ಕಳೆದು ಹೋದ ಆ ದಿನಗಳು ....

ಕಳೆದು ಹೋದವು
ನೀ ನನ್ನ ಬಿಟ್ಟ ಆ
ದಿನಗಳು
ಹಸಿವಿನ ಹಂಗಿಲ್ಲದೆ
ಕಣ್ಣೀರಿನ ಕೊರತೆ ಇಲ್ಲದೆ

ಕಳೆದು ಹೋದವು
ಆ ದಿನಗಳು
ಗಾಢ ನಿದ್ದೆಯೊಳಗೆ
ನೀ ನುಸುಳಿ
ಮೈ ಮನವನೊಮ್ಮೆ
ಜುಮ್ ಎನಿಸಿ
ಮತ್ತದೇ ಏಕಾಂತವ
ಬಿಟ್ಟು ಹೋದಂತಹ
ದಿನಗಳು

ಕಳೆದು ಹೋದವು
ಆ ದಿನಗಳು
ಒಡಲ ನೋವೆಲ್ಲ
ಬಚ್ಚಿಟ್ಟು ಹುಸಿನಗೆಯ
ನಕ್ಕಂತಹ ದಿನಗಳು

ಕಳೆದು ಹೋದವು
ಆ ದಿನಗಳು
ಜನಸಾಗರದ ಮಧ್ಯೆ
ನಿನ್ನನ್ನೇ ಹುಡುಕಿದ
ಈ ಕಂಗಳ
ಯಾತನೆಯ ದಿನಗಳು

ಇಷ್ಟೆಲ್ಲ ಕಳೆದರೂ
ಉಳಿದಿದೆ ಇಂದು
ನೀ ಹೇಳಿದ ನಂಬಿಕೆಯ
ಹಿಂದಿದ್ದ ಹುಸಿಮಾತುಗಳು
ಮುಗ್ದ ಮುಖದ
ಹಿಂದಿದ್ದ
ಅವಕಾಶವಾದಿತನದ
ರೂಪಗಳು

ಕಾಮೆಂಟ್‌ಗಳು

  1. ಏನಪ್ಪಾ ತಮ್ಮಾ......
    ಕಳೆದು ಹೋದವು ಎಷ್ಟೊಂದು ದಿನಗಳು ನಿನ್ನ ಕವನಗಳಿಲ್ಲದೆ....
    ಚಿಗುರಿಸಿದೆ ಆಸೆ ನೀ ಇದರೊಂದಿಗೆ....
    ಕೊರತೆಯಾಗದಿರಲಿ ನಿನ್ನ ಭಾವಗಳಿಗೆ....
    ಹರಿಯುತಿರಲಿ ನಿನ್ನ ಕವನಗಳ ಧಾರೆ....
    ಉರಿಯುತಿರಲಿ ಸದಾ ಬರೆಯಬೇಕೆಂಬ ತುಡಿತದ ಜ್ವಾಲೆ........

    ಬರೀತಾ ಇರು ವಿನೀ... ಬಿಟ್ಟು ಬಿಡಬೇಡ... ಬರೆಯುವುದು ಎಲ್ಲರಿಂದಲೂ ಸಾಧ್ಯವಾಗದ, ದೇವರು ನಿನಗೆ ಕೊಟ್ಟ ವರ. ಆ ಧಾರೆಯನ್ನು ಬತ್ತಲು ಬಿಡಬೇಡ....
    ಅಕ್ಕ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅಕ್ಕನ ಹಾರೈಕೆ ನನ್ನದೂ ಕೂಡ:) ಬರೀತಿರಿ :)

    ಪ್ರತ್ಯುತ್ತರಅಳಿಸಿ
  3. ಕವನ ಚೆನ್ನಾಗಿದೆ.ಮತ್ತಷ್ಟು ಕವನಗಳು ಬರಲಿ.ಧನ್ಯವಾದಗಳು.ನನ್ನ ಬ್ಲಾಗಿಗೆ ಭೇಟಿ
    ಕೊಡಿ .ನಮಸ್ಕಾರ.

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ..
    ಮನಸ್ಸಿಗೆ ನಾಟುವಂತಿದೆ..
    ಅವಳೂ ಇದನ್ನು ಓದುತ್ತಾಳೋ?
    ಓದಿದರೆ.. ನೀ ಬರೆದಕ್ಕೂ ಸಾರ್ಥಕ ಸೋದರ..

    ಒಲವಿಂದ..
    ಸತ್ಯ..

    ಪ್ರತ್ಯುತ್ತರಅಳಿಸಿ
  5. @ ಶಾಮಲಕ್ಕ
    ಖಂಡಿತ ಅಕ್ಕ , ಪ್ರತಿಕ್ರಿಯೆಗೆ ಧನ್ಯವಾದಗಳು(ಮೊದಲ)

    @ಗೌತಮ್ ಸರ್ ,
    ಧನ್ಯವಾದಗಳು ಸರ್

    @ಕೃಷ್ಣಮೂರ್ತಿ ಸರ್
    ಪ್ರತಿಕ್ರಿಯೆಗೆ ನನ್ನೀ

    @ಸತ್ಯಚರಣ್
    ಓದುತ್ತಾಲೋ ಇಲ್ಲವೋ ತಿಳಿದಿಲ್ಲ , ಪ್ರತಿಕ್ರಿಯೆಗೆ ನನ್ನೀ

    @ದೀಪಸ್ಮಿತಾ,
    ನನ್ನೀ

    @

    ಪ್ರತ್ಯುತ್ತರಅಳಿಸಿ
  6. ಚೆನ್ನಾಗಿದೆ ಕವನ ವಿನಯ್. ಆ ದಿನಗಳನ್ನು ಬಿಟ್ಟು ಹಾಕಿ.

    ಪ್ರತ್ಯುತ್ತರಅಳಿಸಿ
  7. ವಿನಯ್ ,
    ಕವನ ಚೆನ್ನಾಗಿದೆ ಕಣೋ..ನಿನ್ನ ಬ್ಲಾಗ್ ಗೆ ಮೊದಲ ಭೇಟಿ .ಹೀಗೆಯೇ ಬರೆಯುತ್ತಿರು

    ಪ್ರತ್ಯುತ್ತರಅಳಿಸಿ
  8. ಕಳೆದು ಹೋಗಿಲ್ಲ ಇನ್ನೂ, ಅಂಥಾ ತಮ್ಮ ಕವನ ಓದಿ ಗೊತ್ತಾಯ್ತು!!!!
    ಚೆ೦ದದ ಕವನ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು