ನಯನ

ಮುಂಜಾವಿನ
ಕಿರಣದಿಂದ
ಮೂಡಿದ
ಕಾಂತಿಯೇ
ಆ ನಿನ್ನ ನಯನ

ತಿಳಿ ಅಲೆಯ
ಪ್ರತಿ ಮಿಡಿತದಲ್ಲೂ
ಮೂಡಿದೆ
ನಿನ್ನದೇ ನಯನ

ಚಿಮು ಚಿಮು
ಕಾರಂಜಿಯ
ಹನಿ ಹನಿ ಚಿಲುಮೆಯಲ್ಲೂ
ಮೂಡಿದೆ ನಿನ್ನದೇ ನಯನ

ನನ್ನದೇ ಅಂತರಾಳದ
ಪ್ರತಿ ಮಿಡಿತದಲ್ಲೂ
ಮೂಡಿದೆ ನಿನ್ನದೇ ನಯನ

ಕಾಮೆಂಟ್‌ಗಳು

  1. ನಯನದಲ್ಲಿ ಯಾರ ಪ್ರತಿಬಿಂಬ ಮೂಡಿದೆ ತಮ್ಮಾ? ಹೊರಗಡೆ ಮೂಡಿರುವ ಮೋಡ ಕವಿದ ವಾತಾವರಣ ನಿನ್ನಿಂದ ಒಳ್ಳೆ ರೊಮ್ಯಾಂಟಿಕ್ ಕವಿತೆಗಳನ್ನು ಬರೆಸುತ್ತಿದೆ... ;-) ಕವನ ಚೆನ್ನಾಗಿದೆ......

    ಶ್ಯಾಮಲ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು