಮ್ಮೆ ಕಣ್ಣು ಹಾಯಿಸೋಣ.:) 

ಮೊಟ್ಟಮೊದಲನೆಯದಾಗಿ ಮಲೆನಾಡಿನಲ್ಲಿ ಕೋತಿಗಳ ಅಬ್ಬರ ಜಾಸ್ತಿ ಆಗಲು ಮನುಷ್ಯ  ಮನುಷ್ಯನ ನಡುವೆ ಇರುವ ಹಳ್ಳಿ ಮತ್ತು ಪಟ್ಟಣದ ಜನ ಎನ್ನುವ ಅಂತರವೇ ಕಾರಣ ಅನ್ನಬಹುದು.ಯಾವಾಗ ಪಟ್ಟಣದಲ್ಲಿ ವಿದ್ಯಾವಂತ(ಹಳ್ಳಿಯ ಮಂಗಗಳಿಗೆ ಹೋಲಿಸಿದರೆ ತಂತ್ರದಲ್ಲಿ ಇವು ಸ್ವಲ್ಪ ಮುಂದೆ ಅದಕ್ಕೆ ವಿದ್ಯಾವಂತ ಅನ್ನೋ ಪದ ಉಪಯೋಗಿಸಿದ್ದೇನೆ ಹೊರತು ,ಇದರ ಹಿಂದೆ ಯಾವುದೇ ಮಂಗಗಳ ಪ್ರಬೇಧವನ್ನ ಹಿಗಳೆಯುವ ಉದ್ದೇಶ ಇಲ್ಲ ;)  ) ಮಂಗಗಳ ಹಾವಳಿ ಜಾಸ್ತಿ ಆಯಿತೋ ,ಆಗ ನಾಗರಿಕರೆನಿಸಿಕೊಂಡವರು ಅವನೆಲ್ಲ ಹಿಡಿದು ಹಳ್ಳಿಗಳ ಸುತ್ತ ಮುತ್ತ ತಂದು ಬಿಡಲು ಪ್ರಾರಂಭಿಸಿದರು. ನಿಜವಾದ ಸಮಸ್ಯೆ ಶುರುವಾಗಿದ್ದೆ ಇಲ್ಲಿಂದ.ಅಲ್ಲಿಯವರೆಗೂ ಜೀತದಾಳುಗಳ ತರ ತಮ್ಮಷ್ಟಕ್ಕೆ ತಾವಿದ್ದ ಹಳ್ಳಿಯ ಮಂಗಗಳು ,ಈ ಪೇಟೆ ಮಂಗಗಳ ಮೋಡಿಗೆ ಸಿಕ್ಕಿ ,ಒಂದು ದೊಡ್ಡ ಕ್ರಾಂತಿಗೆ ಕೈ ಹಾಕಿದವು.ಅದೇ ಆಕ್ರಮಣ ,ಅದುವರೆಗೆ ಗಾಂಧೀಜಿಯ ಆಹಿಂಸಾವಾದವನ್ನು ಚಾಚು ತಪ್ಪದೆ ಪಾಲಿಸುತಿದ್ದ ಇವು ,ಒಮ್ಮೆಲೇ ದಾಳಿಗೆ ಇಳಿಯುತ್ತವೆ ಎಂದು ಯಾರು ಎಣಿಸಿರಲಿಲ್ಲ.ಬಹುಶ ಮಂಗಕ್ಕೆ ಹೆಂಡ ಕುಡಿಸಿದ ಹಾಗೆ ಆಯಿತು ಅನ್ನೋ ಗಾದೆ ಇಲ್ಲಿಂದಲೇ ಹುಟ್ಟಿರಬೇಕು ;) 

ಮಲೆನಾಡಿಗರ ಮೂಲ ಬೆಲೆ ಅಡಿಗೆ ಮತ್ತು ಭತ್ತ ಹಾಗೆಯೇ ಅಡಿಗೆ ತೋಟದ ನಡುವೆ ಕೆಲ ಸಾಂಬಾರ್ ಪಧಾರ್ಥಗಳು.ಇದುವರೆಗೂ ಅಡಿಕೆಯನ್ನ ಒಮ್ಮೆಯೂ ಮುಟ್ಟದ ಮಂಗಗಳು ದೀಡಿರ್ ಕ್ರಾಂತಿಯ ನೆಪದಲ್ಲಿ ,ಅಡಿಕೆ ಕಾಯಿಯನ್ನ ಚಿಪಿ ,ಬೇಕಾಬಿಟ್ಟಿ ತಿನ್ನೋಕೆ ಶುರು ಮಾಡಿದವು.ಇದರಿಂದ ಇಳುವರಿಯಲ್ಲಿ ತುಂಬಾ ನಷ್ಟ ಅನುಭವಿಸಬೇಕಾಯಿತು.ಇದಕ್ಕೆ ಪರಿಹಾರ ಕಂಡು ಕೊಳ್ಳಲೆ ಬೇಕು ಎಂದು ನಿರ್ಧರಿಸಿದ ನಮ್ಮೂರ ರೈತರು ,ಬರುವ ವರ್ಷದಿಂದ ,ಕಾಡಿನಲ್ಲಿ ಬೆಳೆಯುವ ಹಲಸು ,ಕಾಟ್ ಮಾವು ,ನೇರಳೆ ಇನ್ನಿತರೇ ಯಾವುದೇ ತರಹದ ಹಣ್ಣುಗಳನ್ನು ಹಳ್ಳಿಗರು ಕೀಳಬಾರದೆಂದು,ಅವುಗಳನ್ನು ಮಂಗಗಳ ಆಹಾರಕ್ಕೆಂದು ಬಿಡಬೇಕು ಅನ್ನೋ ಮಹತ್ವದ ಕರಡು ನಿರ್ಣಯ ಕೈಗೊಂಡರು.ಮೇಲ್ನೋಟಕ್ಕೆ ಇದು ವಿಶಾಲ ಹೃದಯತೆಯ ಆವರಣ ಅಂತ ಕಂಡರೂ ,ಇದರ ಒಳಗೆ ಅವರೆಲ್ಲ ತಮ್ಮ ಸ್ವಾರ್ಥವನ್ನ ಕಟ್ಟಿಟ್ಟಿದ್ದರು.ಇವರ ಈ ಯೋಜನೆ ಮಂಗಗಳಿಗೆ ಹೇಗೆ ತಿಳಿಯಿತೋ ನಾ ಕಾಣೆ ,ಮರು ವರ್ಷ ಅವು ತೋರಿದ ಪ್ರತಿಕ್ರಿಯೆ ಎಲ್ಲರನ್ನು ಬೆಚ್ಚಿ ಬಿಳಿಸಿತು.ಸಮೃದ್ದವಾಗಿ ಕಾಡಿನ ಹಣ್ಣುಗಳನ್ನ ತಿಂದ ಮಂಗಗಳು ಆಡಿಕೆಯನ್ನೇನೋ ತಿನ್ನಲಿಲ್ಲ ಆದರೆ ತಿಂದ ಆದ ಮೇಲೆ ಅಡಿಗೆ ಮರದ ನೆತ್ತಿಯ ಮೇಲೆ ಕುಳಿತು ,ಮರವನ್ನ ಜೋರಾಗಿ ಅಲ್ಲಾಡಿಸ ತೊಡಗಿದವು ,ಕಾಯಿಯೆಲ್ಲ ನೆಲದ ಮೇಲೆ ,ಮುಂಚೆ ಹೋಗುತಿದ್ದ ಭಾಗದ ೪ ಪಟ್ಟು ಹೆಚ್ಚು ನಷ್ಟ ಇಗಾಯಿತು ಅನ್ನಬಹುದು.ಆದರೆ ಈ ಮಂಗಗಳ ಉಂಡಿದ್ದನ್ನ ಕರಗಿಸುವ ವಿಧಾನವನ್ನೇ ,ಈಗಿನವರು ಸ್ವಲ್ಪ ಆಧುನೀಕರಣಗೊಳಿಸಿ ಜಿಮ್ ಅನ್ನುತ್ತಾರೆ :) ಇಷ್ಟಕ್ಕೆ ನಿಲ್ಲದೆ ಭಕ್ತ ಪ್ರಹಲ್ಲಾದ ಚಿತ್ರದಲ್ಲಿ ಉಗ್ರ ನರಸಿಂಹ ಹಿರಣ್ಯಕಷ್ಯಪಿನ ಎದೆ ಸೀಳುವ ಹಾಗೆ,ಏಲಕ್ಕಿಯ ಸುಳಿಯನ್ನ ಸುಲಿದು ಹಾಕ ತೊಡಗಿದವು:) ಇದುವರೆಗೂ ದಯೆಯೇ ಧರ್ಮದ ಮೂಲವಯ್ಯ ಅನ್ನೋ ತತ್ವದಿಂದ ,ಜಾಣನಿಗೆ ಮಾತಿನ ಪೆಟ್ಟು ,ಕೋಣನಿಗೆ ದೊಣ್ಣೆ ಪೆಟ್ಟು ಅನ್ನೋ ತತ್ವಕ್ಕೆ ಬದಲಾದರು ;) 

ಓದುವಾಗ ,ಕೇಳುವಾಗ ಹಾಸ್ಯವಾಗಿ ಕಂಡರೂ ,ಕೆಲವೊಮ್ಮೆ ಇವುಗಳ ಕಾಟ ಬೆಳೆಗಾರನ ಕಣ್ಣಲ್ಲಿ ರಕ್ತ ಹರಿಸುವುದು ಸುಳ್ಳಲ್ಲ.ತೀರಾ ಭಾವುಕರಾಗದೆ ಹಾಸ್ಯವನ್ನ ಮಾತ್ರ ಎತ್ತಿಕೊಳ್ಳೋಣ :) ಗೋಳು ಇದ್ದಿದ್ದೆ :)  

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು