ಅವರು ಕೊಟ್ಟಿದ್ದೋ , ನಾವ್ ಇಸ್ಕೊಂಡಿದ್ದೋ

ಬಸ್ಸಿನಲ್ಲಿ ನಡೆಯೋ ಚರ್ಚೆಗಳೆಲ್ಲ ಅರ್ಥವಿಲ್ಲದ್ದು ಅಂತ ನಿರ್ಧರಿಸಿದ್ದ ನನಗೆ ಮೊನ್ನೆ ನಡೆದ ಘಟನೆ ನನ್ನ ಯೋಚನೆಯನ್ನು ಮತ್ತೊಮ್ಮೆ ವಿವರ್ಶಿಸುವಂತೆ ಮಾಡಿತು.
ನಡೆದಿದ್ದು ಇಷ್ಟೇ, ಬಸ್ಸಿನಲ್ಲಿ ಕೂತ ಹಿರಿಯರೊಬ್ಬರು ತುಂಬಾ ಹೊತ್ತಿನಿಂದ ಕಿರಿ ಕಿರಿ ಮಾಡುತ್ತಾ ಇದ್ದರು.ಇದನ್ನ ನೋಡಿದ ಉಳಿದ ಕೆಲವರಿಗೆ ಅವರ ಮೇಲೆ ತುಂಬಾ ಕೋಪಾನೆ ಬಂತು ಅನ್ಸುತ್ತೆ. ತೆಪ್ಪಗೆ ಕುಳಿತುಕೊಳ್ರಿ ನಾನು ಅವಾಗಿಂದ ನೋಡ್ತಾ ಇದ್ದೀನಿ ಏನೇನೋ ಬಡಬಡಿಸುತ್ತ ಇದ್ದೀರಾ ಅಂತ ಇದ್ದಿದ್ದರಲ್ಲೇ ಸ್ವಲ್ಪ ಹಿರಿಯರು ಅವರ ಮೇಲೆ ಕೂಗಾಡಿದರು.ಅವರು ಸುಮ್ಮನೆ ಇದ್ದರೂ ಇವರೇ ಮಾತನ್ನು ಮುಂದುವರೆಸುತ್ತ (ಸ್ವಲ್ಪ ಬಿ ಪಿ ಇದೆ ಅನಸ್ತಿತ್ತು) ಸಾರ್ವಜನಿಕ ವಾಹನ ಇದು ಸ್ವಲ್ಪ ಹೊಂದಿಕೊಂಡು ಹೋಗಬೇಕು ಅದು ಇದು ಅಂತ ಹೇಳೋಕೆ ಶುರು ಮಾಡಿದ್ರು ಪಕ್ಕದಲ್ಲೇ ಇದ್ದ ನಾನು ಹೋಗ್ಲಿ ಬಿಡಿ ಸರ್ ಅಷ್ಟೇ.ಅದಕ್ಕೆ ಅಲ್ಲರಿ ನಾವು ಮನುಷ್ಯರಲ್ವಾ , ನೀವೇನು ಮೃಗವೇ ಅಥವಾ ನಾನೇನು ಮೃಗವೇ(ನನಗೆ ಬೇಕಿತ್ತಾ) ಇವರಿಗೆ ಅಷ್ಟು ತಿಳಿಯಲ್ವೆ ಅಂತ ಹೇಳಿದರು.ನಾನು ಇವರಿಗೆ ಹೇಳಿ ಪ್ರಯೋಜನವಿಲ್ಲ ಅಂತ ಸುಮ್ಮನಾದೆ.

ಮೊದಲು ನಕಾರ ಮಾಡಿದ ಹಿರಿಯರು ಇಳಿದು ಹೋದ್ರು ಇವರದ್ದು ಮಾತ್ರ ಮುಂದುವರೆಯುತ್ತಲೇ ಇತ್ತು , ಜನ ಸರಿ ಇಲ್ಲ ಹಾಗೆ ಹೀಗೆ ಅಂತ ಕೊನೆಗೆ ಇದು ನಮಗೆ ಬ್ರಿಟಿಷರು ಸ್ವತಂತ್ರ ಕೊಟ್ಟಗಿಲಾಗಿಂದ ಇದ್ದಿದ್ದೇ ಅನ್ನೋ ತೀರ್ಮಾನಕ್ಕೆ ಬಂದರು.ಅಷ್ಟರಲ್ಲಿ ಸ್ವಲ್ಪ ಮಧ್ಯ ವಯಸ್ಸಿನ ವ್ಯಕ್ತಿ ಅಲ್ಲರಿ ಬ್ರಿಟಿಷರು ನಮಗೆ ಸ್ವತಂತ್ರ ಕೊಟ್ಟಿಲ್ಲ ನಾವು ಪಡೆದುಕೊಂಡಿದ್ದು ಅಂತ ಶುರು ಮಾಡಿದರು.ಅವರು ಅವರೇ ಕೊಟ್ಟಿದ್ದು ಅಂತ , ಇವರು ನಾವೇ ಹಿಸ್ಕೊಂಡಿದ್ದು ಅಂತ ಕೊನೆಗೂ ಅವರ ಸ್ಟಾಪ್ ಬರೋವರೆಗೂ ಅವರಿಬ್ಬರ ವಾದ ನಡೀತಾನೆ ಇತ್ತು. ಇಳಿದ ಮೇಲೆ ಯಾರಿಗೆ ಯಾರು ಕೊಟ್ರೋ , ಯಾರು ಇಸ್ಕೊಂಡ್ರೋ ನನಗೆ ಗೊತ್ತಿಲ್ಲ ಆದರೆ ಅವರ ಪ್ರಶ್ನೆ ಮಾತ್ರ ಹಾಗೆ ಉಳಿತು.

"ಬ್ರಿಟಿಷರು ನಮಗೆ ಸ್ವತಂತ್ರ ಕೊಟ್ಟಿದ್ದೋ ಅಥವಾ ನಾವೇ ಇಸ್ಕೊಂಡಿದ್ದೋ?"

ಉತ್ತರ ಗೊತ್ತಿದ್ದವರು ತಿಳಿಸಿ.

ಇಂತಿ
ವಿನಯ

ಕಾಮೆಂಟ್‌ಗಳು

 1. ಹಿಸ್ಕೊಂಡಿದ್ದು ಅಲ್ಲ , ಇಸ್ಕೊಂಡಿದ್ದು

  ’ಹಿಸ್ಕೋ’ ಅಂದ್ರೆ ಬೇರೆ ಅರ್ಥ ’ಇಸ್ಕೊ’ ಅಂದ್ರೆ ಬೇರೆ ಅರ್ಥ

  ಪ್ರತ್ಯುತ್ತರಅಳಿಸಿ
 2. ಮೊದಲನೆಯದಾಗಿ ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ಆನಂದ್.
  ಹಾಗೆ ನೀವು ಹೇಳಿದ್ದನ್ನು ಸರಿಪಡಿಸಿದ್ದೇನೆ

  ಇಂತಿ
  ವಿನಯ

  ಪ್ರತ್ಯುತ್ತರಅಳಿಸಿ
 3. ಥ್ಯಾಂಕ್ಸ್ ವಿನಯ. ತಿದ್ದಿಕೊಂಡದ್ದು ಖುಷಿಯಾಗಿದೆ. ಸಂಪದದಲ್ಲಿ ಇದೇ ವಿಷಯಕ್ಕೆ ಬಂದ ಹಲವಾರು ಕಾಮೆಂಟ್ ಗಳನ್ನು ನೋಡಿದ್ದೇನೆ. ಚೆನ್ನಾಗಿವೆ.

  ಪ್ರತ್ಯುತ್ತರಅಳಿಸಿ
 4. ವಿನಯ್,

  ಸ್ವತಂತ್ರ ಪಡೆದಿದ್ದೋ, ಕೊಟ್ಟಿದ್ದೋ ಗೊತ್ತಿಲ್ಲ..ಆದ್ರೆ ಬಸ್ಸಿನಲ್ಲಿ ಗದ್ದಲ ನಿಂತಿತಾ...

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು