ಅರ್ಧಬೆಂದಹೆಣ

ಮಳೆಯಲ್ಲಿ ತೊಯಿದ
ಕಟ್ಟಿಗೆಯಿಂದ ಸುಟ್ಟಂತಹ
ಅರ್ಧಬೆಂದ ಹೆಣದಂತಾಗಿರುವೆ
ನಾನಿಂದು
ನಿನ್ನ ಪ್ರೀತಿಯ ಮಳೆಯಲ್ಲಿ ನೆನೆದು
ವಿರಹವೆಂಬ ಬೇರ್ಪಡೆಯ ಬೆಂಕಿಯಲಿ
ಬೆಂದು ಅತ್ತ ಪೂರ್ತಿಯು ಸುಟ್ಟು
ಕರಕಲಾಗದ
ಇತ್ತ ಹಸಿಯಾಗಿಯು ಉಳಿಯದ
ಅರೆ ಬೆಂದ ಹೆಣವಾಗಿರುವೆ ನಾನಿಂದು.

ಸ್ಮಶಾನಕ್ಕೆ ಹೆದರದ ನನಗೆ
ನಿನ್ನ ಮೌನವೆ ಸ್ಮಶಾನ
ಸಮನಾಗಿ ಅರಿವಾಗದಂತಹ
ಹೆದರಿಕೆ ಶುರುವಾಗಿದೆ ಇಂದು
ಮಸಣಿಗನ ಕೋಲ್ ತಿವಿತಕ್ಕಿಂತ
ನಿನ್ನ ಮಾತಿನ ತಿವಿತವೆ
ಅತಿ ನೋವ ನೀಡುತಿಹುದಿಂದು

ಹೆಣವಾದ ಮೇಲು
ನಿರುಪಯುಕ್ತವಾಗಿರುವೆನಿಂದು
ಅತ್ತ ಪೂರ್ತಿ ಬೂದಿಯು ಆಗದೆ
ಇತ್ತ ಹಸಿ ಮಾಂಸವಾಗಿಯೂ
ಉಳಿಯದೆ ಅರೆಬೆಂದ ಹೆಣವಾಗಿರುವೇನು ನಾನಿಂದು

ಕಾಮೆಂಟ್‌ಗಳು

  1. ವಿನಯ್,

    ಕವನ ಈ ಮಳೆಗಾಲಕ್ಕೆ ತುಂಬಾ ಹಸಿಯಾಗಿದ್ದರೂ ವಿರಹದ ವೇದನೆಯನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ...

    ಪ್ರತ್ಯುತ್ತರಅಳಿಸಿ
  2. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶಿವೂ ರವರೆ

    ಇಂತಿ
    ವಿನಯ

    ಪ್ರತ್ಯುತ್ತರಅಳಿಸಿ
  3. ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಚಕೋರ ಅವರೇ
    ಇಂತಿ
    ವಿನಯ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು