೩ ಕವನಗಳು
ನಗುವಿನ ಮೊರೆಯ ಹೊತ್ತು
ಒಡಲಲಿ ನೋವಿನ ಉರಿಯ
ಬಚ್ಚಿಟ್ಟು
ಎಲ್ಲರಲಿ ಒಂದಾಗ ಹೊರಟು
ಎನ್ನ ತನವನ್ನೇ ಕಳೆದು
ಕೊಳ್ಳ ಹೊರಟ ದಿನಗಳ
ನೆನೆನೆನೆದು ಕೊರಗುತಿಹುದೆನ್ನ
ಮನವಿಗ.
ಬದುಕ ಕಟ್ಟಾ ಹೊರಟವರೆಲ್ಲರೂ
ಇಲ್ಲಿ ಪದಗಳ ಸೆರೆಯಾದವರೇ
ಕೆಲವರು ಅದನ್ನೇ ಹಿಡಿದು
ಪೋಣಿಸಿ ಕವಿಗಳಾದರೆ
ಮತ್ತೆ ಕೆಲವರೂ ಅದ
ಹಿಡಿಯಲು ಹೋಗಿ
ಲೇಖಕರಾಗಿದ್ದಾರೆ
ಇನ್ನುಳಿದವರು ಅದರ
ಹಿಡಿತದಲ್ಲೇ ಸಿಕ್ಕಿ
ಬರಹಗಳಾಗಿ
ಒದ್ದಾಡುತಿದ್ದಾರೆ.
ಹಾರುವ ಹಕ್ಕಿಗೆ ಈಜಬೇಕಂಬಾಸೆ
ಈಜುವ ಮೀನಿಗೆ ಜಿಗಿಯಬೇಕೆಂಬಾಸೆ
ಹರಿದಾಡುವ ಹಾವಿಗೆ ಮರ ಏರಬೇಕೆಂಬಾಸೆ
ನಡೆಯುವ ಜಿಂಕೆಗೆ ನಗೆಯಬೇಕೆಂಬಾಸೆ
ಕೂಗುವ ಕೋಗಿಲೆಗೆ ಹಾಡಬೇಕೆಂಬಾಸೆ
ಇಲ್ಲೆಲ್ಲವೂ ಎಲ್ಲಕ್ಕೂ ಒಂದೊಂದೇ ಆಸೆ
ಆದರೇಕೋ ತಿಳಿಯದು, ಈ ಮನುಜನಿಗೆ
ಇವೆಲ್ಲವೂ ತನ್ನದೇ ಅಡಿಯಲ್ಲಿರಬೇಕೆಂಬ
ಅತಿಯಾಸೆ
ಒಡಲಲಿ ನೋವಿನ ಉರಿಯ
ಬಚ್ಚಿಟ್ಟು
ಎಲ್ಲರಲಿ ಒಂದಾಗ ಹೊರಟು
ಎನ್ನ ತನವನ್ನೇ ಕಳೆದು
ಕೊಳ್ಳ ಹೊರಟ ದಿನಗಳ
ನೆನೆನೆನೆದು ಕೊರಗುತಿಹುದೆನ್ನ
ಮನವಿಗ.
ಬದುಕ ಕಟ್ಟಾ ಹೊರಟವರೆಲ್ಲರೂ
ಇಲ್ಲಿ ಪದಗಳ ಸೆರೆಯಾದವರೇ
ಕೆಲವರು ಅದನ್ನೇ ಹಿಡಿದು
ಪೋಣಿಸಿ ಕವಿಗಳಾದರೆ
ಮತ್ತೆ ಕೆಲವರೂ ಅದ
ಹಿಡಿಯಲು ಹೋಗಿ
ಲೇಖಕರಾಗಿದ್ದಾರೆ
ಇನ್ನುಳಿದವರು ಅದರ
ಹಿಡಿತದಲ್ಲೇ ಸಿಕ್ಕಿ
ಬರಹಗಳಾಗಿ
ಒದ್ದಾಡುತಿದ್ದಾರೆ.
ಹಾರುವ ಹಕ್ಕಿಗೆ ಈಜಬೇಕಂಬಾಸೆ
ಈಜುವ ಮೀನಿಗೆ ಜಿಗಿಯಬೇಕೆಂಬಾಸೆ
ಹರಿದಾಡುವ ಹಾವಿಗೆ ಮರ ಏರಬೇಕೆಂಬಾಸೆ
ನಡೆಯುವ ಜಿಂಕೆಗೆ ನಗೆಯಬೇಕೆಂಬಾಸೆ
ಕೂಗುವ ಕೋಗಿಲೆಗೆ ಹಾಡಬೇಕೆಂಬಾಸೆ
ಇಲ್ಲೆಲ್ಲವೂ ಎಲ್ಲಕ್ಕೂ ಒಂದೊಂದೇ ಆಸೆ
ಆದರೇಕೋ ತಿಳಿಯದು, ಈ ಮನುಜನಿಗೆ
ಇವೆಲ್ಲವೂ ತನ್ನದೇ ಅಡಿಯಲ್ಲಿರಬೇಕೆಂಬ
ಅತಿಯಾಸೆ
ತಮ್ಮಾ ವಿನಯ್...
ಪ್ರತ್ಯುತ್ತರಅಳಿಸಿಏಕೋ ನಿಟ್ಟುಸಿರು ಕಾಣುತ್ತಿದೆಯಲ್ಲಾ ಕವನಗಳಲ್ಲಿ.... ಕೊನೆಯ ಸಾಲು "ಮನುಜಗೆ ಇವೆಲ್ಲವೂ ತನ್ನದೇ ಅಡಿಯಲ್ಲಿರಬೇಕೆಂಬ ಅತಿಯಾಸೆ"... ಪಂಚ್ ಲೈನ್ ಆಗಿದೆ.... ಕಟು ಸತ್ಯ...
ಶ್ಯಾಮಲ
ವಿನಯ
ಪ್ರತ್ಯುತ್ತರಅಳಿಸಿಎಲ್ಲ ಕವನಗಳೂ ಚೆನ್ನಾಗಿವೆ
ಭಾವನೆಗಳ ಮಿಳಿತ ಒಪ್ಪುವಂತಿದೆ
@ ಶಾಮಲಕ್ಕ
ಪ್ರತ್ಯುತ್ತರಅಳಿಸಿಒಂಥರಾ ಹಾಗೆ ;-)
ಕವನ ಮೆಚ್ಚಿದ್ದಕ್ಕೆ ನನ್ನೀ .
@ ಗುರು
ಧನ್ಯವಾದಗಳು ಸರ್