ಒಂದಿಷ್ಟು ಹನಿಗವನಗಳು

ನಿನ್ನ ಪ್ರತಿ ನಗುವ
ಹಿಂದೊಂದು
ಕಾರಣವಿದೆ ಎಂದು
ತಿಳಿದಿದ್ದು
ನಿನ್ನ ನೋಡುತ
ನಾ ಚರಂಡಿ ಒಳಗೆ
ಬಿದ್ದಾಗಲೇ

***************
ಈಗಿನವರು ಹೇಗೆಂದರೆ
ಕೊಳವೆ ನೀರು
ಕುಡಿದು ಅನ್ನುತ್ತಾರೆ
ಬಿಸಿ ರೀ
ಅದೇ ಅದನ್ನ ಬಾಟಲ್
ಆಲ್ಲಿ ತುಂಬಿಸಿ ಕೊಟ್ಟರೆ
ಅನ್ನುತ್ತಾರೆ
ಬಿಸ್ಲರಿ
****************
ಮೊನ್ನೆ ಮಳೆಬಂದಾಗಲೇ
ತಿಳಿದಿದ್ದು ನನ್ನವಳಿಗೆ
ನನ್ನ ಮೇಲಿನ ಪ್ರೀತಿ ಎಷ್ಟೆಂದು
ನೆನೆಯುತ್ತಿರ ನೀವೆಂದು
ಹೋಗಿಯೇ ಬಿಟ್ಟಳು
ಒಬ್ಬಳೇ
ಸಿನಿಮಾಗೆಂದು
***************
ನಾನು ದಿನವು ಕುಡಿಯುವುದಿಲ್ಲ
ನನ್ನವಳೊಂದಿಗೆ ಜಗಳವಾಡಿದ
ದಿನ ಮಾತ್ರ ಕುಡಿಯುತ್ತೇನೆ
ಆದರೂ ಜನ ನೋಡು ದಿನ 

ಕುಡಿಯುತ್ತಾನೆ ಅನ್ನುತ್ತಾರೆ
***************

ಕಾಮೆಂಟ್‌ಗಳು

 1. ವಿನಯ್,
  ಚೆನ್ನಾಗಿದೆ ಹನಿಗವನ...... ಕುಡಿಯುತ್ತೀರಾ ನೀವು,,?...... ಹ್ಹ ಹ್ಹಾ.....

  ಪ್ರತ್ಯುತ್ತರಅಳಿಸಿ
 2. ವಿನಯ್ ಗೆ ಮದುವೆನೇ ಆಗಿಲ್ಲ ಅಲ್ವ. ಜೊತೆಗೆ ಅವರು ಕುಡಿಯೋದು ಇಲ್ಲ ಅನ್ಸತ್ತೆ. ಇದು ಬರೀ ಹನಿಗವನವಷ್ಟೆ.

  ವಿನಯ್ ಹನಿಗವನಗಳು ಚೆನ್ನಾಗಿವೆ.

  ಪ್ರತ್ಯುತ್ತರಅಳಿಸಿ
 3. ವಿನಯ ನಿಮ್ಮ ಬ್ಲಾಗಿಗೆ ಮೊದಲ ಭೇಟಿ...ಛೇ...ಇಷ್ಟು ದಿನ ಹೇಗೆ ಮಿಸ್ ಆಯ್ತು...honey-ಯಾಗಿವೆ ಕವನಗಳು....

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು