ತಲೆಕೂದಲು
ಉತ್ತಿಲ್ಲ
ಬಿತ್ತಿಲ್ಲ
ನೀರ ಹಾಯಿಸಿಲ್ಲ
ಆದರೂ ಬೆಳೆಯುವುದು
ಈ ತಲೆಗೂದಲು
ಬೆಟ್ಟದೆತ್ತರಕ್ಕೆ
ಬೆಳೆದಾಗ
ಆಗಾಗ ತಲೆ ತುರಿಸಿದಾಗ
ಮಾತ್ರ ಆಗುತ್ತಿತ್ತು
ಕಟಾವು
ಗೆಳೆಯ
ಹಿಡಿದೆಳೆದಾಗ
ರೋಷ ಉಕ್ಕಿ
ಹಲ್ಲು ಉದುರುವಂತೆ
ಹೊಡೆದಾಗ
ಖುಷಿಯಲ್ಲಿ
ಉಬ್ಬಿ
ಹೋಗುತ್ತಿತ್ತು
ಈ ತಲೆಕೂದಲು
ಆದರೆ
ಈಗೀಗ
ಕೆರೆದಿಲ್ಲ
ಕತ್ತರಿಸಿಲ್ಲ
ಯಾರಿಗೂ
ಮುಟ್ಟುಲು
ಬಿಟ್ಟಿಲ್ಲ
ಆದರೂ
ಅದೇನು
ಹುಸಿ ಕೋಪವೋ
ಇಳಿಜಾರ
ಬಂಡಿಯಲ್ಲಿ
ಜಾರುವ ಆಟವಾಡುವ
ಮಕ್ಕಳಂತೆ
ಹೇಳದೆ ಕೇಳದೆ
ತಲೆ ಇಂದಿಳಿದು
ಹೋಗುತಿರುವುದಿಂದು
nanna manada bhaava bareda haagide vinay....
ಪ್ರತ್ಯುತ್ತರಅಳಿಸಿtumbaa chennaagide.....
ನಿಮ್ಮ ಕವನ ಚೆನ್ನಾಗಿದೆ.ಹೋದ ಕೂದಲನ್ನು ಕುರಿತು 'ಎಲ್ಲಿ ಮರೆಯಾದೇ ,ಏಕೆ ದೂರಾದೇ?'ಎಂದು ನೆನಸಿಕೊಳ್ಳುವಂತಾಗಿದೆ.
ಪ್ರತ್ಯುತ್ತರಅಳಿಸಿhmmmm.. super agide ri.. kaledu hoda galatiya bagge bareyo hage tale kudalina bagge heliddira...
ಪ್ರತ್ಯುತ್ತರಅಳಿಸಿgelati bagge helidre astu chenda irto yeno gotilla adre kudal bagge super agide...